ಚುನಾವಣಾ ಆಯೋಗ

ಸಮೀಕ್ಷೆ ನೆಪದಲ್ಲಿ ಚುನಾವಣೆ ನಂತರದ ಫಲಾನುಭವಿ ಆಧಾರಿತ ಯೋಜನೆಗಳಿಗೆ ಮತದಾರರ ನೋಂದಣಿ ನಿಲ್ಲಿಸುವಂತೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಆಯೋಗ ಸೂಚನೆ


ಮತದಾನಕ್ಕಾಗಿ ಪರಸ್ಪರ ಓಲೈಕೆಯ ಸಂಭಾವ್ಯತೆಯಿದ್ದು, ಇದು ಲಂಚ/ಭ್ರಷ್ಟ ಅಭ್ಯಾಸಗಳಿಗೆ ಸಮ

Posted On: 02 MAY 2024 5:34PM by PIB Bengaluru

ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ತಮ್ಮ ಉದ್ದೇಶಿತ ಫಲಾನುಭವಿ ಯೋಜನೆಗಳಿಗಾಗಿ ವಿವಿಧ ಸಮೀಕ್ಷೆಗಳ ನೆಪದಲ್ಲಿ ಮತದಾರರ ವಿವರಗಳನ್ನು ಕಲೆ ಹಾಕುವ ಚಟುವಟಿಕೆಗಳನ್ನು ಭಾರತೀಯ ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಇದು ಪ್ರಜಾಪ್ರತಿನಿಧಿ ಕಾಯ್ದೆ, 1951ರ ನಿಯಮ 123(1)ರ ಅಡಿಯಲ್ಲಿ ಲಂಚದ ಭ್ರಷ್ಟ ಅಭ್ಯಾಸವಾಗಿದೆ ಎಂದು ಪರಿಗಣಿಸಲ್ಪಡಲಿದೆ. " ಕಾನೂನುಬದ್ಧ ಸಮೀಕ್ಷೆಗಳು ಮತ್ತು ಚುನಾವಣೋತ್ತರ ಫಲಾನುಭವಿ-ಆಧಾರಿತ ಯೋಜನೆಗಳಿಗೆ ವ್ಯಕ್ತಿಗಳನ್ನು ನೋಂದಾಯಿಸುವ ನೆಪದಲ್ಲಿ ಮತದಾರರ ವಿವರಗಳನ್ನು ಸಂಗ್ರಹಿಸುವ ಸಮೀಕ್ಷೆ ನೆಪದ ಚಟುವಟಿಕೆಗಳ ನಡುವೆ ಕೂದಲೆಳೆ ಅಂತರವಿದ್ದು, ಕೆಲವು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿರುವುದು ಕಂಡು ಬಂದಿದೆ" ಎಂದು ಆಯೋಗ ಹೇಳಿದೆ.

ಪ್ರಸ್ತುತ ನಡೆಯುತ್ತಿರುವ 2024ರ ಲೋಕಸಭಾ ಚುನಾವಣೆಗಳಲ್ಲಿ ವಿವಿಧ ಪ್ರಕರಣಗಳನ್ನು ಗಮನಿಸಿರುವ ಆಯೋಗವು ಇಂದು ಎಲ್ಲಾ ರಾಷ್ಟ್ರೀಯ ಪಕ್ಷಗಳಿಗೆ ಮತ್ತು ರಾಜ್ಯ ಪಕ್ಷಗಳಿಗೆ ಸಲಹೆಯನ್ನು ನೀಡಿದೆ (ಲಿಂಕ್: https://www.eci.gov.in/eci-backend/public/api/download?). ಎಲ್ಲಾ ರಾಜಕೀಯ ಪಕ್ಷಗಳು ಯಾವುದೇ ಜಾಹೀರಾತು/ ಸಮೀಕ್ಷೆ/ಆ್ಯಪ್ ಮೂಲಕ ಚುನಾವಣೋತ್ತರ ಫಲಾನುಭವಿ-ಆಧಾರಿತ ಯೋಜನೆಗಳಿಗೆ ನೋಂದಣಿ ಒಳಗೊಂಡಿರುವ ಯಾವುದೇ ಚಟುವಟಿಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಸೂಚನೆ ನೀಡಿದೆ.

ಚುನಾವಣಾ ನಂತರದ ಉದ್ದೇಶಿತ ಯೋಜನೆಗಳಿಗೆ ಮತದಾರರು ನೋಂದಾಯಿಸಿಕೊಳ್ಳುವಂತೆ ಆಹ್ವಾನಿಸುವುದು / ಕರೆ ನೀಡುವುದು, ಮತದಾರರೊಂದಿಗೆ ನೇರ ಸಂಬಂಧ ಹೊಂದುವ ಪ್ರಯತ್ನ ಎಂಬ ಭಾವನೆ ಮೂಡಿಸಲಿದ್ದು, ಇದು ಮತದಾರರನ್ನು ಸೆಳೆಯಲು ಪರಸ್ಪರ ಒಪ್ಪಂದವಾಗುವ (ಕ್ವಿಡ್‌ - ಪ್ರೊ – ಕ್ವೋ) ಸಂಭಾವ್ಯತೆ ಇದ್ದು, ಇದು ನಿರ್ದಿಷ್ಟ ವಿಧಾನದಲ್ಲಿ ಸೆಳೆಯುವ ತಂತ್ರ ಎಂದೆನಿಸಲಿದೆ. 

ವಿಶಿಷ್ಟ ಮತ್ತು ಸಾಮಾನ್ಯ ಚುನಾವಣಾ ಪ್ರಣಾಳಿಕೆ ಭರವಸೆಗಳಿಗೆ ಅನುಮತಿ ಇದೆ, ಆದರೆ ಕೆಳಗೆ ಕೋಷ್ಠಕ 1ರಲ್ಲಿ ನೀಡಿರುವ ಕ್ರಿಯೆಗಳನ್ನೊಳಗೊಳ್ಳುವ ಚಟುವಟಿಕೆಗಳಿಗೂ ನೈಜ ಸಮೀಕ್ಷೆಗಳಿಗೂ ವ್ಯತ್ಯಾಸವಿದೆ. ರಾಜಕೀಯ ಉದ್ದೇಶಕ್ಕಾಗಿ ವಿವಿಧ ಕಾರ್ಯಕ್ರಮಗಳಿಗೆ ನೋಂದಣಿಯಾಗುವಂತೆ ತಿಳಿಸುವ ಮೂಲಕ ಪೂರ್ವಾಗ್ರಹ ಭಾವನೆಗಳನ್ನು ಬಿತ್ತುವ ಪ್ರಯತ್ನಗಳು ಸಮೀಕ್ಷೆಯ ಭಾಗವಾಗುವುದಿಲ್ಲ. ಸಂಭಾವ್ಯ ವೈಯಕ್ತಿಕ ಪ್ರಯೋಜನಗಳಿಗಾಗಿ ಸರ್ಕಾರಿ ಕಾರ್ಯಕ್ರಮಗಳು ಅಥವಾ ಪಕ್ಷದ ಕಾರ್ಯಸೂಚಿಗಳ ಬಗ್ಗೆ ತಿಳಿಸುತ್ತಾ, ನೈಜ ಉದ್ದೇಶ ಮರೆಮಾಚುತ್ತಾ, ಇದನ್ನು ಕಾನೂನಾತ್ಮಕ ಸಮೀಕ್ಷೆ ಎಂದು ನಡೆಸುವ ಪ್ರಯತ್ನಗಳು ನಡೆದಿವೆ ಎಂದು ಆಯೋಗ ಹೇಳಿದೆ.

ಇಂತಹ ಯಾವುದೇ ಜಾಹೀರಾತಿನ ವಿರುದ್ಧ ಕಾನೂನುಬದ್ಧ ನಿಯಮಗಳಾದ ಪ್ರಜಾಪ್ರತಿನಿಧಿ ಕಾಯ್ದೆ, 1951ರ ಸೆಕ್ಷನ್‌ 127ಎ, ಪ್ರಜಾಪ್ರತಿನಿಧಿ ಕಾಯ್ದೆ, 1951ರ ಸೆಕ್ಷನ್ 123 (1) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171 (ಬಿ) ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಆಯೋಗ ನಿರ್ದೇಶನ ನೀಡಿದೆ. 

ಕೋಷ್ಠಕ 1:

  1. ವಿವಿಧ ಯೋಜನೆಗಳ ಲಾಭ ಪಡೆಯಲು ಮತದಾರರು ಮಿಸ್ಟ್‌ ಕಾಲ್‌ ನೀಡುವ ಮೂಲಕ ಅಥವಾ ದೂರವಾಣಿ ಕರೆ ಮಾಡುವ ಮೂಲಕ ನೋಂದಾಯಿಸಿಕೊಳ್ಳುವಂತೆ ತಿಳಿಸುವ ವೃತ್ತಪತ್ರಿಕೆ ಜಾಹೀರಾತುಗಳು
  2. ಕರಪತ್ರದ ಮಾದರಿಯಲ್ಲಿ ಗ್ಯಾರಂಟಿ ಕಾರ್ಡ್‌ಗಳ ವಿತರಣೆ, ಇವುಗಳಲ್ಲಿ ಸಂಭಾವ್ಯ ಲಾಭದ ಬಗ್ಗೆ ಮಾಹಿತಿ ನೀಡಿ, ಮತದಾರರು ತಮ್ಮ ಹೆಸರು, ವಯಸ್ಸು, ವಿಳಾಸ, ಮೊಬೈಲ್‌ ಸಂಖ್ಯೆ, ಮತಗಟ್ಟೆ ಸಂಖ್ಯೆ, ಕ್ಷೇತ್ರದ ಹೆಸರು ಮತ್ತು ಸಂಖ್ಯೆ ಮೊದಲಾದ ವಿವರಗಳನ್ನು ನಮೂದಿಸುವಂತೆ ಕೋರಿರುವ ಕರಪತ್ರಗಳು. 
  3. ಸಾಮಾಜಿಕ-ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ, ಪ್ರಸ್ತುತ ಇರುವ ಸರ್ಕಾರಿ ಯೋಜನೆಗಳ ಲಾಭ ವಿಸ್ತರಿಸುವ ನೆಪದಲ್ಲಿ ಮತದಾರರ ಹೆಸರು, ಪಡಿತರ ಚೀಟಿ ಸಂಖ್ಯೆ, ವಿಳಾಸ, ದೂರವಾಣಿ ಸಂಖ್ಯೆ, ಮತಗಟ್ಟೆ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ, ಲೋಕಸಭಾ/ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಸಂಖ್ಯೆ ಇತ್ಯಾದಿ ವಿವರಗಳನ್ನು ಕೋರಿರುವ ಅರ್ಜಿ ವಿತರಣೆ 
  4. ರಾಜಕೀಯ ಪಕ್ಷಗಳು / ಅಭ್ಯರ್ಥಿಗಳು ಜಾಲತಾಣ ಅಥವಾ ಆನ್‌ ಲೈನ್‌ ಅಪ್ಲಿಕೇಷನ್‌ ಹಂಚಿಕೊಳ್ಳುವ ಮೂಲಕ ಅದರಲ್ಲಿ ಮತದಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಮತಗಟ್ಟೆ ಸಂಖ್ಯೆ, ಮತಕ್ಷೇತ್ರದ ಹೆಸರು ಮತ್ತು ಸಂಖ್ಯೆ ಮೊದಲಾದ ಮಾಹಿತಿ ಕೋರುವುದು (ಇದರಲ್ಲಿ ವೈಯಕ್ತಿಕ ಲಾಭ/ ಯೋಜನೆಯ ಲಾಭ ಪಡೆಯುವ ಆಹ್ವಾನ ಇಲ್ಲದೇ ಇರಬಹುದು ಅಥವಾ ಅವರು ಯಾರಿಗೆ ಮತ ಹಾಕಲು ಆದ್ಯತೆ ನೀಡಿದ್ದಾರೆ ಎಂಬ ವಿವರಗಳನ್ನು ಕೇಳಿಲ್ಲದೇ ಇರಬಹುದು)
  5. ಪ್ರಸ್ತುತ ಇರುವ ಸರ್ಕಾರಿ ಯೋಜನೆಗಳ ಬಗ್ಗೆ ವೃತ್ತಪತ್ರಿಕೆ ಜಾಹೀರಾತು ಅಥವಾ ಅರ್ಜಿ ವಿತರಿಸಿ, ಮತದಾರರ ಹೆಸರು, ತಂದೆ/ಗಂಡನ ಹೆಸರು, ದೂರವಾಣಿ ಸಂಖ್ಯೆ, ವಿಳಾಸ ಮೊದಲಾದವುಗಳ ಮಾಹಿತಿ ಕೋರುವುದು.

*****

 



(Release ID: 2019545) Visitor Counter : 44