ಉಪರಾಷ್ಟ್ರಪತಿಗಳ ಕಾರ್ಯಾಲಯ

ವಿಕಸಿತ ಭಾರತ ಪರಿಕಲ್ಪನೆಯು ಕೇವಲ ಗುರಿಯಾಗದೇ ಪವಿತ್ರ ಧ್ಯೇಯವಾಗಿದೆ : ಉಪರಾಷ್ಟ್ರಪತಿ


ಏರ್ ಪಾಕೆಟ್‌ಗಳು ವಿಮಾನದ ಪಥ ಅಥವಾ ಗಮ್ಯಸ್ಥಾನವನ್ನು ಹೇಗೆ ತೊಂದರೆಗೊಳಿಸುವುದಿಲ್ಲವೋ ಹಾಗೆಯೇ ಭಾರತದ ರಾಜಕೀಯ ಸವಾಲುಗಳು ಅದರ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ – ಉಪರಾಷ್ಟ್ರಪತಿ

ಭಾರತದ ಬೆಳವಣಿಗೆಯ ಗಾಥೆ ಮತ್ತು ನಮ್ಮ ಸಂಸ್ಥೆಗಳಿಗೆ ಕಳಂಕ ತರುವ ವಿಕೃತ ನಿರೂಪಣೆಗಳನ್ನು ಸಕ್ರಿಯವಾಗಿ ಎದುರಿಸಬೇಕು – ಯುವ ಸಮೂಹಕ್ಕೆ ಕರೆ ನೀಡಿದ ಉಪರಾಷ್ಟ್ರಪತಿ

ಸಾಂಪ್ರದಾಯಿಕ ಗಮನವನ್ನು ಮೀರಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲೆ ಗಮನಹರಿಸುವಂತೆ ಯುವಜನರಿಗೆ ಉಪರಾಷ್ಟ್ರಪತಿ ಸಲಹೆ  

ಮುಂಬೈನ ಮೊಂಝೀ ಆಡಳಿತ ಅಧ್ಯಯನ ಸಂಸ್ಥೆಯ [ಎನ್.ಎಂ.ಐ.ಎಂ.ಎಸ್] ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಿದ ಉಪರಾಷ್ಟ್ರಪತಿ 

Posted On: 12 JUL 2024 4:57PM by PIB Bengaluru

ವಿಕಸಿತ ಭಾರತ@2047 ಪರಿಕಲ್ಪನೆಯು ಕೇವಲ ಗುರಿಯಾಗದೇ ಪವಿತ್ರ ಧ್ಯೇಯವಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ಹೇಳಿದ್ದಾರೆ. ಈ ಶತಮಾನ ಭಾರತಕ್ಕೆ ಸೇರಿದ್ದು ಎಂದು ಪ್ರತಿಪಾದಿಸಿದ ಅವರು, “ಪ್ರತಿಯೊಬ್ಬ ನಾಗರಿಕ, ಪ್ರತಿ ಸಂಸ್ಥೆ ಮತ್ತು ನಮ್ಮ ಸಮಾಜದ ಪ್ರತಿಯೊಂದು ವಲಯ” ತಮ್ಮ ಕೈಲಾದ ಕೊಡುಗೆ ನೀಡಬೇಕೆಂದು ಕರೆ ನೀಡಿದರು.

ಮುಂಬೈನಲ್ಲಿಂದು ಎನ್.ಎಂ.ಐ.ಎಂ.ಎಸ್ ನ ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಿದ ಅವರು,  ದೃಢೀಕೃತ ಆಡಳಿತದ ಉಪಕ್ರಮಗಳ ಸರಣಿಯ ಪರಿಣಾಮವಾಗಿ, ವ್ಯಾಪಾರ ಪರಿಸರ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯಾಗಿದೆ ಮತ್ತು ಭಾರತವು ಈಗ ಹೂಡಿಕೆಗಳು ಹಾಗೂ ಅವಕಾಶಗಳ ನೆಚ್ಚಿನ ತಾಣವಾಗಿ ಕಂಡುಬಂದಿದೆ ಎಂದು ಉಪರಾಷ್ಟ್ರಪತಿ ಅವರು ಒತ್ತಿಹೇಳಿದರು.

 

ಶ್ರೀ ಜಗದೀಪ್ ಧನ್ ಕರ್ ಅವರು ಭಾರತದ ರಾಜಕೀಯ ಪ್ರಯಾಣವನ್ನು ರಾಕೆಟ್‌ನ ಆರೋಹಣಕ್ಕೆ ಹೋಲಿಸಿದರು, ಸಾಂದರ್ಭಿಕ ಸವಾಲುಗಳ ಹೊರತಾಗಿಯೂ ಪುಟಿದೇಳುವ ಮತ್ತು ಪ್ರಗತಿಗೆ ಒತ್ತು ನೀಡಲಾಗಿದೆ. ಏರ್ ಪಾಕೆಟ್‌ಗಳು ವಿಮಾನದ ಪಥ ಅಥವಾ ಗಮ್ಯಸ್ಥಾನವನ್ನು ತೊಂದರೆಗೊಳಿಸದಿರುವಂತೆ, ಭಾರತದ ರಾಜಕೀಯ ಸವಾಲುಗಳು ಅದರ ಬೆಳವಣಿಗೆಗೆ ಅಡ್ಡಿಯಾಗುವುದಿಲ್ಲ ಎಂದು ಅವರು ಹೇಳಿದರು. ರಾಷ್ಟ್ರದ ಮಹತ್ವದ ಪ್ರಗತಿಯನ್ನು ಎತ್ತಿ ತೋರಿಸಿದ ಶ್ರೀ ಜಗದೀಪ್ ಧನ್ ಕರ್ ಅವರು ಈ ಪ್ರಯಾಣವನ್ನು ಪ್ರಾರಂಭಿಸಲು ದಶಕದ ಹಿಂದೆ ಬೇಕಿದ್ದ ಅಪಾರ ಪ್ರಯತ್ನದ ಬಗ್ಗೆ ಒತ್ತಿ ಹೇಳಿದರು ಮತ್ತು "ನನ್ನನ್ನು ನಂಬಿರಿ, ಮುಂದಿನ ಐದು ವರ್ಷಗಳಲ್ಲಿ ಗುರುತ್ವಾಕರ್ಷಣೆಯ ಬಲವನ್ನು ಮೀರಿ ಒಡೆದು ಮುನ್ನುವ ರಾಕೆಟ್‌ನಂತೆ ಭಾರತದ ಉದಯವನ್ನು ನೋಡಬಹುದು" ಎಂದು ಹೇಳಿದರು.

ರಾಷ್ಟ್ರದ ಪ್ರಗತಿಯನ್ನು ಕೀಳಾಗಿ ನೋಡುವ ಮತ್ತು ಕಳಂಕಗೊಳಿಸಲು ಪ್ರಯತ್ನಿಸುತ್ತಿರುವ ವಿನಾಶಕಾರಿ ವಿನ್ಯಾಸಗಳೊಂದಿಗೆ ದುಷ್ಟ ಶಕ್ತಿಗಳ ಉಪಸ್ಥಿತಿಯನ್ನು ಎತ್ತಿ ಹಿಡಿದ ಉಪರಾಷ್ಟ್ರಪತಿಯವರು, ಭಾರತದ ಸಂಸ್ಥೆಗಳು ಮತ್ತು ಬೆಳವಣಿಗೆಯ ಪಥವನ್ನು ಕಳಂಕಗೊಳಿಸುವ ಗುರಿಯನ್ನು ಹೊಂದಿರುವ ನಕಾರಾತ್ಮಕ ನಿರೂಪಣೆಗಳನ್ನು ಸಕ್ರಿಯವಾಗಿ ಎದುರಿಸಲು ಯುವ ಸಮೂಹಕ್ಕೆ ಕರೆ ನೀಡಿದರು.

ಸಂವಿಧಾನದ 370 ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಯವರು, 1963 ರಲ್ಲಿ ನಡೆದ ಸಂಸದೀಯ ಚರ್ಚೆಯನ್ನು ಉಲ್ಲೇಖಿಸಿದರು. ಅದರ ತಾತ್ಕಾಲಿಕ ಸ್ವರೂಪವನ್ನು ಒತ್ತಿಹೇಳುತ್ತಾ ಕಾಲಾನಂತರದಲ್ಲಿ 370 ನೇ ವಿಧಿ ಸವೆಯುತ್ತದೆ ಎಂದು ಅಂದಿನ ಪ್ರಧಾನಿ ಹೇಳಿದ್ದರು. 2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವಲ್ಲಿ ಅವರ ನಿರ್ಣಾಯಕ ಕ್ರಮಕ್ಕಾಗಿ ಸಂಸದರಿಗೆ ಧನ್ಯವಾದ ಅರ್ಪಿಸಿದರು. ಡಾ. ಅಂಬೇಡ್ಕರ್ ಅವರು ಸಂವಿಧಾನದ 370 ಅನ್ನು ರಚಿಸಿದ್ದರೆ ಅಥವಾ ಸರ್ದಾರ್ ಪಟೇಲ್ ಅವರು ಸ್ವಾತಂತ್ರ್ಯದ ನಂತರ ಜಮ್ಮು ಮತ್ತು ಕಾಶ್ಮೀರದ ಏಕೀಕರಣದ ಉಸ್ತುವಾರಿ ವಹಿಸಿದ್ದರೆ ಫಲಿತಾಂಶಗಳು ವಿಭಿನ್ನವಾಗಿರಬಹುದಿತ್ತು ಎಂದು ಉಲ್ಲೇಖಿಸಿರುವುದನ್ನು ಸ್ಮರಿಸಿದರು.

 

ಉಪರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಭಾರತದ ಹೆಸರಾಂತ ಶಿಕ್ಷಣ ಸಂಸ್ಥೆಗಳಾದ ನಳಂದಾ, ತಕ್ಷಶಿಲಾ, ವಿಕ್ರಮಶಿಲಾ ಮತ್ತು ವಲ್ಲಭಿಗಳ ಸುಪ್ರಸಿದ್ಧ ಇತಿಹಾಸದ ಬಗ್ಗೆ ಉಲ್ಲೇಖಿಸಿದರು. ಈ ಪುರಾತನ ವಿಶ್ವವಿದ್ಯಾನಿಲಯಗಳು ಭಾರತವನ್ನು ಜ್ಞಾನದ ಶಕ್ತಿ ಕೇಂದ್ರವನ್ನಾಗಿ ಮಾಡಿದ್ದು, ಅದರ ರಾಜತಾಂತ್ರಿಕ ಮೃದು ಶಕ್ತಿಯನ್ನು ಗಮನಾರ್ಹವಾಗಿ ವರ್ಧಿಸುತ್ತದೆ ಮತ್ತು ವ್ಯಾಪಾರ ನಿರ್ದೇಶನಗಳನ್ನು ರೂಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಅವರು ಈ ಐತಿಹಾಸಿಕ ಕಲಿಕೆಯ ಕೇಂದ್ರಗಳ ಪರಂಪರೆಯಿಂದ ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಬಲೀಕರಣದಲ್ಲಿ ಉನ್ನತ ಶಿಕ್ಷಣದ ವಿಮರ್ಶಾತ್ಮಕ ಪ್ರಸ್ತುತತೆಯನ್ನು ಒತ್ತಿಹೇಳಿದರು.

 

ಶಿಕ್ಷಣ ಪರಿವರ್ತಕ ಶಕ್ತಿಯಾಗಿದೆ. ವ್ಯಕ್ತಿಗಳನ್ನು ಸಶಕ್ತಗೊಳಿಸುವ, ನಾವೀನ್ಯತೆಯನ್ನು ಉತ್ತೇಜಿಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು ಪ್ರೇರೇಪಿಸುವ, ಸಾಮಾಜಿಕ ಮತ್ತು ರಾಷ್ಟ್ರೀಯ ಪ್ರಗತಿಗೆ ಗಣನೀಯವಾಗಿ ಕೊಡುಗೆ ನೀಡುವ ಚಾಲನಾ ಶಕ್ತಿ ಎಂದು ಬಣ್ಣಿಸಿದರು.

 

ಯುವ ಸಮೂಹ ಮುಕ್ತ ಸಾಂಪ್ರದಾಯಿಕ ಆಲೋಚನೆಗಳನ್ನು ಮುರಿಯಬೇಕು ಮತ್ತು ವ್ಯಾಪಕವಾಗಿರುವ ಅವಕಾಶಗಳನ್ನು ಅಪ್ಪಿಕೊಳ್ಳಬೇಕು. ಸಾಂಪ್ರದಾಯಿಕ ಗಮನವನ್ನು ಮೀರಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲೆ ಗಮನಹರಿಸುವಂತೆ ಯುವಜನರಿಗೆ ಉಪರಾಷ್ಟ್ರಪತಿಯವರು ಸಲಹೆ ನೀಡಿದರು. ಬೆಳವಣಿಗೆಯಾಗುತ್ತಿರುವ ಹೊಸ ವಲಯಗಳನ್ನು ಪರಿಶೋಧಿಸಬೇಕು. ಕೃತಕ ಬುದ್ದಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಹಸಿರು ಜಲಜನಕ ಅಭಿಯಾನ ಒಳಗೊಂಡಂತೆ ಅಪಾರ ಅವಕಾಶಗಳಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.[ಶ್ರೀಮತಿ] ಶ್ರೀ ಸುದೇಶ್ ಧನ್ ಕರ್, ಮಹಾರಾಷ್ಟ್ರದ ರಾಜ್ಯಪಾಲರಾದ ರಮೇಶ್ ಬಯಾಸ್, ರಾಜ್ಯಸಭೆ ಸದಸ್ಯ ಶ್ರೀ ಅಮರೀಶ‍್ ಭಾಯಿ ರಸಿಕಲ್, ಎನ್.ಎಂ.ಐ.ಎಂ.ಎಸ್ ಕುಲಪತಿ ಡಾ. ರಮೇಶ್ ಭಟ್, ಎನ್.ಎಂ.ಐ.ಎಂ.ಎಸ್ ಉಪಕುಲಪತಿ ಡಾ. ಶರದ್ ಮೈಸ್ಕರ್, ಎನ್.ಎಂ.ಐ.ಎಂ.ಎಸ್ ಪ್ರಾಧ್ಯಾಪಕರು, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಭಾಷಣದ ಪೂರ್ಣ ಪಠ್ಯ ಇಲ್ಲಿ ಲಭ್ಯವಿದೆ : https://pib.gov.in/PressReleasePage.aspx?PRID=2032761

 

*****



(Release ID: 2033179) Visitor Counter : 10