ಸಂಸದೀಯ ವ್ಯವಹಾರಗಳ ಸಚಿವಾಲಯ

ಸಂಸತ್ ಅಧಿವೇಶನ ಸಂಪನ್ನ, ಉಭಯ ಸದನಗಳು ಅನಿರ್ದಿಷ್ಟಾವಧಿಗೆ ಮುಂದೂಡಿಕೆ


539 ಹೊಸ ಸದಸ್ಯರ ಪ್ರಮಾಣ ವಚನ/ದೃಢೀಕರಣ ಸ್ವೀಕಾರ

ಉಭಯ ಸದನಗಳಲ್ಲಿ ಶೇ 100 ರಷ್ಟು ಉತ್ಪಾದಕತೆ

Posted On: 03 JUL 2024 5:18PM by PIB Bengaluru

18 ನೇ ಲೋಕಸಭೆಯ ಸಾಮಾನ್ಯ ಸಾರ್ವತ್ರಿಕ ಚುನಾವಣೆಯ ನಂತರ ನಡೆದ ಮೊದಲ ಲೋಕಸಭೆ ಮತ್ತು ರಾಜ್ಯ ಸಭೆಯ 264 ನೇ ಅಧಿವೇಶನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯ ಅಧಿವೇಶನಗಳನ್ನು ಕ್ರಮವಾಗಿ ಜೂನ್ 24 ಮತ್ತು 27 ರಿಂದ ಆರಂಭವಾಗಿತ್ತು. ಲೋಕಸಭೆ ಅಧಿವೇಶನ 2024 ರ ಜುಲೈ 2 ರಂದು ಮತ್ತು ರಾಜ್ಯಸಭೆ ಅಧಿವೇಶವನ್ನು 2024 ರ ಜುಲೈ 3 ರಂದು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ.   

ಸಂಸತ್ತಿನ ಅಧಿವೇಶನದ ಕಾರ್ಯಕಲಾಪ ಕುರಿತು ಸುದ್ದಿಗೋಷ್ಠಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಕಿರೆಣ್ ರಿಜಿಜು ಮಾಹಿತಿ ನೀಡಿದರು. ಮೊದಲ ಎರಡು ದಿನಗಳ ಕಾಲ ಲೋಕಸಭೆಯಲ್ಲಿ 18 ನೇ ಲೋಕಸಭೆ ಸದಸ್ಯರು ಪ್ರಮಾಣವಚನ ಸ್ವೀಕಾರ/ದೃಢೀಕರಣಕ್ಕಾಗಿ ಮೀಸಲಾಗಿತ್ತು. 542 ಸದಸ್ಯ ಬಲದ ಲೋಕಸಭೆಯಲ್ಲಿ 539 ಮಂದಿ ಸದಸ್ಯರು ಪ್ರಮಾಣವಚನ/ದೃಢೀಕರಣ ಸ್ವೀಕರಿಸಿದ್ದಾಗಿ ಮಾಹಿತಿ ನೀಡಿದರು.

ಸಂವಿಧಾನದ 95[1] ರಡಿ ಪ್ರಮಾಣವಚನ ಸ್ವೀಕಾರ/ದೃಢೀಕರಣಕ್ಕಾಗಿ ಭಾರತದ ರಾಷ್ಟ್ರಪತಿಯವರು ಶ್ರೀ ಭರ್ತೃಹರಿ ಮೆಹತಾಬ್ ಅವರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಿಸಿದ್ದರು ಮತ್ತು ಶ್ರೀ ಸುರೇಶ್ ಕೋಡಿಕುನ್ನಿಲ್, ಶ್ರೀ. ಟಿ.ಆರ್. ಬಾಲು, ಶ್ರೀ ರಾಧಾಮೋಹನ್ ಸಿಂಗ್, ಶ್ರೀ ಫಗ್ಗನ್ ಸಿಂಗ್ ಕುಲಸ್ತೆ, ಮತ್ತು ಶ್ರೀ ಸುದೀಪ್ ಬಂಢೋಪಾಧ್ಯಾಯ ಅವರನ್ನು ಸಹ ಸಂವಿಧಾನದ 99 ವಿಧಿಯಡಿ ಪ್ರಮಾಣ ವಚನ ಸ್ವೀಕಾರ/ದೃಢೀಕರಣಕ್ಕಾಗಿ ನಿಯೋಜಿಸಿದ್ದರು.   

2024 ರ ಜೂನ್ 26 ರಂದು ಲೋಕಸಭೆಯ ಸಭಾಧ್ಯಕ್ಷರ ಚುನಾವಣೆ ನಡೆಯಿತು ಮತ್ತು ಶ್ರೀ ಓಂ ಬಿರ್ಲಾ ಅವರನ್ನು ಸಭಾಧ್ಯಕ್ಷರನ್ನಾಗಿ ಧ್ವನಿಮತದ ಮೂಲಕ ಆಯ್ಕೆ ಮಾಡಲಾಯಿತು. ಇದೇ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಮಂತ್ರಿಪರಿಷತ್ ನ ಸದಸ್ಯರನ್ನು ಲೋಕಸಭೆಗೆ ಪರಿಚಯಿಸಿದರು.

2024 ರ ಜೂನ್ 27 ರಂದು ರಾಷ್ಟ್ರಪತಿಯವರು ಸಂವಿಧಾನದ 87 ನೇ ಪರಿಚ್ಚೇದದಡಿ ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಿ, ಸರ್ಕಾರದ ಸಾಧನೆಗಳನ್ನು ಅನಾವರಣಗೊಳಿಸಿದರು ಮತ್ತು ದೇಶದ ಅಭಿವೃದ್ಧಿ ಕುರಿತಾದ ವಿಸ್ತೃತ ನೀಲನಕ್ಷೆಯ ಮಾಹಿತಿ ನೀಡಿದರು.

2024 ರ ಜೂನ್ 27 ರಂದು ಪ್ರಧಾನಮಂತ್ರಿಯವರು ರಾಜ್ಯಸಭೆಗೆ ತಮ್ಮ ಮಂತ್ರಿಪರಿಷತ್ ನ ಸದಸ್ಯರನ್ನು ಪರಿಚಯಿಸಿದರು.

ಉಭಯ ಸದನಗಳಲ್ಲಿ 2024 ರ ಜೂನ್ 28 ರಂದು ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ಪ್ರಾರಂಭವಾಯಿತು.

ಲೋಕಸಭೆಯಲ್ಲಿ 2024 ರ ಜುಲೈ 1 ರಂದು ಸಂಸದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಚರ್ಚೆಗೆ ವಿಧ್ಯುಕ್ತಚಾಲನೆ ನೀಡಿದರು ಮತ್ತು ಶ್ರೀಮತಿ ಬಾನ್ಸುರಿ ಸ್ವರಾಜ್ ಅವರು ಎರಡನೆಯವರಾಗಿ ಚರ್ಚೆಯಲ್ಲಿ ಬಾಗವಹಿಸಿದ್ದರು. ಚರ್ಚೆಯಲ್ಲಿ 68 ಮಂದಿ ಸದಸ್ಯರು ಪಾಲ್ಗೊಂಡಿದ್ದರು ಮತ್ತು 50 ಕ್ಕೂ ಅಧಿಕ ಸದಸ್ಯರು ತಮ್ಮ ಭಾಷಣವನ್ನು   ಸದನದಲ್ಲಿಮಂಡಿಸಿದರು. 2024 ರ ಜುಲೈ 2 ರಂದು 18 ಗಂಟೆಗೂ ಅಧಿಕ ಕಾಲ ನಡೆದ ಚರ್ಚೆಗೆ ಪ್ರಧಾನಮಂತ್ರಿಯವರು ಸದನದಲ್ಲಿ ಉತ್ತರ ನೀಡಿದರು. ಲೋಕಸಭೆಯ 7 ದಿನದ ಕಲಾಲದಲ್ಲಿ 34 ಗಂಟೆಗಳಿಗೂ ಅಧಿಕ ಕಾಲ ಕಲಾಪ ನಡೆಯಿತು ಮತ್ತು ಒಂದು ದಿನ ಕಲಾಪ ವ್ಯರ್ಥವಾಗಿದ್ದು, ಒ ಟ್ಟಾರೆ ಶೆ 105% ರಷ್ಟು ಕಲಾಪ ಫಲಪ್ರದವಾಗಿತ್ತು.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ 2024 ರ ಜೂನ್ 28 ರಂದು ಶ್ರೀ ಸುಧಾಂಶು ತ್ರಿವೇದಿ ಅವರು ಚಾಲನೆ ನೀಡಿದರು, ಎರಡನೆಯವರಾಗಿ ಸಂಸದರಾದ ಶ್ರೀಮತಿ ಕವಿತಾ ಪಾಟಿದಾರ್ ಅವರು ಭಾಗವಹಿಸಿದ್ದರು. ಒಟ್ಟು 21 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ 76 ಸದಸ್ಯರು ಭಾಗವಹಿಸಿದ್ದು, 2024 ರ ಜುಲೈ 3 ರಂದು ಪ್ರಧಾನಮಂತ್ರಿಯವರು ವಂದನಾ ನಿರ್ಣಯದ ಚರ್ಚೆಗೆ ಉತ್ತರ ನೀಡಿದರು. ರಾಜ್ಯಸಭೆಯ ಕಲಾಪ ಒಟ್ಟಾರೆ 100% ರಷ್ಟು ಫಲಪ್ರದವಾಗಿದೆ.

 

*****



(Release ID: 2030665) Visitor Counter : 13