ಗೃಹ ವ್ಯವಹಾರಗಳ ಸಚಿವಾಲಯ
ಆಗಸ್ಟ್ 9 ರಿಂದ 15 ರವರೆಗೆ 'ಹರ್ ಘರ್ ತಿರಂಗಾ' ಅಭಿಯಾನದ ಅಡಿಯಲ್ಲಿ ತಮ್ಮ ಮನೆಗಳಲ್ಲಿ ತಿರಂಗಾ ಹಾರಿಸುವಂತೆ ದೇಶವಾಸಿಗಳಿಗೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮನವಿ
ನಮ್ಮ ಹೆಮ್ಮೆಯನ್ನು, ನಮ್ಮ ತಿರಂಗಾವನ್ನು ನಿಮ್ಮ ಮನೆಗಳಲ್ಲಿ ಹಾರಿಸಿ, ತಿರಂಗಾದೊಂದಿಗೆ ಸೆಲ್ಫಿ ತೆಗೆದುಕೊಳ್ಳಿ ಮತ್ತು ಅದನ್ನು ಹರ್ ಘರ್ ತಿರಂಗಾ ಜಾಲತಾಣ https://harghartiranga.com ದಲ್ಲಿ ಅಪ್ಲೋಡ್ ಮಾಡಿ : ಶ್ರೀ ಅಮಿತ್ ಶಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ #HarGharTiranga ಅಭಿಯಾನವು ಕಳೆದ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಆಂದೋಲನವಾಗಿ ವಿಕಸನಗೊಂಡಿದೆ
#HarGharTiranga ಅಭಿಯಾನವು ರಾಷ್ಟ್ರದ ಉದ್ದಗಲಕ್ಕೂ ಪ್ರತಿಯೊಬ್ಬ ಭಾರತೀಯನಲ್ಲೂ ಮೂಲಭೂತ ಏಕತೆಯನ್ನು ಜಾಗೃತಗೊಳಿಸಿದೆ
Posted On:
03 AUG 2024 1:57PM by PIB Bengaluru
ಈ ಆಂದೋಲನವನ್ನು ಮತ್ತಷ್ಟು ಬಲಪಡಿಸಲು ಹಾಗು ಮತ್ತೆ ಅದೇ ಉತ್ಸಾಹದಿಂದ ಭಾಗವಹಿಸಲು ನಾನು ಎಲ್ಲಾ ನಾಗರಿಕರಿಗೆ ಮನವಿ ಮಾಡುತ್ತೇನೆ: ಕೇಂದ್ರ ಗೃಹ ಸಚಿವರು
ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಆಗಸ್ಟ್ 9 ರಿಂದ 15 ರವರೆಗೆ 'ಹರ್ ಘರ್ ತಿರಂಗಾ' ಅಭಿಯಾನದ ಅಡಿಯಲ್ಲಿ ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಂತೆ ಮತ್ತು ತಮ್ಮ ಸೆಲ್ಫಿಗಳನ್ನು https://harghartiranga.com ಜಾಲತಾಣದಲ್ಲಿ ಅಪ್ಲೋಡ್ ಮಾಡುವಂತೆ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಇಂದು X ವೇದಿಕೆಯಲ್ಲಿ (ಎಕ್ಸ್ ಪ್ಲಾಟ್ ಫಾರ್ಮ್ ನಲ್ಲಿ) ಮಾಡಿರುವ ಪೋಸ್ಟ್ ನಲ್ಲಿ, "ಪಿಎಂ ಶ್ರೀ ನರೇಂದ್ರ ಮೋದಿ ಜಿ ಅವರ #HarGharTiranga ಅಭಿಯಾನವು ಕಳೆದ ಎರಡು ವರ್ಷಗಳಲ್ಲಿ ರಾಷ್ಟ್ರೀಯ ಆಂದೋಲನವಾಗಿ ವಿಕಸನಗೊಂಡಿದೆ, ರಾಷ್ಟ್ರದ ಉದ್ದಗಲಕ್ಕೂ ಪ್ರತಿಯೊಬ್ಬ ಭಾರತೀಯನಲ್ಲಿ ಮೂಲಭೂತ ಏಕತೆಯನ್ನು ಜಾಗೃತಗೊಳಿಸಿದೆ. ಈ ಆಂದೋಲನವನ್ನು ಮತ್ತಷ್ಟು ಉತ್ತೇಜಿಸಲು ಹಾಗು ಮತ್ತೆ ಅದೇ ಉತ್ಸಾಹದಿಂದ ಅದರಲ್ಲಿ ಭಾಗವಹಿಸಲು ನಾನು ಎಲ್ಲಾ ನಾಗರಿಕರಿಗೆ ಮನವಿ ಮಾಡುತ್ತೇನೆ. ನಮ್ಮ ಹೆಮ್ಮೆಯನ್ನು, ನಮ್ಮ ತಿರಂಗಾವನ್ನು ನಿಮ್ಮ ಮನೆಗಳಲ್ಲಿ ಹಾರಿಸಿ, ತಿರಂಗಾದೊಂದಿಗೆ ಸೆಲ್ಫಿ ತೆಗೆದುಕೊಳ್ಳಿ ಮತ್ತು ಅದನ್ನು ಹರ್ ಘರ್ ತಿರಂಗಾ ಜಾಲತಾಣ (ವೆಬ್ ಸೈಟ್ ನಲ್ಲಿ) https://harghartiranga.com. ದಲ್ಲಿಅಪ್ಲೋಡ್ ಮಾಡಿ” ಎಂದು ಹೇಳಿದ್ದಾರೆ.
*****
(Release ID: 2041350)
Visitor Counter : 43