ರಾಷ್ಟ್ರಪತಿಗಳ ಕಾರ್ಯಾಲಯ
ಮಿಲಿಟರಿ ಇಂಜಿನಿಯರ್ ಸೇವೆಗಳ ಪ್ರೊಬೇಷನರಿ ಅಧಿಕಾರಿಗಳು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಚರ್ಚಿಸಿದರು
Posted On:
12 JUL 2024 1:59PM by PIB Bengaluru
ಮಿಲಿಟರಿ ಇಂಜಿನಿಯರ್ ಸೇವೆಗಳ (MES) ಪ್ರೊಬೇಷನರಿ ಅಧಿಕಾರಿಗಳು ಇಂದು (ಜುಲೈ 12, 2024) ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಮಿಲಿಟರಿ ಇಂಜಿನಿಯರ್ ಸೇವೆಯು ಅತ್ಯಂತ ಪ್ರಮುಖ ಘಟಕವಾಗಿದೆ. ಭಾರತೀಯ ಸೇನೆಯ ಮೂರು ಸಶಸ್ತ್ರ ಪಡೆಗಳಿಗೆ ಮಾತ್ರವಲ್ಲದೆ ರಕ್ಷಣಾ ಸಚಿವಾಲಯದ ಇತರ ಹಲವು ಘಟಕಗಳಿಗೆ ತನ್ನ ಸೇವೆಗಳನ್ನು ಒದಗಿಸುವ ಮೂಲಕ ಭದ್ರತೆಗೆ ಹೆಚ್ಚುವರಿ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ನಮ್ಮ ರಕ್ಷಣಾ ಪಡೆಗಳು ಉತ್ತಮ ಮೂಲಸೌಕರ್ಯ ಮತ್ತು ಸಮಗ್ರ ಸೌಲಭ್ಯಗಳನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳುವುದು ಈ ಘಟಕದ ಮುಖ್ಯ ಗುರಿಯಾಗಿದೆ ಎಂದು ಅವರು ಹೇಳಿದರು. ಮಿಲಿಟರಿ ಇಂಜಿನಿಯರ್ ಸೇವೆಯ ಅಧಿಕಾರಿಗಳ ಯಶಸ್ಸಿನ ಪರೀಕ್ಷೆಯೆಂದರೆ ಅವರು ಒದಗಿಸುವ ಮೂಲಸೌಕರ್ಯ ಅಥವಾ ಸೌಲಭ್ಯಗಳು ವಿಶ್ವಾಸಾರ್ಹತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದಾಗಿದೆ. ಎಂಇಎಸ್ ಅಧಿಕಾರಿಗಳು ಸದಾ ಜಾಗೃತರಾಗಬೇಕು ಎಂದು ಸಲಹೆ ನೀಡಿದರು. ತಮ್ಮ ಸೇವೆಯಲ್ಲಿ ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ವಿಶ್ವಾಸಾರ್ಹತೆ, ಗೌರವವನ್ನು ಗಳಿಸಬೇಕು ಎಂದು ಅವರು ಹೇಳಿದರು.
ಮೂಲಸೌಕರ್ಯಗಳನ್ನು ನಿರ್ಮಿಸುವಾಗ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಹೊಂದಾಣಿಕೆ ಮತ್ತು ಇತರೆ ವಿಷಯಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು. ಎಂಇಎಸ್ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದರು.
ಎಂಇಎಸ್ ಅಧಿಕಾರಿಗಳ ಜವಾಬ್ದಾರಿ ಕೇವಲ ತಾಂತ್ರಿಕವಾಗಿರದೆ ನೈತಿಕ ಹಾಗೂ ನಿರ್ವಹಣಾತ್ಮಕವಾಗಿದೆ. ತಮ್ಮ ಪ್ರತಿಯೊಂದು ಕೆಲಸದಲ್ಲಿಯೂ ದೇಶದ ಸಂಪನ್ಮೂಲಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬ ಸಂಕಲ್ಪ ಇರಬೇಕು. ದಕ್ಷತೆ ಮತ್ತು ನೈತಿಕತೆಯು ರಾಷ್ಟ್ರದ ಭದ್ರತೆಯನ್ನು ಬಲಪಡಿಸುತ್ತದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ರಾಷ್ಟ್ರಪತಿಗಳ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
https://static.pib.gov.in/WriteReadData/specificdocs/documents/2024/jul/doc2024712348701.pdf
*****
(Release ID: 2032744)
Visitor Counter : 58