ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಸಂಪರ್ಕವನ್ನು ಒದಗಿಸಲು, ಪ್ರಯಾಣವನ್ನು ಸುಲಭಗೊಳಿಸಲು, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದನ್ನು ಕಡಿಮೆ ಮಾಡಲು ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಭಾರತೀಯ ರೈಲ್ವೆಯಾದ್ಯಂತ ಎಂಟು (8) ಹೊಸ ಮಾರ್ಗ ಯೋಜನೆಗಳಿಗೆ ಸಂಪುಟದ ಅನುಮೋದನೆ
ಉದ್ದೇಶಿತ ಯೋಜನೆಗಳು ಸಂಪರ್ಕವಿಲ್ಲದ ಪ್ರದೇಶಗಳನ್ನು ಸಂಪರ್ಕಿಸುವ ಮೂಲಕ ಮತ್ತು ಸಾರಿಗೆ ಜಾಲಗಳನ್ನು ಹೆಚ್ಚಿಸುವ ಮೂಲಕ ಸಾರಿಗೆ ವ್ಯವಸ್ಥಾಪನಾ ದಕ್ಷತೆಯನ್ನು ಸುಧಾರಿಸುತ್ತವೆ, ಇದರ ಪರಿಣಾಮವಾಗಿ ಸುವ್ಯವಸ್ಥಿತ ಪೂರೈಕೆ ಸರಪಳಿಗಳು ಮತ್ತು ತ್ವರಿತ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತವೆ
ಈ ಯೋಜನೆಗಳ ಒಟ್ಟು ಅಂದಾಜು ವೆಚ್ಚ 24,657 ಕೋಟಿ ರೂ.ಗಳಾಗಿದ್ದು, 2030-31 ರ ವೇಳೆಗೆ ಪೂರ್ಣಗೊಳ್ಳಲಿವೆ
ಈ ಯೋಜನೆಗಳು ನಿರ್ಮಾಣದ ಸಮಯದಲ್ಲಿ ಸುಮಾರು ಮೂರು (3) ಕೋಟಿ ಮಾನವ-ದಿನಗಳವರೆಗೆ ನೇರ ಉದ್ಯೋಗವನ್ನು ಸೃಷ್ಟಿಸುತ್ತವೆ
प्रविष्टि तिथि:
09 AUG 2024 9:58PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರೈಲ್ವೆ ಸಚಿವಾಲಯದ ಒಟ್ಟು ಅಂದಾಜು ವೆಚ್ಚ 24,657 ಕೋಟಿ ರೂ.ಗಳ ಎಂಟು (8) ಯೋಜನೆಗಳಿಗೆ ತನ್ನ ಅನುಮೋದನೆ ನೀಡಿದೆ.
ಹೊಸ ಮಾರ್ಗದ ಪ್ರಸ್ತಾಪಗಳು ನೇರ ಸಂಪರ್ಕವನ್ನು ಒದಗಿಸುತ್ತವೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತವೆ, ಭಾರತೀಯ ರೈಲ್ವೆಗೆ ವರ್ಧಿತ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಒದಗಿಸುತ್ತವೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ, ಇವು ಈ ಪ್ರದೇಶದಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಈ ಪ್ರದೇಶದ ಜನರನ್ನು "ಆತ್ಮನಿರ್ಭರ" ರನ್ನಾಗಿ ಮಾಡುತ್ತದೆ, ಇದು ಅವರ ಉದ್ಯೋಗ / ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ.
ಈ ಯೋಜನೆಗಳು ಬಹು-ಮಾದರಿ ಸಂಪರ್ಕಕ್ಕಾಗಿ ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಹಾ ಯೋಜನೆ(ಮಾಸ್ಟರ್ ಪ್ಲಾನ್)ಯ ಫಲಿತವಾಗಿವೆ, ಇವು ಸಮಗ್ರ ಯೋಜನೆಯ ಮೂಲಕ ಸಾಧ್ಯವಾಗಿವೆ ಮತ್ತು ಜನರ ಪ್ರಯಾಣ, ಸರಕು ಮತ್ತು ಸೇವೆಗಳ ಚಲನೆಗೆ ತಡೆರಹಿತ ಸಂಪರ್ಕವನ್ನು ಒದಗಿಸುತ್ತವೆ.
ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಬಿಹಾರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ 14 ಜಿಲ್ಲೆಗಳನ್ನು ಒಳಗೊಂಡ 8 (ಎಂಟು) ಯೋಜನೆಗಳು ಅಸ್ತಿತ್ವದಲ್ಲಿರುವ ಭಾರತೀಯ ರೈಲ್ವೆ ಜಾಲವನ್ನು 900 ಕಿ.ಮೀ.ಯಷ್ಟು ಹೆಚ್ಚಿಸಲಿವೆ.
ಈ ಯೋಜನೆಗಳೊಂದಿಗೆ 64 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುವುದು, ಇದು ಆರು (6) ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ (ಪೂರ್ವ ಸಿಂಗ್ಬುಮ್, ಭದ್ರಾದ್ರಿ ಕೊಥಗುಡೆಮ್, ಮಲ್ಕನಗಿರಿ, ಕಾಲಹಂಡಿ, ನಬರಂಗ್ಪುರ, ರಾಯಗಡ), ಸುಮಾರು 510 ಗ್ರಾಮಗಳು ಮತ್ತು ಸುಮಾರು 40 ಲಕ್ಷ ಜನಸಂಖ್ಯೆಗೆ ಸಂಪರ್ಕವನ್ನು ಹೆಚ್ಚಿಸುತ್ತದೆ.
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಅಜಂತಾ ಗುಹೆಗಳನ್ನು ಭಾರತೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸಲಾಗುವುದು. ಇದರಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು, ಸಿಮೆಂಟ್, ಬಾಕ್ಸೈಟ್, ಸುಣ್ಣದ ಕಲ್ಲು, ಅಲ್ಯೂಮಿನಿಯಂ ಪುಡಿ, ಗ್ರಾನೈಟ್, ಬ್ಯಾಲಸ್ಟ್ (ಕಲ್ಲು), ಕಂಟೇನರ್ಗಳು ಮುಂತಾದ ಸರಕುಗಳನ್ನು ಸಾಗಿಸಲು ಇವು ಅಗತ್ಯ ಮಾರ್ಗಗಳಾಗಿವೆ. ಸಾಮರ್ಥ್ಯ ವರ್ಧನೆ ಕಾರ್ಯಗಳು 143 ಎಂಟಿಪಿಎ (ವಾರ್ಷಿಕ ಮಿಲಿಯನ್ ಟನ್) ಪ್ರಮಾಣದ ಹೆಚ್ಚುವರಿ ಸರಕು ಸಾಗಣೆಗೆ ಕಾರಣವಾಗಲಿವೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿರುವುದರಿಂದ, ಹವಾಮಾನ ಗುರಿಗಳನ್ನು ಸಾಧಿಸಲು ಮತ್ತು ದೇಶದ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದನ್ನು (32.20 ಕೋಟಿ ಲೀಟರ್) ಕಡಿಮೆ ಮಾಡಲು ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು (0.87 ಮಿಲಿಯನ್ ಟನ್) ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು 3.5 ಕೋಟಿ ಮರಗಳನ್ನು ನೆಡುವುದಕ್ಕೆ ಸಮಾನವಾಗಿದೆ.
|
ಕ್ರಮ ಸಂಖ್ಯೆ
|
ಹೊಸ ರೈಲ್ವೇ ಮಾರ್ಗ
|
ಮಾರ್ಗದ ಉದ್ದ (ಕಿ.ಮೀ.)
|
ಯಾವ ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ
|
ರಾಜ್ಯಗಳು
|
|
1
|
ಗುಣುಪುರ-ಥೇರುಬಲಿ (ಹೊಸ ಮಾರ್ಗ)
|
73.62
|
ರಾಯಗಢ
|
ಒಡಿಶಾ
|
|
2
|
ಜುನಾಗಢ-ನಬರಂಗ್ಪುರ
|
116.21
|
ಕಾಲಹಂಡಿ ಮತ್ತು ನಬ್ರಂಗ್ಪುರ
|
ಒಡಿಶಾ
|
|
3
|
ಬಾದಂಪಹಾರ್ - ಕಂದುಝರ್ ಘರ್
|
82.06
|
ಕಿಯೋಂಜಾರ್ ಮತ್ತು ಮಯೂರ್ಭಂಜ್
|
ಒಡಿಶಾ
|
|
4
|
ಬಂಗ್ರಿಪೋಸಿ - ಗೊರುಮಹಿಸಾನಿ
|
85.60
|
ಮಯೂರ್ಭಂಜ್
|
ಒಡಿಶಾ
|
|
5
|
ಮಲ್ಕಂಗಿರಿ - ಪಾಂಡುರಂಗಪುರಂ (ಭದ್ರಾಚಲಂ ಮೂಲಕ)
|
173.61
|
ಮಲ್ಕಂಗಿರಿ, ಪೂರ್ವ ಗೋದಾವರಿ ಮತ್ತು ಭದ್ರಾದ್ರಿ ಕೊಥಗುಡೆನ್
|
ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣ
|
|
6
|
ಬುರಾಮರಾ - ಚಕುಲಿಯಾ
|
59.96
|
ಪೂರ್ವ ಸಿಂಗಭೂಮಿ, ಝರ್ಗ್ರಾಮ ಮತ್ತು ಮಯೂರ್ಭಂಜ್
|
ಜಾರ್ಖಂಡ, ಪಶ್ಚಿಮ ಬಂಗಾಳ ಮತ್ತು ಒಡಿಶಾ
|
|
7
|
ಜಲ್ನಾ - ಜಲ್ಗಾಂವ್
|
174
|
ಔರಂಗಾಬಾದ್
|
ಮಹಾರಾಷ್ಟ್ರ
|
|
8
|
ಬಿಕ್ರಮಶಿಲಾ - ಕಟಾರಿಯಾ
|
26.23
|
ಭಾಗಲ್ಪುರ
|
ಬಿಹಾರ
|
*****
(रिलीज़ आईडी: 2044036)
आगंतुक पटल : 91
इस विज्ञप्ति को इन भाषाओं में पढ़ें:
Odia
,
English
,
Urdu
,
हिन्दी
,
Hindi_MP
,
Marathi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam