ವಾರ್ತಾ ಮತ್ತು ಪ್ರಸಾರ ಸಚಿವಾಲಯ

ನ್ಯಾಷನಲ್ ಜಿಯಾಗ್ರಫಿಕ್‌ ನ ಬಿಲ್ಲಿ ಅಂಡ್‌ ಮೊಲ್ಲಿ: ಆನ್ ಒಟ್ಟರ್‌ ಲವ್ ಸ್ಟೋರಿ 18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಉದ್ಘಾಟನಾ ಚಿತ್ರವಾಗಿ ಪ್ರದರ್ಶನವಾಗಲಿದೆ


ಬಿಲ್ಲಿ ಅಂಡ್ ಮೊಲ್ಲಿ ಅಮಿತವಾದ ಪ್ರೀತಿಯ ಆಳವನ್ನು ಮತ್ತು ಮನುಷ್ಯರು ಮತ್ತು ಪ್ರಕೃತಿಯ ನಡುವಿನ ಗಾಢವಾದ ಬಂಧವನ್ನು ಅನ್ವೇಷಿಸುತ್ತದೆ

Posted On: 13 JUN 2024 1:57PM by PIB Bengaluru

ನ್ಯಾಷನಲ್ ಜಿಯಾಗ್ರಫಿಕ್‌ ನ ಸಾಕ್ಷ್ಯಚಿತ್ರ, ಬಿಲ್ಲಿ ಅಂಡ್ ಮೊಲ್ಲಿ: ಆನ್ ಒಟ್ಟರ್ ಲವ್ ಸ್ಟೋರಿ, 18 ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಎಂ ಐ ಎಫ್‌ ಎಫ್‌) ಉದ್ಘಾಟನಾ ಪ್ರದರ್ಶನವಾಗಿರುತ್ತದೆ. ಎಂ ಐ ಎಫ್‌ ಎಫ್‌ ಮುಂಬೈನಲ್ಲಿ 15 ಜೂನ್ 2024 ರಿಂದ 21 ಜೂನ್ 2024 ರವರೆಗೆ ನಡೆಯಲಿದೆ. ಉದ್ಘಾಟನಾ  ಚಿತ್ರವು ಜೂನ್ 15 ರಂದು ದೆಹಲಿ, ಕೋಲ್ಕತ್ತಾ, ಚೆನ್ನೈ ಮತ್ತು ಪುಣೆಯಲ್ಲಿ ಏಕಕಾಲದಲ್ಲಿ ಪ್ರದರ್ಶನಗೊಳ್ಳಲಿದೆ. ಜೂನ್ 17 ರಂದು ದೆಹಲಿ, ಜೂನ್ 18 ರಂದು ಚೆನ್ನೈ, ಜೂನ್ 19 ರಂದು ಕೋಲ್ಕತ್ತಾ ಮತ್ತು ಜೂನ್ 20 ರಂದು ಪುಣೆಯಲ್ಲಿ ರೆಡ್ ಕಾರ್ಪೆಟ್ ಸಮಾರಂಭದಲ್ಲಿ ಸಹ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

ಚಾರ್ಲಿ ಹ್ಯಾಮಿಲ್ಟನ್ ಜೇಮ್ಸ್ ನಿರ್ದೇಶನದ ಬಿಲ್ಲಿ ಅಂಡ್ ಮೊಲ್ಲಿ: ಆನ್ ಒಟ್ಟರ್ ಲವ್ ಸ್ಟೋರಿ (ಇಂಗ್ಲಿಷ್ - 78 ನಿಮಿಷಗಳು) ದೂರದ ಶೆಟ್‌ಲ್ಯಾಂಡ್ ದ್ವೀಪಗಳಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಕಾಡಿನ ನೀರುನಾಯಿಯೊಂದಿಗೆ ಸ್ನೇಹವನ್ನು ಸಂಪಾದಿಸುವ ಹೃದಯಸ್ಪರ್ಶಿ ಕಥೆಯಾಗಿದೆ. ಈ ಆಕರ್ಷಕ ಸಾಕ್ಷ್ಯಚಿತ್ರವು ಸ್ಕಾಟಲ್ಯಾಂಡ್‌ನ ಶೆಟ್‌ಲ್ಯಾಂಡ್ ದ್ವೀಪಗಳ ಮೋಡಿಮಾಡುವ ತೀರವನ್ನು ಮೊಲ್ಲಿ ಎಂಬ ಅನಾಥ ನೀರುನಾಯಿಯ ಹೃದಯಸ್ಪರ್ಶಿ ಪ್ರಯಾಣದ ಮೂಲಕ ಅನ್ವೇಷಿಸುತ್ತದೆ. ಮೊಲ್ಲಿಯು ಬಿಲ್ಲಿ ಮತ್ತು ಸುಸಾನ್‌ ರ ಏನಿರ್ಜನವಾದ ಜೆಟ್ಟಿಯನ್ನು ಸೇರಿದಾಗ, ಅವರ ಕಾಳಜಿ ಮತ್ತು ವಾತ್ಸಲ್ಯದಿಂದ ಅವರಿಗೆ ಹತ್ತಿರವಾಗುತ್ತಾಳೆ. ಮೊಲ್ಲಿಯ ಲವಲವಿಕೆಯ ಸ್ವಭಾವದಿಂದ ಬಿಲ್ಲಿಯು ಆಕರ್ಷಿತರಾಗುತ್ತಾರೆ, ಅವರ ನಡುವೆ ಆಳವಾದ ಬಂಧವು ರೂಪುಗೊಳ್ಳುತ್ತದೆ, ಶೆಟ್‌ಲ್ಯಾಂಡ್ ನ ಒರಟಾದ ಹಿನ್ನೆಲೆಯು ಪ್ರೀತಿಯ ಕಥೆ ಮತ್ತು ಹಾತೊರೆಯುವಿಕೆಯನ್ನು ಪ್ರಚೋದಿಸುತ್ತದೆ.

ಈ ಚಿತ್ರದಲ್ಲಿ, ವೀಕ್ಷಕರು ಒಡನಾಟದ ಪರಿವರ್ತಕ ಶಕ್ತಿಯನ್ನು ವೀಕ್ಷಿಸುತ್ತಾರೆ. ಬಿಲ್ಲಿಗೆ ಸಾಂತ್ವನ ದೊರೆಯುತ್ತದೆ, ಮೊಲ್ಲಿಯ ಆರೋಗ್ಯ ಮರಳಿ ಅವಳು ಕಾಡಿನ ಜೀವನಕ್ಕೆ ಹೊಂದಿಕೊಳ್ಳುತ್ತಾಳೆ. ಪ್ರೀತಿಯ ಸಂಕೀರ್ಣತೆಗಳು ಮತ್ತು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಇಲ್ಲಿ ಕಾಣಬಹುದು.

ಚಿತ್ರವು ಜೂನ್ 15 ರಂದು ಮಧ್ಯಾಹ್ನ 2.30 ಕ್ಕೆ ಮುಂಬೈನ ಪೆದ್ದರ್ ರಸ್ತೆಯ ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನಿಮಾದಲ್ಲಿ (NMIC) ಪ್ರದರ್ಶನಗೊಳ್ಳಲಿದೆ, ನವದೆಹಲಿ, ಚೆನ್ನೈ, ಕೋಲ್ಕತ್ತಾ ಮತ್ತು ಪುಣೆಯಲ್ಲಿ ಕ್ರಮವಾಗಿ ಸಿರಿ ಫೋರ್ಟ್ ಆಡಿಟೋರಿಯಂ, NFDC ಟ್ಯಾಗೋರ್ ಫಿಲ್ಮ್ ಸೆಂಟರ್, ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (SRFTI) ಮತ್ತು ನ್ಯಾಶನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾದಲ್ಲಿ ಚಲನಚಿತ್ರವನ್ನು ಏಕಕಾಲದಲ್ಲಿ ಪ್ರದರ್ಶಿಸಲಾಗುತ್ತದೆ.

ನಿರ್ದೇಶಕರ ಬಗ್ಗೆ

ಚಾರ್ಲಿ ಹ್ಯಾಮಿಲ್ಟನ್ ಜೇಮ್ಸ್ ಒಬ್ಬ ಪ್ರಸಿದ್ಧ ವನ್ಯಜೀವಿ ಚಲನಚಿತ್ರ ನಿರ್ಮಾಪಕರಾಗಿದ್ದು, ಅವರ ಒನ್ ಲೈಫ್ ಸಾಕ್ಷ್ಯಚಿತ್ರವು ಸುದ್ದಿ ಮತ್ತು ಸಾಕ್ಷ್ಯಚಿತ್ರ ಎಮ್ಮಿ ಪ್ರಶಸ್ತಿಯನ್ನು ಗೆದ್ದಿದೆ. ಅವರು ಮೈ ಹಾಲ್ಸಿಯಾನ್ ರಿವರ್‌ ಸಾಕ್ಷ್ಯಚಿತ್ರದೊಂದಿಗೆ ನಿರ್ದೇಶನವನ್ನು ಪ್ರಾರಂಭಿಸಿದರು, ನಂತರ ಅವರ ಸಾಕ್ಷ್ಯಚಿತ್ರ ಕಿರುಸರಣಿ ಐ ಬಾಟ್ ಎ ರೈನ್‌ ಫಾರೆಸ್ಟ್ ನಲ್ಲಿ ಅಮೆಜಾನ್‌ ನಲ್ಲಿ ಭೂಮಿಯನ್ನು ಖರೀದಿಸಿದ ನಂತರದ ಅವರ ಸಾಹಸಗಳನ್ನು ಚಿತ್ರಿಸುತ್ತದೆ.

18ನೇ ಎಂ ಐ ಎಫ್‌ ಎಫ್ 2024‌ ಕುರಿತು

ಎಂ ಐ ಎಫ್‌ ಎಫ್‌, ದಕ್ಷಿಣ ಏಷ್ಯಾದಲ್ಲಿ ನಾನ್-ಫೀಚರ್ ಫಿಲ್ಮ್‌ಗಳಿಗಾಗಿರುವ ಅತ್ಯಂತ ಹಳೆಯ ಮತ್ತು ದೊಡ್ಡ ಚಲನಚಿತ್ರೋತ್ಸವವೆಂದು ಗುರುತಿಸಲ್ಪಟ್ಟಿದೆ, ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಲನಚಿತ್ರಗಳನ್ನು ಸಂಭ್ರಮಿಸುವ 18 ನೇ ವರ್ಷ ಇದಾಗಿದೆ. ಇದು 1990 ರಲ್ಲಿ ಪ್ರಾರಂಭವಾಯಿತು ಮತ್ತು ಈಗ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಲಾಗುತ್ತಿದೆ, ಎಂ ಐ ಎಫ್‌ ಎಫ್‌ ಪ್ರಪಂಚದಾದ್ಯಂತದ ಸಿನಿ ಉತ್ಸಾಹಿಗಳನ್ನು ಸೆಳೆಯುವ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ವಿಕಸನಗೊಂಡಿದೆ.

38 ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿರುವುದರಿಂದ ಈ ವರ್ಷದ ಉತ್ಸವವು ವಿಶೇಷವಾಗಿದೆ. 1018 ಸಲ್ಲಿಕೆಗಳು ಮತ್ತು ದೆಹಲಿ, ಕೋಲ್ಕತ್ತಾ, ಪುಣೆ ಮತ್ತು ಚೆನ್ನೈನಲ್ಲಿ ಸಮಾನಾಂತರ ಪ್ರದರ್ಶನಗಳು ನಡೆಯುತ್ತಿದ್ದು, ದೇಶದ ಸಂಪೂರ್ಣ ಕ್ಯಾನ್ವಾಸ್ ಅನ್ನು ಒಳಗೊಂಡಿದೆ.

ಈ ವರ್ಷ 300 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. 18 ನೇ ಎಂ ಐ ಎಫ್‌ ಎಫ್ 25 ಕ್ಕೂ ಹೆಚ್ಚು ಮಾಸ್ಟರ್‌ ಕ್ಲಾಸ್‌‌ ಮತ್ತು ಚಲನಚಿತ್ರ ನಿರ್ಮಾತೃಗಳಾದ ಸಂತೋಷ್ ಶಿವನ್, ಆಡ್ರಿಯಸ್ ಸ್ಟೋನಿಸ್, ಕೇತನ್ ಮೆಹ್ತಾ, ಶೌನಕ್ ಸೇನ್, ರಿಚಿ ಮೆಹ್ತಾ ಮತ್ತು ಜಾರ್ಜಸ್ ಶ್ವಿಜ್ಜ್‌ಬೆಲ್‌ ರಂತಹ ಉದ್ಯಮದ ದಿಗ್ಗಜರೊಂದಿಗೆ ಪ್ಯಾನಲ್ ಚರ್ಚೆಗಳನ್ನು ಆಯೋಜಿಸುತ್ತದೆ. ಉತ್ಸವವು ಉದ್ಘಾಟನಾ ಅನಿಮೇಷನ್ ಕ್ರ್ಯಾಶ್ ಕೋರ್ಸ್ ಮತ್ತು ವಿ ಎಫ್‌ ಎಕ್ಸ್‌ ಕಾರ್ಯಾಗಾರ ಸೇರಿದಂತೆ ಹಲವಾರು ಕಮ್ಮಟಗಳನ್ನು ಆಯೋಜಿಸಿದೆ. ಇವುಗಳು ಚಲನಚಿತ್ರ ನಿರ್ಮಾಣದ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ನೀಡುತ್ತವೆ.

 

 



(Release ID: 2025036) Visitor Counter : 30