ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಮಾರುಕಟ್ಟೆ ನಿರ್ವಹಣೆಗೆ ಸಾಕಷ್ಟು ಗೋಧಿ ದಾಸ್ತಾನು ಲಭ್ಯವಿದೆ: ಕೇಂದ್ರ


ಜೂನ್ 18, 2024 ರವರೆಗೆ 266 LMT ಗೋಧಿಯನ್ನು ಸಂಗ್ರಹಿಸಲಾಗಿದೆ; 2023 ರ ಇದೇ ಸಮಯದಲ್ಲಿ ಸಂಗ್ರಹಣೆಯು 262 LMT ಆಗಿತ್ತು

Posted On: 20 JUN 2024 3:50PM by PIB Bengaluru

ಅಗತ್ಯ ವಸ್ತುಗಳ ಬೆಲೆಗಳ ಕುರಿತು ಪರಿಶೀಲಿಸಲು ಇಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರ ಅಧ್ಯಕ್ಷತೆಯಲ್ಲಿ ಸಚಿವರ ಸಮಿತಿಯ ಸಭೆ ನಡೆಯಿತು.

ಗೋಧಿ ದಾಸ್ತಾನು ಮತ್ತು ಬೆಲೆಗಳ ಕುರಿತು ಚರ್ಚೆ ನಡೆಸಲಾಯಿತು. RMS 2023 ರಲ್ಲಿ 262 LMT ಸಂಗ್ರಹಣೆ ಗೋಧಿ ಇತ್ತು. ಈಗ ಅದೇ ಅವಧಿಯ ಅಂದರೆ RMS 2024 ರ  ಜೂನ್‌ 18ರವರೆಗೆ 266 LMT ಗೋಧಿಯನ್ನು ಸಂಗ್ರಹಿಸಲಾಗಿದೆ. PDS ಮತ್ತು ಇತರ ಕಲ್ಯಾಣ ಯೋಜನೆಗಳ ಅಗತ್ಯ  ಪೂರೈಸಿದ ನಂತರ, ಸುಮಾರು 184 LMT ಯಷ್ಟು ದಾಸ್ತಾನು ಲಭ್ಯವಿದೆ.

ಗೋಧಿ ಬೆಲೆಗಳ ಮೇಲೆ ನಿಕಟ ನಿಗಾ ಇಡಬಹುದು ಮತ್ತು ದೇಶದ ಗ್ರಾಹಕರಿಗೆ ಬೆಲೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ನೀತಿ ಕ್ರಮ ತೆಗೆದುಕೊಳ್ಳಬಹುದು ಎಂದು ಕೇಂದ್ರ ಸಚಿವರು ನಿರ್ದೇಶನ ನೀಡಿದರು.

 

*****



(Release ID: 2028000) Visitor Counter : 22