ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪಾದಹಸ್ತಾಸನದ ವಿಡಿಯೊ ತುಣುಕುಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ

प्रविष्टि तिथि: 16 JUN 2024 10:10AM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಪಾದಹಸ್ತಾಸನ ಅಥವಾ ಕೈಯನ್ನು ಕೆಳಗೆ ಪಾದದವರೆಗೆ ಬಾಗಿಸಿ ನಿಲ್ಲುವ ಭಂಗಿಯ ಬಗ್ಗೆ ವಿವರವಾದ ವಿಡಿಯೊ ತುಣುಕುಗಳನ್ನು ಹಂಚಿಕೊಂಡಿದ್ದಾರೆ, ಈ ಆಸನ ಬೆನ್ನುಮೂಳೆಗೆ ಬಹಳ ಒಳ್ಳೆಯದು ಮತ್ತು ಹೆಣ್ಣುಮಕ್ಕಳು ಋತುಚಕ್ರದ ಸಮಯದಲ್ಲಿ ಹೊಟ್ಟೆ ನೋವಿನಿಂದ ಬಳಲುವ ಸಮಸ್ಯೆ ನಿವಾರಣೆಗೆ ಈ ಆಸನ ನಿಯಮಿತವಾಗಿ ಮಾಡುತ್ತಾ ಬಂದರೆ ಉತ್ತಮ. ಜನರು ಈ ಆಸನವನ್ನು ಮಾಡುವಂತೆ ಒತ್ತಾಯಿಸಿದ್ದಾರೆ. 

ಅಂತಾರಾಷ್ಟ್ರೀಯ ಯೋಗ ದಿನದ 10 ನೇ ಆವೃತ್ತಿಯ ಪೂರ್ವಭಾವಿಯಾಗಿ ಇದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಕ್ಲಿಪ್‌ ನಲ್ಲಿ ಆಸನ ಮಾಡುವ ವಿಧಾನವನ್ನು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ವಿವರಿಸಲಾಗಿದೆ. 

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ವಿಡಿಯೊ ತುಣುಕನ್ನು ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು:

"ಪಾದಹಸ್ತಾಸನವು ಹಲವು ಪ್ರಯೋಜನಗಳನ್ನು ಹೊಂದಿದೆ...ಇದನ್ನು ಎಲ್ಲರೂ ಅಭ್ಯಾಸ ಮಾಡಿ."ಎಂದು ಬರೆದಿದ್ದಾರೆ.

 

 

*****


(रिलीज़ आईडी: 2025770) आगंतुक पटल : 88
इस विज्ञप्ति को इन भाषाओं में पढ़ें: English , Urdu , Marathi , हिन्दी , Hindi_MP , Bengali , Assamese , Manipuri , Punjabi , Gujarati , Odia , Tamil , Telugu , Malayalam