ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಉದ್ಯೋಗ-ಸಂಯೋಜಿತ ಪ್ರೋತ್ಸಾಹಕ ಯೋಜನೆಯನ್ನು ಮಿಷನ್-ಮೋಡ್‌ನಲ್ಲಿ ತ್ವರಿತವಾಗಿ ಜಾರಿಗೊಳಿಸಬೇಕು: ಸಚಿವ ಡಾ. ಮಾಂಡವೀಯ
ಇಎಲ್‌ಐ (ELI) ಯೋಜನೆಯ ಅನುಷ್ಠಾನದ ಕುರಿತು ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆ
2 ಕೋಟಿಗೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಲು ಇಎಲ್‌ಐ ಯೋಜನೆ
Posted On:
06 AUG 2024 2:55PM by PIB Bengaluru
ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಉದ್ದೇಶದಿಂದ, ಕೇಂದ್ರ ಬಜೆಟ್ 2024-25 ರಲ್ಲಿ ಘೋಷಿಸಲಾದ ಉದ್ಯೋಗ-ಸಂಯೋಜಿತ ಪ್ರೋತ್ಸಾಹ (ELI) ಯೋಜನೆಯನ್ನು ಮಿಷನ್ ಮೋಡ್‌ನಲ್ಲಿ ತ್ವರಿತ ಅನುಷ್ಠಾನಕ್ಕೆ ಆದ್ಯತೆ ನೀಡಬೇಕೆಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು ಸೂಚನೆ ನೀಡಿದರು.ಇಎಲ್‌ಐ ಯೋಜನೆ ಮತ್ತು ಅದರ ಅನುಷ್ಠಾನ ಯೋಜನೆ ಕುರಿತು ಸಚಿವ ಡಾ.ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಸಚಿವಾಲಯದ ಮತ್ತು ಇಪಿಎಫ್‌ಒ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇಎಲ್‌ಐ ಯೋಜನೆಯ ಪ್ರಯೋಜನಗಳು ನಿಜವಾದ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ದೃಢವಾದ ಕಾರ್ಯವಿಧಾನದ ಮಹತ್ವ ಅನುಸರಿಸಬೇಕು ಎಂದು ಡಾ. ಮಾಂಡವೀಯ ತಿಳಿಸಿದರು.
"ಸುಸ್ಥಿರ ಮತ್ತು ಅಂತರ್ಗತ ಉದ್ಯೋಗ ಪರಿಸರ ವ್ಯವಸ್ಥೆಯನ್ನು ರಚಿಸುವ ಕಡೆಗೆ ನಮ್ಮ ಪ್ರಯತ್ನಗಳನ್ನು ನಿರ್ದೇಶಿಸುವುದು ಅತ್ಯಗತ್ಯವಾಗಿದೆ. ಇಎಲ್‌ಐ ಯೋಜನೆಯು ಉದ್ಯೋಗ ಸೃಷ್ಟಿಯನ್ನು ಸುಲಭಗೊಳಿಸಲು ಮತ್ತು ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಪ್ರೋತ್ಸಾಹವನ್ನು ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಕೇಂದ್ರ ಸಚಿವರು ಹೇಳಿದರು.
ಇಎಲ್‌ಐ ಯೋಜನೆಯು 2 ವರ್ಷಗಳ ಅವಧಿಯಲ್ಲಿ ದೇಶದಲ್ಲಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಇದು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಜೀವನೋಪಾಯವನ್ನು ಹೆಚ್ಚಿಸಲು ಗಣನೀಯವಾಗಿ ಕೊಡುಗೆ ನೀಡುತ್ತದೆ. ಇಎಲ್‌ಐ ಯೋಜನೆಯ ಪ್ರಯೋಜನಗಳ ಬಗ್ಗೆ ಜನರಿಗೆ, ವಿಶೇಷವಾಗಿ ಉದ್ದೇಶಿತ ಫಲಾನುಭವಿಗಳಿಗೆ ಶಿಕ್ಷಣ ನೀಡಲು ವ್ಯಾಪಕವಾದ ಪ್ರಚಾರ ಮತ್ತು ಜಾಗೃತಿ ಅಭಿಯಾನವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ ತಿಳಿಸಿದರು.
5 ವರ್ಷಗಳ ಅವಧಿಯಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ, ಕೌಶಲ್ಯ ಮತ್ತು ಇತರ ಅವಕಾಶಗಳನ್ನು ಕಲ್ಪಿಸಲು ಪ್ರಧಾನ ಮಂತ್ರಿಗಳ 5 ಯೋಜನೆಗಳು ಮತ್ತು ಉಪಕ್ರಮಗಳ ಪ್ಯಾಕೇಜ್‌ನ ಭಾಗವಾಗಿ 'ಉದ್ಯೋಗ ಸಂಬಂಧಿತ ಪ್ರೋತ್ಸಾಹ'ಕ್ಕಾಗಿ ರೂ. 2 ಲಕ್ಷ ಕೋಟಿ ರೂ ಅನುದಾನದ ಮೂರು ಯೋಜನೆಗಳನ್ನು ಕೇಂದ್ರ ಬಜೆಟ್ 2024-25 ರಲ್ಲಿ ಘೋಷಿಸಲಾಯಿತು.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮೇಲಿನ ಯೋಜನೆಗಳ ವಿವರಗಳನ್ನು ಅವುಗಳ ಅನುಷ್ಠಾನದ ಯೋಜನೆಯೊಂದಿಗೆ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ.
*****
(Release ID: 2042414)
Visitor Counter : 68