ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಜಿನೀವಾದಲ್ಲಿ ನಡೆದ 77ನೇ ವಿಶ್ವ ಆರೋಗ್ಯ ಅಸೆಂಬ್ಲಿಯ ನೇಪಥ್ಯದಲ್ಲಿ ಬ್ರಿಕ್ಸ್ ಆರೋಗ್ಯ ಸಚಿವರ ಸಭೆಯನ್ನುದ್ದೇಶಿಸಿ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರಿಂದ ಭಾಷಣ
"ಬ್ರಿಕ್ಸ್ ಶೃಂಗಸಭೆಯ ಆರೋಗ್ಯ ಟ್ರ್ಯಾಕ್ ಉಪಕ್ರಮಗಳಲ್ಲಿ ಭಾರತವು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರದರ್ಶಿಸಿದೆ. ಬ್ರಿಕ್ಸ್ ರಾಷ್ಟ್ರಗಳಾದ್ಯಂತ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಜಂಟಿ ಆರೋಗ್ಯ ಕಾರ್ಯಸೂಚಿಗಳನ್ನು ಮುನ್ನಡೆಸಲು ಸಹಯೋಗದ ಪ್ರಯತ್ನಗಳನ್ನು ಉತ್ತೇಜಿಸಿ, ಆ ಮೂಲಕ ನಿರ್ಣಾಯಕ ಜಾಗತಿಕ ಆರೋಗ್ಯ ಸವಾಲುಗಳನ್ನು ಭಾರತವು ಎದುರಿಸಲು ಸಿದ್ದವಾಗಿದೆ": ಕೇಂದ್ರ ಆರೋಗ್ಯ ಕಾರ್ಯದರ್ಶಿ
"ಬ್ರಿಕ್ಸ್ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ವರ್ಚುವಲ್ ಆಗಿ ಪ್ರಾರಂಭಿಸಲಾಯಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ - ರಾಷ್ಟ್ರೀಯ ವೈರಾಲಜಿ ಸಂಸ್ಥೆಯನ್ನು ಬ್ರಿಕ್ಸ್ ಲಸಿಕೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಚಟುವಟಿಕೆಗಳಿಗೆ ಸಮನ್ವಯ ಸಂಸ್ಥೆಯಾಗಿ ಗೊತ್ತುಪಡಿಸಲಾಯಿತು"
"ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮತ್ತು ಇತರ ಪಾಲುದಾರ ಸಂಸ್ಥೆಗಳ ಸಹಯೋಗದೊಂದಿಗೆ ಮರುಸಂಯೋಜಿತ ಡೆಂಗ್ಯೂ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಗಳನ್ನು ಪ್ರಾರಂಭಿಸುತ್ತಿದೆ"
"2017ರಲ್ಲಿ ಪ್ರಾರಂಭಿಸಲಾದ ಆಂಟಿಮೈಕ್ರೊಬಿಯಲ್ ಪ್ರತಿರೋಧ ಕುರಿತಾದ ಭಾರತದ ರಾಷ್ಟ್ರೀಯ ಕ್ರಿಯಾ ಯೋಜನೆಯು ಅಂತರ-ವಲಯ ಸಹಯೋಗ ಮತ್ತು ಏಕ-ಆರೋಗ್ಯ ವಿಧಾನದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದ
Posted On:
29 MAY 2024 3:41PM by PIB Bengaluru
ಜಿನೀವಾದಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ 77ನೇ ವಿಶ್ವ ಆರೋಗ್ಯ ಸಭೆಯ ನೇಪಥ್ಯದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರಾದ ಶ್ರೀ ಅಪೂರ್ವ ಚಂದ್ರ ಅವರು ಬ್ರಿಕ್ಸ್ ಆರೋಗ್ಯ ಸಚಿವರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು, "ಬ್ರಿಕ್ಸ್ ಆರೋಗ್ಯ ಟ್ರ್ಯಾಕ್ ಉಪಕ್ರಮಗಳಲ್ಲಿ ಭಾರತವು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ, ಬ್ರಿಕ್ಸ್ ರಾಷ್ಟ್ರಗಳಾದ್ಯಂತ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಜಂಟಿ ಆರೋಗ್ಯ ಕಾರ್ಯಸೂಚಿಗಳನ್ನು ಮುನ್ನಡೆಸಲು ಸಹಯೋಗದ ಪ್ರಯತ್ನಗಳನ್ನು ಉತ್ತೇಜಿಸಿ, ಆ ಮೂಲಕ ನಿರ್ಣಾಯಕ ಜಾಗತಿಕ ಆರೋಗ್ಯ ಸವಾಲುಗಳನ್ನು ಭಾರತವು ಎದುರಿಸುತ್ತಿದೆ" ಎಂದು ಹೇಳಿದರು. ಅಂತಾರಾಷ್ಟ್ರೀಯ ಆರೋಗ್ಯ ನಿಯಂತ್ರಣಕ್ಕೆ ಅನುಗುಣವಾಗಿ ಸಾಮೂಹಿಕವಾಗಿ ಸಾಂಕ್ರಾಮಿಕ ರೋಗದ ಅಪಾಯಗಳನ್ನು ತಡೆಯಲು ಬ್ರಿಕ್ಸ್ ಸಮಗ್ರ ಮುನ್ನೆಚ್ಚರಿಕೆ ವ್ಯವಸ್ಥೆಯ ಅಗತ್ಯವನ್ನು ಭಾರತ ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಸ್ವೀಕರಿಸಿ, ಸಾಂಕ್ರಾಮಿಕ ರೋಗ ಲಕ್ಷಣಗಳ ಕಣ್ಗಾವಲಿಗಾಗಿ ಒಂದು-ಆರೋಗ್ಯ ಕಾರ್ಯತಂತ್ರ ವಿಧಾನದ ಮೇಲೆ ಹೆಚ್ಚಿನ ಗಮನ ಹರಿಸಿದೆ ಎಂದು ಅವರು ಹೇಳಿದರು.
ಬ್ರಿಕ್ಸ್ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಭಾರತದ ಅಧ್ಯಕ್ಷೀಯ ಅವಧಿಯಲ್ಲಿ ವರ್ಚುವಲ್ ಆಗಿ ಪ್ರಾರಂಭಿಸಲಾಯಿತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ - ರಾಷ್ಟ್ರೀಯ ವೈರಾಲಜಿ ಸಂಸ್ಥೆಯನ್ನು ಬ್ರಿಕ್ಸ್ ಲಸಿಕೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಚಟುವಟಿಕೆಗಳಿಗೆ ಸಮನ್ವಯ ಸಂಸ್ಥೆಯಾಗಿ ಗೊತ್ತುಪಡಿಸಲಾಗಿದೆ ಎಂದು ಶ್ರೀ ಅಪೂರ್ವ ಚಂದ್ರ ಒತ್ತಿ ಹೇಳಿದರು. "ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಇತರ ಪಾಲುದಾರ ಸಂಸ್ಥೆಗಳ ಸಹಯೊಗದೊಂದಿಗೆ ಮರುಸಂಯೋಜಕ ಡೆಂಗ್ಯೂ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ ಗಳನ್ನು ಪ್ರಾರಂಭಿಸುತ್ತಿದೆ. ಇದಲ್ಲದೆ ಹೆಚ್ಚುವರಿಯಾಗಿ, ಸ್ಥಳೀಯವಾಗಿ ಸ್ಥಳೀಯ ರೋಗಗಳಾದ ಕ್ಯಾಸನೂರು ಅರಣ್ಯ ರೋಗ (ಕೆಎಫ್ ಡಿ), ನಿಪಾ ವೈರಸ್, ಹ್ಯೂಮನ್ ಪ್ಯಾಪಿಲೋಮಾ ವೈರಸ್, ಎಂಟಿಬಿವಿಎಸಿ (ಮೈಕೋಬ್ಯಾಕ್ಟೀರಿಯಮ್ ಟ್ಯೂಬರ್ಕ್ಯುಲೋಸಿಸ್ ಲಸಿಕೆ) ಮತ್ತು ಇನ್ಫ್ಲುಯೆನ್ಸ ಸಂಶೋಧನೆ ಮತ್ತು ಪ್ರಯೋಗಗಳನ್ನು ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಇತರ ಪಾಲುದಾರರಿಗೆ ನೀಡಲಾಗಿದೆ ಎಂದು ಅವರು ಹೇಳಿದರು.
ಬ್ರಿಕ್ಸ್ ರಾಷ್ಟ್ರೀಯ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಜಾಗತಿಕ ಸವಾಲಾಗಿ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಕುರಿತ ಮುಂಬರುವ ಬ್ರಿಕ್ಸ್ ಸಮ್ಮೇಳನದ ಕಾರ್ಯಸೂಚಿಯೊಂದಿಗೆ ಭಾರತವು ಸಮಾನಾಂತರವಾಗಿ ಹೊಂದಿಕೆಯಾಗುತ್ತದೆ ಎಂದು ಹೇಳಿದ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು, "2017ರಲ್ಲಿ ಪ್ರಾರಂಭಿಸಲಾದ ಆಂಟಿಮೈಕ್ರೊಬಿಯಲ್ ಪ್ರತಿರೋಧ ಕುರಿತ ಭಾರತದ ರಾಷ್ಟ್ರೀಯ ಕ್ರಿಯಾ ಯೋಜನೆಯು ಅಂತರ-ವಲಯ ಸಹಯೋಗ ಮತ್ತು ಒಂದು-ಆರೋಗ್ಯ ಕಾರ್ಯತಂತ್ರ ವಿಧಾನದ ಮೇಲೆ ಕೇಂದ್ರೀಕರಿಸುತ್ತದೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ರಿಯಾ ಯೋಜನೆಯಲ್ಲಿ ವಿವರಿಸಿದ ಉದ್ದೇಶಗಳಿಗೆ ಅನುಗುಣವಾಗಿದೆ. ಭಾರತವು ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಜಾಗತಿಕ ಕಾಳಜಿ ಎಂದು ಗುರುತಿಸುತ್ತದೆ ಮತ್ತು ದತ್ತಾಂಶ ವಿಶ್ಲೇಷಣೆ, ಪ್ರಯೋಗಾಲಯ ಗುಣಮಟ್ಟ ನಿಯಂತ್ರಣ, ಸಾಂಕ್ರಾಮಿಕ ರೋಗಶಾಸ್ತ್ರೀಯ ಮೌಲ್ಯಮಾಪನ ಮತ್ತು ತರಬೇತಿ ಉಪಕ್ರಮಗಳಂತಹ ಸಮಗ್ರ ಕ್ರಮಗಳ ಮೂಲಕ ಆಂಟಿಮೈಕ್ರೊಬಿಯಲ್ ಪ್ರತಿರೋಧವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಪ್ರೋಟೋಕಾಲ್ ಗಳು, ಯೋಜನೆಗಳು ಮತ್ತು ವೇದಿಕೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಯೋಗವನ್ನು ಉತ್ತೇಜಿಸುತ್ತದೆ" ಎಂದರು.
ಮುಂದುವರೆದು, "ಸುಧಾರಿತ ಡಿಜಿಟಲ್ ಪರಿಹಾರಗಳ ಅಭಿವೃದ್ಧಿ ಮತ್ತು ವಾಣಿಜ್ಯೀಕರಣವನ್ನು ಉತ್ತೇಜಿಸುವುದರ ಜೊತೆಗೆ ರೇಡಿಯೋ-ಔಷಧೀಯ ಪೂರೈಕೆ ಸರಪಳಿಯನ್ನು ಬಲಪಡಿಸಲು ಮತ್ತು ಐಸೊಟೋಪ್ ಗಳ ಉತ್ಪಾದನೆಯನ್ನು ಹೆಚ್ಚಿಸಲು ನಿರ್ದಿಷ್ಟ ಒತ್ತು ನೀಡುವ ಮೂಲಕ ಪರಮಾಣು ಔಷಧ ಮತ್ತು ರೇಡಿಯೋ-ಫಾರ್ಮಾಸ್ಯುಟಿಕಲ್ ವಿಜ್ಞಾನದಲ್ಲಿ ಬ್ರಿಕ್ಸ್ ರಾಷ್ಟ್ರಗಳಲ್ಲಿ ಸಹಯೋಗವನ್ನು ಮುನ್ನಡೆಸುವ ಮಹತ್ವ ಕಾರ್ಯವನ್ನು ಭಾರತವು ಸ್ವೀಕರಿಸಿದೆ" ಎಂದು ಶ್ರೀ ಅಪೂರ್ವ ಚಂದ್ರ ಹೇಳಿದರು.
ವಿವಿಧ ಆರೋಗ್ಯ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ಸಲುವಾಗಿ ಸಹಕಾರ ಮತ್ತು ಸಹಯೋಗವನ್ನು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡುವಂತೆ ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಹೆಕಾಲಿ ಝಿಮೋಮಿ, ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ (ರಾಷ್ಟ್ರೀಯ ಆರೋಗ್ಯ ಮಿಷನ್) ಶ್ರೀಮತಿ ಆರಾಧನಾ ಪಟ್ನಾಯಕ್ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*****
(Release ID: 2022177)
Visitor Counter : 66