ಉಕ್ಕು ಸಚಿವಾಲಯ
ಉಕ್ಕು ಸಚಿವಾಲಯವು ರಾಷ್ಟ್ರೀಯ ಮೆಟಲರ್ಜಿಸ್ಟ್ ಪ್ರಶಸ್ತಿಗಳು -2024 ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ
Posted On:
29 JUL 2024 3:11PM by PIB Bengaluru
ಕೇಂದ್ರ ಉಕ್ಕಿನ ಸಚಿವಾಲಯವು ಕಾರ್ಯಾಚರಣೆಗಳು, ಸಂಶೋಧನೆ ಮತ್ತು ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಮತ್ತು ಶಕ್ತಿ ಸಂರಕ್ಷಣೆಯನ್ನು ಒಳಗೊಂಡಿರುವ ಲೋಹಶಾಸ್ತ್ರ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಳನ್ನು ಗುರುತಿಸಲು ರಾಷ್ಟ್ರೀಯ ಲೋಹಶಾಸ್ತ್ರಜ್ಞ ಪ್ರಶಸ್ತಿಗಳನ್ನು ನೀಡುತ್ತದೆ.
ರಾಷ್ಟ್ರೀಯ ಮೆಟಲರ್ಜಿಸ್ಟ್ ಪ್ರಶಸ್ತಿಗಳು (NMA)-2024 ಗಾಗಿ ಕೈಗಾರಿಕೆ, ಸಂಶೋಧನೆ ಮತ್ತು ಅಕಾಡೆಮಿಯ ವ್ಯಕ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಶಸ್ತಿಗಳನ್ನು ಕೆಳಗಿನ ನಾಲ್ಕು ವಿಭಾಗಗಳಲ್ಲಿ ನೀಡಲಾಗುವುದು:-
1. ಜೀವಮಾನ ಸಾಧನೆ ಪ್ರಶಸ್ತಿ
2. ರಾಷ್ಟ್ರೀಯ ಮೆಟಲರ್ಜಿಸ್ಟ್ ಪ್ರಶಸ್ತಿ
3. ಯಂಗ್ ಮೆಟಲರ್ಜಿಸ್ಟ್ ಪ್ರಶಸ್ತಿ
a. ಪರಿಸರ
b. ಮೆಟಲ್ ಸೈನ್ಸ್
4. ಕಬ್ಬಿಣ ಮತ್ತು ಉಕ್ಕಿನ ಕ್ಷೇತ್ರದಲ್ಲಿ ಅರ್ & ಡಿ ಗಾಗಿ ಪ್ರಶಸ್ತಿ.
ವೆಬ್ ಪೋರ್ಟಲ್ https://awards.steel.gov.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 06/09/2024 ರ ಸಂಜೆ 05:00 ವರೆಗೆ ಅವಕಾಶ ಕಲ್ಪಿಸಲಾಗಿದೆ.
ರಾಷ್ಟ್ರೀಯ ಮೆಟಲರ್ಜಿಸ್ಟ್ ಪ್ರಶಸ್ತಿಗಳಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು ಮತ್ತು ಇತರ ನಿಯಮಗಳು ಮತ್ತು ಷರತ್ತುಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳು https://awards.steel.gov.in ನಲ್ಲಿ ಲಭ್ಯವಿದೆ.
ಈ ಯೋಜನೆಯು ಕೈಗಾರಿಕೆ, ಆರ್ & ಡಿ ಅಥವಾ ಅಕಾಡೆಮಿಯಲ್ಲಿ ತಮ್ಮ ಕೆಲಸದ ಮೂಲಕ ದೇಶದಲ್ಲಿ ಲೋಹಶಾಸ್ತ್ರ ಕ್ಷೇತ್ರಕ್ಕೆ ಕೊಡುಗೆ ನೀಡಿದ ಭಾರತೀಯ ಪ್ರಜೆಗಳಿಗೆ ಮಾತ್ರ ಅನ್ವಯವಾಗಿದೆ. ಅಭ್ಯರ್ಥಿಯ ಅರ್ಹತೆಯನ್ನು 01/01/2024 ರಿಂದ ಪರಿಗಣಿಸಲಾಗುತ್ತದೆ.
*****
(Release ID: 2038736)
Visitor Counter : 45