ಉಪರಾಷ್ಟ್ರಪತಿಗಳ ಕಾರ್ಯಾಲಯ

2024ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಉಪರಾಷ್ಟ್ರಪತಿಗಳು, ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಮನವಿ


"ಮತದಾನ ನಮ್ಮ ಕರ್ತವ್ಯ ಮತ್ತು ಹಕ್ಕು" - ಉಪ ರಾಷ್ಟ್ರಪತಿಗಳು

ಭಾರತವು ವಿಶ್ವದಲ್ಲಿ ಅತ್ಯಂತ ವೈವಿಧ್ಯಮಯ, ಸಕ್ರಿಯ ಮತ್ತು ಪರಿಣಾಮಕಾರಿ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ - ಉಪ ರಾಷ್ಟ್ರಪತಿಗಳು

Posted On: 25 MAY 2024 12:10PM by PIB Bengaluru

ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧಂಖರ್ ಮತ್ತು ಡಾ ಸುದೇಶ್ ಧಂಖರ್ ಅವರು ಇಂದು ದೆಹಲಿಯ ನಾರ್ತ್ ಅವೆನ್ಯೂನಲ್ಲಿರುವ ಸಿಪಿಡಬ್ಲ್ಯುಡಿ ಸೇವಾ ಕೇಂದ್ರದ ಮತಗಟ್ಟೆಯಲ್ಲಿ 2024 ರ ಲೋಕಸಭೆ ಚುನಾವಣೆಗೆ ಮತ ಚಲಾಯಿಸಿದರು.

ಮತದಾನ ಬಳಿಕ ಮಾತನಾಡಿದ ಉಪ ರಾಷ್ಟ್ರಪತಿಗಳಾದ ಜಗದೀಪ್ ಧಂಖರ್, ಪ್ರಜಾಪ್ರಭುತ್ವದ ಈ ಭವ್ಯ ಉತ್ಸವದಲ್ಲಿ ಮತದಾನ ಮಾಡುವುದು ನಮ್ಮ ಕರ್ತವ್ಯ ಮತ್ತು ಹಕ್ಕು ಎರಡೂ ಆಗಿದೆ ಎಂದರು.

 

ಭಾರತವನ್ನು "ಅತ್ಯಂತ ವೈವಿಧ್ಯಮಯ, ಸಕ್ರಿಯ ಮತ್ತು ಪರಿಣಾಮಕಾರಿ ಪ್ರಜಾಪ್ರಭುತ್ವ" ಎಂದು ಬಣ್ಣಿಸಿದ ಶ್ರೀ ಧಂಖರ್, "ಭಾರತವು ಜಗತ್ತಿಗೆ ಒಂದು ಉದಾಹರಣೆಯಾಗಿದೆ" ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಪೂರೈಸಬೇಕೆಂದು ಒತ್ತಾಯಿಸಿದರು.

 

1.jpeg

4.jpeg

2.jpeg

5.jpeg

3.jpeg

6.jpeg

*****



(Release ID: 2021625) Visitor Counter : 30