ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಟೋಲ್ ಸಂಗ್ರಹ ಕಾರ್ಯಾಚರಣೆ

Posted On: 08 AUG 2024 12:09PM by PIB Bengaluru

ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ/ ರಿಯಾಯತಿ ಒಪ್ಪಂದದ ನಿಬಂಧನೆಗಳ ಪ್ರಕಾರ ಶುಲ್ಕ ಸಂಗ್ರಹ ದಾಖಲೆಗಳನ್ನು ಪರಿಶೀಲಿಸಲು ಮತ್ತು ಶುಲ್ಕ ಸಂಗ್ರಹವನ್ನು ಖಾತ್ರಿಪಡಿಸಿಕೊಳ್ಳಲು, ಆಂತರಿಕ ಲೆಕ್ಕಪರಿಶೋಧನೆ, ವಿಷಯಾಧಾರಿತ ಆಡಿಟ್ ಮತ್ತು ಫೋರೆನ್ಸಿಕ್ ಆಡಿಟ್‌ನಂತಹ ಸ್ವತಂತ್ರ ಲೆಕ್ಕಪರಿಶೋಧನೆಗಳನ್ನು ನಡೆಸಲಾಗುವುದು. 

ಅಲ್ಲದೆ, ವಂಚನೆಯ ಅಭ್ಯಾಸದ ಸಮಸ್ಯೆ ನಿವಾರಿಸಲು ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಿಕೊಳ್ಳಲು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) / ಭಾರತೀಯ ಹೆದ್ದಾರಿ ನಿರ್ವಹಣಾ ಕಂಪನಿ ಲಿಮಿಟೆಡ್ (ಐಎಚ್ ಎಂಸಿಎಲ್) ನೈಜ ಸಮಯ (ರಿಯಲ್ ಟೈಮ್‌ ) ವಹಿವಾಟನ್ನು ಮೇಲ್ವಿಚಾರಣೆ ಮಾಡಲು ಟೋಲ್ ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರ (ಟಿಎಂಸಿಸಿ) ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಯಾವುದೇ ವ್ಯತ್ಯಾಸಗಳನ್ನು ಗುರುತಿಸಲು ಮತ್ತು ಲೇನ್ ಕಾರ್ಯಾಚರಣೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಶುಲ್ಕ ಪ್ಲಾಜಾಗಳ ವಿವರಗಳನ್ನು ನೀಡಲಾಗುವುದು. ಅಲ್ಲದೆ, ಹೆಚ್ವುವರಿಯಾಗಿ ಶುಲ್ಕ ಸಂಗ್ರಹಣಾ ಪ್ಲಾಜಾಗಳಲ್ಲಿ ಲೇನ್ ಮಟ್ಟದ ಕಾರ್ಯಾಚರಣೆಯ ಮೇಲೆ ನಿಗಾ ವಹಿಸಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. 

ರಾಷ್ಟ್ರೀಯ ಹೆದ್ದಾರಿಗಳ (ದರಗಳು ಮತ್ತು ಸಂಗ್ರಹಣೆಯ ನಿಗದಿ) ನಿಯಮಗಳು 2008 ರ ನಿಯಮ 13 ರ ಪ್ರಕಾರ, ಕೇಂದ್ರ ಸರ್ಕಾರದಿಂದ ಅಥವಾ ಕಾರ್ಯಗತಗೊಳಿಸುವ ಪ್ರಾಧಿಕಾರದಿಂದ ಅಧಿಕಾರ ಪಡೆದ ಅಧಿಕಾರಿಯು, ಯಾವುದೇ ಸಂದರ್ಭದಲ್ಲಿ ಜಾರಿಗೊಳಿಸುವ ಪ್ರಾಧಿಕಾರದ ಅಥವಾ ರಿಯಾಯಿತಿದಾರ ಸಂದರ್ಭಾನುಸಾರವಾಗಿ ಸಂಗ್ರಹಿಸಿದ ಹೆಚ್ಚುವರಿ ಶುಲ್ಕವನ್ನು ನಿರ್ಣಯಿಸಬಹುದು ಮತ್ತು ಅಂತಹ ಪ್ರಾಧಿಕಾರದಿಂದ ಅಥವಾ ರಿಯಾಯಿತಿದಾರರಿಂದ ವಸೂಲಿ ಮಾಡಬಹುದು, ಹೆಚ್ಚುವರಿ ಮೊತ್ತವು ಸಂಗ್ರಹಿಸಿದ ಹೆಚ್ಚುವರಿ ಶುಲ್ಕದ ಇಪ್ಪತ್ತೈದು ಪ್ರತಿಶತಕ್ಕೆ ಪ್ರಕರಣಕ್ಕೆ ಅನುಗುಣವಾಗಿ  ಜಾರಿಗೊಳಿಸುವ ಅಧಿಕಾರಿ ಅಥವಾ ರಿಯಾಯಿತಿದಾರರಿಗೆ ವಿಚಾರಣೆಯ ಅವಕಾಶವನ್ನು ನೀಡದ ಹೊರತು ಅಂತಹ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡತಕ್ಕದ್ದಲ್ಲ.

ಅಲ್ಲದೆ, ಸಾರ್ವಜನಿಕ ನಿಧಿಯ ಶುಲ್ಕ ಪ್ಲಾಜಾಗಳ ಸಂದರ್ಭದಲ್ಲಿ, ಒಪ್ಪಂದದ 18ನೇ ಷರತ್ತಿನ ಪ್ರಕಾರ ಶುಲ್ಕ ಸಂಗ್ರಹಿಸುವ ಸಂಸ್ಥೆಯು ನಿಗದಿತ ದರಕ್ಕಿಂತ ಹೆಚ್ಚಿನ ಬಳಕೆದಾರರ ಶುಲ್ಕವನ್ನು ವಿಧಿಸಿದೆ ಎಂಬುದು ಗಮನಕ್ಕೆ ಬಂದರೆ ಅಥವಾ ಪ್ರಾಧಿಕಾರಕ್ಕೆ ತೃಪ್ತವಾದರೆ ಅಂತಹ ಸಂದರ್ಭದಲ್ಲಿ  ಪ್ರಾಧಿಕಾರ ದಿನಕ್ಕೆ 30 ದಿನಗಳವರೆಗೆ ಅಂದರೆ (ನಿಜವಾದ ಮೊತ್ತ x 30 ದಿನಗಳು x 50) ವಿಧಿಸಲಾದ ನೈಜ ಮೊತ್ತದ ಐವತ್ತು ಪಟ್ಟು ಸಮಾನವಾದ ಮೊತ್ತದ ದಂಡವನ್ನು ವಿಧಿಸಸಲು ಅವಕಾಶವಿದೆ.

ರಾಷ್ಟ್ರೀಯ ಹೆದ್ದಾರಿ ಮಾರ್ಗಗಳಲ್ಲಿ ಅಂತಹ ಯಾವುದೇ ನಕಲಿ ಪ್ಲಾಜಾ ಕಾರ್ಯನಿರ್ವಹಿಸುತ್ತಿಲ್ಲ/ ಅಂತಹ ಯಾವುದೇ ಘಟನೆ ಗಮನಕ್ಕೆ ಬಂದಿಲ್ಲ ಮತ್ತು ಕಂಡು ಬಂದಿಲ್ಲ. 
ಈ ಕೆಳಗಿನ ಎರಡು ಹೆದ್ದಾರಿ ಮಾರ್ಗಗಳಲ್ಲಿ ಈಗಾಗಲೇ ಗ್ಲೋಬಲ್ ನಾವಿಗೇಷನ್ ಉಪಗ್ರಹ ವ್ಯವಸ್ಥೆ (ಜಿಎನ್‌ ಎಸ್ ಎಸ್) ಆದರಿಸಿದ ಬಳಕೆದಾರರ ಶುಲ್ಕ ಸಂಗ್ರಹಣಾ ವ್ಯವಸ್ಥೆಯ ಬಗ್ಗೆ ಪ್ರಾಯೋಗಿಕ ಅಧ್ಯಯನವನ್ನು ನಡೆಸಲಾಗಿದೆ. 

i.    ಕರ್ನಾಟಕ ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ-275 ಬೆಂಗಳೂರು-ಮೈಸೂರು ಮಾರ್ಗ 
ii.    ಹರಿಯಾಣ ರಾಜ್ಯದಲ್ಲಿನ ರಾಷ್ಟ್ರೀಯ ಹೆದ್ದಾರಿ-709 (ಹಿಂದಿನ ರಾಷ್ಟ್ರೀಯ ಹೆದ್ದಾರಿ 71ಎ)ಯ ಪಾಣಿಪತ್-ಹಿಸಾರ್‌ ಮಾರ್ಗ 

ಫಾಸ್ಟ್‌ ಟ್ಯಾಗ್ ಜತೆಗೆ ಹೆಚ್ಚುವರಿ ಸೌಕರ್ಯವಾಗಿ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಯ ಆಯ್ದ ಮಾರ್ಗಗಳಲ್ಲಿ ಜಿ ಎನ್ ಎಸ್ ಎಸ್ ಆಧರಿತ ವಿದ್ಯುನ್ಮಾನ ಟೋಲ್ ಸಂಗ್ರಹಣಾ (ಇಟಿಸಿ) ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿತ್ತು. 

ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ನಿಯಮಗಳಿಗೆ ಅನುಗುಣವಾಗಿ ಹೆದ್ದಾರಿಯ ಬಳಕೆದಾರರ ಶುಲ್ಕವನ್ನು ಶುಲ್ಕ ಪ್ಲಾಜಾಗಳಲ್ಲಿ ವಿಧಿಸಲಾಗುತ್ತಿದೆ. 

ಸೇತುವೆಗಳು, ಕಟ್ಟಡಗಳು ಇತ್ಯಾದಿಗಳನ್ನು ಒಳಗೊಂಡಂತೆ ರಾಷ್ಟ್ರೀಯ ಹೆದ್ದಾರಿಗಳ (ಎನ್ ಎಚ್) ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ವಿವಿಧ ವಿಧಾನಗಳ ಮೂಲಕ ಕೈಗೊಳ್ಳಲಾಗುವುದು. ಇಂಜಿನಿಯರಿಂಗ್ ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಒಪ್ಪಂದಗಳಲ್ಲಿ, ಗುತ್ತಿಗೆದಾರರು ನಿರ್ಮಾಣದ ಅವಧಿಯಲ್ಲಿ ರಸ್ತೆಯನ್ನು ನಿರ್ವಹಿಸುತ್ತಾರೆ ಮತ್ತು ನಂತರ ದೋಷಗಳ ಹೊಣೆಗಾರಿಕೆಯ ಅವಧಿ-ಕಮ್-ನಿರ್ವಹಣೆಯ ಅವಧಿಯಲ್ಲಿಯೂ ಕಾರ್ಯನಿರ್ವಹಿಸುತ್ತಾರೆ. ವಿನ್ಯಾಸ ನಿರ್ಮಾಣ ಹಣಕಾಸು ಕಾರ್ಯಾಚರಣೆ ಮತ್ತು ವರ್ಗಾವಣೆ (ಡಿಬಿಎಫ್ ಒಟಿ)/ ಹೈಬ್ರೀಡ್ ಅನ್ಯುಟಿ ಮೋಡ್ (ಎಚ್ ಎಎಂ) ಒಪ್ಪಂದಗಳಲ್ಲಿ, ನಿರ್ಮಾಣ ಅವಧಿಯಲ್ಲಿ ರಿಯಾಯಿತಿ ಪಡೆದವರು ರಸ್ತೆಯ ನಿರ್ವಹಣೆ ನೋಡಿಕೊಳ್ಳುತ್ತಾರೆ ಮತ್ತು ಕನ್ಸೆಷನ್ ಅವಧಿ ಮುಗಿಯುವರೆಗೆ ಅವರೇ ನಿರ್ವಹಣೆ ಮಾಡುತ್ತಾರೆ. 

ಐ ಎನ್ ವಿ ಐ ಟಿ ಒಪ್ಪಂದಗಳ ಟೋಲ್ ಆಪರೇಟ್ ಮತ್ತು ಟ್ರಾನ್ಸ್ಫರ್ (ಟಿಒಟಿ)/ವಿಶೇಷ ಉದ್ದೇಶದ ಕಾರ್ಯಪಡೆ(ಎಸ್ ಪಿ ವಿ ಗಳು) ರಿಯಾಯಿತಿಯ ಅವಧಿಯಲ್ಲಿ ರಸ್ತೆಯನ್ನು ನಿರ್ವಹಿಸುತ್ತದೆ. ಉಳಿದ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗಳನ್ನು ಸಾಮಾನ್ಯವಾಗಿ ಕಾರ್ಯಕ್ಷಮತೆ ಆಧಾರಿತ ನಿರ್ವಹಣೆ ಒಪ್ಪಂದ (ಪಿಬಿಎಂಸಿ) ಮತ್ತು ಅಲ್ಪಾವಧಿಯ ನಿರ್ವಹಣಾ ಒಪ್ಪಂದದ (ಎಸ್ ಟಿಎಂಸಿ) ಗುತ್ತಿಗೆದಾರರು ನಿರ್ವಹಿಸುತ್ತಾರೆ.

ಈ ಮಾಹಿತಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಲೋಕಸಭೆಗೆ ಇಂದು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 
 

*****



(Release ID: 2043161) Visitor Counter : 25