ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಹಿರಿಯ ನಾಗರಿಕರು ಮತ್ತು ದಿವ್ಯಾಂಗರಿಗಾಗಿ ಯೋಜನೆಗಳು
Posted On:
06 AUG 2024 12:38PM by PIB Bengaluru
ನರಮಂಡಲದ ಬೆಳವಣಿಗೆಯಲ್ಲಿನ ನ್ಯೂನತೆ ಸಮಸ್ಯೆಯಾದ ಆಟಿಸಂ, ಸೆರೆಬ್ರಲ್ ಪಾಲ್ಸಿ, ಮೆಂಟಲ್ ರಿಟಾರ್ಡೇಷನ್ (ಬುದ್ಧಿಮಾಂದ್ಯತೆ) ಹಾಗೂ ಬಹುಅಂಗಾಂಗ ವೈಕಲ್ಯದಿಂದ ಬಳಲುತ್ತಿರುವವರ ಕಲ್ಯಾಣಕ್ಕೆಂದೇ ಇರುವ ರಾಷ್ಟ್ರೀಯ ಟ್ರಸ್ಟ್ ವಿಕಲಚೇತನರ (ದಿವ್ಯಾಂಗ) ಸಬಲೀಕರಣ ಇಲಾಖೆಯಡಿ ಸ್ವಾಯತ್ತ ಸಂಸ್ಥೆಯಾಗಿದ್ದು ʼಸಮರ್ಥ್ʼ (ವಿಶ್ರಾಂತಿ ಆರೈಕೆ ಯೋಜನೆ), ಘರೌಂಡಾ (ವಯಸ್ಕರಿಗೆ ಗುಂಪು ಮನೆ ಯೋಜನೆ) ಯೋಜನೆಗಳ ಮೂಲಕ ಜೀವಿತಾವಧಿವರೆಗಿನ ಆರೈಕೆ ಮತ್ತು ನೆರವಿಗಾಗಿ ಜಾರಿಗೊಳಿಸಿದೆ. ಹಾಗೆಯೇ ʼಸಮರ್ಥ-ಕಮ್-ಘರೌಂಡಾʼ (ವಸತಿ ಆರೈಕೆ ಯೋಜನೆ) ಯೋಜನೆಯ ಮೂಲಕ ಅನಾಥ ವಿಕಲಚೇತನರು, ಸಂಕಷ್ಟದಲ್ಲಿರುವ ವಿಕಲಚೇತನ ಕುಟುಂಬಗಳು ಹಾಗೂ ಬಡತನದ ರೇಖೆಗಿಂತ ಕೆಳಗೆ ವಾಸಿಸುವ ಕುಟುಂಬಗಳಲ್ಲಿನ ವಿಕಲಚೇತನರನ್ನು ದೇಶಾದ್ಯಂತ ನೋಂದಾಯಿತ ಸಂಸ್ಥೆಗಳ ಮೂಲಕ ಸಂಪರ್ಕಿಸಿ ಒದಗಿಸಲಿದೆ.
ಈ ರಾಷ್ಟ್ರೀಯ ಟ್ರಸ್ಟ್ ʼಸಮರ್ಥ್ʼ (ವಿಶ್ರಾಂತಿ ಆರೈಕೆ ಯೋಜನೆ) ಕೇಂದ್ರಗಳು, ʼಘರೌಂಡಾʼ (ವಯಸ್ಕರಿಗೆ ಗುಂಪು ಮನೆ) ಕೇಂದ್ರಗಳು ಹಾಗೂ ʼಸಮರ್ಥ್- ಕಮ್- ಘರೌಂಡಾʼ (ವಸತಿ ಆರೈಕೆ ಯೋಜನೆ) ಕೇಂದ್ರಗಳನ್ನು ತನ್ನ ನೋಂದಾಯಿತ ಸಂಸ್ಥೆಗಳ ಮೂಲಕ ದೇಶದ 40 ಕಡೆ ಸ್ಥಾಪಿಸಿದೆ. ವಿವರಗಳನ್ನು ʼಅನುಬಂಧ-ಎʼನಲ್ಲಿ (https://static.pib.gov.in/WriteReadData/specificdocs/documents/2024/aug/doc202486366201.pdf) ನೀಡಲಾಗಿದೆ.
ಈ ಮಾಹಿತಿಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಶ್ರೀ ಬಿ.ಎಲ್. ವರ್ಮಾ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದರು.
*****
(Release ID: 2042068)
Visitor Counter : 66