ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

2023ರ ತಂಡದ  ಐಡಿಇಎಸ್ ಅಧಿಕಾರಿ ತರಬೇತಿದಾರರೊಂದಿಗಿನ ಸಂವಾದದಲ್ಲಿ ಉಪರಾಷ್ಟ್ರಪತಿಯವರ ಭಾಷಣದ ಪಠ್ಯ

Posted On: 08 JUL 2024 6:36PM by PIB Bengaluru

ಶುಭ ಸಂಜೆ, ನಿಮಗೆಲ್ಲರಿಗೂ!

ಸಂಖ್ಯೆಗಳು ಮುಖ್ಯವಲ್ಲ, ನನ್ನ ದೃಷ್ಟಿಯಲ್ಲಿ ಮತ್ತು ನಿಮ್ಮ ದೃಷ್ಟಿಯಲ್ಲಿ ಕೂಡಾ  ಸ್ಪೂರ್ತಿ ಮುಖ್ಯ!

ಇದು ಬಹಳ ಶ್ರೇಷ್ಠ ದಿನ, ನಾನು ಇದನ್ನು ಸದಾ ನೆನಪಿಸಿಕೊಳ್ಳುತ್ತೇನೆ. ನಿಮ್ಮಂತಹ ಯುವ ವೃತ್ತಿಪರರನ್ನು ಭೇಟಿಯಾದಾಗ ನಾನು ಸದಾ ಸ್ಫೂರ್ತಿ, ಪ್ರೇರಣೆ, ಹೆಚ್ಚುವರಿ ಶಕ್ತಿಯನ್ನು ಪಡೆಯುತ್ತೇನೆ, ಏಕೆಂದರೆ 2047ರಲ್ಲಿ ಭಾರತದ ಚಿಂತನೆ ಮತ್ತು ದೃಷ್ಟಿಯಾದ ವಿಕಸಿತ ಭಾರತ ಆಗಿ ಫಲಪ್ರದವಾಗುವುದನ್ನು ನೋಡುವುದು ನಿಮ್ಮ ಹೆಗಲ ಮೇಲಿದೆ. ಮತ್ತು ಅದಕ್ಕೆ ನೀವು ಭಾಗೀದಾರರು ಕೂಡಾ ಆಗಿರುತ್ತೀರಿ. 

ಶ್ರೀ ಗಿರಿಧರ್ ಅರಮನೆ, ರಕ್ಷಣಾ ಕಾರ್ಯದರ್ಶಿ!

ಹಿನ್ನೆಲೆಗೆ ಹೋದರೆ ನೀವು ಒಬ್ಬ ಮನುಷ್ಯನನ್ನು,  ಕಾಣುತ್ತೀರಿ, ಅವರ ಕೈ ತುಂಬಾ ಕೆಲಸಗಳಿವೆ. ಅವರು ತಮ್ಮ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ  ಅನೇಕ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದೆ. ಇಲ್ಲಿ ಅವರ ಉಪಸ್ಥಿತಿಯು ಬಹಳಷ್ಟು ಅರ್ಥವನ್ನು ನೀಡುತ್ತದೆ. ಬದ್ಧತೆಯುಳ್ಳ ಈ ಅಧಿಕಾರಿ ಸಚಿವಾಲಯವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ವಿಷಯಗಳನ್ನು ವ್ಯವಸ್ಥಿತಗೊಳಿಸಲಾಗಿದೆ, ಬದಲಾವಣೆಯನ್ನು ತರಲಾಗಿದೆ ಮತ್ತು ಅದು ಗೋಚರಿಸುತ್ತಿದೆ. ವಿಕ್ರಾಂತ್ ನೋಡಿ, ನಾವು ಅದನ್ನು ಹೊಂದಿದ್ದೇವೆ, ಯುದ್ಧನೌಕೆಗಳನ್ನು ನೋಡಿ, ತೇಜಸ್ ನೋಡಿ, ಹೆಲಿಕಾಪ್ಟರ್ ಗಳನ್ನು ನೋಡಿ, ಆಕಾಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ, 2019 ರಲ್ಲಿ ಬಾಹ್ಯಾಕಾಶದಿಂದ ಬಾಹ್ಯಾಕಾಶಕ್ಕೆ ಎಂದು ಪ್ರಧಾನಿ ಘೋಷಿಸಿದ್ದನ್ನು ನೋಡಿ. ಈ ಬಹಳ ದೊಡ್ಡ ಬದಲಾವಣೆಯನ್ನು ತರಲು ಅವರು ನಿರ್ಣಾಯಕ ಆಧಾರಸ್ತಂಭವಾಗಿದ್ದಾರೆ ಮತ್ತು ಆದ್ದರಿಂದ ಅವರು ತೋರಿಸಿದ ಈ ಬದ್ಧತೆಯನ್ನು ನೀವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗು ಅದಕ್ಕಿದು ಸಕಾಲ ಕೂಡಾ. 

ಶ್ರೀ ಜಿ.ಎಸ್. ರಾಜೇಶ್ವರನ್, ಮಹಾನಿರ್ದೇಶಕರು, ರಕ್ಷಣಾ ಎಸ್ಟೇಟ್ ಗಳು

ಶ್ರೀ ರಾಜೇಂದ್ರ ಪವಾರ್, ನಿರ್ದೇಶಕ ಎನ್ಐಡಿಇಎಂ

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ನನಗೆ ಅಪಾರ ಸಂತೋಷವಾಗಿದೆ ಮತ್ತು ಮಾನವಕುಲದ 1/6 ಭಾಗವನ್ನು ಹೊಂದಿರುವ ದೇಶದಲ್ಲಿ ಸೇವೆಯ ಭಾಗವಾಗಲು ನಿಮಗೆ, ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಇದು ಒಂದು ಮಹತ್ವದ ಸಂದರ್ಭವಾಗಿದೆ ನಿಮ್ಮ ವೃತ್ತಿಜೀವನದಲ್ಲಿಯೂ ಇದು ಮಹತ್ವದ ಘಟನೆ.  ಭಾರತದ ಈಗಿನ ಬೆಳವಣಿಗೆಯ ಕಥೆಯ ಭಾಗವಾಗುವುದು ಅಷ್ಟು ಸುಲಭವಲ್ಲ. ನೀವು ಅದೃಷ್ಟವಂತರು. ನನ್ನ ಕಾಲದಲ್ಲಿ ಇದು ಸಂಪೂರ್ಣವಾಗಿ ಅಸಾಧ್ಯವಾಗಿತ್ತು. ನಾವು ನೋಡಿದ್ದು ಮತ್ತು ನಾವು ಅನುಭವಿಸಿದ್ದು ಇಂದು ನೀವು ಅನುಭವಿಸುತ್ತಿರುವುದಕ್ಕಿಂತ ತುಂಬಾ ಭಿನ್ನವಾಗಿತ್ತು. ವಾಸ್ತವವಾಗಿ ನಿಮ್ಮ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು, ನಿಮ್ಮ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ನಿಮ್ಮ ಒಂದು ಮಹತ್ವಾಕಾಂಕ್ಷೆ ಫಲಪ್ರದವಾಗಲು ನಿಮಗೆ ಅನುವು ಮಾಡಿಕೊಡುವ ಪರಿಸರ ವ್ಯವಸ್ಥೆಯನ್ನು ನೀವು ಹೊಂದಿದ್ದೀರಿ.

ಇಂದಿನಿಂದ ನೀವು ಬದಲಾವಣೆಯ ಹರಿಕಾರರಾಗುವ ಸಾಮರ್ಥ್ಯವನ್ನು ಹೊಂದಿರುವ ಆಡಳಿತದ ಪ್ರಮುಖ ಅಂಶವಾಗಿದ್ದೀರಿ ಮತ್ತು ಭಾರತದ ಬದಲಾವಣೆ ಬಹಳ ಸ್ಪಷ್ಟವಾಗಿ ಯೋಜಿತಗೊಳಿಸಲ್ಪಟ್ಟಿದೆ. ನಮ್ಮ ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಜಾಗತಿಕ ಆರ್ಥಿಕತೆಗಳಲ್ಲಿ ಒಂದನ್ನಾಗಿ ಮಾಡುವ ನಿಟ್ಟಿನಲ್ಲಿ ಇತ್ತೀಚಿನ ಮೂಲಭೂತ ಅಸಾಧಾರಣ ಸಾಧನೆಗಳು  ದೃಢವಾದ ಅಡಿಪಾಯವನ್ನು ಒದಗಿಸಿವೆ. 

1989ರಲ್ಲಿ ನಾನು ಸಂಸತ್ತಿಗೆ ಆಯ್ಕೆಯಾದಾಗ ನಾನು ಕೇಂದ್ರ ಸಚಿವನಾಗಿದ್ದೆ. ಭಾರತದ ಆರ್ಥಿಕತೆಯ ಗಾತ್ರವು ಪ್ಯಾರಿಸ್ ಮತ್ತು ಲಂಡನ್ ಆರ್ಥಿಕತೆಗಳ ಗಾತ್ರಕ್ಕಿಂತ ಚಿಕ್ಕದಾಗಿತ್ತು. ನಾವು ಎಲ್ಲಿಗೆ ಬಂದಿದ್ದೇವೆ ನೋಡಿ. ನಾವು ಈಗಾಗಲೇ 5 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಮತ್ತು ಮುಂದಿನ 2 ರಿಂದ 3 ವರ್ಷಗಳಲ್ಲಿ ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯಾಗುವ ಹಾದಿಯಲ್ಲಿದ್ದೇವೆ.

ಕಠಿಣ ಪರಿಶ್ರಮ ಮತ್ತು ಶೈಕ್ಷಣಿಕ ಉತ್ಕೃಷ್ಟತೆಯ ಪರಾಕಾಷ್ಠೆಯಾಗಿ ಇಲ್ಲಿ ನಿಮ್ಮ ಉಪಸ್ಥಿತಿಯು ಸಾರ್ವಜನಿಕ ಸೇವೆಯ ಉದಾತ್ತ ಆದರ್ಶಗಳಿಗೆ ನಿಮ್ಮ ಬದ್ಧತೆಗೆ ಸಾಕ್ಷಿಯಾಗಿದೆ.

ನಿಮ್ಮ ಪ್ರೊಫೈಲ್ ನಿಂದ/ಸ್ವವಿವರಗಳಿಂದ ನೀವು ಇತರ ಕ್ಷೇತ್ರಗಳಿಗೆ ಹೋಗಬಹುದಿತ್ತು ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ನೀವು ಹಣಕ್ಕೆ ಬಲಿಯಾಗಬಹುದಾಗಿತ್ತು, ಆದರೆ ಈ ಸೇವೆಯಲ್ಲಿ ನೀವು ಪಡೆಯುವುದು 1.4 ಬಿಲಿಯನ್ ಜನರ ಜೀವನವನ್ನು ಉತ್ತಮಗೊಳಿಸುವ ಆಡಳಿತದ ಭಾಗವಾಗುವ ತೃಪ್ತಿ ಮತ್ತು ಸಂತೋಷ. ನಿಮಗೆ  ಪ್ರತಿದಿನ ಲಭಿಸುವ  ತೃಪ್ತಿ ಅದು ನಿಮ್ಮ ಗುರಿಯಿಂದಾಗಿ ಲಭಿಸುವಂತಹದ್ದು.

ಸಮರ್ಪಣೆ ಮತ್ತು ಬದ್ಧತೆಯಿಂದ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ನೀವು ಬಳಸಿಕೊಳ್ಳುತ್ತೀರಿ  ಎಂದು ನನಗೆ ಖಾತ್ರಿಯಿದೆ.

ಸಂಕಲ್ಪ ಮಾಡಿ, ನೀವು ಎಂದಿಗೂ ಶಾರ್ಟ್ ಕಟ್ (ಅಡ್ಡ ದಾರಿಗಳನ್ನು) ಗಳನ್ನು ಹಿಡಿಯುವುದಿಲ್ಲ ಎಂದು, ಕಾನೂನುಗಳನ್ನು ಉಲ್ಲಂಘಿಸುವಲ್ಲಿ ನೀವು ಎಂದಿಗೂ ಪ್ರಲೋಭನೆಗೆ ಒಳಗಾಗುವುದಿಲ್ಲ ಎಂದು ನಿರ್ಧಾರ ಮಾಡಿ. ನೀವು ನಿಮ್ಮ ನಡವಳಿಕೆಯನ್ನು ಅತ್ಯುನ್ನತ ನೈತಿಕ ಮಾನದಂಡಗಳೊಂದಿಗೆ ನಿರೂಪಿಸಬೇಕು. ವಾಸ್ತವವಾಗಿ ಜನರಿಗೆ ನೀವು ಬದಲಾವಣೆಯನ್ನು ತರಬಲ್ಲ ಬದಲಾವಣೆಯ ಸಂಕೇತವಾಗಿದ್ದೀರಿ. ಜನರು ನಿಮ್ಮನ್ನು ನೋಡುತ್ತಾರೆ ಮತ್ತು ಅವರ ಮಕ್ಕಳಿಗೆ ನಿಮ್ಮಂತೆ ಇರಲು ಹೇಳುತ್ತಾರೆ.

ನಾವು ವ್ಯತ್ಯಾಸಗಳು, ಬದಲಾವಣೆಗಳು ನಡೆಯುತ್ತಿರುವ ಕಾಲಘಟ್ಟದತ್ತ ಸಾಗಿದ್ದೇವೆ ಮತ್ತು ಒಕ್ಕೂಟದ ಪ್ರತಿಯೊಂದು ಸೇವೆಯೂ ಈಗ ಸ್ವತಂತ್ರವಾದಂತಹ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಒಂದು ದೊಡ್ಡ ಬದಲಾವಣೆ. ನಿಮ್ಮ ಕೊಡುಗೆಯು ಇತರ ಯಾವುದೇ ಸೇವೆಯಂತೆಯೇ ಮಹತ್ವದ್ದಾಗಿದೆ. ನೀವು ಅದನ್ನು ಒಪ್ಪುತ್ತೀರಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. 

ನೀವು ಶಿಸ್ತು, ಸಭ್ಯತೆ ಮತ್ತು ರಾಷ್ಟ್ರೀಯತೆಗೆ ಬದ್ಧತೆಯನ್ನು ಅನುಕರಿಸಲು ಯೋಗ್ಯವಾದ ಉದಾಹರಣೆಯನ್ನು ತೋರಬೇಕಾಗಿದೆ. 

ಸ್ನೇಹಿತರೇ, ನೀವು ಸೇವೆಯ ಭಾಗಕ್ಕಿಂತ ಹೆಚ್ಚು. ನೀವು ಐಡಿಇಎಸ್ ನ ಸದಸ್ಯ ಎಂದು ಭಾವಿಸಬೇಡಿ. ನೀವು ಆಳವಾದ ಬದ್ಧತೆಯನ್ನು ಪ್ರತಿನಿಧಿಸಬೇಕು. ನೀವು ಆಯ್ಕೆಯಾದಾಗ ನಿಮ್ಮ ಹೆತ್ತವರಿಗೆ, ನಿಮ್ಮ ಸಂಬಂಧಿಕರಿಗೆ ಮತ್ತು ಇತರರಿಗೆ ಹೆಚ್ಚಿನ ಸಮಾಧಾನವಾಗಿತ್ತು. ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಸೇವೆಗೆ/ಕೆಲಸಕ್ಕೆ ಸೇರುವುದನ್ನು ಕಲ್ಪಿಸಿಕೊಳ್ಳಿ ಮತ್ತು ಆಗ ಕುಟುಂಬದ ಮೌಲ್ಯವು/ಘನತೆಯು ಸಾಮಾಜಿಕವಾಗಿ ಬದಲಾಗುತ್ತದೆ. ನೀವು ಕಾರ್ಪೊರೇಟ್ ಸಂಸ್ಥೆಗಳಲ್ಲಿ ಬಹಳ ದೊಡ್ಡ ಗಾತ್ರದ ಪ್ಯಾಕೇಜ್ ಪಡೆದಾಗ ಇದು ಸಂಭವಿಸುವುದಿಲ್ಲ. ಅದೇ ಈ ಸೇವೆಯ ವ್ಯತ್ಯಾಸ. 

ರಕ್ಷಣೆ ಮತ್ತು ಆಡಳಿತದ ಭೂದೃಶ್ಯವು ವೇಗವಾಗಿ ಬದಲಾಗುತ್ತಿದೆ. ತಾಂತ್ರಿಕ ಪ್ರಗತಿಗಳು, ಭೌಗೋಳಿಕ ರಾಜಕೀಯ ಬದಲಾವಣೆಗಳು ಆಗುತ್ತಿರುವಾಗ  ಸಂಕೀರ್ಣ ಆಡಳಿತಾತ್ಮಕ ಕಾರ್ಯಗಳು ಈಗ ವೇಗವಾಗಿ ಬದಲಾಗುತ್ತಿರುವ ಮತ್ತು ವಿಕಸನಗೊಳ್ಳುತ್ತಿರುವ ತಂತ್ರಜ್ಞಾನಗಳನ್ನು ಹಾಗು ಅನ್ವೇಷಣೆಗಳನ್ನು ನಿರಂತರವಾಗಿ ಅಳವಡಿಸಿಕೊಳ್ಳುವುದನ್ನು ನಮಗೆ ಅನಿವಾರ್ಯವಾಗಿಸಿವೆ.  ಮತ್ತು  ಆವಿಷ್ಕಾರಗಳನ್ನು ಮಾಡುವ ಅವಶ್ಯಕತೆಯೂ ನಮಗಿದೆ. 

ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ವಿವೇಚನೆ ಇರಬೇಕು. ಅಸ್ತವ್ಯಸ್ತ/ಅಲ್ಲೋಲ ಕಲ್ಲೋಲ ಮಾಡುವ ತಂತ್ರಜ್ಞಾನವು ಇಲ್ಲಿ ಬಂದಿದೆ. ಅದು ಸವಾಲುಗಳನ್ನು ಎಸೆಯುತ್ತಿದೆ, ಅದು ಅವಕಾಶಗಳನ್ನು ನೀಡುತ್ತಿದೆ. ನಿಮ್ಮ ಕ್ಷೇತ್ರದಲ್ಲಿ ನೀವು ಅವುಗಳನ್ನು ಬಳಸಬೇಕಾಗುತ್ತದೆ. ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಯಂತ್ರ ಕಲಿಕೆ (ಮೆಶಿನ್ ಲರ್ನಿಂಗ್), ಬ್ಲಾಕ್ ಚೈನ್ ಇವೆಲ್ಲವನ್ನೂ ನೀವು ನಿಭಾಯಿಸಬೇಕಾಗುತ್ತದೆ. ಕೆಲ ಕಾಲದ ಹಿಂದೆ ನನಗೆ ಇವು ಕೇವಲ ಪದಗಳು.  ಆದರೆ ಇಲಾಖೆಯ ಕಾರ್ಯದರ್ಶಿಯಿಂದ ನನಗೆ ಪ್ರಸ್ತುತಿ ಬಂದಾಗ ಅದು ನನ್ನ ಕಣ್ಣು ತೆರೆಸಿತು. ತಂತ್ರಜ್ಞಾನದಲ್ಲಿ ಪ್ರಭಾವಶಾಲಿ ಮನಸ್ಸುಗಳಾಗಿ ನೀವು ಕಲಿಯುತ್ತಲೇ ಇರುತ್ತೀರಿ. ನಿಮ್ಮ ಕಲಿಕೆ ಎಂದಿಗೂ ನಿಲ್ಲುವುದಿಲ್ಲ. ನೀವು ಕಲಿಯುವುದನ್ನು ನಿಲ್ಲಿಸಿದ ಕ್ಷಣ, ಸಾರ್ವಜನಿಕ ಸೇವೆಗೆ ನಿಮ್ಮ ಬದ್ಧತೆಯು ಕೆಳಮುಖವಾಗಿ ಕುಸಿಯುತ್ತದೆ ಆದ್ದರಿಂದ ಜಾಗತಿಕ ಮಾನದಂಡದಲ್ಲಿ ನಿಮ್ಮನ್ನು ನವೀಕರಿಸಿಕೊಳ್ಳಿ. 

ನಮ್ಮ ರಾಷ್ಟ್ರೀಯ ಭದ್ರತೆಗೆ ರಕ್ಷಣಾ ಭೂಮಿ ನಿರ್ಣಾಯಕವಾಗಿದೆ. ಇವು ವಿವಿಧ ಸಂಸ್ಥೆಗಳು, ತರಬೇತಿ ಸೌಲಭ್ಯಗಳು ಮತ್ತು ಕಾರ್ಯತಂತ್ರದ ಸ್ಥಾಪನೆಗಳನ್ನು ಬೆಂಬಲಿಸುತ್ತವೆ. ನಿಮ್ಮ ನವೀನ ಅನ್ವೇಷಣಾ ಮನೋಭಾವ, ದೂರದೃಷ್ಟಿ ಮತ್ತು ಕೊಡುಗೆಗಳು ಶಾಶ್ವತ ಪರಿಣಾಮ ಬೀರುತ್ತವೆ. ನೀವು ಅನ್ವೇಷಣಾಶೀಲರಾಗಿರಬೇಕು, ನೀವು ವಿಭಿನ್ನವಾಗಿರಬೇಕು. ಭೌತಿಕ ಗಡಿಗಳು ಸುರಕ್ಷಿತವಾಗಿವೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು, ಅಷ್ಟು ಮಾತ್ರವಲ್ಲ ನೀವು ಅವುಗಳನ್ನು ಪೋಷಿಸಬೇಕು. ನೀವು ಪರಿಸರ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕು. ಕಳೆದ ಕೆಲವು ವರ್ಷಗಳಲ್ಲಿ ಈ ವಿಷಯವನ್ನು ನಿಭಾಯಿಸುವಲ್ಲಿ ಒಂದು ಮಾದರಿ ಬದಲಾವಣೆಯಾಗಿದೆ ಎಂದು ಉಲ್ಲೇಖಿಸಲು ನನಗೆ ಸಂತೋಷವಿದೆ. ಆದರೆ ನೀವು ಕೊಡುಗೆ ನೀಡಬಹುದಾದ ಪ್ರತಿ ಕ್ಷಣದಲ್ಲೂ ಜಗತ್ತು ಬದಲಾಗುತ್ತಿರುತ್ತದೆ. ನೀವು ಮರಗಳನ್ನು ಬೆಳೆಸುವ ಭೂಮಿಯನ್ನು ಹೊಂದಿದ್ದೀರಿ ಆದರೆ ನೀವು ಸ್ವಲ್ಪ ಹೆಚ್ಚು ಕೆಲಸ ಮಾಡಬಹುದು. ಒಂದು ಸಂಸ್ಥೆಗೆ ಹೋಗಿ ಗಿಡಮೂಲಿಕೆ ಸಸ್ಯಗಳು, ಗಿಡಮೂಲಿಕೆ ಉದ್ಯಾನಗಳ ಬಗ್ಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತು. ಪ್ರತಿಯೊಂದು ಹಳ್ಳಿಯೂ ಅದನ್ನು ಹೊಂದಿರಬೇಕು, ಅದಕ್ಕೆ  ಸಮಯ ಬೇಕು, ಆದರೆ ನಿಮ್ಮ ಸಂಸ್ಥೆ ರೂಪಿಸಿದಷ್ಟು ವ್ಯವಸ್ಥಿತವಾಗಿ  ರಚನಾತ್ಮಕ ರೀತಿಯಲ್ಲಿ ಇರದಿದ್ದರೂ ಅಂತಹದೊಂದು ವ್ಯವಸ್ಥೆ ಇರಬೇಕು ಎಂದು ನಾನು ಅವರಿಗೆ ಸೂಚಿಸಿದೆ. ನೀವು ಒಂದು ಅಂಶವನ್ನು ಪರಿಗಣಿಸಿ ಮುನ್ನಡೆದರೆ ಅದು ಸಮಾಜದ ಮೇಲೆ ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ನೀವು ಇದನ್ನು ಗಮನಿಸುತ್ತೀರಿ ಎಂಬ ಬಗ್ಗೆ ನನಗೆ ಖಾತ್ರಿಯಿದೆ.

ರಕ್ಷಣಾ ಎಸ್ಟೇಟ್ ಗಳನ್ನು ನಿರ್ವಹಿಸುವುದು ಇಂದು ಬೆಳೆಯುತ್ತಿರುವ ಒಂದು ಸವಾಲಾಗಿದೆ. ಇದು ಭೌತಿಕ ನಿರ್ವಹಣೆಯನ್ನು ಮೀರಿದೆ. ಜಾಗತಿಕ ಸ್ವರೂಪದ ಇತ್ತೀಚಿನ ಭೂ ದಾಖಲೆ ತಂತ್ರಗಳೊಂದಿಗೆ ನೀವು ನಿಮ್ಮನ್ನು ನವೀಕರಿಸಿಕೊಳ್ಳಬೇಕಾಗಿದೆ. ಈ ತಂತ್ರಜ್ಞಾನವು ಒಂದು ನಿರ್ದಿಷ್ಟ ಅವಧಿಯಲ್ಲಿ ಸಂಭವಿಸಿದ ಬದಲಾವಣೆಗಳನ್ನು ತಕ್ಷಣವೇ ಪತ್ತೆಹಚ್ಚಲು ನಿಮಗೆ ಸಹಾಯ ಮಾಡುತ್ತದೆ. ಅವು ಒಂದು ದೊಡ್ಡ ಪುರಾವೆ ಮೌಲ್ಯವನ್ನು ರೂಪಿಸುತ್ತವೆ. ನೀವು ಅದನ್ನು ಬಳಸಬೇಕು. ಮತ್ತು ನೀವು ಈ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. 

ಇದು ನಿರ್ವಹಣೆಯ ವಿಷಯವಲ್ಲ, ಇದು ಭೌತಿಕ ನಿರ್ವಹಣೆಯನ್ನು ಮೀರಿದ ಸಂಗತಿಯಾಗಿದೆ. ಅನಧಿಕೃತ ಅತಿಕ್ರಮಣಗಳು ಮತ್ತು ಅನಧಿಕೃತ ನಿರ್ಮಾಣಗಳು ನಿಸ್ಸಂದೇಹವಾಗಿ ಕಳವಳಕಾರಿಯಾಗಿವೆ ಮತ್ತು ತ್ವರಿತ ವ್ಯವಸ್ಥಿತ ಪರಿಹಾರವನ್ನು ಅವು ಅಪೇಕ್ಷಿಸುತ್ತಿವೆ. ಆದರೆ ಸಮಯೋಚಿತ ಪರಿಣಾಮಕಾರಿ ಕ್ರಮವು ಸದಾ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ. ಈ ಅಂಶವು ಸಂಬಂಧಪಟ್ಟ ಎಲ್ಲರ ಸೂಕ್ತ ಗಮನವನ್ನು ಅಪೇಕ್ಷಿಸುತ್ತದೆ.  ಈ ಪ್ರಯತ್ನಗಳು ನಮ್ಮ ರಕ್ಷಣಾ ಸ್ಥಾಪನೆಗಳ ಪಾವಿತ್ರ್ಯವನ್ನು ಕಾಪಾಡುತ್ತವೆ ಮತ್ತು ಕಾನೂನಿನ ಆಡಳಿತವನ್ನು/ನಿಯಮವನ್ನು ಎತ್ತಿಹಿಡಿಯುತ್ತವೆ.

ಅತಿಕ್ರಮಣದಂತಹ ಒಂದು ಸವಾಲು ಇದ್ದರೆ,  ನಾಗರಿಕ ಸಮಾಜದಲ್ಲಿ ಆ ಸವಾಲು ಬಹಳ ನೋವಿನದಾಗಿರುತ್ತದೆ. ಆದರೆ ರಕ್ಷಣಾ ಸ್ಥಾಪನೆಯ ವಿಷಯಕ್ಕೆ ಬಂದಾಗ ಅದು ತುಂಬಾ ಆತಂಕಕಾರಿಯಾಗಿದೆ. ಡಿಫೆನ್ಸ್ ಎಸ್ಟೇಟ್ ನಲ್ಲಿ ಅತಿಕ್ರಮಣ, ಅನಧಿಕೃತ ನಿರ್ಮಾಣ ಬಹಳ ಗಂಭೀರ ವಿಷಯ.  

ವ್ಯಾಜ್ಯ ನಿರ್ವಹಣೆಯನ್ನು ಸಹ ರಚನಾತ್ಮಕಗೊಳಿಸಬೇಕು, ವ್ಯವಸ್ಥಿತಗೊಳಿಸಬೇಕು. ನಮ್ಮಲ್ಲಿ ಬದಲಾಗುತ್ತಿರುವ ವ್ಯವಸ್ಥೆ ಇದೆ ಆದರೆ ಅದು ಇಲ್ಲಿಯವರೆಗೆ ತುಂಬಾ ನಿಧಾನವಾಗಿತ್ತು. ಒಂದರ್ಥದಲ್ಲಿ ಇದು ಅತಿಕ್ರಮಣಕಾರರಿಗೆ ಲಾಭದಾಯಕವಾಗಿದೆ, ಅನಧಿಕೃತ ನಿರ್ಮಾಣದಲ್ಲಿ ತೊಡಗಿರುವವರಿಗೆ ಇದು ಲಾಭದಾಯಕವಾಗಿದೆ ಮತ್ತು ಆದ್ದರಿಂದ ಅದರ ದಾವೆಯನ್ನು ನಿಭಾಯಿಸುವ ಅವಕಾಶ ಪಡೆಯುವ ನಿಮ್ಮಲ್ಲಿ ಯಾರೇ ಆದರೂ,  ದಯವಿಟ್ಟು ಆ ನಿಟ್ಟಿನಲ್ಲಿ  ಸಾಕಷ್ಟು ಪೂರ್ವ ತಯಾರಿಯನ್ನು  ಮಾಡಿ ಮತ್ತು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ ಮತ್ತು ಅದರಿಂದ ನೀವು ಸೇವೆ ಸಲ್ಲಿಸುತ್ತಿರುವ ಸಂಸ್ಥೆಗೆ ಹೆಚ್ಚಿನ ಪ್ರಯೋಜನ ಲಭಿಸಲಿದೆ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ. 

ಕಂಟೋನ್ಮೆಂಟ್ ಗಳು ಮತ್ತು ರಕ್ಷಣಾ ಭೂಮಿಗೆ ಸಂಬಂಧಿಸಿದ ವಿಷಯಗಳಲ್ಲಿ ರಕ್ಷಣಾ ಸಚಿವಾಲಯಕ್ಕೆ ನಿಮ್ಮ ಸಲಹಾ ಪಾತ್ರ ಅಮೂಲ್ಯವಾಗಿದೆ. ನಿಮ್ಮ ಒಳನೋಟಗಳು ಮತ್ತು ಶಿಫಾರಸುಗಳು ನಮ್ಮ ರಕ್ಷಣಾ ಮೂಲಸೌಕರ್ಯದ ಕಾರ್ಯಾಚರಣೆಯ ಪರಿಣಾಮಕಾರಿತ್ವ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ ನೀತಿಗಳನ್ನು ರೂಪಿಸುತ್ತವೆ.

ಯೋಜನೆ ಅಭಿವೃದ್ಧಿಗೆ ಪರ್ಯಾಯ ಎಂಬುದಿಲ್ಲ ಎಂದು ನಾನು ನಿಮಗೆ ಹೇಳುತ್ತೇನೆ. ಮನೆಯಲ್ಲಿಯ  ಬೆಳವಣಿಗೆ ತುಂಬಾ ನೋವಿನಿಂದ ಕೂಡಿರುತ್ತದೆ. ನಾನು ನಿಮಗೆ ಸಣ್ಣ ಉದಾಹರಣೆಯನ್ನು ನೀಡುತ್ತೇನೆ. 1989ರಲ್ಲಿ ನಾನು ಸಂಸತ್ತಿಗೆ ಆಯ್ಕೆಯಾದೆ. ನಾವು ಮುಖ್ಯ ಸಂಸತ ಕಟ್ಟಡವನ್ನು ಹೊಂದಿದ್ದೇವೆ, ಅದು ಈಗ ಸಂವಿಧಾನ ಸದನವಾಗಿದೆ ಮತ್ತು ನಾವು ವಿಸ್ತರಣೆಗಾಗಿ ಮುಂದಡಿ ಇಟ್ಟೆವು. ನಂತರ ನಾವು ಮತ್ತೊಂದು ವಿಸ್ತರಣಾ ಕಟ್ಟಡವನ್ನು ಸೇರಿಸಿದ್ದೇವೆ ನಂತರ ನಾವು ಗ್ರಂಥಾಲಯವನ್ನು ಸೇರಿಸಿದ್ದೇವೆ. ಅದೃಷ್ಟವಶಾತ್ ಈಗ ಸಂಸತ್ತಿನ ಹೊಸ ಕಟ್ಟಡದೊಂದಿಗೆ ಹೊಸ ವಿಷಯಗಳು ರೂಪುಗೊಳ್ಳುತ್ತಿವೆ. ಆದ್ದರಿಂದ ನೀವು ತುಂಬಾ ಚಿಂತನಶೀಲರಾಗಿರಬೇಕು, ನೀವು ಉಪಗ್ರಹ ವೀಕ್ಷಣೆಯಂತಹ ನೋಟವನ್ನು ಹೊಂದಿರಬೇಕು. ನೀವು ನಿರ್ವಹಣೆಯ ಪಾತ್ರವನ್ನು ವಹಿಸಿಕೊಂಡಿದ್ದರೆ  ಅದು ಯೋಜನೆಯಲ್ಲಿ ಅಳವಡಿಕೆಯಾಗುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. 

ಕಂಟೋನ್ಮೆಂಟ್ ಗಳು ನಮ್ಮ ರಕ್ಷಣಾ ಸಿಬ್ಬಂದಿ, ಅವರ ಕುಟುಂಬಗಳು ಮತ್ತು ಗಮನಾರ್ಹ ನಾಗರಿಕ ಜನಸಂಖ್ಯೆಯನ್ನು ಹೊಂದಿರುವ ವಿಶಿಷ್ಟ ಆಡಳಿತ ಘಟಕಗಳಾಗಿವೆ.

ನಿಮ್ಮ ಪಾತ್ರ ತುಂಬಾ ನಿರ್ಣಾಯಕವಾಗಿದೆ. ಅಲ್ಲಿ ಒತ್ತಡ, ಸೆಳೆತ ಇರಬಹುದು, ವಿಳಂಬ ಇರಬಹುದು, ಆದರೆ ನೀವು ದೃಢವಾಗಿರಬೇಕು. ನಿಮ್ಮ ದೃಢತೆಯನ್ನು ಕಾನೂನು ನೆಲೆಗಟ್ಟಿನಿಂದ ಬಲಪಡಿಸಬೇಕು. ಕಂಟೋನ್ಮೆಂಟ್ ನಲ್ಲಿ ನಿಮ್ಮ ದಕ್ಷತೆಯು ಪ್ರತಿಬಿಂಬಿಸಲ್ಪಡುತ್ತಿರಬೇಕು ಎಂಬುದನ್ನು ಸದಾ ಖಚಿತಪಡಿಸಿಕೊಳ್ಳಿ. ಕಂಟೋನ್ಮೆಂಟ್ ನಲ್ಲಿ ಏನಾಗುತ್ತದೆಯೋ ಅದು ಇತರ ಪ್ರದೇಶಗಳಲ್ಲಿಯೂ ಆಗಬೇಕು ಎಂದು ಉಲ್ಲೇಖಿಸುವ ಸ್ಥಿತಿಯಲ್ಲಿ ಅದು ಇರಬೇಕು.

ಯಾವುದೇ ಪುರಸಭೆ ಪ್ರದೇಶದಲ್ಲಿ ಕಂಟೋನ್ಮೆಂಟ್ ನಿರ್ವಹಣೆ ಬಹಳ ಮುಂದಿದೆ. ಅದನ್ನು ಅವರು ಉಲ್ಲೇಖಿಸುತ್ತಾರೆ ಆದರೆ ನೀವು ಅದಕ್ಕಿಂತ ಹೆಚ್ಚಿನ ಸಾಧನೆಯ ಪಥದಲ್ಲಿರಬೇಕು.

ಸುರಕ್ಷಿತ ಮತ್ತು ಉತ್ತಮವಾಗಿ ನಿರ್ವಹಿಸಲ್ಪಡುವ ಎಸ್ಟೇಟ್ ಗಳನ್ನು ಖಚಿತಪಡಿಸಿಕೊಳ್ಳುವುದು ನಿರ್ಣಾಯಕವಾಗಿದ್ದರೂ, ನಿಮ್ಮ ದೃಷ್ಟಿ ಸಾಂಪ್ರದಾಯಿಕ ವ್ಯಾಪ್ತಿಯನ್ನು ಮೀರಿ ವಿಸ್ತರಿಸಬಹುದಾಗಿರುತ್ತದೆ.

ಅಸ್ತವ್ಯಸ್ತಗೊಳಿಸುವಂತಹ ತಂತ್ರಜ್ಞಾನದ ರೂಪದಲ್ಲಿ ನಾಲ್ಕನೇ ಕ್ರಾಂತಿಯ ಕಾಲಘಟ್ಟದಲ್ಲಿ ನಾವಿದ್ದೇವೆ. ಈಗ ನೀವು ಅನ್ವೇಷಣೆಗಳನ್ನು ಕೈಗೊಳ್ಳಬಹುದು. ನಿಮ್ಮ ಕಚೇರಿಯಿಂದ ನೀವು ಅಭಿವೃದ್ಧಿಯನ್ನು ತಿಳಿದುಕೊಳ್ಳಬಹುದು. ನಿಮ್ಮ ಅಡಿಯಲ್ಲಿ ಕೆಲಸ ಮಾಡುವ ಜನರು, ಅವರೆಲ್ಲರೂ ತಾಂತ್ರಿಕವಾಗಿ ಸಾಕ್ಷರರಲ್ಲದಿದ್ದರೂ ಅವರಿಗೆ ಪ್ರೇರಣೆ, ಸ್ಪೂರ್ತಿ ನೀಡಬಹುದು.  ಏಕೆಂದರೆ ನಮ್ಮ ದೇಶದಲ್ಲಿ ಹೊಂದಾಣಿಕೆಯು/ಅಳವಡಿಸಿಕೊಳ್ಳುವಿಕೆಯು  ಬಹಳ ತ್ವರಿತ ಮತ್ತು ಅದಕ್ಕಾಗಿಯೇ ಡಿಜಿಟಲೀಕರಣದಲ್ಲಿ ನಮ್ಮ ದೇಶವು ವಿಶ್ವ ಬ್ಯಾಂಕಿನ ಪ್ರಕಾರ ಅನುಕರಿಸಬೇಕಾದ ಮಾದರಿಯಾಗಿದೆ. ಆದ್ದರಿಂದ ಇತರರ ಹೊರತಾಗಿಯೂ ನೀವು ನಿಮ್ಮ ಅಧೀನ ಅಧಿಕಾರಿಗಳನ್ನು ಹಿಡಿದು, ಅವರಿಗೆ ಸಲಹೆ ನೀಡಿದರೆ ಅವರು ತಾಂತ್ರಿಕವಾಗಿಯೂ ಸಾಕ್ಷರರಾಗುತ್ತಾರೆ.

ತೋಟಗಾರಿಕೆಗೆ ವಿಶೇಷ ಗಮನ ನೀಡಬೇಕು ಮತ್ತು ಅದು ತಾತ್ಕಾಲಿಕ (ಅಡ್ ಹಾಕ್) ಆಗಬಾರದು ಎಂದು ನಾನು ಬಲವಾಗಿ ಸಲಹೆ ಮಾಡುತ್ತೇನೆ. ನೀವು ಸಾಂಪ್ರದಾಯಿಕ ರೀತಿಯಲ್ಲಿ ಅದನ್ನು ನಿರ್ವಹಿಸಬೇಕಾಗಿಲ್ಲ. ನೀವು ಭೌತಿಕ ರೀತಿಯಲ್ಲಿ ನಿರ್ವಹಿಸಬೇಕಾಗಿಲ್ಲ. ನೀವು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸಬೇಕು. ನೀವು ಪ್ರತಿ ಕ್ಷಣದಲ್ಲೂ ತಂತ್ರಜ್ಞಾನವನ್ನು ಬಳಸಬೇಕು. ನೀವು ಬೀದಿಯನ್ನು ನಿರ್ವಹಿಸುತ್ತಿದ್ದರೆ ಅಥವಾ ಆ ನಿರ್ವಹಣೆಯ ಭಾಗವಾಗಿದ್ದರೆ. ನಿಮ್ಮ ಕೈಯಲ್ಲಿರುವ ಮೊಬೈಲ್ ಯಾವುದೇ ಸಮಯದಲ್ಲಿ  ಎಲ್ಲಿ, ಏನು ನಡೆಯುತ್ತಿದೆ ಎಂದು ನಿಮಗೆ ತಿಳಿಸುವಷ್ಟು ಶಕ್ತವಾಗಿದೆ. ನೀವು ಅದನ್ನು ಕಲಿಯಬೇಕು.

ನಿಮ್ಮಲ್ಲಿ ಹೆಚ್ಚಿನವರು ಎಂಜಿನಿಯರಿಂಗ್ ವಿಭಾಗದಿಂದ ಬಂದಿದ್ದೀರಿ. ಆದರೆ ಆ ಕ್ಷೇತ್ರದಿಂದ ಬಂದಿಲ್ಲದವರು ಈಗ ಕಲಿಯುವುದಕ್ಕೆ ಬಹಳ ಉತ್ತಮ ಸ್ಥಾನದಲ್ಲಿದ್ದಾರೆ,  ಏಕೆಂದರೆ ನಿಮಗೆ  ಹೆಚ್ಚು ಕಲಿಯುವ ಹಂಬಲ ಇರುತ್ತದೆ. ಅವರು ಈಗಾಗಲೇ ಕಲಿತಿದ್ದಾರೆ,  ಆದ್ದರಿಂದ ಇಲ್ಲಿ ಯಾರೂ ಸೋತವರು ಎಂಬುದಿಲ್ಲ.

ಸ್ನೇಹಿತರೇ, ಭಾರತವು ಇತರೆ ಯಾವುದೇ ದೇಶಕ್ಕಿಂತ ಭಿನ್ನವಾದ ದೇಶವಾಗಿದೆ. 5000 ವರ್ಷಗಳ ನಾಗರಿಕತೆಯ ಆಳವನ್ನು ಯಾವ ದೇಶವು ಹೊಂದಿರಬಹುದು ಎಂಬುದನ್ನು ನೋಡಿ, ಬೇರೆ ಯಾವುದೇ ದೇಶವು ಇದನ್ನು ಹೊಂದಿಲ್ಲ. ನಮ್ಮ ನಾಗರಿಕತೆಯ ನೀತಿಗಳನ್ನು ನೋಡಿ, ನಮ್ಮ ಪರಿಕಲ್ಪನೆಯನ್ನು ನೋಡಿ. ವಸುದೈವ ಕುಟುಂಬಕಂ ಎಂದು ಮಾನವತೆಯ ಸಂದೇಶದ ಮೂಲಕ  ಸರ್ವರ ಏಳಿಗೆಯನ್ನು ಬಯಸುವ  ನಮ್ಮ ಸಿದ್ಧಾಂತ  ಜಿ20 ರಲ್ಲಿ ನಾವು ಯಾವ ರೀತಿಯ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು ಎಂಬುದನ್ನು ರಕ್ಷಣಾ ಕಾರ್ಯದರ್ಶಿಗಳು ತಿಳಿದಿದ್ದಾರೆ. ದೇಶದ ಪ್ರತಿಯೊಂದು ಭಾಗದಲ್ಲೂ ಜಿ20 ಸಮಾರಂಭಗಳನ್ನು ಆಯೋಜಿಸುವ ಸಂದರ್ಭವನ್ನು ರೂಪಿಸಲಾಗಿತ್ತು. ದಿಲ್ಲಿಯ ಭಾರತ ಮಂಟಪ ಅಥವಾ ಸಂಸತ್ತಿನ ಹೊಸ ಕಟ್ಟಡಕ್ಕೆ ನೀವು ಹೋದರೆ ಅಲ್ಲಿ ನೀವು 5000 ವರ್ಷಗಳ ನಾಗರಿಕತೆಯ ಹಿರಿಮೆಗೆ ತೆರೆದುಕೊಳ್ಳುತ್ತೀರಿ.
 ನಿಮ್ಮ ಡಿಫೆನ್ಸ್ ಎಸ್ಟೇಟ್ ನಲ್ಲಿ ನೀವು ಐತಿಹಾಸಿಕ ಅಂಶವನ್ನು ಹೊಂದಿರುತ್ತೀರಿ. ನೀವು ಎಲ್ಲಿಗೆ ಹೋದರೂ ರಕ್ಷಣಾ ಸಂಸ್ಥೆಗಳಲ್ಲಿ ಒಂದು  ಪಾರಂಪರಿಕ ಸಂಬಂಧವನ್ನು  ಕಾಣಬಹುದು, ಅದನ್ನು ಅಳೆಯಬೇಕು ಏಕೆಂದರೆ ಪರಂಪರೆಯು ಹೆಮ್ಮೆಯ ಮೂಲವಾಗಿದೆ ಮತ್ತು ಅದನ್ನು ಜಗತ್ತಿಗೆ ಪರಿಣಾಮಕಾರಿಯಾಗಿ ತಿಳಿಸಬೇಕಾಗಿದೆ. 

ನಾವು ನಿಮ್ಮ ವಯಸ್ಸಿನವರಾಗಿದ್ದಾಗ ಹಳ್ಳಿಯಲ್ಲಿ ವಿದ್ಯುತ್ ಇರಲಿಲ್ಲ, ರಸ್ತೆ ಇರಲಿಲ್ಲ, ಶೌಚಾಲಯವಿಲ್ಲ, ಅನಿಲವಿಲ್ಲ, ಸಂಪರ್ಕವಿಲ್ಲ, ಬ್ಯಾಂಕ್ ಖಾತೆ ಇಲ್ಲ. ಮೊಬೈಲ್ ಟೆಲಿಫೋನ್ ಎಂದರೇನು ಎಂದು ನಮಗೆ ತಿಳಿದಿರಲಿಲ್ಲ. ನಂತರ ನಾವು ನಿಧಾನವಾಗಿ ಮನೆಯಲ್ಲಿ ಫೋನ್ ಇರುವುದು ಸ್ಥಾನ ಮಾನದ ಸಂಕೇತ ಎಂದು ಅರಿತೆವು ಮತ್ತು ನಿಧಾನವಾಗಿ ನಾವು ಅಲ್ಲಿ ದೂರದರ್ಶನ (ಟೆಲಿವಿಶನ್) ಇಲ್ಲ  ಎಂಬುದನ್ನು ತಿಳಿದೆವು.  ನಂತರ ನಾವು 1 ಗಂಟೆ ದೂರದರ್ಶನವನ್ನು ಹೊಂದಿದ್ದೆವು ಮತ್ತು ನೆರೆಹೊರೆಯವರು ಬರುತ್ತಿದ್ದರು.  ನಾವು ಈಗ ಎಲ್ಲಿಗೆ ಹೋಗಿದ್ದೇವೆ ನೋಡಿ. 

ವಿಸಿಆರ್ ಅಥವಾ ವಿಸಿಡಿ ಇಲ್ಲದೆ ಗ್ರಾಮೀಣ ಭಾರತದಲ್ಲಿ ಯಾವುದೇ ಮದುವೆ ಪೂರ್ಣಗೊಳ್ಳುತ್ತಿರಲಿಲ್ಲ, ಈಗ ನೀವು ಗಮನಿಸುತ್ತಿರುವ ದೊಡ್ಡ ಬದಲಾವಣೆ ಎಂದರೆ ನಾವು ಈಗ ಅದನ್ನು ನೋಡುತ್ತಿದ್ದೇವೆಯೇ?.   ಅದು ಕಣ್ಮರೆಯಾಗಿದೆ. 

90ರ ಕೊನೆಯಲ್ಲಿ ಬಹಳ ದೊಡ್ಡ ಕ್ರಾಂತಿ ಬಂತು, ಆಗ ನೀವು ಟೆಲಿಫೋನ್ ಬೂತ್ ಹೊಂದಿದ್ದೀರಿ.  ಅದು ಬಹಳ ದೊಡ್ಡ ಕ್ರಾಂತಿ!  ಮಧ್ಯರಾತ್ರಿಯವರೆಗೂ ಅಲ್ಲಿ ಸರತಿ ಸಾಲು ಇರುತ್ತಿತ್ತು. ಜನರು ವಿದೇಶದಲ್ಲಿರುವ ತಮ್ಮ ಸಂಬಂಧಿಕರಿಗೆ ಕರೆ ಮಾಡುತ್ತಿದ್ದರು. ಆದರೆ ಅದು ಈಗ ಕಣ್ಮರೆಯಾಗಿದೆ, ಕಾರಣ ತಂತ್ರಜ್ಞಾನವು ಸಮಾನತೆ ತರುವ ಬಹಳ ದೊಡ್ಡ ಸಾಧನ ಆಗಿದೆ. ಸಮಾನತೆಯನ್ನು ತರುವ ಮತ್ತು ಅಸಮಾನತೆಯನ್ನು ನಿರ್ಬಂಧಿಸುವ ಏಕೈಕ ಮಾರ್ಗವೆಂದರೆ ಶಿಕ್ಷಣ ಎಂಬುದು ನನ್ನ ದೃಢವಾದ ನಂಬಿಕೆ. ಶಿಕ್ಷಣ ತಂತ್ರಜ್ಞಾನದ ನಂತರ. ವಾಸ್ತವವಾಗಿ ಇದು ಶಿಕ್ಷಣದ ಒಂದು ಭಾಗವಾಗಿದೆ. ಇದು ಬದಲಾವಣೆಯನ್ನು ತರುತ್ತದೆ. ರಾತ್ರಿ ಹಗಲಾಗುವುದರೊಳಗೆ ಇದು ಊಹೆಯನ್ನೂ ಮಾಡಲಾಗದ ಭೂದೃಶ್ಯವನ್ನು ಸೃಷ್ಟಿಸುತ್ತದೆ.

ಸ್ನೇಹಿತರೇ, ಭಾರತವು ಪರಿವರ್ತನಾತ್ಮಕ ಮೋಡ್ (ಹಂತದಲ್ಲಿರುವ) ನಲ್ಲಿರುವ ಸಮಯದಲ್ಲಿ ನೀವು ಇದ್ದೀರಿ. ಬೆಳವಣಿಗೆಯ ಪಥವು ನಿರಂತರವಾಗಿ ಬೆಳೆಯುತ್ತಿದೆ. ನಿಮ್ಮ ಸ್ಥಾನ, ವಯಸ್ಸಿನ ಆಧಾರದ ಮೇಲೆ 2047ರಲ್ಲಿ ವಿಕಸಿತ ಭಾರತಕ್ಕಾಗಿ ಮ್ಯಾರಥಾನ್ ನಡಿಗೆ(ಮಾರ್ಚ್) ನಡೆಯಲಿದೆ, ನೀವು ಈ ಮ್ಯಾರಥಾನ್ ಮಾರ್ಚ್ ನ ಭಾಗವಾಗಿದ್ದೀರಿ. ನೀವು ಈ ಮ್ಯಾರಥಾನ್ ಮಾರ್ಚ್ ನ ಮಹತ್ವದ ಭಾಗವಾಗಿರುವುದರಿಂದ ಆಡಳಿತದಲ್ಲಿ ನಿಮ್ಮ ಭಾಗೀದಾರಿಕೆ ನಮ್ಮ ಭಾಗೀದಾರಿಕೆಗಿಂತ ಹೆಚ್ಚು ನಿರ್ಣಾಯಕವಾಗಿದೆ. ನಾವು ಈಗ ನಿಮಗೆ ಸಹಾಯ ಮಾಡಬಹುದು ಆದರೆ ನೀವು 2047ರಲ್ಲಿ ಭಾರತವು ವಿಕಸಿತ ರಾಷ್ಟ್ರವಾಗುವುದನ್ನು ಕಾಣಲು ನೀವು ಚಾಲಕ ಶಕ್ತಿಯಾಗಬೇಕು, ಮುಖ್ಯ ಪ್ರೇರಕ ಶಕ್ತಿಯೂ ಆಗಬೇಕಾಗುತ್ತದೆ.

ಕಳೆದ 10 ವರ್ಷಗಳಿಂದ ನಮ್ಮ ದೇಶದ ಆಡಳಿತ ಅದ್ಭುತವಾಗಿದೆ. ಈ ಬಗ್ಗೆ ನನ್ನ ತಲೆಮಾರು ಎಂದಿಗೂ ಕನಸು ಕಂಡಿರಲಿಲ್ಲ, ನನ್ನ ತಲೆಮಾರು ಎಂದಿಗೂ ಯೋಚಿಸಿರಲಿಲ್ಲ.  ನಾನು ಯಾವ  ಕನಸು ಕಂಡಿರಲಿಲ್ಲವೋ, ಅದನ್ನು ಈ ನೆಲದ ವಾಸ್ತವತೆಯಾಗಿ ನೋಡುವ ಅದೃಷ್ಟ ನನ್ನದಾಗಿದೆ. 34 ವರ್ಷಗಳ ಹಿಂದೆ ನಾನು ಸಂಸತ್ತಿನಲ್ಲಿ ಸದಸ್ಯನಾಗಿದ್ದಾಗ, ಸಂಸತ್ತಿನ ಪ್ರತಿಯೊಬ್ಬ ಸದಸ್ಯರಿಗೆ 50 ಅನಿಲ ಸಂಪರ್ಕಗಳನ್ನು ನೀಡಲಾಗುತ್ತಿತ್ತು ಮತ್ತು ಅವರಿಗೆ 50 ಅನಿಲ ಸಂಪರ್ಕವನ್ನು ಪಡೆಯಲು ಅದು ಉತ್ತಮ ಅವಕಾಶವಾಗಿತ್ತು. ಈಗ ನೋಡಿ ಅಗತ್ಯವಿರುವವರಿಗೆ ಎಷ್ಟು ಕೋಟಿ ಅನಿಲ ಸಂಪರ್ಕವನ್ನು ನೀಡಲಾಗಿದೆ ಎಂಬುದನ್ನು. ನಾನು ನಿಮ್ಮನ್ನು ಅಭಿವೃದ್ಧಿಯ ಭೂದೃಶ್ಯಕ್ಕೆ ಕರೆದೊಯ್ಯಲು ಬಯಸುವುದಿಲ್ಲ, ಆದರೆ ನಮ್ಮಂತಹ ದೇಶದಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ಇರಲಿದೆ ಎಂದು ಅಂದು ನಾವು ಊಹಿಸಬಹುದಿತ್ತೇ? 

ದೇಶದಲ್ಲಿ ದೊಡ್ಡ ಬದಲಾವಣೆಯನ್ನು ತಂದ ಕಾರ್ಯವಿಧಾನದಲ್ಲಿ ರಕ್ಷಣಾ ಕಾರ್ಯದರ್ಶಿ ಅವರು ಒಂದು ಭಾಗವಾಗಿದ್ದಾರೆ. ನಾಗರಿಕ ಸೇವಾ ದಿನದಂದು ನಾನು ವಿಜ್ಞಾನ ಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದೇನೆ, ದೇಶದಲ್ಲಿ ಅಗಾಧವಾದ ಪ್ರತಿಭಾವಂತ ಅಧಿಕಾರಿ ವರ್ಗವಿದೆ, ಅದಕ್ಕೆ ಸಾಟಿಯಿಲ್ಲ. ದೋಷಪೂರಿತ ನೀತಿಯ ವಿಳಂಬಿತ ನಿರ್ಧಾರಗಳ ಭಾರವನ್ನು ಹೊರದಿದ್ದರೆ, ಅದು ಪರಮಾಣು ವೇಗದಲ್ಲಿ ಏನನ್ನಾದರೂ ಸಾಧಿಸಬಲ್ಲುದು, ಬದಲಾವಣೆ ಈಗ ಬರುತ್ತಿದೆ. ಒಂದು ರಾಷ್ಟ್ರವು ದೀರ್ಘ ಪ್ರಯಾಣದಲ್ಲಿದ್ದಾಗ ಏರ್ ಪಾಕೆಟ್ ಗಳು ಇರುತ್ತವೆ, ಆ ಏರ್ ಪಾಕೆಟ್ ಗಳು ಆರ್ಥಿಕತೆಯಲ್ಲಿರುತ್ತವೆ, ನಾವು ಅದರಿಂದ ಹೊರಬಂದಿದ್ದೇವೆ, ವಿಮಾನ ಹಾರಾಟ ಸಂದರ್ಭದಲ್ಲಿ ಅದರ ಎತ್ತರ ತಗ್ಗಿಸಿ ವೇಗ ಕುಸಿಯುವಂತೆ ಮಾಡಬಲ್ಲಂತಹ ವಾಯು ಕೇಂದ್ರಗಳು (ಏರ್ ಪಾಕೆಟ್ ಗಳು) ರಾಜಕೀಯ ಪ್ರಯಾಣದಲ್ಲಿಯೂ ಎದುರಾಗುತ್ತವೆ. ಆದರೆ ಇವು ಪ್ರತಿರೋಧವನ್ನು ಉಂಟುಮಾಡುವುದಿಲ್ಲ. ಆ ದಿಕ್ಕಿನಲ್ಲಿ ನಮ್ಮ ಧೋರಣೆಯು ಸರಿಯಾಗಿದೆ ಮತ್ತು ಮುಂದಿನ ವರ್ಷಗಳಲ್ಲಿ ದೇಶದಲ್ಲಿನ ಆಡಳಿತವು ಜಾಗತಿಕವಾಗಿ ನಮ್ಮ ಸ್ಥಾನವನ್ನು ವ್ಯಾಖ್ಯಾನಿಸುತ್ತದೆ ಎಂಬ ಬಗ್ಗೆ ನಾನು ನಿಮಗೆ ಭರವಸೆ ನೀಡಬಲ್ಲೆ. ಇಡೀ ಜಗತ್ತು ಭಾರತವನ್ನು ಹೊಳೆಯುವ ನಕ್ಷತ್ರವಾಗಿ ನೋಡುತ್ತಿದೆ. ನಾವು ಭರವಸೆ ಮತ್ತು ಸಾಧ್ಯತೆಯ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ. ಜಗತ್ತು ನಮ್ಮನ್ನು ಹೂಡಿಕೆ ಮತ್ತು ಅವಕಾಶಗಳ ನೆಚ್ಚಿನ ತಾಣವೆಂದು ಪ್ರಶಂಸಿಸುತ್ತದೆ ಮತ್ತು ಆ ಪರಿಸರ ವ್ಯವಸ್ಥೆಯಲ್ಲಿ ನಿಮ್ಮ ಪಾತ್ರ ಬಹಳ ಮಹತ್ವದ್ದಾಗಿದೆ. ನೀವು ಅದರ ಭೌತಿಕ/ಭೌಗೋಳಿಕ ಗಡಿಗಳನ್ನು ಮಾತ್ರವೇ ರಕ್ಷಿಸುವುದಲ್ಲ, ಅಲ್ಲಿ ಭದ್ರತೆಯ ನಿಟ್ಟಿನಲ್ಲಿಯೂ ಸಾಗಬೇಕು. ಆ ಸಂದರ್ಭದಲ್ಲಿ ನೀವೆಲ್ಲರೂ ಒಗ್ಗೂಡಿ ಎದ್ದು ನಿಲ್ಲುತ್ತೀರಿ ಎಂಬ ಬಗ್ಗೆ ನನಗೆ ಯಾವುದೇ ಸಂಶಯ ಇಲ್ಲ. 

ನಮ್ಮ ರಾಷ್ಟ್ರೀಯ ಪ್ರಗತಿಗೆ ರಕ್ಷಣಾ ಎಸ್ಟೇಟ್ ಗಳನ್ನು ನಿರ್ವಹಿಸುವಲ್ಲಿ ಮತ್ತು ಸಂಪನ್ಮೂಲ ಬಳಕೆಯನ್ನು ಉತ್ತಮಗೊಳಿಸುವಲ್ಲಿ ನಿಮ್ಮ ಪ್ರಮುಖ ಪಾತ್ರವು, ನಿರ್ಣಾಯಕವಾಗಿದೆ.

ನಿಮ್ಮ ಸಮರ್ಪಿತ ಪ್ರಯತ್ನಗಳು ನಮ್ಮ ರಾಷ್ಟ್ರ ಮತ್ತು ಅದರ ಹಿತಾಸಕ್ತಿಗಳನ್ನು ರಕ್ಷಿಸಲು ನಮ್ಮ ರಕ್ಷಣಾ ಪಡೆಗಳು ಅಗತ್ಯ ಮೂಲಸೌಕರ್ಯಗಳನ್ನು ಹೊಂದಿವೆ ಎಂದು ಖಚಿತಪಡಿಸುತ್ತವೆ.

ಒಟ್ಟಾಗಿ ನಾವು ""Viksit Bharat@2047" ದೃಷ್ಟಿಕೋನಕ್ಕೆ ಅನುಗುಣವಾಗಿ ಬಲವಾದ, ಹೆಚ್ಚು ಸಮೃದ್ಧ ಭಾರತವನ್ನು ನಿರ್ಮಿಸುವುದನ್ನು ಮುಂದುವರಿಸೋಣ.

ನಮ್ಮ ಜನರ ಅದ್ಭುತ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಅಪಾರ ಸಾಮರ್ಥ್ಯವನ್ನು ಬಳಸಿಕೊಂಡು ನನ್ನ ತಲೆಮಾರಿನ ಜನರ ಕನಸುಗಳನ್ನು ಮೀರಿ ಭವಿಷ್ಯದ ಪೀಳಿಗೆಗೆ ಹೊಸ ಮಾನದಂಡಗಳನ್ನು ನಿಗದಿಪಡಿಸುವಂತಹ  ಭವಿಷ್ಯವನ್ನು ರೂಪಿಸಲು ಮುಂದಡಿ ಇಡೋಣ.

ನಿಮ್ಮೆಲ್ಲರಿಗೂ ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ನಾನು ನಿಮಗೆ ಮನವಿ ಮಾಡುತ್ತೇನೆ: ನೀವು ಯಾವುದೇ ಸವಾಲುಗಳನ್ನು ಎದುರಿಸಿದರೂ, ಸದಾ ನಮ್ಮ ರಾಷ್ಟ್ರಕ್ಕೆ ಮೊದಲಾದ್ಯತೆ ನೀಡಿ. ಇದು ಆಯ್ಕೆಯ ವಿಷಯವಲ್ಲ; " Viksit Bharat@2047" ರ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಂದೆ ಸಾಗಲು ಇದು ಏಕೈಕ ಮಾರ್ಗವಾಗಿದೆ.

ಇದು ಐಚ್ಛಿಕವಲ್ಲ! ರಾಷ್ಟ್ರಕ್ಕೆ ನಿಮ್ಮ ಬದ್ಧತೆಯು ಎಲ್ಲಕ್ಕಿಂತ ಹೆಚ್ಚಿನ ಆದ್ಯತೆಯನ್ನು ಪಡೆಯಬೇಕು ಮತ್ತು ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ಕಾರ್ಯವಿಧಾನದಲ್ಲಿ ನೀವು ಅದರ ಭಾಗವಾಗಿದ್ದೀರಿ ಮತ್ತು ರಕ್ಷಣೆಗೆ ಸಂಬಂಧಿಸಿ ಅತ್ಯುತ್ತಮ ಮಾರ್ಗವೆಂದರೆ ಯುದ್ಧಕ್ಕೆ ಸದಾ ಸಿದ್ಧರಾಗಿರುವುದು, ರಕ್ಷಣೆಯ ಅತ್ಯುತ್ತಮ ಮಾರ್ಗವೆಂದರೆ ನಿಮ್ಮ ಸಂಸ್ಥೆಗಳನ್ನು ನಿಮ್ಮ ಜೀವನದಲ್ಲಿ ಆಪತ್ಕಾಲೀನ ಸ್ಥಿತಿಯನ್ನು ಎದುರಿಸಲು ಇಟ್ಟ ಆಪತ್ ಧನದಂತೆ ಸರ್ವ ಸನ್ನಧ ಸ್ಥಿತಿಯಲ್ಲಿಡುವುದು.

ಧನ್ಯವಾದಗಳು. ಜೈ ಹಿಂದ್!

 

*****
 


(Release ID: 2031717) Visitor Counter : 52