ಪ್ರವಾಸೋದ್ಯಮ ಸಚಿವಾಲಯ
azadi ka amrit mahotsav

ಹಸಿರು ಪ್ರವಾಸೋದ್ಯಮಕ್ಕೆ ಉತ್ತೇಜನ

Posted On: 29 JUL 2024 4:31PM by PIB Bengaluru

UNWTO ಮಾಪಕ, ಮೇ 2024 ರ ಪ್ರಕಾರ, ಏಷ್ಯಾ ಮತ್ತು ಪೆಸಿಫಿಕ್‌ ನಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮವು ತ್ವರಿತ ಚೇತರಿಕೆಯನ್ನು ಕಾಣುತ್ತಿದೆ, ಇಲ್ಲಿ ಆಗಮನವು 2024 ರ ಮೊದಲ ತ್ರೈಮಾಸಿಕದಲ್ಲಿ ಶೇ.82 ರಷ್ಟಿದ್ದು, ಸಾಂಕ್ರಾಮಿಕ ಪೂರ್ವ ಹಂತಗಳನ್ನು ತಲುಪಿದೆ. ಭಾರತದಲ್ಲಿ  ಆಗಮನವು ಶೇ.89 ತಲುಪಿದ್ದು ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದಲ್ಲಿ ಪ್ರಬಲ ಚೇತರಿಕೆಗಳಲ್ಲೊಂದಾಗಿದೆ. ಇದು ಸಾಂಕ್ರಾಮಿಕ ಪೂರ್ವ ಮಟ್ಟವಾಗಿದೆ.

ಭಾರತವನ್ನು ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಆದ್ಯತೆಯ ಜಾಗತಿಕ ತಾಣವಾಗಿ ಇರಿಸಲು, ಪ್ರವಾಸೋದ್ಯಮ ಸಚಿವಾಲಯವು ಸುಸ್ಥಿರ ಪ್ರವಾಸೋದ್ಯಮಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರವನ್ನು ರೂಪಿಸಿದೆ. ಸುಸ್ಥಿರ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಈ ಕೆಳಗಿನ ಕಾರ್ಯತಂತ್ರದ ಸ್ತಂಭಗಳನ್ನು ಗುರುತಿಸಲಾಗಿದೆ:

(i)        ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವುದು

(ii)       ಜೀವವೈವಿಧ್ಯವನ್ನು ರಕ್ಷಿಸುವುದು

(iii)      ಆರ್ಥಿಕ ಸುಸ್ಥಿರತೆಯನ್ನು ಉತ್ತೇಜಿಸುವುದು

(iv)      ಸಾಮಾಜಿಕ-ಸಾಂಸ್ಕೃತಿಕ ಸುಸ್ಥಿರತೆಯನ್ನು ಉತ್ತೇಜಿಸುವುದು

(v)       ಸುಸ್ಥಿರ ಪ್ರವಾಸೋದ್ಯಮದ ಪ್ರಮಾಣೀಕರಣದ ಯೋಜನೆ

(vi)      ಐಇಸಿ ಮತ್ತು ಸಾಮರ್ಥ್ಯ ನಿರ್ಮಾಣ

(vii)     ಆಡಳಿತ

ದೇಶದಲ್ಲಿ ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ಥಳೀಯ ಸರ್ಕಾರಗಳ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ತಾಣಗಳ ಸಮಗ್ರ ಅಭಿವೃದ್ಧಿಗಾಗಿ ದೃಢವಾದ ಚೌಕಟ್ಟನ್ನು ರಚಿಸುವ ಉದ್ದೇಶದೊಂದಿಗೆ ಪ್ರವಾಸೋದ್ಯಮ ಸಚಿವಾಲಯವು ಸ್ವದೇಶ್ ದರ್ಶನ್ 2.0 ರೂಪದಲ್ಲಿ ತನ್ನ ಸ್ವದೇಶ್ ದರ್ಶನ್ ಯೋಜನೆಯನ್ನು ಪರಿಷ್ಕರಿಸಿದೆ. ‌

ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶ ಆಡಳಿತಗಳೊಂದಿಗೆ ಸಮಾಲೋಚಿಸಿ, ಸ್ವದೇಶ್ ದರ್ಶನ್ 2.0 ಯೋಜನೆಯಡಿಯಲ್ಲಿ ಅಭಿವೃದ್ಧಿಗಾಗಿ 32 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 57 ಸ್ಥಳಗಳನ್ನು ಗುರುತಿಸಲಾಗಿದೆ. ಇವುಗಳ ವಿವರಗಳನ್ನು ಅನುಬಂಧ-I ರಲ್ಲಿ ನೀಡಲಾಗಿದೆ.

  1. "ಸವಾಲು ಆಧಾರಿತ ಗಮ್ಯಸ್ಥಾನ ಅಭಿವೃದ್ಧಿ", ಸ್ವದೇಶ್ ದರ್ಶನ್ 2.0 ಅಡಿಯ ಉಪ-ಯೋಜನೆಯು ನಮ್ಮ ಪ್ರವಾಸಿ ಸ್ಥಳಗಳನ್ನು ಸುಸ್ಥಿರ ಮತ್ತು ಜವಾಬ್ದಾರಿಯುತ ತಾಣಗಳಾಗಿ ಪರಿವರ್ತಿಸಲು ಎಲ್ಲಾ ಪ್ರವಾಸೋದ್ಯಮ ಮೌಲ್ಯ ಸರಪಳಿಯಾದ್ಯಂತ ಪ್ರವಾಸಿ ಅನುಭವವನ್ನು ಹೆಚ್ಚಿಸಲು ಗಮ್ಯಸ್ಥಾನದ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ. ಈ ಯೋಜನೆಯಲ್ಲಿ, ಸಚಿವಾಲಯವು 4 ವರ್ಗಗಳ ಅಡಿಯಲ್ಲಿ 42 ಸ್ಥಳಗಳನ್ನು ಗುರುತಿಸಿದೆ, (i): ಸಂಸ್ಕೃತಿ ಮತ್ತು ಪರಂಪರೆಯ ತಾಣಗಳು, (ii): ಆಧ್ಯಾತ್ಮಿಕ ಪ್ರವಾಸೋದ್ಯಮ, (iii): ಪರಿಸರ ಪ್ರವಾಸೋದ್ಯಮ ಮತ್ತು ಅಮೃತ್ ಧರೋಹರ್ ತಾಣಗಳು (iv): ರೋಮಾಂಚಕ ಗ್ರಾಮಗಳ ಕಾರ್ಯಕ್ರಮದ ತಾಣ. ಪರಿಸರ ಪ್ರವಾಸೋದ್ಯಮ ಮತ್ತು ಅಮೃತ್ ಧರೋಹರ್ ವರ್ಗದ ಅಡಿಯಲ್ಲಿ ಗುರುತಿಸಲಾದ ಸ್ಥಳಗಳ ವಿವರಗಳನ್ನು ಅನುಬಂಧ-II ರಲ್ಲಿ ನೀಡಲಾಗಿದೆ.

ಅನುಬಂಧ-I

ಸ್ವದೇಶ್ ದರ್ಶನ್ 2.0 ಅಡಿಯಲ್ಲಿ ಗುರುತಿಸಲಾದ ಸ್ಥಳಗಳ ಪಟ್ಟಿ:

ಕ್ರ.ಸಂ.

ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶ

ಗುರುತಿಸಲಾದ ತಾಣಗಳು

1

ಆಂಧ್ರಪ್ರದೇಶ

ಗಂಡಿಕೋಟ, ಅರಕು-ಲಂಬಸಿಂಗಿ

 

2

ಅರುಣಾಚಲ ಪ್ರದೇಶ

ನಾಚೋ, ಮೆಚುಕಾ

 

3

ಅಸ್ಸಾಂ

ಜೋರ್ಹತ್, ಕೊಕ್ರಜಾರ್

 

4

ಬಿಹಾರ

ಗಯಾ, ನಳಂದ

 

5

ಛತ್ತೀಸ್‌ಗಢ

ಬಿಲಾಸ್ಪುರ್, ಜಗದಲ್ಪುರ್

 

6

ಗೋವಾ

ಪೊರ್ವೊರಿಮ್, ಕೊಲ್ವಾ

 

7

ಗುಜರಾತ್

ಧೋಲವೀರ, ದ್ವಾರಕಾ

8

ಹರಿಯಾಣ

ಪಂಚಕುಲ (ಮೋರ್ನಿ)

9

ಹಿಮಾಚಲ ಪ್ರದೇಶ

ಪಾಂಗ್ ಅಣೆಕಟ್ಟು

10

ಜಮ್ಮು ಮತ್ತು ಕಾಶ್ಮೀರ

ಬಶೋಲಿ

11

ಜಾರ್ಖಂಡ್

ಚಾಂಡಿಲ್

12

ಕರ್ನಾಟಕ

ಹಂಪಿ, ಮೈಸೂರು

13

ಕೇರಳ

ಕುಮಾರಕೋಮ್, ಕೋಝಿಕ್ಕೋಡ್ (ಬೇಪೋರ್)

14

ಮಧ್ಯಪ್ರದೇಶ

ಗ್ವಾಲಿಯರ್, ಚಿತ್ರಕೂಟ

15

ಮಹಾರಾಷ್ಟ್ರ

ಸಿಂಧುದುರ್ಗ, ಅಜಂತಾ-ಎಲ್ಲೋರಾ

16

ಮಣಿಪುರ

ಮೊಯಿರಾಂಗ್ (ಬಿಷ್ಣುಪುರ್)

17

ಮೇಘಾಲಯ

ಶಿಲ್ಲಾಂಗ್, ಸೊಹ್ರಾ

18

ಮಿಜೋರಾಂ

ಐಜ್ವಾಲ್, ಚಂಫೈ

19

ನಾಗಾಲ್ಯಾಂಡ್

ನಿಯುಲ್ಯಾಂಡ್, ಚುಮುಕೆಡಿಮಾ

20

ಒಡಿಶಾ

ಕೊರಾಪುಟ್, ದೇಬ್ರಿಗಢ್ ಜೊತೆಗೆ 'ಖಿಂಡಾ ಗ್ರಾಮ'ದ ವಿಶೇಷ ಆಕರ್ಷಣೆ

21

ಪಂಜಾಬ್

ಅಮೃತಸರ, ಕಪುರ್ತಲ

22

ರಾಜಸ್ಥಾನ

ಬುಂದಿ (ಕೇಶೋರೈಪಟನ್), ಜೋಧಪುರ

23

ಸಿಕ್ಕಿಂ

ಗ್ಯಾಂಗ್ಟಾಕ್, ಗಯಾಲ್ಶಿಂಗ್

24

ತಮಿಳುನಾಡು

ಮಾಮಲ್ಲಪುರಂ, ನೀಲಗಿರಿ

25

ತೆಲಂಗಾಣ

ಭೋಂಗಿರ್, ಅನಂತಗಿರಿ

26

ತ್ರಿಪುರಾ

ಅಗರ್ತಲಾ, ಉನಕೋಟಿ

27

ಉತ್ತರ ಪ್ರದೇಶ

ಪ್ರಯಾಗರಾಜ್, ನೈಮಿಷಾರಣ್ಯ

28

ಉತ್ತರಾಖಂಡ

ಪಿತ್ತೋರಗಢ್, ಚಂಪಾವತ್

29

ಚಂಡೀಗಢ

ಚಂಡೀಗಢ

30

ಲಕ್ಷದ್ವೀಪ

ಲಕ್ಷದ್ವೀಪ

31

ಪುದುಚೇರಿ

ಪುದುಚೇರಿ, ಕಾರೈಕಲ್

32

ಲಡಾಖ್

ಲೇಹ್, ಕಾರ್ಗಿಲ್

 

ಒಟ್ಟು

57

ಅನುಬಂಧ-II

ಪರಿಸರ ಪ್ರವಾಸೋದ್ಯಮ ಮತ್ತು ಅಮೃತ್ ಧರೋಹರ್ ವರ್ಗದಲ್ಲಿ ಸವಾಲು ಆಧಾರಿತ ಗಮ್ಯಸ್ಥಾನ ಅಭಿವೃದ್ಧಿ ಅಡಿಯಲ್ಲಿ ಗುರುತಿಸಲಾದ ತಾಣಗಳ ಪಟ್ಟಿ:

ಕ್ರ.ಸಂ.

ತಾಣ

ರಾಜ್ಯ ಸರ್ಕಾರ/ಕೇಂದ್ರಾಡಳಿತ ಪ್ರದೇಶ

1

ಬಿಚೋಮ್ ಅಣೆಕಟ್ಟು

ಅರುಣಾಚಲ ಪ್ರದೇಶ

2

ಶಿವಸಾಗರ

ಅಸ್ಸಾಂ

3

ಮಾಯಲಿ ಬಗೀಚಾ

ಛತ್ತೀಸ್‌ಗಢ

4

ಮಾಯೆಮ್ ಗ್ರಾಮ

ಗೋವಾ

5

ಥೋಲ್ ಗ್ರಾಮ

ಗುಜರಾತ್

6

ಉಡುಪಿ

ಕರ್ನಾಟಕ

7

ಮುಷ್ಕೋ ಗ್ರಾಮ

ಲಡಾಖ್

8

ಲಕ್ಷದ್ವೀಪ

ಲಕ್ಷದ್ವೀಪ

9

ಡೊಯಾಂಗ್ ಜಲಾಶಯ

ನಾಗಾಲ್ಯಾಂಡ್

10

ಕಾಮರೆಡ್ಡಿ

ತೆಲಂಗಾಣ

 


(Release ID: 2038801) Visitor Counter : 52