ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಪ್ಯಾರಿಸ್ ಒಲಿಂಪಿಕ್ಸ್ 2024: ಭಾರತೀಯ ತಂಡಕ್ಕೆ ಶುಭ ಕೋರಿದ ಪ್ರಧಾನಮಂತ್ರಿ


ಪ್ಯಾರಿಸ್ ಒಲಿಂಪಿಕ್ಸ್ ಗೆ ದೇಶ ಸಜ್ಜಾಗುತ್ತಿರುವಾಗ #Cheer4Bharat ಹ್ಯಾಶ್ ಟ್ಯಾಗ್ ಪರಿಚಯಿಸಿದ ಪ್ರಧಾನಮಂತ್ರಿ

Posted On: 30 JUN 2024 1:03PM by PIB Bengaluru

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಭಾರತೀಯ ತಂಡಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದರು. ಟೋಕಿಯೊದಲ್ಲಿ ಶ್ಲಾಘನೀಯ ಪ್ರದರ್ಶನದ ನಂತರ ಭಾರತೀಯ ಕ್ರೀಡಾಪಟುಗಳ ಸಮರ್ಪಣೆ ಮತ್ತು ಸಿದ್ಧತೆಯನ್ನು ಗುರುತಿಸಿದ ಪ್ರಧಾನಮಂತ್ರಿಯವರು, ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ಮಿಂಚುವ ಅವರ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

"ಟೋಕಿಯೊ ಒಲಿಂಪಿಕ್ಸ್ ನಂತರ, ನಮ್ಮ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್ ನ  ಸಿದ್ಧತೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ನಾವು ಎಲ್ಲಾ ಕ್ರೀಡಾಪಟುಗಳನ್ನು ಒಟ್ಟಿಗೆ ಪರಿಗಣಿಸಿದರೆ, ಅವರೆಲ್ಲರೂ ಸುಮಾರು  ನೂರು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಇದು ಬಹಳ ದೊಡ್ಡ ಸಂಖ್ಯೆ" ಎಂದು ಅವರು ಹೇಳಿದರು.

ಮೊದಲ ಬಾರಿಗೆ ನಡೆಯಲಿರುವ ಕೆಲವು ಸ್ಪರ್ಧೆಗಳ ಬಗ್ಗೆ ರಾಷ್ಟ್ರಕ್ಕೆ ಮಾಹಿತಿ ನೀಡಿದ ಪ್ರಧಾನಿ, "ಶೂಟಿಂಗ್ ನಲ್ಲಿ ನಮ್ಮ ಆಟಗಾರರ ಪ್ರತಿಭೆ ಮುನ್ನೆಲೆಗೆ ಬರುತ್ತಿದೆ. ಪುರುಷರ ಮತ್ತು ಮಹಿಳಾ ತಂಡಗಳೆರಡೂ ಟೇಬಲ್ ಟೆನಿಸ್ ನಲ್ಲಿ ಅರ್ಹತೆ ಪಡೆದಿವೆ. ನಮ್ಮ ಶೂಟರ್ ಹೆಣ್ಣುಮಕ್ಕಳು ಸಹ ಭಾರತೀಯ ಶಾಟ್ ಗನ್ ತಂಡದ ಭಾಗವಾಗಿದ್ದಾರೆ. ಈ ಬಾರಿ, ನಮ್ಮ ತಂಡದ ಸದಸ್ಯರು ಕುಸ್ತಿ ಮತ್ತು ಕುದುರೆ ಸವಾರಿಯಲ್ಲಿ ಆ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ, ಇದರಲ್ಲಿ ಅವರು ಹಿಂದೆಂದೂ ಭಾಗವಹಿಸಿರಲಿಲ್ಲ. ಇದರಿಂದ, ಈ ಬಾರಿ ನಾವು ಕ್ರೀಡೆಯಲ್ಲಿ ವಿಭಿನ್ನ ಮಟ್ಟದ ಉತ್ಸಾಹವನ್ನು ನೋಡುತ್ತೇವೆ ಎಂದು ನೀವು ಕಂಡುಕೊಳ್ಳಬಹುದು.

ಭಾರತದ ಹಿಂದಿನ ಪ್ರದರ್ಶನವನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, "ಕೆಲವು ತಿಂಗಳ ಹಿಂದೆ ನಾವು ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ನಮ್ಮ ಅತ್ಯುತ್ತಮ ಪ್ರದರ್ಶನವನ್ನು ಪ್ರದರ್ಶಿಸಿದ್ದೇವೆ. ನಮ್ಮ ಆಟಗಾರರು ಚೆಸ್ ಮತ್ತು ಬ್ಯಾಡ್ಮಿಂಟನ್ ನಲ್ಲೂ ಅದ್ಭುತ ಸಾಧನೆ ಮಾಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡುವ ರಾಷ್ಟ್ರದ ಸಾಮೂಹಿಕ ಭರವಸೆಯನ್ನು ಪ್ರಧಾನಿ ತಿಳಿಸಿದರು, ಪ್ರತಿಯೊಬ್ಬರೂ #Cheer4Bharat ಹ್ಯಾಶ್ ಟ್ಯಾಗ್ ಬಳಸಿ ಕ್ರೀಡಾಪಟುಗಳ ಹಿಂದೆ ನಿಲ್ಲಬೇಕು ಎಂದು ಒತ್ತಾಯಿಸಿದರು.

ಮುಂಬರುವ ದಿನಗಳಲ್ಲಿ, ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ತಂಡವನ್ನು ಭೇಟಿಯಾಗಲಿದ್ದೇನೆ ಮತ್ತು ಇಡೀ ರಾಷ್ಟ್ರದ ಪರವಾಗಿ ಅವರನ್ನು ಪ್ರೋತ್ಸಾಹಿಸುತ್ತೇನೆ ಎಂದು ಅವರು ಉಲ್ಲೇಖಿಸಿದ್ದಾರೆ.

'ಮನ್ ಕಿ ಬಾತ್' ನ 111 ನೇ ಸಂಚಿಕೆಯಲ್ಲಿ ಪ್ರಧಾನಿ ಅವರ ಪೂರ್ಣ ಭಾಷಣವನ್ನು ಓದಲು, ಇಲ್ಲಿ ಕ್ಲಿಕ್ ಮಾಡಿ.

https://pib.gov.in/PressReleseDetail.aspx?PRID=2029641

*****



(Release ID: 2029815) Visitor Counter : 5