ವಾರ್ತಾ ಮತ್ತು ಪ್ರಸಾರ ಸಚಿವಾಲಯ

2024ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಚಟುವಟಿಕೆಗಳ ಸಿದ್ಧತೆ ಪರಿಶೀಲಿಸಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ಕಾರ್ಯದರ್ಶಿ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ


“ಅಂತಾರಾಷ್ಟ್ರೀಯ ಯೋಗ ದಿವಸ್ ಮಾಧ್ಯಮ ಸಮ್ಮಾನ್” ಪ್ರಶಸ್ತಿಗಳನ್ನು ನೀಡಲಾಗುವುದು

Posted On: 07 JUN 2024 5:10PM by PIB Bengaluru

ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಆಯುಷ್ ಸಚಿವಾಲಯ ಜಂಟಿಯಾಗಿ ಅಂತಾರಾಷ್ಟ್ರೀಯ ಯೋಗ ದಿನ(ಐಡಿವೈ)-2024ರ ಆಯೋಜನೆಗೆ ಸಕಲ ಸಿದ್ಧತೆಗಳನ್ನು ಪ್ರಾರಂಭಿಸಿದೆ. ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ(ಐ&ಬಿ)ದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ಶ್ರೀ ರಾಜೇಶ್ ಕೊಟೆಚಾ ಅವರು ಜೂನ್ 21ರಂದು ವಾರ್ಷಿಕವಾಗಿ ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ-2024 ಅಂಗವಾಗಿ ಜರುಗಲಿರುವ ಮಾಧ್ಯಮ ಮತ್ತು  ಔಟ್ ರೀಚ್ ಚಟುವಟಿಕೆಗಳನ್ನು ಪರಿಶೀಲಿಸಿದರು.

 


 

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಘಟಕಗಳು ಯೋಗಾಭ್ಯಾಸದಿಂದ ಸಿಗುವ ಹಲವು ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಇರುವ ಸಾಮಾನ್ಯ ಯೋಗ ಶಿಷ್ಟಾಚಾರ(ಸಿವೈಪಿ)ಗಳ ಕುರಿತು ಜನಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಚಟುವಟಿಕೆಗಳನ್ನು ಆಯೋಜಿಸಲು ತಯಾರಿ ನಡೆಸುತ್ತಿವೆ. ಪ್ರೆಸ್ ಇನ್ ಫಾರ್ಮೇಷನ್ ಬ್ಯೂರೊ, ಪ್ರಸಾರ ಭಾರತಿ, ನ್ಯೂ ಮೀಡಿಯಾ ವಿಂಗ್ ಮತ್ತಿತರ  ಇಲಾಖೆಗಳಿಗೆ ಸೇರಿದ ವಿವಿಧ ಮಾಧ್ಯಮ ಘಟಕಗಳಿಂದ ಪ್ರಮುಖ ಚಟುವಟಿಕೆಗಳನ್ನು ಯೋಜಿಸಲಾಗಿದೆ.

ಸಾರ್ವಜನಿಕ ಪ್ರಸಾರ ಸೇವಾ ಸಂಸ್ಥೆಗಳಾದ ಪ್ರಸಾರ ಭಾರತಿಯು ದೂರದರ್ಶನ (ಡಿಡಿ), ಆಕಾಶವಾಣಿ ಜಾಲಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ ಮತ್ತು ಬಿತ್ತರಿಸಲಿವೆ ಮತ್ತು ಪ್ರಸಾರ ಮಾಡುತ್ತಿದವೆ ಮತ್ತು ಮಾಡಲಿವೆ . ದೂರದರ್ಶನವು   ಬೆಳಗಿನ ವಿಶೇಷ ನೇರ ಪ್ರಸಾರದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರ ಜತೆಗೆ, ಯೋಗ ತಜ್ಞರೊಂದಿಗೆ ಕಾರ್ಯಕ್ರಮಗಳು, ಸಂದರ್ಶನಗಳನ್ನು ಪ್ರಸಾರ ಮಾಡುತ್ತಿದೆ.
ಆಯುಷ್ ಸಚಿವಾಲಯದ ಅಡಿ, ಸ್ವಾಯತ್ತ ಸಂಸ್ಥೆಯಾದ ‘ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ’ ಸಹಯೋಗದೊಂದಿಗೆ ಆಕಾಶವಾಣಿಯು ಯೋಗವನ್ನು ಜೀವನ ವಿಧಾನವಾಗಿ ಮತ್ತು ಜನರ ಒಟ್ಟಾರೆ ಯೋಗಕ್ಷೇಮಕ್ಕಾಗಿ ಪ್ರಚಾರ ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿದೆ. ಆಯುಷ್ ಸಚಿವಾಲಯವು 'ಯೋಗಗೀತೆ'ಯನ್ನು ಸಿದ್ಧಪಡಿಸಿದೆ, ಇದನ್ನು ಎಲ್ಲಾ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ.
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮಾನ್(ಎವೈಡಿಎಂಎಸ್) ಪುರಸ್ಕಾರದೊಂದಿಗೆ ಖಾಸಗಿ ಮಾಧ್ಯಮ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಉಪಕ್ರಮ ಮುಂದುವರಿಸಲಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯವು 09.06.2023ರಂದು ಯೋಗದ ಸಂದೇಶ ಹರಡುವಲ್ಲಿ ಮುದ್ರಣ, ಟಿವಿ ಮತ್ತು ರೇಡಿಯೊದಲ್ಲಿ ಮಾಧ್ಯಮ ಸಂಸ್ಥೆಗಳು, ಕಂಪನಿಗಳ ಕೊಡುಗೆಯನ್ನು ಗುರುತಿಸಲು ಅಂತಾರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮಾನ್(ಎವೈಡಿಎಂಎಸ್) ಪ್ರಶಸ್ತಿ ಸ್ಥಾಪಿಸಿದೆ. ಪ್ರಶಸ್ತಿ ವಿಭಾಗಗಳಲ್ಲಿ ‘ಪತ್ರಿಕೆಯಲ್ಲಿ ಯೋಗದಲ್ಲಿ ಅತ್ಯುತ್ತಮ ಮಾಧ್ಯಮ ಕವರೇಜ್’, ‘ವಿದ್ಯುನ್ಮಾನ ಮಾಧ್ಯಮ(ಟಿವಿ)ದಲ್ಲಿ ಯೋಗದಲ್ಲಿ ಅತ್ಯುತ್ತಮ ಮಾಧ್ಯಮ ಪ್ರಸಾರ’ ಮತ್ತು ‘ವಿದ್ಯುನ್ಮಾನ ಮಾಧ್ಯಮ  ರೇಡಿಯೊ ವಿಭಾಗದಲ್ಲಿ ಯೋಗದಲ್ಲಿ ಅತ್ಯುತ್ತಮ ಮಾಧ್ಯಮ ಪ್ರಸಾರ’ ವಿಷಯ ವಸ್ತು ಸೇರಿವೆ. ಕಳೆದ ವರ್ಷದ ಪ್ರಶಸ್ತಿಗಳ ಜತೆಗೆ ಈ ವರ್ಷದ ಪ್ರಶಸ್ತಿಗಳನ್ನು, ಈ ವರ್ಷದ ಆಚರಣೆ ಮುಗಿದ ನಂತರದ ದಿನಗಳಲ್ಲಿ ನೀಡಲಾಗುತ್ತದೆ.

ನ್ಯೂ ಮೀಡಿಯಾ ವಿಂಗ್(ಎನ್ಎಂಡಬ್ಲ್ಯು) ವಿಭಾಗವು, ಕುಟುಂಬಗಳು ಒಟ್ಟಾಗಿ ಯೋಗ ಅಭ್ಯಾಸ ಮಾಡಲು ಮತ್ತು ಯೋಗ ಗೀತ್ ಬಳಸಿ ರೀಲ್‌ಗಳನ್ನು ಅಪ್‌ಲೋಡ್ ಮಾಡುವ ಸವಾಲಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ 'ಯೋಗಾ ವಿತ್ ಫ್ಯಾಮಿಲಿ' ಸ್ಪರ್ಧೆಯಂತಹ ಚಟುವಟಿಕೆಗಳನ್ನು ನಡೆಸುತ್ತಿದೆ. ‘ಯೋಗ ರಸಪ್ರಶ್ನೆ - ಗೆಸ್ ದಿ ಆಸನ್’ ಕೂಡ ಆಯೋಜಿಸಲಾಗುವುದು. ಅಂತಾರಾಷ್ಟ್ರೀಯ ಯೋಗ ದಿನ-2024ರ ಪಾಡ್‌ಕ್ಯಾಸ್ಟ್ ಸಹ ಬಿಡುಗಡೆಯಾಗಲಿದೆ.

ಇದರ ಹೊರತಾಗಿ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯದ ವಿವಿಧ ಮಾಧ್ಯಮ ಘಟಕಗಳು ಮತ್ತು ಸಂಸ್ಥೆಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡುವ ಉದ್ದೇಶದಿಂದ ಯೋಗ ಕುರಿತು ಕಲಾಪಗಳು, ಕಾರ್ಯಾಗಾರಗಳನ್ನು ಆಯೋಜಿಸುತ್ತವೆ. ಉದ್ಯೋಗಿಗಳಲ್ಲಿ ಯೋಗ ಮತ್ತು ಸ್ವಾಸ್ಥ್ಯ ಜೀವನ ಉತ್ತೇಜಿಸಲು ಯೋಗ ಶಿಬಿರಗಳು, ವಿಚಾರಗೋಷ್ಠಿಗಳು ಇತ್ಯಾದಿ ಕಾರ್ಯಕ್ರಮಗಳನ್ನು ಈ ವರ್ಷವೂ ನಡೆಸಲಾಗುವುದು.

ಜೂನ್ 21 ಅನ್ನು "ಅಂತಾರಾಷ್ಟ್ರೀಯ ಯೋಗ ದಿನ" ಎಂದು ಗುರುತಿಸಿದ ನಂತರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಮಾಣ ಮತ್ತು ಆಚರಣೆಯ ಮಟ್ಟ ಪ್ರತಿ ವರ್ಷವೂ ಹೆಚ್ಚಾಗುತ್ತಿದೆ. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯೋಗವನ್ನು ಜಗತ್ತಿಗೆ ಕೊಂಡೊಯ್ಯುವ ಸರ್ಕಾರದ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದಾರೆ. 2023ರ 9ನೇ ಅಂತಾರಾಷ್ಟ್ರೀಯ ಯೋಗ ದಿನ ಸಂದರ್ಭದಲ್ಲಿ, 2023ರಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ 135 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದ ಉತ್ಸವದ  ನೇತೃತ್ವವನ್ನು ಪ್ರಧಾನಿ ವಹಿಸಿದ್ದರು. ಈ ಯೋಗಾಭ್ಯಾಸದಲ್ಲಿ 135 ರಾಷ್ಟ್ರಗಳು ಭಾಗವಹಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಾಣವಾಗಿದೆ. ಕಾರ್ಯಕ್ರಮವನ್ನು ಹೊಸ ಉಪಕ್ರಮಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಯಿತು. ಮಧ್ಯಪ್ರದೇಶದ ಜಬಲ್‌ಪುರ್‌ನಲ್ಲಿ ಆಯೋಜಿಸಲಾದ ಮುಖ್ಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರ ಉಪಸ್ಥಿತಿಯಲ್ಲಿ 15,000ಕ್ಕೂ ಹೆಚ್ಚು ಉತ್ಸಾಹಿ ಪ್ರತಿನಿಧಿಗಳು ಸಾಮಾನ್ಯ ಯೋಗ ಶಿಷ್ಟಾಚಾರಗಳನ್ನು ಪ್ರದರ್ಶಿಸಿದ್ದರು.

ಹೆಚ್ಚುವರಿಯಾಗಿ, 'ಓಷನ್ ರಿಂಗ್ ಆಫ್ ಯೋಗ' 34 ದೇಶಗಳ 19 ಹಡಗುಗಳ ನೌಕಾ ಸಿಬ್ಬಂದಿ, ರಕ್ಷಣಾ ಸಚಿವಾಲಯ, ವಿದೇಶಾಂಗ ವ್ಯವಹಾರ ಸಚಿವಾಲಯ, ಬಂದರು ಹಡಗು ಮತ್ತು ಜಲಮಾರ್ಗಗಳ ಸಚಿವಾಲಯಗಳ ಬೆಂಬಲದೊಂದಿಗೆ ಯೋಗ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಭಾರತದ ಸಂಶೋಧನಾ ನೆಲೆಗಳಾದ ಹಿಮಾದ್ರಿ ಮತ್ತು ಭಾರತಿ ಸೇರಿದಂತೆ ಆರ್ಕ್ಟಿಕ್‌ನಿಂದ ಅಂಟಾರ್ಟಿಕಾದವರೆಗೆ ಯೋಗ ಪ್ರದರ್ಶನಗಳನ್ನು ನಡೆಸಲಾಯಿತು. ಭಾರತೀಯ ಸಶಸ್ತ್ರ ಪಡೆಗಳು 'ಯೋಗ ಭಾರತಮಾಲಾ' ರಚಿಸಿದವು. ಕರಾವಳಿ ಭಾಗದಲ್ಲಿ ನಡೆದ ಯೋಗ ಪ್ರದರ್ಶನಗಳನ್ನು 'ಯೋಗ ಸಾಗರಮಾಲಾ' ಎಂದು ಕರೆಯಲಾಯಿತು.

ತಳಮಟ್ಟದಲ್ಲಿ, 'ಹರ್ ಅಂಗನ್ ಯೋಗ' ಉಪಕ್ರಮವು ಗ್ರಾಮೀಣ ಸಮುದಾಯಗಳೊಂದಿಗೆ ಸಂಪರ್ಕ ಹೊಂದಿದೆ. ಇದು ಪಂಚಾಯಿತಿಗಳು, ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಯೋಗ ತರಗತಿಗಳನ್ನು ಆಯೋಜಿಸುತ್ತಿದೆ, ಇದು ಸುಮಾರು 200,000 ಸ್ಥಳಗಳಲ್ಲಿ ನಡೆಯುತ್ತಿದೆ. 2023ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸುಮಾರು 23.4 ಕೋಟಿ ಜನರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದ್ದರು.

*****



(Release ID: 2023474) Visitor Counter : 31