ರಾಷ್ಟ್ರಪತಿಗಳ ಕಾರ್ಯಾಲಯ
ವಿಶ್ವ ಹೋಮಿಯೋಪತಿ ದಿನದಂದು ತಿಗಳು ಹೋಮಿಯೋಪತಿ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಭಾರತದ ರಾಷ್ಟ್ರಪತಿ
Posted On:
10 APR 2024 12:56PM by PIB Bengaluru
ವಿಶ್ವ ಹೋಮಿಯೋಪತಿ ದಿನದ ಸಂದರ್ಭದಲ್ಲಿ, ಹೋಮಿಯೋಪತಿ ಸಂಶೋಧನಾ ಕೇಂದ್ರದ ವತಿಯಿಂದ ಇಂದು (ಏಪ್ರಿಲ್ 10, 2024) ನವದೆಹಲಿಯಲ್ಲಿ ಆಯೋಜಿಸಲಾದ ಎರಡು ದಿನಗಳ ಹೋಮಿಯೋಪತಿ ವಿಚಾರ ಸಂಕಿರಣವನ್ನು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, “ಹೋಮಿಯೋಪತಿಯನ್ನು ಹಲವು ದೇಶಗಳಲ್ಲಿ ಸರಳ ಮತ್ತು ಸುಲಭ ಚಿಕಿತ್ಸಾ ವಿಧಾನವಾಗಿ ಅಳವಡಿಸಿಕೊಳ್ಳಲಾಗಿದೆ. ಪ್ರಪಂಚದಾದ್ಯಂತ, ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಮಟ್ಟದಲ್ಲಿ ಅನೇಕ ಸಂಸ್ಥೆಗಳು ಹೋಮಿಯೋಪತಿಯನ್ನು ಉತ್ತೇಜಿಸುತ್ತಿವೆ” ಎಂದು ಹೇಳಿದರು ಹಾಗು ಆಯುಷ್ ಸಚಿವಾಲಯ, ಹೋಮಿಯೋಪತಿಯ ಕೇಂದ್ರೀಯ ಕೌನ್ಸಿಲ್, ಹೋಮಿಯೋಪತಿ ರಾಷ್ಟ್ರೀಯ ಆಯೋಗ, ರಾಷ್ಟ್ರೀಯ ಹೋಮಿಯೋಪತಿ ಸಂಸ್ಥೆ ಮತ್ತು ಭಾರತದಲ್ಲಿ ಹೋಮಿಯೋಪತಿಯನ್ನು ಉತ್ತೇಜಿಸುವಲ್ಲಿ ನೀಡಿದ ಕೊಡುಗೆಗಾಗಿ ಕೇಂದ್ರ ಸರ್ಕಾರದ ಎಲ್ಲಾ ಸಂಸ್ಥೆಗಳನ್ನು ಶ್ಲಾಘಿಸಿದರು.
“ 21ನೇ ಶತಮಾನದಲ್ಲಿ ಹೋಮಿಯೋಪತಿ ಸಂಶೋಧನೆಯ ಮಹತ್ವ ನಿರಂತರವಾಗಿ ಹೆಚ್ಚುತ್ತಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಆದ್ದರಿಂದ, ಈ ವಿಚಾರ ಸಂಕಿರಣದ ವಿಷಯವು ‘ಸಶಕ್ತ ಸಂಶೋಧನೆ, ಪ್ರಾವೀಣ್ಯತೆಯನ್ನು ಹೆಚ್ಚಿಸುವುದು’ ಬಹಳ ಪ್ರಸ್ತುತವಾಗಿದೆ. ಹೋಮಿಯೋಪತಿಯ ಸ್ವೀಕಾರತೆ ಮತ್ತು ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಸಂಶೋಧನೆ ಮತ್ತು ಪ್ರಾವೀಣ್ಯತೆಯು ಪ್ರಮುಖ ಪಾತ್ರ ವಹಿಸುತ್ತದೆ” ಎಂದು ರಾಷ್ಟ್ರಪತಿಯವರು ಹೇಳಿದರು.
“ ವಿವಿಧ ವಿಧಾನಗಳಿಂದ ಚಿಕಿತ್ಸೆ ಪಡೆದು ನಿರಾಶೆಗೊಂಡ ಅನೇಕರು, ಕೊನೆಗೆ ಹೋಮಿಯೋಪತಿಯ ಪವಾಡ ಸದೃಶ ಪ್ರಯೋಜನವನ್ನು ಪಡೆದ ಅವರ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಸತ್ಯ ಮತ್ತು ವಿಶ್ಲೇಷಣೆಯೊಂದಿಗೆ ಪ್ರಸ್ತುತಪಡಿಸಿದಾಗ ಮಾತ್ರ ಅಂತಹ ಅನುಭವಗಳನ್ನು ವೈಜ್ಞಾನಿಕ ಸಮುದಾಯದಲ್ಲಿ ಗುರುತಿಸಬಹುದು. ದೊಡ್ಡ ಪ್ರಮಾಣದಲ್ಲಿ ಮಾಡುವ ಇಂತಹ ವಾಸ್ತವಿಕ ವಿಶ್ಲೇಷಣೆಯನ್ನು ಅಧಿಕೃತ ವೈದ್ಯಕೀಯ ಸಂಶೋಧನೆ ಎಂದು ಕರೆಯಲಾಗುತ್ತದೆ. ವೈಜ್ಞಾನಿಕ ಕಠೋರತೆಯನ್ನು ಪ್ರೋತ್ಸಾಹಿಸುವುದು ಈ ವೈದ್ಯಕೀಯ ವ್ಯವಸ್ಥೆಯಲ್ಲಿ ಜನರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತದೆ” ಎಂದು ರಾಷ್ಟ್ರಪತಿಯವರು ಹೇಳಿದರು.
“ಆರೋಗ್ಯವಂತರು ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು, ಸ್ವಸ್ಥ ಸಮಾಜದ ತಳಹದಿಯ ಮೇಲೆ ಸ್ವಸ್ಥ ರಾಷ್ಟ್ರ ನಿರ್ಮಾಣವಾಗುತ್ತದೆ. ಆರೋಗ್ಯಕರ, ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಎಲ್ಲಾ ಆರೋಗ್ಯ ವೃತ್ತಿಪರರು ಅಮೂಲ್ಯ ಕೊಡುಗೆ ನೀಡುತ್ತಾರೆ” ಎಂದು ರಾಷ್ಟ್ರಪತಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರಪತಿಯವರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -
******
(Release ID: 2017628)
Visitor Counter : 76