ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ನಡೆಸುತ್ತಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕಾರ್ಯಕ್ಷಮತೆಯನ್ನು ಶ್ರೀ ಜಿತನ್ ರಾಮ್ ಮಾಂಝಿ ಪರಿಶೀಲಿಸಿದರು
Posted On:
29 JUN 2024 1:08PM by PIB Bengaluru
ಕೇಂದ್ರ ಎಂಎಸ್‌ಎಂಇ ಸಚಿವ ಶ್ರೀ ಜಿತನ್ ರಾಮ್ ಮಾಂಝಿ ಮತ್ತು ಎಂಎಸ್‌ಎಂಇ ರಾಜ್ಯ ಖಾತೆ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ದೇಶದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ (ಕೆವಿಐ) ವಲಯದ ಅಭಿವೃದ್ಧಿಗಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ನಡೆಸುತ್ತಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಕಾರ್ಯಕ್ಷಮತೆಯನ್ನು ಕೆವಿಐಸಿ ಅಧ್ಯಕ್ಷ ಶ್ರೀ ಮನೋಜ್ ಕುಮಾರ್ ಅವರೊಂದಿಗೆ ಪರಿಶೀಲಿಸಿದರು. ಈ ವೇಳೆ ಎಂಎಸ್‌ಎಂಇ ಸಚಿವಾಲಯ ಮತ್ತು ಕೆವಿಐಸಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆವಿಐ ವಲಯವನ್ನು ಉತ್ತೇಜಿಸುವ ಮತ್ತು ಖಾದಿ ಕುಶಲಕರ್ಮಿಗಳನ್ನು ಬೆಂಬಲಿಸುವ ಯೋಜನೆಗಳ ಅನುಷ್ಠಾನದ ಮೇಲೆ ಕೇಂದ್ರೀಕೃತ ವಿಧಾನದ ಮೂಲಕ ಪ್ರಯತ್ನಗಳನ್ನು ಆಳಗೊಳಿಸುವ ಹಾಗೂ ವಿಸ್ತರಿಸುವ ಅಗತ್ಯವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು.
*****
(Release ID: 2029596)
Visitor Counter : 57