ರೈಲ್ವೇ ಸಚಿವಾಲಯ

ಭಾರತೀಯ ರೈಲ್ವೆ ಜೂನ್ 2024 ರಲ್ಲಿ 135.46 ದಶಲಕ್ಷ  ಟನ್  ಸರಕು ಸಾಗಣೆಯನ್ನು ದಾಖಲೆಯನ್ನು ಸಾಧಿಸಿದೆ


ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರಕು ಸಾಗಣೆ 12.40 ದಶಲಕ್ಷ  ಟನ್  ಗಳಷ್ಟು ಹೆಚ್ಚಾಗಿದೆ

ಜೂನ್ 2024 ರಲ್ಲಿ ಸರಕು ಸಾಗಣೆಯಿಂದ ರೈಲ್ವೆಯು ರೂ 14798.11 ಕೋಟಿ ಗಳಿಸಿದೆ

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸರಕು ಸಾಗಣೆ ಆದಾಯವು 1481.29 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ

Posted On: 02 JUL 2024 5:07PM by PIB Bengaluru

ಜೂನ್ 2024 ರಲ್ಲಿ ಭಾರತೀಯ ರೈಲ್ವೇ 135.46 ದಶಲಕ್ಷ ಟನ್ ಸರಕುಗಳನ್ನು ಸಾಗಿಸುವ ಮೂಲಕ ದಾಖಲೆ ನಿರ್ಮಿಸಿದೆ. ಕಳೆದ ವರ್ಷದ 123.06 ದಶಲಕ್ಷ ಟನ್ ಸರಕುಗಳಿಗೆ ಹೋಲಿಸಿದರೆ ಇದು ಸುಮಾರು 10.07% ಹೆಚ್ಚಳವಾಗಿದೆ. ಸರಕು ಸಾಗಣೆ ಆದಾಯವು ಜೂನ್ 2023 ರಲ್ಲಿ 13,316.81 ಕೋಟಿಯಿಂದ ಜೂನ್ 2024 ರಲ್ಲಿ 14,798.11 ಕೋಟಿಗೆ ಏರಿದೆ. ಈ ಮೂಲಕ ಕಳೆದ ವರ್ಷಕ್ಕಿಂತ ಸುಮಾರು 11.12% ರಷ್ಟು ಹೆಚ್ಚು ಸುಧಾರಣೆಯನ್ನು ತೋರಿಸಿದೆ. 

ಭಾರತೀಯ ರೈಲ್ವೆಯು ಜೂನ್ ತಿಂಗಳಿನಲ್ಲಿ 60.27 ಎಂ.ಟಿ ಕಲ್ಲಿದ್ದಲು (ಆಮದು ಮಾಡಿಕೊಂಡ ಕಲ್ಲಿದ್ದಲು ಹೊರತುಪಡಿಸಿ), 8.82 ಎಂ.ಟಿ ಆಮದು ಮಾಡಿದ ಕಲ್ಲಿದ್ದಲು, 15.07 ಎಂ.ಟಿ ಕಬ್ಬಿಣದ ಅದಿರು, 5.36 ಎಂ.ಟಿ ಪಿಗ್ ಐರನ್ ಮತ್ತು ಸಿದ್ಧಪಡಿಸಿದ ಉಕ್ಕು ,   7.56 ಎಂ.ಟಿ ಸಿಮೆಂಟ್ (ಕ್ಲಿಂಕರ್), 4.21 ಎಂ.ಟಿ   ಆಹಾರ ಧಾನ್ಯಗಳು, 5.30 ಎಂ.ಟಿ  ಗೊಬ್ಬರ,  4.18 ಎಂ.ಟಿ ಖನಿಜ ತೈಲ, 6.97 ಎಂ.ಟಿ ಕಂಟೈನರ್ ಗಳಲ್ಲಿ ಮತ್ತು 10.06 ಎಂ.ಟಿ ಉಳಿದ ಇತರ ಸರಕುಗಳನ್ನು ಸಾಗಿಸಲಾಗಿದೆ.

 "ಹಂಗ್ರಿ ಫಾರ್ ಕಾರ್ಗೋ" ಎಂಬ ಮಂತ್ರವನ್ನು ಅನುಸರಿಸಿ, ಭಾರತೀಯ ರೈಲ್ವೆಯು ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಸ್ಪರ್ಧಾತ್ಮಕ ಬೆಲೆಗಳಲ್ಲಿ ಸೇವೆಯ ವಿತರಣೆಯನ್ನು ಸುಧಾರಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಗ್ರಾಹಕ ಕೇಂದ್ರಿತ ವಿಧಾನ ಮತ್ತು ವ್ಯವಹಾರ ಅಭಿವೃದ್ಧಿ ಘಟಕಗಳ ಕೆಲಸವನ್ನು ಬೆಂಬಲಿಸುವ ಚಾಣಾಕ್ಷ ನೀತಿ ನಿರ್ಮಾಣವು ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಬಾರತೀಯ ರೈಲ್ವೆಗೆ ಸಹಾಯ ಮಾಡಿದೆ.
 

*****



(Release ID: 2030318) Visitor Counter : 20