ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

'ದಿ ಮ್ಯಾಜಿಕ್ ಆಫ್ AI (ಕೃತಕ ಬುದ್ದಿಮತ್ತೆ)' ಕುರಿತು MIFF ಚರ್ಚೆ; ಚಲನಚಿತ್ರ ಉದ್ಯಮದಲ್ಲಿ ತಂತ್ರಜ್ಞಾನದ ಅನುಕೂಲಗಳು ಮತ್ತು ಅನಾನುಕೂಲ ಬಗ್ಗೆ ಸಮಾಲೋಚನೆ


MIFF-2024 ಪ್ಯಾನೆಲ್ ಚಲನಚಿತ್ರ ನಿರ್ಮಾಣದ ಮೇಲೆ AI ಕ್ರಾಂತಿಕಾರಿ ಪರಿಣಾಮಗಳ ಬಗ್ಗೆ ಸಮಾಲೋಚನೆ

Posted On: 17 JUN 2024 6:30PM by PIB Bengaluru

ಮುಂಬೈ ಇಂಟರ್‌ ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್ (MIFF) 2024 ವೇಳೆ ಚಲನಚಿತ್ರೋದ್ಯಮದಲ್ಲಿ ಕೃತಕ ಬುದ್ಧಿಮತ್ತೆಯ (AI) ಪ್ರಭಾವದ ಕುರಿತು ಸಮಾಲೋಚನೆ ನಡೆಸಲಾಯಿತು. 'ದಿ ಮ್ಯಾಜಿಕ್ ಆಫ್ AI' ಎಂಬ ಶೀರ್ಷಿಕೆಯ ಈ ಅಧಿವೇಶನವು ಚಲನಚಿತ್ರ ನಿರ್ಮಾಣದಲ್ಲಿ AI ತಂತ್ರಜ್ಞಾನದ ವ್ಯಾಪ್ತಿ, ಅನ್ವಯಗಳು ಮತ್ತು ನೈತಿಕ ಪರಿಗಣನೆಗಳ ಮೇಲೆ ಕೇಂದ್ರೀಕರಿಸಲಾಯಿತು. ಪ್ಯಾನಲಿಸ್ಟ್‌ಗಳು AI ಯ ಅನುಕೂಲಗಳು ಮತ್ತು ಸಂಭಾವ್ಯ ನ್ಯೂನತೆಗಳೆರಡನ್ನೂ ಚರ್ಚಿಸಿದರು, ಉದ್ಯಮದ ಮೇಲೆ ಅದರ ಪ್ರಭಾವದ ಸಮಗ್ರ ಅವಲೋಕನ ಮಾಡಿದರು.

ಈ ಚರ್ಚೆಯಲ್ಲಿ ಚಲನಚಿತ್ರೋದ್ಯಮದ ಪ್ರಸಿದ್ಧ ವ್ಯಕ್ತಿಗಳನ್ನು ಮತ್ತು AI ತಜ್ಞರು ಪಾಲ್ಗೊಂಡಿದ್ರು. ಶಂಕರ್ ರಾಮಕೃಷ್ಣನ್, ಹಿರಿಯ ಚಲನಚಿತ್ರ ನಿರ್ಮಾಪಕ ಮತ್ತು ತಿರುವನಂತಪುರದ AI ತಜ್ಞರು; ಉಜ್ವಲ್ ನಿರ್ಗುಡ್ಕರ್, ಸೊಸೈಟಿ ಆಫ್ ಮೋಷನ್ ಪಿಕ್ಚರ್ & ಟೆಲಿವಿಷನ್ ಇಂಜಿನಿಯರ್ಸ್, ಇಂಡಿಯಾ ಅಧ್ಯಕ್ಷ ಮತ್ತು ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್‌ನ ತಾಂತ್ರಿಕ ಸಲಹೆಗಾರ; ಫೈರ್‌ಫ್ಲೈ ಕ್ರಿಯೇಟಿವ್ ಸ್ಟುಡಿಯೋದಲ್ಲಿ ಸಹಸಂಸ್ಥಾಪಕ ಮತ್ತು ನಿರ್ದೇಶಕ ಸನತ್ ಪಿ.ಸಿ ಮತ್ತು ಚಿತ್ಕಾರ ವಿಶ್ವವಿದ್ಯಾಲಯದ ಅನಿಮೇಷನ್ ಮತ್ತು ವಿನ್ಯಾಸದ ಡೀನ್ ಸಂಜಯ್ ಜಂಗಿದ್, ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವಿಜ್ಞಾನ ಪ್ರಸಾರದ ಜೊತೆಗೆ ವಿಜ್ಞಾನ ಸಂವಹನಕಾರ ಮತ್ತು ವಿಜ್ಞಾನ ಚಲನಚಿತ್ರ ಕ್ಯುರೇಟರ್ ಡಾ.ನಿಮಿಶ್ ಕಪೂರ್ ಅವರು ಭಾಗವಹಿಸಿದ್ದರು. 

ಶಂಕರ್ ರಾಮಕೃಷ್ಣನ್ ಅವರು ಚಲನಚಿತ್ರ ನಿರ್ಮಾಣಕ್ಕೆ AI ತರುತ್ತಿರುವ ಕ್ರಿಯಾಶೀಲತೆ, ಅದರಿಂದ ಆಗುತ್ತಿರುವ ಪ್ರಯೋಜನಗಳ ಬಗ್ಗೆ ಗಮನಸೆಳೆದರು. AI ಫಿಲ್ಮ್ ಸೆಟ್‌ಗಳಲ್ಲಿ ಹಲವಾರು ಕಾರ್ಯಗಳನ್ನು ನಿಖರವಾಗಿ ನಿರ್ವಹಿಸುತ್ತದೆ, ಪ್ರತಿ ಕೆಲಸಕ್ಕೆ ಬೇಕಾದ ಸಮಯವನ್ನು ಕಡಿಮೆ ಮಾಡುತ್ತದೆ. AI ಮಾನವ ಶ್ರಮದ ಅಗತ್ಯವನ್ನು ಕಡಿಮೆ ಮಾಡುತ್ತದೆ, ಆದರೆ ಜನರು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತರಾಗುವಂತೆ ಮಾಡುತ್ತದೆ ಎಂದು ಅವರು ತಿಳಿಸಿದರು.

"ಎಲ್ಲಾ ರೀತಿಯ ಕೆಲಸಗಳನ್ನು AI ನಲ್ಲಿ ಕೇವಲ ಒಂದು ಕ್ಲಿಕ್‌ನಲ್ಲಿ ನಿರ್ವಹಿಸಬಹುದು, ಆದರೆ ನಮಗಾಗಿ ನಮ್ಮ ಕೆಲಸವನ್ನು ಮಾಡುವ ಮೂಲಕ ಸೋಮಾರಿಗಳನ್ನಾಗಿ ಮಾಡಬಹುದು" ಎಂದು ತಿಳಿಸಿದರು.

ಉಜ್ವಲ್ ನಿರ್ಗುಂಕರ್ ಅವರು ತಂತ್ರಜ್ಞಾನದ ವಿಕಸನ ಮತ್ತು ನಿರಂತರ ನವೀಕರಣಗಳ ಅಗತ್ಯವನ್ನು ಒತ್ತಿ ಹೇಳಿದರು. ಮುನ್ಸೂಚನೆಗಳನ್ನು ಮಾಡಲು ಡೇಟಾದಲ್ಲಿನ ಮಾದರಿಗಳನ್ನು ಅವಲಂಬಿಸಿರುವ ಸಾಂಪ್ರದಾಯಿಕ AI ಮತ್ತು ಒಂದೇ ರೀತಿಯ ಡೇಟಾವನ್ನು ರಚಿಸಲು ಅಸ್ತಿತ್ವದಲ್ಲಿರುವ ಡೇಟಾದಿಂದ ಕಲಿಯುವ ಉತ್ಪಾದಕ AI ನಡುವಿನ ವ್ಯತ್ಯಾಸವನ್ನು ಅವರು ವಿವರಿಸಿದರು. ಚಲನಚಿತ್ರೋದ್ಯಮದಲ್ಲಿ ಹೊಸಬರು ಮತ್ತು ಸೃಷ್ಟಿಕರ್ತರಿಗೆ ವೇದಿಕೆ ಒದಗಿಸುತ್ತಿರುವ AI ಸಾಮರ್ಥ್ಯವನ್ನು ತಿಳಿಸಿದರು. AI ಯೋಜನೆಗಳಿಗೆ ಅಗತ್ಯವಾದ ಘಟಕಗಳನ್ನು ಹೇಗೆ ಸೂಚಿಸಬಹುದು, ಆದರೆ ಅದನ್ನು ಹೇಗೆ ನೈತಿಕವಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಸನತ್ ಪಿ.ಸಿ. AI ಯ ಸಾಮರ್ಥ್ಯಗಳು ಮತ್ತು ಚಲನಚಿತ್ರಗಳಲ್ಲಿ ಕಥೆ ಹೇಳುವಿಕೆಯನ್ನು ಹೆಚ್ಚಿಸುವಲ್ಲಿ ಅದರ ಪಾತ್ರವನ್ನು ಚರ್ಚಿಸಲಾಗಿದೆ. ಜವಾಬ್ದಾರಿಯುತ ಬಳಕೆಯ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲಿದರು. ಯಾವುದೇ ಸಾಫ್ಟ್‌ವೇರ್ ಅಥವಾ ತಂತ್ರಜ್ಞಾನವನ್ನು ಮಾನವರು ಹೇಗೆ ನಿಯಂತ್ರಿಸುತ್ತಾರೆ ಮತ್ತು ನಮ್ಮ ಅಗತ್ಯಗಳಿಗೆ ಅನುಗುಣವಾಗಿ ಮಾರ್ಪಡಿಸಬಹುದು. AI ಅನ್ನು ಜವಾಬ್ದಾರಿಯುತವಾಗಿ ಬಳಸುವುದು ನಮ್ಮ ಜವಾಬ್ದಾರಿ ಎಂಬುದನ್ನು ಅವರು ನೆನಪಿಸಿದರು.

ಸಂಜಯ್ ಜಂಗಿದ್ ಅವರು AI ಯ ಸಂಭಾವ್ಯ ಪ್ರಭಾವವನ್ನು ಹಿಂದಿನ ತಾಂತ್ರಿಕ ಕ್ರಾಂತಿಗಳಾದ ವಿದ್ಯುತ್, ಇಂಟರ್ನೆಟ್ ಮತ್ತು ಮೊಬೈಲ್ ಫೋನ್‌ಗಳಿಗೆ ಹೋಲಿಸಿದ್ದಾರೆ. ಅವರು ನೈತಿಕ ಬಳಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, AI ಅನ್ನು ಶಾರ್ಟ್‌ಕಟ್‌ನಂತೆ ಬಳಸುವುದರ ವಿರುದ್ಧ ಎಚ್ಚರಿಕೆ ನೀಡಿದರು. "ನೀವು ಕಸವನ್ನು ಹಾಕಿದರೆ, ನೀವು ಕಸವನ್ನು ಹೊರಹಾಕುತ್ತೀರಿ. ನಾವು AI ಅನ್ನು ಎಚ್ಚರಿಕೆಯಿಂದ ಮತ್ತು ಒಳ್ಳೆಯ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು" ಎಂದು ಅವರು ಗಮನ ಸೆಳೆದರು.

ನೈತಿಕ ಪರಿಗಣನೆಗಳು ಮತ್ತು ಜವಾಬ್ದಾರಿಯುತ ಬಳಕೆಯ ಅಗತ್ಯವನ್ನು ಎತ್ತಿ ತೋರಿಸುವಾಗ ಚಲನಚಿತ್ರೋದ್ಯಮವನ್ನು ಕ್ರಾಂತಿಗೊಳಿಸುವ AI ಯ ಸಾಮರ್ಥ್ಯ ಬಗ್ಗೆ ಚರ್ಚಾಕೂಟದಲ್ಲಿ ವಿವರಿಸಲಾಯಿತು. 

ಪ್ಯಾನೆಲಿಸ್ಟ್‌ಗಳ ಒಳನೋಟಗಳು AI ಯುಗದಲ್ಲಿ ಚಲನಚಿತ್ರ ನಿರ್ಮಾಣದ ಭವಿಷ್ಯದ ಬಗ್ಗೆ ಮೌಲ್ಯಯುತವಾದ ದೃಷ್ಟಿಕೋನಗಳನ್ನು ಒದಗಿಸಿವೆ.

*****


(Release ID: 2026144) Visitor Counter : 47