ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕಾರ್ಮಿಕ ಕಾರ್ಯದರ್ಶಿಯವರ  ಅಧ್ಯಕ್ಷತೆಯಲ್ಲಿ ನೌಕರರ  ಭವಿಷ್ಯ ನಿಧಿ ಸಂಘಟನೆಯ  ಸುಧಾರಣೆಗಳ ಪರಿಶೀಲನಾ ಸಭೆ

Posted On: 14 JUN 2024 11:14AM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಸುಮಿತಾ ದಾವ್ರಾ ಅವರು 13ನೇ ಜೂನ್ 2024 ರಂದು ನೌಕರರ ಭವಿಷ್ಯ ನಿಧಿ ಸಂಘಟನೆಯ  (ಇಪಿಎಫ್ಒ)ಸುಧಾರಣೆಗಳ ಅಧ್ಯಯನ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ   ಶ್ರೀಮತಿ ನೀಲಮ್ ಶಮಿ ರಾವ್ ಸಿಪಿಎಫ್ ಸಿ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ  ಮತ್ತು ಇಪಿಎಫ್ ಒದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
 
ಕ್ಲೈಮ್ ವಿಲೇವಾರಿಯನ್ನು  ಸ್ವಯಂಚಾಲಿತಗೊಳಿಸಲು ಮತ್ತು ಕ್ಲೈಮ್ ಗಳ ನಿರಾಕರಣೆಗಳನ್ನು ಕಡಿಮೆ ಮಾಡಲು ಇಪಿಎಫ್ಒನ ಇತ್ತೀಚಿನ ಕ್ರಮಗಳನ್ನು ಶ್ರೀಮತಿ ದಾವ್ರಾ ಶ್ಲಾಘಿಸಿದರು. ಕ್ಲೈಮ್ಗಳ ತ್ವರಿತ ವಿಲೇವಾರಿಗಾಗಿ, ಅನಾರೋಗ್ಯ, ಶಿಕ್ಷಣ, ಮದುವೆ ಮತ್ತು ಮನೆಗಳಿಗೆ 1 ಲಕ್ಷದವರೆಗಿನ ಮುಂಗಡಗಳ ಸ್ವಯಂ ವಿಲೇವಾರಿಯನ್ನು  ಇಪಿಎಫ್ಒ ಜಾರಿಗೆ ತಂದಿದೆ.  ಸ್ವಯಂಚಾಲಿತ ವ್ಯವಸ್ಥೆಯಲ್ಲಿ  ಸುಮಾರು 25 ಲಕ್ಷ ಮುಂಗಡ ಕ್ಲೈಮ್  ಗಳನ್ನು ವಿಲೇವಾರಿ ಮಾಡಲಾಗಿದೆ. ಇಲ್ಲಿಯವರೆಗೆ 50% ಕ್ಕಿಂತ ಹೆಚ್ಚು ಅನಾರೋಗ್ಯದ ಕ್ಲೈಮ್ಗಳನ್ನು ಸ್ವಯಂಚಾಲಿತ ವ್ಯವಸ್ಥೆಯಲ್ಲಿ   ವಿಲೇವಾರಿ ಮಾಡಲಾಗಿದೆ. ಇದು ಕ್ಲೈಮ್ಗಳ  ವಿಲೇವಾರಿಯ ವೇಗವನ್ನು ಹೆಚ್ಚಿಸಿದೆ ಮತ್ತು ಅವುಗಳಲ್ಲಿ ಹೆಚ್ಚಿನ ಸಂಖ್ಯೆಯು ಈಗ 3 ದಿನಗಳಲ್ಲಿ ವಿಲೇವಾರಿಯಾಗುತ್ತಿದೆ.

ಸದಸ್ಯರ ಕೆವೈಸಿ ಆಧಾರ್ ಜೋಡಣೆ ಮಾಡಿದ ಖಾತೆಗಳಿಗೆ ಬ್ಯಾಂಕ್ ಖಾತೆಯ ಚೆಕ್ ಬುಕ್/ಪಾಸ್ಬುಕ್ ಅಪ್ಲೋಡ್ ಮಾಡಲಾಗಿದೆ, ಹೀಗಾಗಿ ಕಳೆದ ಒಂದು ತಿಂಗಳಲ್ಲಿ ಸುಮಾರು 13 ಲಕ್ಷ ಕ್ಲೈಮ್ಗಳಲ್ಲಿ ಪರಿಶೀಲನೆಯ ಅಗತ್ಯವನ್ನು ತೆಗೆದುಹಾಕಲಾಗಿದೆ.

ಸದಸ್ಯರಿಗೆ ಸುಲಭವಾಗಿ ಅರ್ಥಮಾಡಿಕೊಳ್ಳಲು ಅಪೂರ್ಣ ಪ್ರಕರಣಗಳ ವಾಪಸಾತಿ ಮತ್ತು ಅನರ್ಹ ಪ್ರಕರಣಗಳನ್ನು ತಿರಸ್ಕರಿಸುವ ಪ್ರಕ್ರಿಯೆಯನ್ನು ಇಪಿಎಫ್ಒ ಸರಳೀಕರಿಸಿದೆ ಮತ್ತು ತರ್ಕಬದ್ಧಗೊಳಿಸಿದೆ.

ಏಪ್ರಿಲ್-24 ರಲ್ಲಿ 2 ಲಕ್ಷದಿಂದ ಮೇ-2024 ರಲ್ಲಿ 6 ಲಕ್ಷಕ್ಕೆ ಏರಿಕೆಯಾಗುವುದರೊಂದಿಗೆ ಸ್ವಯಂ ವರ್ಗಾವಣೆಗಳ ಸಂಖ್ಯೆಯು ಮೂರು ಪಟ್ಟು ಹೆಚ್ಚಾಗಿದೆ. ವ್ಯವಸ್ಥಿತ ಸುಧಾರಣೆಗಳಿಗಾಗಿ ಪೂರ್ವಭಾವಿ ಕ್ರಮಗಳನ್ನು ಮುಂದುವರಿಸಲು ಇಪಿಎಫ್ಒಗೆ ಶ್ರೀಮತಿ ದಾವ್ರಾ ಸಲಹೆ ನೀಡಿದರು.

ಇಪಿಎಫ್ಒ ತನ್ನ ಅಪ್ಲಿಕೇಶನ್ ಸಾಫ್ಟ್ವೇರ್ ಅನ್ನು ಪ್ರತಿ ಸದಸ್ಯರಿಗೆ ಯುಎಎನ್ ಆಧಾರಿತ ಸಿಂಗಲ್ ಅಕೌಂಟಿಂಗ್ ಸಿಸ್ಟಮ್ನೊಂದಿಗೆ ಸುಧಾರಿಸುವ ಪ್ರಕ್ರಿಯೆಯಲ್ಲಿದೆ ಮತ್ತು ಕನಿಷ್ಠ ಮಾನವ ಹಸ್ತಕ್ಷೇಪದೊಂದಿಗೆ ಕ್ಲೈಮ್ಗಳನ್ನು ವೇಗವಾಗಿ ಇತ್ಯರ್ಥಪಡಿಸಲು ಸ್ವಯಂಚಾಲಿತಗೊಳಿಸುತ್ತಿದೆ. ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (ಸಿಡಿಎಸಿ) ಸಮಾಲೋಚನೆಯೊಂದಿಗೆ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಸಾಮಾಜಿಕ ಭದ್ರತೆ ವಿಸ್ತರಣೆ ಮತ್ತು ಜೀವನದಲ್ಲಿ ಸರಳತೆ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಹೊಸ ಉಪಕ್ರಮಗಳ ಅಗತ್ಯವನ್ನು ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ವ್ಯಾಜ್ಯ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆಯಲ್ಲಿನ ಕಾರ್ಯಾಚರಣೆ ಸುಧಾರಣೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಪರಿಣಾಮಕಾರಿ ಸಾಮಾಜಿಕ ಭದ್ರತಾ ವ್ಯವಸ್ಥೆಗಾಗಿ ಅಧಿಕಾರಿಗಳು ನಿಕಟ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಶ್ರೀಮತಿ ದಾವ್ರಾ ಒತ್ತಾಯಿಸಿದರು.

*****
 .



(Release ID: 2025520) Visitor Counter : 20