ಪ್ರಧಾನ ಮಂತ್ರಿಯವರ ಕಛೇರಿ

ತುರ್ತು ಪರಿಸ್ಥಿತಿಯನ್ನು ಖಂಡಿಸಿದ ಲೋಕಸಭಾ ಸ್ಪೀಕರ್ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 26 JUN 2024 2:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ತುರ್ತು ಪರಿಸ್ಥಿತಿ ಮತ್ತು ತದನಂತರದ ಅತಿರೇಕ ಪರಿಣಾಮಗಳನ್ನು ಬಲವಾಗಿ ಖಂಡಿಸಿದ ಗೌರವಾನ್ವಿತ ಲೋಕಸಭಾ ಸ್ಪೀಕರ್ ಅವರನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು Xನ ಪೋಸ್ಟ್ ನಲ್ಲಿ:

"ಗೌರವಾನ್ವಿತ ಸ್ಪೀಕರ್ ಅವರು ತುರ್ತು ಪರಿಸ್ಥಿತಿಯನ್ನು ಬಲವಾಗಿ ಖಂಡಿಸಿದ್ದು, ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಅತಿರೇಕಗಳನ್ನು ಎತ್ತಿ ತೋರಿಸಿದ್ದಾರೆ. ಪ್ರಜಾಪ್ರಭುತ್ವದ ಕತ್ತು ಹಿಸುಕಿದ ವಿಧಾನವನ್ನು ಪರಿಣಾಮಕಾರಿಯಾಗಿ ಅವರು ಉಲ್ಲೇಖಿಸಿದ್ದಾರೆ ಎಂದು ನನಗೆ ಸಂತೋಷವಾಗಿದೆ. ಆ ದಿನಗಳಲ್ಲಿ ಕಷ್ಟ-ನಷ್ಟಗಳನ್ನು ಅನುಭವಿಸಿದ ಎಲ್ಲರ ಗೌರವಾರ್ಥವಾಗಿ ಮೌನಾಚರಣೆಯು ಒಂದು ಅದ್ಭುತ ಸೂಚನೆಯಾಗಿದೆ."

"ತುರ್ತು ಪರಿಸ್ಥಿತಿಯನ್ನು 50 ವರ್ಷಗಳ ಹಿಂದೆ ಹೇರಲಾಯಿತು, ಆದರೆ ಇಂದಿನ ಯುವಕರು ಅದರ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಸಂವಿಧಾನದ ಕತ್ತು ಹಿಸುಕಿದಾಗ, ಸಾರ್ವಜನಿಕ ಅಭಿಪ್ರಾಯವನ್ನು ತುಳಿದು ಹಾಕಿದಾಗ, ಸಂಘಟನೆಗಳು ನಾಶವಾದಾಗ ಏನಾಗುತ್ತದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆಯಾಗಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಘಟನೆಗಳು ಸರ್ವಾಧಿಕಾರಕ್ಕೆ ಒಂದು ಉದಾಹರಣೆಯಾಗಿದೆ" ಎಂದು ಬರೆದಿದ್ದಾರೆ.

 

 

*****



(Release ID: 2028927) Visitor Counter : 10