ರಾಷ್ಟ್ರಪತಿಗಳ ಕಾರ್ಯಾಲಯ

ಭಾರತದಲ್ಲಿ ಮೊದಲ ಬಾರಿಗೆ ಮನೆಯಲ್ಲಿ ಕ್ಹಾನ್ಸರ್‌ ಗೆ ಜೀನ್‌ ಬೆಳವಣಿಗೆ ಚಿಕಿತ್ಸೆಗೆ ಚಾಲನೆ ನೀಡಿದ ಭಾರತದ ರಾಷ್ಟ್ರಪತಿಯವರು


ಕೈಗೆಟುವ ಮತ್ತು ಸುಲಭ ದರದಲ್ಲಿ ಕಾರ್‌ ಟಿ ಸೆಲ್‌ ಚಿಕಿತ್ಸೆ ದೊರೆಯುವುದರಿಂದ ಇಡೀ ಮನುಕುಲಕ್ಕೆ ಹೊಸ ಭರವಸೆ ; ರಾಷ್ಟ್ರಪತಿ ದ್ರೌಪದಿ ಮುರ್ಮು 

Posted On: 04 APR 2024 2:03PM by PIB Bengaluru

ಬಾಂಬೆ ಐಐಟಿಯಲ್ಲಿ [2024, ಏಪ್ರಿಲ್‌ 4] ಇಂದು ಭಾರತದಲ್ಲಿ ಮೊದಲ ಬಾರಿಗೆ ಮನೆಯಲ್ಲಿ ಕ್ಯಾನ್ಸರ್‌ ಗೆ ಜೀನ್‌ ಬೆಳವಣಿಗೆ ಚಿಕಿತ್ಸೆಗೆ ಭಾರತದ ರಾಷ್ಟ್ರಪತಿಯವರಾದ ಶ್ರೀಮತಿ ದ್ರೌಪದಿ ಮುರ್ಮು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಯವರು, ಮೊದಲ ಜೀನ್‌ ಥೆರಪಿಗೆ ಚಾಲನೆ ನೀಡಿದ್ದು, ಇದು ಕ್ಯಾನ್ಸರ್‌ ವಿರುದ್ಧ ಹೋರಾಟ ಮಾಡಲು ಪ್ರಮುಖ ಬೆಳವಣಿಗೆಯಾಗಿದೆ. “ಕಾರ್‌ ಟಿ ಸೆಲ್‌ ಥೆರಪಿ” ಹೆಸರಿನ ಈ ಚಿಕಿತ್ಸೆ ಸುಲಭ ದರದಲ್ಲಿ ಮತ್ತು ಕೈಗೆಟುವ ಚಿಕಿತ್ಸೆಯಾಗಿದ್ದು, ಇದು ಇಡೀ ಮನುಕುಲಕ್ಕೆ ಹೊಸ ಭರವಸೆ ಮೂಡಿಸಿದೆ. ಅಸಂಖ್ಯಾತ ರೋಗಿಗಳಿಗೆ ಈ ಚಿಕಿತ್ಸೆ ಯಶಸ್ವಿಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.   
ವೈದ್ಯಕೀಯ ವಿಜ್ಞಾನದಲ್ಲಿ ಕಾರ್‌ ಟಿ ಸೆಲ್‌ ಥೆರಪಿಯನ್ನು ಪರಮೋಚ್ಛ ಅತ್ಯಾಧುನಿಕ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ಇಂತಹ ಚಿಕಿತ್ಸೆ ಅಭಿವೃದ್ಧಿಶೀಲ ದೇಶಗಳಲ್ಲಿತ್ತು, ಆದರೆ ಅದು ತುಂಬಾ ದುಬಾರಿಯಾಗಿತ್ತು. ಇದೀಗ ತನ್ನ ವ್ಯಾಪ್ತಿಯನ್ನು ಮೀರಿ ಹೆಚ್ಚಿನ ರೋಗಿಗಳನ್ನು ಇದು ತಲುಪಲಿದೆ. ಜಗತ್ತಿನಲ್ಲಿ ಕೈಗೆಟುವ ಕಾರ್‌ ಟಿ ಸೆಲ್‌ ಥೆರಪಿಗೆ ಚಾಲನೆ ನೀಡುತ್ತಿರುವ ಬಗ್ಗೆ ತಮಗೆ ಸಂತಸವಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ಇದು ಭಾರತದಲ್ಲೇ ತಯಾರಿಸುವ ಪರಿಕಲ್ಪನೆಗೆ, ಸ್ವಾವಲಂಬಿ ಭಾರತ ನಿರ್ಮಾಣದ ನಿಟ್ಟಿನಲ್ಲಿ ಪ್ರಮುಖ ನಿದರ್ಶನವಾಗಿದೆ ಎಂದರು. 

ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆ – ಐಐಟಿ ಮತ್ತು ಟಾಟಾ ಮೆಮೋರಿಯಲ್‌ ಆಸ್ಪತ್ರೆಯಿಂದ  ಇಮ್ಯುನೋ ಆಕ್ಟ್‌ ಸಂಸ್ಥೆಯ ಸಹಯೋಗದಲ್ಲಿ ಈ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸಲಾಗಿದೆ. ಅಕಾಡೆಮಿ ಮತ್ತು ಕೈಗಾರಿಕಾ ವಲಯದ ಸಹಭಾಗಿತ್ವ ಮೆಚ್ಚುಗೆಗೆ ಕಾರಣವಾಗಿದೆ. ಇದೇ ರೀತಿಯ ಹಲವು ಪ್ರಯತ್ನಗಳಿಗೆ ಇದು ಸ್ಫೂರ್ತಿಯಾಗಿದೆ ಎಂದರು. 

ಐಐಟಿ ಬಾಂಬೆ ಭಾರತವಷ್ಟೇ ಅಲ್ಲದೇ ಜಗತ್ತಿನಾದ್ಯಂತ ಖ್ಯಾತಿ ಪಡೆದಿದ್ದು, ಇದು ತಂತ್ರಜ್ಞಾನ ಶಿಕ್ಷಣಕ್ಕೆ ಮಾದರಿಯಾಗಿದೆ. ಕಾರ್‌ ಟಿ ಸೆಲ್‌ ಥೆರಪಿ ಅಭಿವೃದ್ಧಿಪಡಿಸಿದ್ದು, ಇದು ಮನುಕುಲಕ್ಕೆ ಸೇವೆ ಸಲ್ಲಿಸುವ ಜೊತೆಗೆ ಮತ್ತೊಂದು ಕೈಗಾರಿಕಾ ವಲಯದ ಜೊತೆ ಸಹಭಾಗಿತ್ವ ಹೊಂದಿರುವುದು ಮಹತ್ವದ ಬೆಳವಣಿಯಾಗಿದೆ. ಕಳೆದ ಮೂರು ದಶಕಗಳಿಂದ ಐಐಟಿ ಬಾಂಬೆ ಸಂಶೋಧನೆ ಮತ್ತು ಅಭಿವೃದ್ದಿ ವಲಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಜ್ಞಾನಾಧಾರಿತ, ಕೌಶಲ್ಯಯುತ ಬೋಧಕರು, ಐಐಟಿ ಬಾಂಬೆಯ ವಿದ್ಯಾರ್ಥಿಗಳು, ಇದೇ ರೀತಿಯ ಸಂಸ್ಥೆಗಳು ಒಟ್ಟಾರೆಯಾಗಿ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನದಲ್ಲಿ ಕ್ರಾಂತಿಯುಂಟು ಮಾಡುವ ನಿಟ್ಟಿನಲ್ಲಿ ಸಾಗುತ್ತಿರುವುದು ಸಂತಸ ತಂದಿದೆ ಎಂದರು. 

*****



(Release ID: 2017162) Visitor Counter : 99