ವಾರ್ತಾ ಮತ್ತು ಪ್ರಸಾರ ಸಚಿವಾಲಯ

18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುಗಮ ಪ್ರವೇಶಿಸುವಿಕೆಗೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗಿದೆ


ಎಂ ಐ ಎಫ್‌ ಎಫ್ 2024 ರಲ್ಲಿ ವಿಕಲಚೇತನ ವ್ಯಕ್ತಿಗಳ ಭಾಗವಹಿಸುವಿಕೆಯನ್ನು ಸುಲಭಗೊಳಿಸಲು ವಿಶೇಷ ಚಲನಚಿತ್ರ ಪ್ರದರ್ಶನಗಳು

Posted On: 12 JUN 2024 3:58PM by PIB Bengaluru

18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024 ರಲ್ಲಿ ಚಲನಚಿತ್ರಗಳ ಆನಂದವನ್ನು ಸಮಾಜದ ವಿವಿಧ ವರ್ಗಗಳಿಗೆ ಕೊಂಡೊಯ್ಯುವ ವಿಶೇಷ ಪ್ರಯತ್ನದಲ್ಲಿ, ಎನ್‌ ಎಫ್‌ ಡಿ ಸಿ ಯು ಎಂ ಐ ಎಫ್‌ ಎಫ್ ಚಲನಚಿತ್ರೋತ್ಸವ ಸ್ಥಳವನ್ನು ಎಲ್ಲಾ ಸಿನಿಪ್ರಿಯರಿಗೆ ಪ್ರವೇಶಯೋಗ್ಯವನ್ನಾಗಿ ಮಾಡಲು ಪ್ರವೇಶ ಮತ್ತು ಸೇರ್ಪಡೆಯನ್ನು ಉತ್ತೇಜಿಸಲು ಲಾಭೋದ್ದೇಶವಿಲ್ಲದ ಸಂಸ್ಥೆಯಾದ ʼಸ್ವಯಂʼ ಜೊತೆ ಸಹಯೋಗ ಹೊಂದಿದೆ. ಇದಲ್ಲದೇ ವಿಕಲಚೇತನರು ಎಂ ಐ ಎಫ್‌ ಎಫ್ 2024 ರಲ್ಲಿ ಚಲನಚಿತ್ರಗಳನ್ನು ಆನಂದಿಸಲು ಅನುವು ಮಾಡಿಕೊಡಲು ದಿವ್ಯಾಂಗಜನ ಚಲನಚಿತ್ರಗಳು ಎಂಬ ವಿಶೇಷ ಪ್ಯಾಕೇಜ್ ಅನ್ನು ಸಹ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ರಚನಾತ್ಮಕ ಮತ್ತು ಲಾಜಿಸ್ಟಿಕ್ ಬದಲಾವಣೆಗಳ ಮೂಲಕ ಮತ್ತು ಪ್ರವೇಶಿಸುವಿಕೆ ಮಾನದಂಡಗಳಿಗೆ ಉತ್ತಮ ಅಭ್ಯಾಸಗಳನ್ನು ಗುರುತಿಸುವ ಮೂಲಕ, ʼಸ್ವಯಂʼ ಜೊತೆಗಿನ ಪಾಲುದಾರಿಕೆಯು 18ನೇ ಎಂ ಐ ಎಫ್‌ ಎಫ್ ಸ್ಥಳವಾಗಿರುವ ಎನ್‌ ಎಫ್‌ ಡಿ ಸಿ-ಎಫ್‌ ಡಿ ಆವರಣವನ್ನು ವಿಕಲಚೇತನ ಸ್ನೇಹಿಯನ್ನಾಗಿ ಮಾಡಲು ಶ್ರಮಿಸುತ್ತಿದೆ. ಈ ಉಪಕ್ರಮವು ಎಂ ಐ ಎಫ್‌ ಎಫ್ ನ ಇತಿಹಾಸದಲ್ಲಿ ಮೊದಲ ಬಾರಿಗೆ ಚಿತ್ರೋತ್ಸವ ಸ್ಥಳದ ಪ್ರವೇಶಕ್ಕೆ ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡಲಾಗಿದೆ, ಚಲನಚಿತ್ರೋತ್ಸವಗಳ ಕ್ಷೇತ್ರದಲ್ಲಿ ಹೊಸ ಮಾನದಂಡವನ್ನು ನಿಗದಿಪಡಿಸಿದೆ.

ಒಂದು ವಾರದ ಅವಧಿಯ ಕಾರ್ಯಕ್ರಮಕ್ಕೆ ಪ್ರವೇಶಿಸುವಿಕೆ ಪಾಲುದಾರರಾಗಿರುವ ʼಸ್ವಯಂʼ ಸಂಸ್ಥೆಯು ಎಂ ಐ ಎಫ್‌ ಎಫ್ 2024 ನಿಜವಾಗಿಯೂ ಎಲ್ಲರನ್ನೂ ಒಳಗೊಳ್ಳಲು ಮತ್ತು ಪ್ರವೇಶಯೋಗ್ಯವನ್ನಾಗಿಸಲು ಹಲವಾರು ಪ್ರಯತ್ನಗಳನ್ನು ಮಾಡಿದೆ. ಸಂಸ್ಥೆಯು ಎನ್‌ ಎಫ್‌ ಡಿ ಸಿ - ಫಿಲ್ಮ್ಸ್ ಡಿವಿಷನ್ ಆವರಣದಲ್ಲಿ ಉತ್ಸವದ ಸ್ಥಳದಲ್ಲಿ ಪ್ರವೇಶಕ್ಕೆ ಸಂಬಂಧಿಸಿದಂತೆ ಸಮಗ್ರ ಪರಿಶೋಧನೆಗಳನ್ನು ನಡೆಸಿತು, ಸಾರ್ವತ್ರಿಕ ಉತ್ತಮ ಅಭ್ಯಾಸಗಳಿಗೆ ಅನುಗುಣವಾಗಿ ಪ್ರವೇಶವನ್ನು ಹೆಚ್ಚಿಸಲು ಸೂಕ್ತವಾದ ಪರಿಹಾರಗಳನ್ನು ಒದಗಿಸಿದೆ.

ಮೊದಲ ಬಾರಿಗೆ, ಇಡೀ ಉತ್ಸವದ ತಂಡವನ್ನು ಒಳಗೊಳ್ಳುವಿಕೆ ಮತ್ತು ಸಹಾನುಭೂತಿಯ ಸಂಸ್ಕೃತಿಯನ್ನು ಖಚಿತಪಡಿಸಿಕೊಳ್ಳಲು ಸಂವೇದನಾಶೀಲಗೊಳಿಸಲಾಗುತ್ತರಿದೆ ಮತ್ತು ತರಬೇತಿ ನೀಡಲಾಗುತ್ತದೆ. "ಈ ಬಾರಿ ನಾವು ದಿವ್ಯಾಂಗರು ಸ್ಥಳವನ್ನು ಸುಗಮವಾಗಿ ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ ಉತ್ಸವದಲ್ಲಿ ತೊಡಗಿರುವ ಸ್ವಯಂಸೇವಕರು ವಿಕಲಚೇತನರನ್ನು ನಿರ್ವಹಿಸಲು ಸೂಕ್ತವಾಗಿ ತರಬೇತಿ ಪಡೆಯುವುದನ್ನು ಸಹ ಖಚಿತಪಡಿಸಿಕೊಳ್ಳುತ್ತೇವೆ." ಎನ್ನುತ್ತಾರೆ ಉತ್ಸವದ ನಿರ್ದೇಶಕರಾದ ಶ್ರೀ ಪೃಥುಲ್ ಕುಮಾರ್.

13ನೇ ಜೂನ್ 2024 ರಂದು, ಉತ್ಸವವು ಪ್ರಾರಂಭವಾಗುವ ಮೊದಲು, ಎಂ ಐ ಎಫ್‌ ಎಫ್ ಆವರಣದಲ್ಲಿ ವಿಶೇಷ ಸಂವೇದನಾಶೀಲತೆಯ ತರಬೇತಿಯನ್ನು ʼಸ್ವಯಂʼ ಸಂಸ್ಥೆಯು ನಡೆಸುತ್ತದೆ. ತರಬೇತಿಯಲ್ಲಿ ಹಿರಿಯ ಅಧಿಕಾರಿಗಳು, ಭಾಗೀದಾರರು, ಸ್ವಯಂಸೇವಕರು ಮತ್ತು ಸಿಬ್ಬಂದಿ ಸೇರಿದಂತೆ 120 ಕ್ಕೂ ಹೆಚ್ಚು ಸಂಘಟಕರನ್ನು ತೊಡಗಿಸಿಕೊಳ್ಳಲಾಗುತ್ತದೆ ಮತ್ತು ಅವರಿಗೆ ಸೂಕ್ತ ಶಿಕ್ಷಣ ನೀಡುತ್ತದೆ. ತರಬೇತಿಯು ಸೂಕ್ತ ಶಿಷ್ಟಾಚಾರ ಮತ್ತು ಪರಿಭಾಷೆಯ ಅರಿವು ಮತ್ತು ತಿಳುವಳಿಕೆಯನ್ನು ಮೂಡಿಸುವ ಮೇಲೆ ಕೇಂದ್ರೀಕರಿಸುತ್ತದೆ. ಇದು ವಿಶೇಷವಾಗಿ ಚಲನಚಿತ್ರ ಪ್ರೇಮಿಗಳು ಮತ್ತು ಗುಪ್ತ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು, ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ಒಳಗೊಂಡಂತೆ ಕಡಿಮೆ ಚಲನಶೀಲತೆಯೊಂದಿಗೆ ಪಾಲ್ಗೊಳ್ಳುವವರೊಂದಿಗೆ ಸಂವಹನ ನಡೆಸುವಾಗ ತಂಡಕ್ಕೆ ಸಹಾಯ ಮಾಡುತ್ತದೆ.

ಸಂವೇದನಾಶೀಲತೆಯ ತರಬೇತಿಯು ಹಲವಾರು ವಿಷಯಗಳ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ, ಅವುಗಳೆಂದರೆ: ಅಂಗವೈಕಲ್ಯವನ್ನು ಅರ್ಥಮಾಡಿಕೊಳ್ಳುವುದು; ಅಂಗವೈಕಲ್ಯ ಮತ್ತು ದುರ್ಬಲತೆಯ ನಡುವಿನ ವ್ಯತ್ಯಾಸ; RPWD ACT 2016 ರ ಪ್ರಕಾರ 21 ಅಂಗವೈಕಲ್ಯವನ್ನು ಅರ್ಥಮಾಡಿಕೊಳ್ಳುವುದು; ಅಸಾಮರ್ಥ್ಯಗಳ ಮಾದರಿಗಳು; ತಡೆರಹಿತ ವಾತಾವರಣ ಎಂದರೇನು? ಉದಾಹರಣೆಗಳೊಂದಿಗೆ ಅಡೆತಡೆಗಳ ವಿಧಗಳು; ಅಂಗವೈಕಲ್ಯ ಶಿಷ್ಟಾಚಾರಗಳು; ಸರಿಯಾದ ಪರಿಭಾಷೆಯನ್ನು ಬಳಸುವುದು.

ಹೆಚ್ಚುವರಿಯಾಗಿ, ಕಡಿಮೆ ಚಲನಶೀಲತೆ ಹೊಂದಿರುವ ವ್ಯಕ್ತಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಭಾಗವಹಿಸುವವರು ನೇರವಾಗಿ ಒಳನೋಟವನ್ನು ಪಡೆಯುತ್ತಾರೆ. ನಂತರ ಅನುಭವಗಳು ಮತ್ತು ಒಳನೋಟಗಳನ್ನು ಹಂಚಿಕೊಳ್ಳಲು ಸಂವಾದಾತ್ಮಕ ಗುಂಪು ಚರ್ಚೆಗಳು ನಡೆಯುತ್ತವೆ.

"ಪ್ರವೇಶಸಾಧ್ಯತೆಯು ಮೂಲಭೂತ ಹಕ್ಕು, ಮತ್ತು ಜಾಗಗಳು ಎಲ್ಲರಿಗೂ ಸ್ವಾಗತಾರ್ಹವೆಂದು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. MIFF 2024 ರೊಂದಿಗಿನ ನಮ್ಮ ಸಹಯೋಗವು ಚಲನಚಿತ್ರೋತ್ಸವದಲ್ಲಿ ಒಳಗೊಳ್ಳುವಿಕೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಮೈಲಿಗಲ್ಲು." ಎಂದು ಸ್ವಯಂ ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಸ್ಮಿನು ಜಿಂದಾಲ್ ಅವರು ಹೇಳುತ್ತಾರೆ, "ಪ್ರವೇಶಸಾಧ್ಯತೆಗೆ ಆದ್ಯತೆ ನೀಡುವ ಮೂಲಕ, ನಾವು ಕಡಿಮೆ ಚಲನಶೀಲತೆ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಬಾಗಿಲು ತೆರೆಯುವುದು ಮಾತ್ರವಲ್ಲ, ವೈವಿಧ್ಯತೆಯನ್ನು ಘನತೆಯಿಂದ ಆಚರಿಸುವ ಹೆಚ್ಚು ಒಳಗೊಳ್ಳುವ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುತ್ತೇವೆ." ಎಂದು ಅವರು ಹೇಳಿದರು.

ಪ್ರಯತ್ನದ ಮುಂದುವರಿದ ಭಾಗವಾಗಿ, 18 ನೇ ಎಂ ಐ ಎಫ್‌ ಎಫ್‌ 2024 ರಲ್ಲಿ ಕೆಲವು ಪ್ರದರ್ಶನಗಳನ್ನು ಸಹ ವಿಕಲಚೇತನ ವ್ಯಕ್ತಿಗಳು ಚಲನಚಿತ್ರವನ್ನು ವೀಕ್ಷಿಸಲು ಮತ್ತು ಆನಂದಿಸಲು ಅನುವು ಮಾಡಿಕೊಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. “18ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಸುಗಮ ಪ್ರವೇಶದ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ. ಶ್ರವಣದೋಷವುಳ್ಳ ಪ್ರೇಕ್ಷಕರಿಗಾಗಿ ಭಾರತೀಯ ಸಂಕೇತ ಭಾಷೆ ಹಾಗೂ ಶೀರ್ಷಿಕೆಗಳೊಂದಿಗೆ ಚಲನಚಿತ್ರಗಳು ಮತ್ತು ದೃಷ್ಟಿದೋಷವಿರುವವರಿಗೆ ಧ್ವನಿ ವಿವರಣೆಯೊಂದಿಗೆ ಚಲನಚಿತ್ರಗಳು ಇರುತ್ತವೆ. ಭಾರತೀಯ ಸಂಕೇತ ಭಾಷೆಯನ್ನು ಬಳಸಿಕೊಂಡು ಲೈವ್ ಡ್ಯಾನ್ಸ್‌ ನೊಂದಿಗೆ ‘ಕ್ರಾಸ್ ಓವರ್’ಚಿತ್ರವೂ ಇರುತ್ತದೆ,” ಎಂದು 18ನೇ ಎಂ ಐ ಎಫ್‌ ಎಫ್ 2024 ರ ಕರ್ಟನ್ ರೈಸರ್ ಪತ್ರಿಕಾಗೋಷ್ಠಿಯಲ್ಲಿ ಉತ್ಸವದ ನಿರ್ದೇಶಕ ಶ್ರೀ ಪೃಥುಲ್ ಕುಮಾರ್ ಹೇಳಿದರು.

ದಿವ್ಯಾಂಗಜನ ಫಿಲ್ಮ್ಸ್ ಶೀರ್ಷಿಕೆಯ ವಿಶೇಷ ಪ್ಯಾಕೇಜ್ ನಾಲ್ಕು ಚಲನಚಿತ್ರಗಳು/ಕಂತುಗಳ ಗುಚ್ಛವನ್ನು ಹೊಂದಿದೆ, ಇದನ್ನು 19ನೇ ಜೂನ್ 2024 ರಂದು 18ನೇ ಎಂ ಐ ಎಫ್‌ ಎಫ್ ನಲ್ಲಿ ಪ್ರದರ್ಶಿಸಲಾಗುತ್ತದೆ. ಪ್ರದರ್ಶನಗೊಳ್ಳುವ ಆ ಚಲನಚಿತ್ರಗಳೆಂದರೆ –

1. ದಿ ಕ್ರಾಸ್ ಓವರ್ (ISL/ಇಂಗ್ಲಿಷ್ - 21 ನಿಮಿಷಗಳು) ನಿರ್ದೇಶಕಿ: ಮೆಥಿಲ್ ದೇವಿಕಾ

ಕ್ರಾಸ್ ಒವರ್ ಒಂದು ಕಿರುಚಿತ್ರವಾಗಿದ್ದು, ನರ್ತಕಿಯು ಕೇರಳದ ಭಾರತೀಯ ಶಾಸ್ತ್ರೀಯ ನೃತ್ಯ ರೂಪವಾದ ಮೋಹಿನಿಯಾಟ್ಟಂ ಅನ್ನು ವಿವರಿಸಲು ಸೌಂದರ್ಯದ ಸಂಕೇತ ಭಾಷೆಯೊಂದಿಗೆ ಭಾರತೀಯ ಸಂಕೇತ ಭಾಷೆಯನ್ನು ಸಂಯೋಜಿಸುವ ನೃತ್ಯ ಪ್ರದರ್ಶನವನ್ನು ಸೆರೆಹಿಡಿಯುತ್ತದೆ.

2. ಲಿಟಲ್ ಕೃಷ್ಣ (ಇಂಗ್ಲಿಷ್) ಜೊತೆಗೆ ಭಾರತೀಯ ಸಂಕೇತ ಭಾಷೆ. ನಿರ್ದೇಶಕ: ಇಶ್

ಸಂಚಿಕೆ 3: ದಿ ಹಾರರ್ ಕೇವ್ (22 ನಿಮಿಷಗಳು) ಮತ್ತು ಸಂಚಿಕೆ 8: ಚಾಲೆಂಜ್ ಆಫ್ ದಿ ಬ್ರೂಟ್ (23 ನಿಮಿಷಗಳು)

ಶ್ರೀಕೃಷ್ಣನು ವೃಂದಾವನದ ಕಾಡಿನಲ್ಲಿ ತನ್ನ ಸ್ನೇಹಿತರೊಂದಿಗೆ ಬಾಲ್ಯದ ವಿನೋದವನ್ನು ಆನಂದಿಸುತ್ತಿದ್ದಾಗ, ಕಂಸನಿಂದ ಪ್ರಚೋದಿತನಾದ ಅಘಾಸುರನೆಂಬ ರಾಕ್ಷಸನು ಅವರೆಲ್ಲರನ್ನೂ ಕೊಲ್ಲುವ ಉದ್ದೇಶದಿಂದ ಕಾಣಿಸಿಕೊಳ್ಳುತ್ತಾನೆ. ವೃಂದಾವನದಲ್ಲಿ, ಅರಿಷ್ಟಾಸುರ ಎಂಬ ರಾಕ್ಷಸನು ಅಲ್ಲಿನ ನಿವಾಸಿಗಳನ್ನು ಭಯಪಡಿಸುತ್ತಾನೆ, ಅವರು ರಕ್ಷಣೆಗಾಗಿ ಕೃಷ್ಣನ ಮೊರೆ ಹೋಗುತ್ತಾರೆ. ಕೃಷ್ಣನು ರಾಕ್ಷಸರೊಂದಿಗೆ ಹೋರಾಡುತ್ತಾನೆ, ಅನಾಯಾಸವಾಗಿ ಅವರನ್ನು ಸೋಲಿಸುತ್ತಾನೆ.

 3. ಜೈ ಜಗನ್ನಾಥ್ (ಹಿಂದಿ - 36 ನಿಮಿಷಗಳು). ನಿರ್ದೇಶಕ: ಶ್ರೀಪಾದ್ ವಾರ್ಖೇಡ್ಕರ್

ಭಗವಾನ್ ಜಗನ್ನಾಥ, ಜಗನ್ ಎಂಬ ಮಗುವಾಗಿ ಅವತರಿಸಿದನು ಮತ್ತು ಅವನ ನಿಷ್ಠಾವಂತ ಅನುಯಾಯಿ ಬಲರಾಮ. ಇದು ಅವರ ಸಾಹಸಗಳನ್ನು ಹೇಳುತ್ತದೆ ಮತ್ತು ಜಾನಪದ ಕಥೆಗಳನ್ನು ಸಂಯೋಜಿಸುತ್ತದೆ, ಪುರಾಣ ಮತ್ತು ಸ್ನೇಹ ನಿರೂಪಣೆಗಳನ್ನು ಸಮ್ಮಿಲನಗೊಳಿಸುತ್ತದೆ.

ಸಿನೆಮಾದ ಆಚರಣೆಯಲ್ಲಿ ಎಲ್ಲರೂ ಸಂಪೂರ್ಣವಾಗಿ ಭಾಗವಹಿಸಬಹುದಾದ ಅಂತರ್ಗತ ವಾತಾವರಣವನ್ನು ಬೆಳೆಸುವ ಎಂ ಐ ಎಫ್‌ ಎಫ್‌ 2024 ರ ಬದ್ಧತೆಯು ಅದರ ಸಮರ್ಪಣೆಯನ್ನು ಒತ್ತಿಹೇಳುತ್ತದೆ. ʼಸ್ವಯಂʼ ನೊಂದಿಗೆ ಕೈಜೋಡಿಸುವುದರಿಂದ, ಎಂ ಐ ಎಫ್‌ ಎಫ್‌ ಇತರ ಉತ್ಸವಗಳಿಗೆ ಒಂದು ಪೂರ್ವನಿದರ್ಶನವನ್ನು ಹಾಕಿಕೊಟ್ಟಿದೆ. ಇದು ಸುಗಮ ಪ್ರವೇಶಿಸುವಿಕೆಯನ್ನು ಸಾಧಿಸುವುದು ಮಾತ್ರವಲ್ಲದೆ ಎಲ್ಲಾ ಪಾಲ್ಗೊಳ್ಳುವವರಿಗೆ ನಿಜವಾದ ಉತ್ಕೃಷ್ಟ ಅನುಭವಗಳನ್ನು ಸೃಷ್ಟಿಸುವುದು ಅವಶ್ಯಕವಾಗಿದೆ ಎಂಬುದನ್ನು ತೋರಿಸುತ್ತದೆ.

18ನೇ ಎಂ ಐ ಎಫ್‌ ಎಫ್ 2024‌ ಕುರಿತು

ಎಂ ಐ ಎಫ್‌ ಎಫ್‌, ದಕ್ಷಿಣ ಏಷ್ಯಾದಲ್ಲಿ ನಾನ್-ಫೀಚರ್ ಫಿಲ್ಮ್‌ಗಳಿಗಾಗಿರುವ ಅತ್ಯಂತ ಹಳೆಯ ಮತ್ತು ದೊಡ್ಡ ಚಲನಚಿತ್ರೋತ್ಸವವೆಂದು ಗುರುತಿಸಲ್ಪಟ್ಟಿದೆ, ಸಾಕ್ಷ್ಯಚಿತ್ರ, ಕಿರುಚಿತ್ರ ಮತ್ತು ಅನಿಮೇಷನ್ ಚಲನಚಿತ್ರಗಳನ್ನು ಸಂಭ್ರಮಿಸುವ 18 ನೇ ವರ್ಷ ಇದಾಗಿದೆ. ಇದು 1990 ರಲ್ಲಿ ಪ್ರಾರಂಭವಾಯಿತು ಮತ್ತು ಈಗ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ಆಯೋಜಿಸಲಾಗುತ್ತಿದೆ, ಎಂ ಐ ಎಫ್‌ ಎಫ್‌ ಪ್ರಪಂಚದಾದ್ಯಂತದ ಸಿನಿ ಉತ್ಸಾಹಿಗಳನ್ನು ಸೆಳೆಯುವ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿ ವಿಕಸನಗೊಂಡಿದೆ.

ಎಂ ಐ ಎಫ್‌ ಎಫ್‌ ನ 18ನೇ ಆವೃತ್ತಿಯು ಅಂತಾರಾಷ್ಟ್ರೀಯ ಚಲನಚಿತ್ರಗಳ ವ್ಯಾಪಕ ಶ್ರೇಣಿಯ ಆಯ್ಕೆಗಳು ಮತ್ತು ವರ್ಕ್‌ ಇನ್‌ ಪ್ರೋಗ್ರೆಸ್‌ ಲ್ಯಾಬ್‌, ಸಹ-ನಿರ್ಮಾಣ ಮಾರುಕಟ್ಟೆಗಳು ಮತ್ತು ವೀಕ್ಷಣಾ ಕೊಠಡಿಯಂತಹ ಇತರ ಅತ್ಯಂತ ವಿಶೇಷವಾದ ಕಾರ್ಯಕ್ರಮಗಳಿರುವ ಮೊಟ್ಟಮೊದಲ ಸಾಕ್ಷ್ಯಚಿತ್ರ ಫಿಲ್ಮ್ ಬಜಾರ್‌ ನೊಂದಿಗೆ ರೋಮಾಂಚನಕಾರಿಯಾಗಿದೆ.  ಸೀನಿಯರ್ ವಾರ್ನರ್ ಸಹೋದರ ಆನಿಮೇಟರ್‌‌ ನಿಂದ ವಿಶೇಷ ಅನಿಮೇಷನ್ ಮತ್ತು ವಿ ಎಫ್‌ ಎಕ್ಸ್ ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿದೆ. ಸ್ಥಾಪಿತ ಮತ್ತು ಉದಯೋನ್ಮುಖ ಚಲನಚಿತ್ರ ನಿರ್ದೇಶಕರ ನಡುವೆ ಕಲಿಕೆಯ ಕ್ರಿಯಾತ್ಮಕ ವಿನಿಮಯವನ್ನು ಉತ್ತೇಜಿಸಲು ಉದ್ಯಮದ ತಜ್ಞರಿಂದ ಪ್ಯಾನೆಲ್ ಚರ್ಚೆಗಳು, ಮುಕ್ತ ವೇದಿಕೆಗಳು, ಫೈರ್‌ ಸೈಡ್ ಚಾಟ್‌ ಗಳು ಮತ್ತು ಮಾಸ್ಟರ್‌ ಕ್ಲಾಸ್‌ ಗಳಂತಹ ಕಾರ್ಯಕ್ರಮಗಳು ಸಹ ಇವೆ. ಇದರ ಹೊರತಾಗಿ ಪತ್ರಿಕಾಗೋಷ್ಠಿಗಳು ಮತ್ತು ಸಂದರ್ಶನಗಳು ಮಾಧ್ಯಮದ ವ್ಯಕ್ತಿಗಳು ತಮ್ಮ ನೆಚ್ಚಿನ ಸಾಕ್ಷ್ಯಚಿತ್ರ ನಿರ್ಮಾಪಕರು ಮತ್ತು ಕಲಾವಿದರೊಂದಿಗೆ ನಿಕಟವಾಗಿ ಮತ್ತು ವೈಯಕ್ತಿಕವಾಗಿ ಬೆರೆಯಲು ಅನುವು ಮಾಡಿಕೊಡುತ್ತವೆ. ಹೆಚ್ಚಿನ ಮಾಹಿತಿಗಾಗಿ https://miff.in ಗೆ ಭೇಟಿ ನೀಡಿ.

*****



(Release ID: 2024987) Visitor Counter : 17