ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2024 ಕ್ಕೆ ಸ್ವಯಂ ನಾಮನಿರ್ದೇಶನಕ್ಕಾಗಿ ನೋಂದಾಯಿಸುವ ಕೊನೆಯ ದಿನಾಂಕ 2024 ರ ಜುಲೈ 18 ರವರೆಗೆ ವಿಸ್ತರಣೆ


ಸ್ವಯಂ ನಾಮನಿರ್ದೇಶನಕ್ಕಾಗಿ ಭರ್ತಿ ಮಾಡಿದ ಅರ್ಜಿಯನ್ನು 2024ರ  ಜುಲೈ 21ರೊಳಗೆ ಸಲ್ಲಿಸಬಹುದು

Posted On: 16 JUL 2024 7:38PM by PIB Bengaluru

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2024 ಕ್ಕಾಗಿ ಅರ್ಹ ಶಿಕ್ಷಕರಿಂದ ಆನ್ಲೈನ್ ಸ್ವಯಂ ನಾಮನಿರ್ದೇಶನಗಳಿಗೆ ನೋಂದಾಯಿಸುವ ಕೊನೆಯ ದಿನಾಂಕವನ್ನು 2024ರ ಜುಲೈ 18 ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2024ರ ಜುಲೈ 21ರೊಳಗೆ ಅರ್ಜಿ ಸಲ್ಲಿಸಬಹುದು. ಶಿಕ್ಷಣ ಸಚಿವಾಲಯದ ಪೋರ್ಟಲ್ http://nationalawardstoteachers.education.gov.in ನಲ್ಲಿ 2024ರ ಜೂನ್ 27 ರಿಂದ ಜಾರಿಗೆ ಬರುವಂತೆ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು.

ವರ್ಷ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೂರು ಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ 50 ಶಿಕ್ಷಕರನ್ನು ಆಯ್ಕೆ ಮಾಡಲಾಗುವುದು. 2024ರ ಸೆಪ್ಟೆಂಬರ್ 5 ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ.

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರತಿ ವರ್ಷ ಸೆಪ್ಟೆಂಬರ್ 5, ಶಿಕ್ಷಕರ ದಿನದಂದು ರಾಷ್ಟ್ರಮಟ್ಟದ ಸಮಾರಂಭವನ್ನು ಆಯೋಜಿಸುತ್ತದೆ ಮತ್ತು ಕಠಿಣ, ಪಾರದರ್ಶಕ ಹಾಗು ಆನ್ಲೈನ್ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ದೇಶದ ಅತ್ಯುತ್ತಮ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುತ್ತದೆ. ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಯ ಉದ್ದೇಶವು ದೇಶದ ಕೆಲವು ಅತ್ಯುತ್ತಮ ಶಿಕ್ಷಕರ ಅನನ್ಯ ಕೊಡುಗೆಯನ್ನು ಆಚರಿಸುವುದು ಮತ್ತು ತಮ್ಮ ಬದ್ಧತೆ ಹಾಗು ಉದ್ಯಮದ ಮೂಲಕ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಿದ್ದಲ್ಲದೆ ತಮ್ಮ ವಿದ್ಯಾರ್ಥಿಗಳ ಜೀವನವನ್ನು ಶ್ರೀಮಂತಗೊಳಿಸಿದ ಶಿಕ್ಷಕರನ್ನು ಗೌರವಿಸುವುದು.

ಅರ್ಹತಾ ಷರತ್ತುಗಳು:

ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು, ಸ್ಥಳೀಯ ಸಂಸ್ಥೆಗಳು ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಮಂಡಳಿಯೊಂದಿಗೆ ಸಂಯೋಜಿತವಾಗಿರುವ ಖಾಸಗಿ ಶಾಲೆಗಳು ನಡೆಸುವ ಮಾನ್ಯತೆ ಪಡೆದ ಪ್ರಾಥಮಿಕ / ಮಾಧ್ಯಮಿಕ / ಪ್ರೌಢ / ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಕೆಲಸ ಮಾಡುವ ಶಾಲಾ ಶಿಕ್ಷಕರು ಮತ್ತು ಶಾಲೆಗಳ ಮುಖ್ಯಸ್ಥರು ಪ್ರಶಸ್ತಿಗೆ ಅರ್ಹರು.

  • ಕೇಂದ್ರ ಸರ್ಕಾರಿ ಶಾಲೆಗಳು, ಅಂದರೆ, ಕೇಂದ್ರೀಯ ವಿದ್ಯಾಲಯಗಳು (ಕೆವಿಗಳು), ಜವಾಹರ್ ನವೋದಯ ವಿದ್ಯಾಲಯಗಳು (ಜೆಎನ್ವಿಗಳು), ರಕ್ಷಣಾ ಸಚಿವಾಲಯ (ಎಂಒಡಿ) ನಡೆಸುವ ಸೈನಿಕ ಶಾಲೆಗಳು, ಪರಮಾಣು ಶಕ್ತಿ ಶಿಕ್ಷಣ ಸೊಸೈಟಿ (ಎಇಇಎಸ್) ನಡೆಸುತ್ತಿರುವ ಶಾಲೆಗಳು ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ ನಡೆಸುವ ಏಕಲವ್ಯ ಮಾದರಿ ವಸತಿ ಶಾಲೆಗಳು (ಇ.ಎಂ.ಆರ್.ಎಸ್); ಹಾಗು
  •  ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಮತ್ತು ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ಸ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿ.ಐ.ಎಸ್.ಸಿ.ಇ) ಗೆ ಸಂಯೋಜಿತವಾಗಿರುವ ಶಾಲೆಗಳು.

 

***** 



(Release ID: 2033868) Visitor Counter : 3