ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಭಾರತೀಯ ಮಾನಕ ಬ್ಯೂರೋ – ಬಿಐಎಸ್ ವಿವಿಧ ಪ್ರಮುಖ ತಾಂತ್ರಿಕ ಸಂಸ್ಥೆಗಳ ಅಧ್ಯಾಪಕರುಗಳಿಗೆ 82 ಯೋಜನೆಗಳ ಮಂಜೂರು

Posted On: 24 JUL 2024 10:46AM by PIB Bengaluru

ಭಾರತೀಯ ಮಾನಕ ಬ್ಯೂರೋ (ಬಿಐಎಸ್) 82 ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಯೋಜನೆಗಳನ್ನು ಐಐಟಿಗಳು, ಎನ್ಐಟಿಗಳು ಮತ್ತು ಇತರ ತಜ್ಞರು ಸೇರಿದಂತೆ ವಿವಿಧ ಪ್ರಮುಖ ತಾಂತ್ರಿಕ ಸಂಸ್ಥೆಗಳ ಅಧ್ಯಾಪಕರಿಗೆ, ಮತ್ತಷ್ಟು ವಿಸ್ತರಿಸಲು, ವೈವಿಧ್ಯಗೊಳಿಸಲು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಯನ್ನು ವೇಗಗೊಳಿಸಲು ಮಂಜೂರು ಮಾಡಲಾಗಿದೆ.  

ಬಜೆಟ್ ನಲ್ಲಿ ಈ ಪ್ರತಿಯೊಂದು ಯೋಜನೆಗಳಿಗೆ ಗರಿಷ್ಟ 10 ಲಕ್ಷ ರೂಪಾಯಿ ದೊರೆಯಲಿದೆ ಮತ್ತು ಇವುಗಳನ್ನು ಆರು ತಿಂಗಳ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ಇವು ಸೈದ್ಧಾಂತಿಕ ವಿಮರ್ಶೆಗಳಿಗೆ ಸೀಮಿತವಾಗಿಲ್ಲ. ಆದರೆ ಇವು ವ್ಯಾಪಕವಾದ ಕ್ಷೇತ್ರ ಮಟ್ಟದ ಅಧ್ಯಯನಗಳನ್ನು ಒಳಗೊಂಡಿರುತ್ತದೆ. ಈ ಯೋಜನೆಗಳ ಕೇಂದ್ರೀಕೃತ ಕ್ಷೇತ್ರಗಳು ಅತ್ಯಾಧುನಿಕ ವೇದಿಕೆಗಳನ್ನು ಒಳಗೊಂಡಿವೆ: ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್ ತಂತ್ರಜ್ಞಾನ, ವೈದ್ಯಕೀಯ ಸಾಧನಗಳು, ನವೀಕರಿಸಬಹುದಾದ ಇಂಧನ, ಸುಸ್ಥಿರತೆ, ಸ್ಮಾರ್ಟ್ ಸಿಟಿಗಳು ಮತ್ತು ಡಿಜಿಟಲ್ ರೂಪಾಂತರವನ್ನು ಒಳಗೊಂಡಿವೆ.

ಬೆಳವಣಿಗೆಯಾಗುತ್ತಿರುವ ಕ್ಷೇತ್ರಗಳಲ್ಲಿ ಬಿಐಎಸ್ ಗುಣಮಟ್ಟವನ್ನು ಅಭಿವೃದ್ಧಿಪಡಿಸುವ, ಗ್ರಾಹಕರ ರಕ್ಷಣೆ, ಗುಣಮಟ್ಟದ ಖಾತರಿ, ನಾವೀನ್ಯತೆ ಉತ್ಪನ್ನಗಳ ವಿಶ್ವಾಸಾರ್ಹತೆ ಮತ್ತು ಸೇವಾ ವಲಯದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲಿದೆ.

ಮಂಜೂರಾದ 82 ಯೋಜನೆಗಳ ಜೊತೆಗೆ ಇನ್ನೂ 99 ಮಂಜೂರಾತಿ ಪ್ರಕ್ರಿಯೆಯಲ್ಲಿದ್ದು, ಇದರೊಂದಿಗೆ ಮತ್ತೆ 66 ಯೋಜನೆಗಳು ಸಹ ಲಭ್ಯವಿದೆ. ಈ ಅವಕಾಶಗಳು ಬಿಐಎಸ್ ಜಾಲತಾಣ - BIS R&D Projectsದಲ್ಲಿವೆ. ಈ ಉಪಕ್ರಮಗಳು ಗುಣಮಟ್ಟದ ಪ್ರಕ್ರಿಯೆಯನ್ನು ಹೆಚ್ಚಿಸಲಿವೆ ಮತ್ತು ಸಂಶೋಧನಾ ವಲಯಕ್ಕೆ ಸುಸ್ಥಿರತೆಯ ಬೆಂಬಲವನ್ನು ನೀಡಲಿವೆ. ಪರಿಸರ ನಾವೀನ್ಯತೆಯನ್ನು ತ್ವರಿತಗೊಳಿಸಲಿದೆ ಹಾಗೂ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಉತ್ಕೃಷ್ಟತೆಯನ್ನು ವೃದ್ಧಿಸಲಿದೆ.  

ಬಿಐಎಸ್ ಮಹಾ ನಿರ್ದೇಶಕ ಶ್ರೀ ಪ್ರಮೋದ್ ಕುಮಾರ್ ತಿವಾರಿ ಅವರು ಈ ನಿರ್ಣಾಯಕ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಮತ್ತು ಅವರು ಹೀಗೆ ಹೇಳಿದ್ದಾರೆ. "ಪ್ರಮುಖ ಶಿಕ್ಷಣ ಸಂಸ್ಥೆಗಳೊಂದಿಗಿನ ನಮ್ಮ ಸಹಯೋಗ ಮತ್ತು ಹಲವಾರು ಆರ್ ಅಂಡ್ ಡಿ ಯೋಜನೆಗಳ ಮಂಜೂರಾತಿಯು ತಾಂತ್ರಿಕ ಪ್ರಗತಿಗಳು ಮತ್ತು ವಿಕಸನಗೊಳ್ಳುತ್ತಿರುವ ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಪ್ರಮಾಣೀಕರಣ ಪ್ರಕ್ರಿಯೆಯನ್ನು ಮುನ್ನಡೆಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ನಮ್ಮ ಮಾನದಂಡಗಳ ಸೂತ್ರೀಕರಣ ಪ್ರಕ್ರಿಯೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ವರ್ಧಿತ ಗಮನದೊಂದಿಗೆ, ನಾವು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದ್ದೇವೆ. ನಮ್ಮ ಮಾನದಂಡಗಳು ದೃಢವಾದ, ಸಂಬಂಧಿತ ಮತ್ತು ಆಧುನಿಕ ತಂತ್ರಜ್ಞಾನ ಮತ್ತು ಉದ್ಯಮದ ಅಭ್ಯಾಸಗಳ ಸವಾಲುಗಳನ್ನು ಎದುರಿಸಲು ಸಮರ್ಥವಾಗಿವೆ."

ಕೈಗಾರಿಕೆಗಳ ಅಭ್ಯಾಸಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳನ್ನು ಪ್ರತಿಬಿಂಬಿಸುವ ಎಲ್ಲಾ ರೀತಿಯ ಗುಣಮಟ್ಟವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಹೆಚ್ಚಿಸುವುದರಿಂದ ಬಿಐಎಸ್ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲಿದೆ ಮತ್ತು ಸುರಕ್ಷಿತ ಅಭಿವೃದ್ಧಿಗೆ ಕೊಡುಗೆ ನೀಡಲಿದೆ. ಜೊತೆಗೆ ಭಾರತದಲ್ಲಿ ಹೆಚ್ಚು ವಿಶ್ವಾಸಾರ್ಹ ಮಾರುಕಟ್ಟೆಯ ತಾಣವಾಗಲಿದೆ.

ಭಾರತೀಯ ಮಾನಕ ಬ್ಯುರೋ [ಬಿಐಎಸ್] ಒಂದು ರಾಷ್ಟ್ರೀಯ ಗುಣಮಟ್ಟ ಸಂಸ್ಥೆಯಾಗಿದ್ದು, ಉತ್ಪನ್ನಗಳು, ಪ್ರಕ್ರಿಯೆ ಮತ್ತು ಸೇವೆಗಳ ವಲಯದಲ್ಲಿ ಸೂಕ್ಷ್ಮವಾಗಿ ಭಾರತೀಯ ಗುಣಮಟ್ಟವನ್ನು ಅಭಿವೃದ್ಧಿಪಡಿಸಲಿದೆ. ದೇಶದಲ್ಲಿ ಸರಕು ಮತ್ತು ಸೇವೆಗಳ ವಲಯದಲ್ಲಿ ವಿಸ್ತೃತವಾಗಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಮತ್ತು ಗುಣಮಟ್ಟ ಖಾತರಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ (ಆರ್&ಡಿ) ಪ್ರಮುಖ ಪ್ರಾಮುಖ್ಯತೆಯನ್ನು ಗುರುತಿಸಿ, ಬಿಐಎಸ್ ಕ್ಷಿಪ್ರ ತಾಂತ್ರಿಕ ಪ್ರಗತಿಗಳು ಮತ್ತು ವ್ಯಾಪಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಪರಿವರ್ತನೆ ತರುವ ಬದಲಾವಣೆಗಳಿಂದ ಎದುರಾಗುವ ಸವಾಲುಗಳನ್ನು ಎದುರಿಸಲು ತನ್ನ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ.  

ವೈವಿಧ್ಯತೆ, ನಾವೀನ್ಯತೆ, ಉತ್ಪಾದನಾ ವಲಯದಲ್ಲಿ ಸಂಕೀರ್ಣತೆ ಮತ್ತು ಸೇವಾ ವಲಯವನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಪ್ರತಿಕ್ರಿಯೆಯಾಗಿ ಬಿಐಎಸ್ ಸಮಗ್ರ ಆರ್ ಅಂಡ್ ಡಿ ಯೋಜನೆಗಳಲ್ಲಿ ಗುಣಮಟ್ಟಕ್ಕೆ ಒತ್ತು ನೀಡಲಿದೆ. ಈ ಏಕೀಕರಣವು ಸಂಪೂರ್ಣ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಸಾಮರ್ಥ್ಯವಿರುವ ವೇದಿಕೆಗಳ ತಜ್ಞರ ವ್ಯಾಪಕ ಸಂಪರ್ಕ ಜಾಲವನ್ನು ನಿಯಂತ್ರಿಸುವ ಅಗತ್ಯವಿದೆ. ಅಸ್ತಿತ್ವದಲ್ಲಿರುವ ಸಂಪರ್ಕ ಜಾಲವನ್ನು ವಿಸ್ತರಿಸಲು, ಬಿಐಎಸ್ ಐಐಟಿಗಳು ಮತ್ತು ಎನ್‌ಐಟಿಗಳು ಸೇರಿದಂತೆ ಪ್ರಮುಖ ಶಿಕ್ಷಣ ಸಂಸ್ಥೆಗಳೊಂದಿಗೆ ತಿಳುವಳಿಕೆ ಒಪ್ಪಂದಗಳನ್ನು (ಎಂಒಯು) ಮಾಡಿಕೊಂಡಿದೆ, ಆ ಮೂಲಕ ತಮ್ಮ ಅಧ್ಯಾಪಕರು ಮತ್ತು ಸಂಶೋಧನಾ ವಿದ್ವಾಂಸರೊಂದಿಗೆ ಲಭ್ಯವಿರುವ ವಿಶಾಲವಾದ ಬೌದ್ಧಿಕ ಬಂಡವಾಳವನ್ನು ಗುರುತಿಸುತ್ತದೆ.

ಈ ತಿಳಿವಳಿಕೆ ಒಪ್ಪಂದಗಳ ಮೂಲಕ, ಬಿಐಎಸ್ ಈ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಏಕಕಾಲದಲ್ಲಿ ಬೆಂಬಲಿಸುವ ಸಂದರ್ಭದಲ್ಲಿ ಮಾನದಂಡಗಳ ರಚನೆಗೆ ಅಗತ್ಯವಾದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಕಾರ್ಯತಂತ್ರದ ಪಾಲುದಾರಿಕೆಯು ಆರ್ ಅಂಡ್ ಡಿಗೆ ಸಮಗ್ರವಾದ ವಿಧಾನವನ್ನು ಸುಗಮಗೊಳಿಸುತ್ತದೆ, ಪ್ರಮಾಣೀಕರಣಕ್ಕಾಗಿ ಆಯ್ಕೆಮಾಡಿದ ವಿಷಯಗಳ ಮೇಲೆ ಕೇಂದ್ರೀಕೃತ ಗುಂಪು ಚರ್ಚೆಗಳನ್ನು ಒಳಗೊಂಡಿರುತ್ತದೆ ಮತ್ತು ಉತ್ಪನ್ನ ತಯಾರಿಕೆ ಮತ್ತು ಸೇವೆಗಳ ವಿತರಣೆಯಲ್ಲಿ ಪ್ರಸ್ತುತ ಪ್ರಕ್ರಿಯೆಗಳು ಮತ್ತು ಅಭ್ಯಾಸಗಳ ವಿವರವಾದ ಕ್ಷೇತ್ರ ಮಟ್ಟದ ಅಧ್ಯಯನಗಳನ್ನು ಸಹ ಒಳಗೊಂಡಿರುತ್ತವೆ.

ಬಿಐಎಸ್ ನ ಹೆಚ್ಚಿನ ಆರ್ ಅಂಡ್ ಡಿ ಉಪಕ್ರಮಗಳು ಮತ್ತು ಯೋಜನೆಗಳ ಪರಿಶೋಧನೆಗಳಿಗಾಗಿ ಬಿಐಎಸ್ ಜಾಲತಾಣ www.bis.gov.in ಕ್ಕೆ ಭೇಟಿ ನೀಡಬಹುದಾಗಿದೆ.

 

*****



(Release ID: 2036438) Visitor Counter : 3