ಪ್ರಧಾನ ಮಂತ್ರಿಯವರ ಕಛೇರಿ

ಮಾರ್ಚ್ 14 ರಂದು ದೆಹಲಿಯಲ್ಲಿ ಪ್ರಧಾನಮಂತ್ರಿಯವರು ಸ್ವನಿಧಿ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ


1 ಲಕ್ಷ ಬೀದಿಬದಿಯ ವ್ಯಾಪಾರಿಗಳಿಗೆ ಈ ಯೋಜನೆಯಡಿ ಪ್ರಧಾನಮಂತ್ರಿಯವರು ಸಾಲ ವಿತರಿಸಲಿದ್ದಾರೆ 

ದೆಹಲಿ ಮೆಟ್ರೋದ 4 ನೇ ಹಂತದ ಎರಡು ಹೆಚ್ಚುವರಿ ಕಾರಿಡಾರ್ ಗಳ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸುವರು

ಈ ಕಾರಿಡಾರ್‌ ಗಳು  ಲಜಪತ್ ನಗರದಿಂದ ಸಾಕೇತ್-ಜಿ ಬ್ಲಾಕ್ ಮತ್ತು ಇಂದ್ರಲೋಕದಿಂದ ಇಂದ್ರಪ್ರಸ್ಥದವರೆಗೆ ಇವೆ

Posted On: 13 MAR 2024 7:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾರ್ಚ್ 14 ರಂದು ಸಂಜೆ 5 ಗಂಟೆಗೆ ದೆಹಲಿಯ ಜೆ ಎಲ್ ಎನ್  ಕ್ರೀಡಾಂಗಣದಲ್ಲಿ  ಪಿಎಂ ಸ್ವನಿಧಿ   ಯೋಜನೆಯ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ದೆಹಲಿಯ 5,000  ಬೀದಿಬದಿಯ ವ್ಯಾಪಾರಿಗಳು   ಸೇರಿದಂತೆ 1 ಲಕ್ಷ ಬೀದಿಬದಿಯ ವ್ಯಾಪಾರಿಗಳಿಗೆ  ಅವರು ಈ ಯೋಜನೆಯಡಿ ಸಾಲವನ್ನು ವಿತರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದೆಹಲಿ ಮೆಟ್ರೋದ 4 ನೇ ಹಂತದ ಎರಡು ಹೆಚ್ಚುವರಿ ಕಾರಿಡಾರುಗಳ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿಯವರು ನೆರವೇರಿಸಲಿದ್ದಾರೆ.

ಹಿಂದುಳಿದ ವರ್ಗಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುವ ಪ್ರಧಾನಮಂತ್ರಿಯವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ, ಸಾಂಕ್ರಾಮಿಕ ರೋಗದಿಂದ ಉಂಟಾದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ 2020 ರ ಜೂನ್ 1 ರಂದು ಪಿಎಂ ಸ್ವನಿಧಿಯನ್ನು ಪ್ರಾರಂಭಿಸಲಾಯಿತು. ಬೀದಿಬದಿ ವ್ಯಾಪಾರಿಗಳ  ಹಿಂದುಳಿದ ಸಮುದಾಯಗಳಿಗೆ ಇದು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇಲ್ಲಿಯವರೆಗೆ, ಒಟ್ಟು 10,978 ಕೋಟಿ ರೂಪಾಯಿಗಳ 82 ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಸಾಲವನ್ನು, ದೇಶಾದ್ಯಂತ 62 ಲಕ್ಷಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳಿಗೆ ವಿತರಿಸಲಾಗಿದೆ. ದೆಹಲಿಯೊಂದರಲ್ಲೇ ಒಟ್ಟು 232 ಕೋಟಿ ರೂಪಾಯಿಗಳ ಸುಮಾರು 2 ಲಕ್ಷ ಸಂಖ್ಯೆಯ ಸಾಲ ವಿತರಣೆಯಾಗಿದ್ದು, ಈ ಯೋಜನೆಯು  ಮೊದಲಿನಿಂದಲೂ ಹಿಂದುಳಿದಿದ್ದವರಿಗೆ ಇದು ಅವರ ಆರ್ಥಿಕ ಸೇರ್ಪಡೆ ಮತ್ತು ಸಮಗ್ರ ಯೋಗಕ್ಷೇಮಕ್ಕಾಗಿ ಅತ್ಯುತ್ತಮ ಕಾರ್ಯಕ್ರಮವಾಗಿ ಮುಂದುವರಿಯುತ್ತದೆ.

ಇದೇ ಕಾರ್ಯಕ್ರಮದಲ್ಲಿ, ದೆಹಲಿ ಮೆಟ್ರೋದ ಈ ಎರಡು ಹೆಚ್ಚುವರಿ ಕಾರಿಡಾರ್ ಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ : ಲಜಪತ್ ನಗರ - ಸಾಕೇತ್-ಜಿ ಬ್ಲಾಕ್ ಮತ್ತು ಇಂದರ್ಲೋಕ್ - ಇಂದ್ರಪ್ರಸ್ಥ. ಈ ಕಾರಿಡಾರ್ ಗಳು ಒಟ್ಟು 20 ಕಿ.ಮೀ ಉದ್ದವಿದ್ದು, ಸಂಪರ್ಕವನ್ನು ಸುಧಾರಿಸಲು ಮತ್ತು ಸಂಚಾರ ದಟ್ಟಣೆಯನ್ನು ಮತ್ತಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಲಜಪತ್ ನಗರದಿಂದ ಸಾಕೇತ್ ಜಿ-ಬ್ಲಾಕ್ ಕಾರಿಡಾರ್ನಲ್ಲಿರುವ ನಿಲ್ದಾಣಗಳು: ಲಜಪತ್ ನಗರ, ಆಂಡ್ರ್ಯೂಸ್ ಗಂಜ್, ಗ್ರೇಟರ್ ಕೈಲಾಶ್ - 1, ಚಿರಾಗ್ ದೆಹಲಿ, ಪುಷ್ಪಾ ಭವನ, ಸಾಕೇತ್ ಜಿಲ್ಲಾ ಕೇಂದ್ರ, ಪುಷ್ಪ್ ವಿಹಾರ್ ಮತ್ತು ಸಾಕೇತ್ ಜಿ - ಬ್ಲಾಕ್. ಇಂದರ್ಲೋಕ್ - ಇಂದ್ರಪ್ರಸ್ಥ ಕಾರಿಡಾರ್ ನಲ್ಲಿರುವ ನಿಲ್ದಾಣಗಳಲ್ಲಿ ಇಂದರ್‌ ಲೋಕ್ , ದಯಾ ಬಸ್ತಿ, ಸರೈ ರೋಹಿಲ್ಲಾ, ಅಜ್ಮಲ್ ಖಾನ್ ಪಾರ್ಕ್, ನಬಿ ಕರೀಮ್, ನವದೆಹಲಿ, ಎಲ್ಎನ್ಜೆಪಿ ಆಸ್ಪತ್ರೆ, ದೆಹಲಿ ಗೇಟ್, ದೆಹಲಿ ಸಚಿವಾಲಯ ಮತ್ತು ಇಂದ್ರಪ್ರಸ್ಥ ಸೇರಿವೆ.

*****



(Release ID: 2016345) Visitor Counter : 25