ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ನವದೆಹಲಿಯಲ್ಲಿ ಇಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಸರಬ್ಜೋತ್ ಸಿಂಗ್ ನೇತೃತ್ವದ ಆರು ಶೂಟರ್‌ಗಳನ್ನು ಡಾ.ಮನ್ಸುಖ್ ಮಾಂಡವಿಯಾ ಸನ್ಮಾನಿಸಿದರು
Posted On:
01 AUG 2024 7:29PM by PIB Bengaluru
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಶೂಟಿಂಗ್ ತಂಡದ ಪ್ರಭಾವಶಾಲಿ ಪ್ರದರ್ಶನವನ್ನು ಗುರುತಿಸಿ, ಕೇಂದ್ರ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ಖಾಡ್ಸೆ ಅವರು ದೇಶಕ್ಕೆ ಮರಳಿದ ನಂತರ ಆರು ಅತ್ಯುತ್ತಮ ಶೂಟರ್‌ಗಳನ್ನು ಸನ್ಮಾನಿಸಿದರು. ಮನು ಭಾಕರ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿಸರಬ್ಜೋತ್ ಸಿಂಗ್ ಕಂಚಿನ ಪದಕ ಗೆದ್ದರು.
ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನಗದು ಪ್ರಶಸ್ತಿ ಯೋಜನೆಯ ಭಾಗವಾಗಿ ಸರಬ್ಜೋತ್ ಸಿಂಗ್ ಅವರಿಗೆ ಡಾ. ಮಾಂಡವಿಯಾ ಅವರು 22.5 ಲಕ್ಷ ರೂ.ಗಳ ಚೆಕ್ ನೀಡಿದರು. ಅರ್ಜುನ್ ಬಬುಟಾ, ರಮಿತಾ ಜಿಂದಾಲ್, ರಿದಮ್ ಸಾಂಗ್ವಾನ್, ಸಂದೀಪ್ ಸಿಂಗ್ ಮತ್ತು ಅರ್ಜುನ್ ಸಿಂಗ್ ಚೀಮಾ, ಅವರ ತರಬೇತುದಾರರಾದ ಸುಮಾ ಶಿರೂರ್, ಸಮರೇಶ್ ಜಂಗ್ ಮತ್ತು ಸರಬ್ಜೋತ್ ಅವರ ವೈಯಕ್ತಿಕ ತರಬೇತುದಾರ ಅಭಿಷೇಕ್ ರಾಣಾ ಅವರ ಕೊಡುಗೆಗಳನ್ನು ಈ ಕಾರ್ಯಕ್ರಮದಲ್ಲಿ ಗುರುತಿಸಲಾಯಿತು. ವಿಶೇಷವೆಂದರೆ, ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿಅರ್ಜುನ್ ಬಬುಟಾ 4 ನೇ ಸ್ಥಾನ ಪಡೆದರು.
ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಡಾ. ಮಾಂಡವೀಯಾ ಅವರು ಕ್ರೀಡಾಪಟುಗಳನ್ನು ಶ್ಲಾಘಿಸಿ, ‘‘ನಿಮ್ಮಲ್ಲಿ ಪ್ರತಿಯೊಬ್ಬರೂ ಚಾಂಪಿಯನ್. ನೀವು ಕೂದಲೆಳೆಯ ಅಂತರದಿಂದ ಪದಕವನ್ನು ಕಳೆದುಕೊಂಡಿದ್ದೀರಿ ಎಂಬ ಅಂಶವನ್ನು ಅರ್ಥಮಾಡಿಕೊಳ್ಳುವುದು ನಿಮ್ಮಲ್ಲಿ ಕೆಲವರಿಗೆ ಕಷ್ಟ ಎಂದು ನನಗೆ ತಿಳಿದಿದೆ, ಆದರೆ ಆ ಸೋಲು ಆಟದ ಬಗ್ಗೆ ನಿಮ್ಮ ಉತ್ಸಾಹವನ್ನು ಕಡಿಮೆ ಮಾಡಲು ಬಿಡಬೇಡಿ. ಬದಲಾಗಿ, ಭವಿಷ್ಯದ ಸ್ಪರ್ಧೆಗಳಲ್ಲಿಉತ್ತಮ ಸಾಧನೆ ಮಾಡಲು ನಿಮ್ಮ ಪ್ರೇರಣೆಯನ್ನು ಹೆಚ್ಚಿಸಲಿ,’’ ಎಂದರು.
ಖೇಲೋ ಇಂಡಿಯಾ ಕಾರ್ಯಕ್ರಮದ ಪರಿಣಾಮವನ್ನು ಒತ್ತಿ ಹೇಳಿದ ಡಾ.ಮಾಂಡವೀಯಾ, ‘‘ಈ ಬಾರಿ 117 ಕ್ರೀಡಾಪಟುಗಳಲ್ಲಿ70 ಕ್ರೀಡಾಪಟುಗಳು ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ, ಇದು ನಮ್ಮ ದೇಶದಲ್ಲಿ ಹೊಸ ಪ್ರತಿಭೆಗಳ ಹೊರಹೊಮ್ಮುವಿಕೆಯನ್ನು ತೋರಿಸುತ್ತದೆ. ಈ 117 ಕ್ರೀಡಾಪಟುಗಳಲ್ಲಿ 28 ಕ್ರೀಡಾಪಟುಗಳು ಖೇಲೋ ಇಂಡಿಯಾದಿಂದ ಬಂದಿದ್ದು, ಈಗ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯ ಭಾಗವಾಗಿದ್ದಾರೆ. ಇದರರ್ಥ ತಳಮಟ್ಟದಿಂದ ಗಣ್ಯ ಮಟ್ಟದವರೆಗೆ, ಅವರು ಸ್ಥಿರವಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಎರಡೂ ಯೋಜನೆಗಳಿಂದ ಬೆಂಬಲವನ್ನು ಪಡೆದಿದ್ದಾರೆ,’’ ಎಂದು ಹೇಳಿದರು.
ಕ್ರೀಡಾಪಟುಗಳ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಒತ್ತಿ ಹೇಳಿದ ಡಾ.ಮಾಂಡವಿಯಾ, ‘‘ಸರಬ್ಜೋತ್ ಈ ಪಿರಮಿಡ್ ರಚನೆಯ ಪ್ರತಿರೂಪವಾಗಿದ್ದಾರೆ - ಖೇಲೋ ಇಂಡಿಯಾ ಒಲಿಂಪಿಕ್ ಪೋಡಿಯಂ ಯೋಜನೆಯನ್ನು ಒಲಿಂಪಿಕ್ ಪೋಡಿಯಂ ಫಿನಿಶ್‌ಗೆ ಗುರಿಯಾಗಿಸುತ್ತದೆ. ಆದರೆ ಬೆಂಬಲ ಮಾತ್ರ ಫಲಿತಾಂಶಗಳನ್ನು ಖಾತರಿಪಡಿಸುವುದಿಲ್ಲ- ಕ್ರೀಡಾಪಟುಗಳ ಕಠಿಣ ಪರಿಶ್ರಮ, ಅವರ ಪೋಷಕರು, ತರಬೇತುದಾರರು ಮತ್ತು ಅವರ ಸುತ್ತಲಿನವರ ಪ್ರೇರಣೆಯು ಅವರ ಅಂತಿಮ ಗೆಲುವನ್ನು ಖಚಿತಪಡಿಸುತ್ತದೆ, ’’ ಎಂದು ಹೇಳಿದರು.
ಕಂಚಿನ ಪದಕ ವಿಜೇತ ಸರಬ್ಜೋತ್ 2019ರಿಂದ ಖೇಲೋ ಇಂಡಿಯಾ ವಿದ್ಯಾರ್ಥಿವೇತನದ ಕ್ರೀಡಾಪಟುವಾಗಿದ್ದಾರೆ. ಅರ್ಜುನ್ ಚೀಮಾ, ರಿದಮ್ ಸಾಂಗ್ವಾನ್, ಅರ್ಜುನ್ ಬಬುಟಾ ಮತ್ತು ರಮಿತಾ ಕೂಡ ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ.
ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಭಿವೃದ್ಧಿಯ ಬಗ್ಗೆ ವಿವರಿಸಿದ ಡಾ.ಮಾಂಡವೀಯಾ, ‘‘ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಕನಸು ಕಂಡಿದ್ದಾರೆ ಮತ್ತು ಇದರಲ್ಲಿ ಕ್ರೀಡೆ ದೊಡ್ಡ ಪಾತ್ರ ವಹಿಸುತ್ತದೆ. 2047 ರ ವೇಳೆಗೆ, ಕ್ರೀಡಾ ಪರಿಸರ ವ್ಯವಸ್ಥೆಯ ವಿಷಯದಲ್ಲಿ ಭಾರತವು ವಿಶ್ವದ ಅಗ್ರ 5ರಲ್ಲಿ ಒಂದಾಗಲಿದೆ,’’ ಎಂದು ಹೇಳಿದರು.
ರಾಷ್ಟ್ರವ್ಯಾಪಿ ಕ್ರೀಡಾ ಪ್ರತಿಭಾ ಅಭಿಯಾನವಾದ ಕೀರ್ತಿ (ಖೇಲೋ ಇಂಡಿಯಾ ಉದಯೋನ್ಮುಖ ಪ್ರತಿಭೆಯ ಉಪಕ್ರಮ) ನಂತಹ ಉಪಕ್ರಮಗಳು ಭವಿಷ್ಯದ ಒಲಿಂಪಿಯನ್‌ಗಳನ್ನು ತಳಮಟ್ಟದಿಂದ ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುವೆ ಎಂದು ಅವರು ಹೇಳಿದರು.
ಸಂವಾದದ ವೇಳೆ, ಶೂಟರ್‌ಗಳು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಮೂಲಸೌಕರ್ಯ, ಕ್ರೀಡಾ ವಿಜ್ಞಾನ ಮತ್ತು ತರಬೇತಿ ಸೇರಿದಂತೆ ಭಾರತದಲ್ಲಿಈಗ ಲಭ್ಯವಿರುವ ವಿಶ್ವದರ್ಜೆಯ ಸೌಲಭ್ಯಗಳನ್ನು ಶ್ಲಾಘಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ಗೆ ತಮ್ಮ ಪ್ರಯಾಣದಲ್ಲಿ ಸರ್ಕಾರದಿಂದ ಗಮನಾರ್ಹ ಬೆಂಬಲವನ್ನು ಅವರು ಒತ್ತಿ ಹೇಳಿದರು.
*****
(Release ID: 2040659)
Visitor Counter : 37