ಉಪರಾಷ್ಟ್ರಪತಿಗಳ ಕಾರ್ಯಾಲಯ

ಭಾರತದ ಉದಯವು ಜಾಗತಿಕ ಶಾಂತಿ ಮತ್ತು ಸೌಹಾರ್ದತೆಗೆ ಭರವಸೆಯಾಗಿದೆ - ಉಪ ರಾಷ್ಟ್ರಪತಿಗಳು

ಭಾರತ ಶಕ್ತಿಶಾಲಿ ರಾಷ್ಟ್ರ-ಉಪ ರಾಷ್ಟ್ರಪತಿಗಳು

ಶಕ್ತಿಯ ಮೂಲಕ ಶಾಂತಿ ಸ್ಥಾಪನೆ; ಯುದ್ಧಕ್ಕೆ ಯಾವಾಗಲೂ ಸನ್ನದ್ಧತೆ ಶಾಂತಿಗೆ ಸುರಕ್ಷಿತ ಮಾರ್ಗವಾಗಿದೆ - ಉಪ ರಾಷ್ಟ್ರಪತಿಗಳು

ಪ್ರಪಂಚದ ಯಾವುದೇ ಭಾಗದಲ್ಲಿ ಘರ್ಷಣೆಗಳು ಸಂಘರ್ಷ ಎದುರಿಸುವ ರಾಷ್ಟ್ರಗಳನ್ನು ಮೀರಿ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ - ಉಪ ರಾಷ್ಟ್ರಪತಿಗಳು

ಅಂತಾರಾಷ್ಟ್ರೀಯ ಕಾರ್ಯತಂತ್ರ ನಿಗದಿತ ಕಾರ್ಯಕ್ರಮ(IN-STEP) ದ ಭಾಗಿದಾರರನ್ನು ಉದ್ದೇಶಿಸಿ ಮಾತನಾಡಿದ ಉಪ ರಾಷ್ಟ್ರಪತಿಗಳು

Posted On: 21 MAR 2024 2:26PM by PIB Bengaluru

ಪಿಐಬಿ ದೆಹಲಿ ಮಾರ್ಚ್ 21: ಆರ್ಥಿಕತೆ ಮತ್ತು ತಂತ್ರಜ್ಞಾನದಲ್ಲಿ ಭಾರತದ ಉದಯವು "ವಿಶ್ವ ಶಾಂತಿ, ಸಾಮರಸ್ಯ ಮತ್ತು ಜಾಗತಿಕ ಕ್ರಮಕ್ಕೆ ಅತ್ಯಂತ ದೊಡ್ಡ ಭರವಸೆ" ಎಂದು ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್ ಕರ್ ಪ್ರತಿಪಾದಿಸಿದರು.

 

 

ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಾಮರಸ್ಯವನ್ನು ಪೋಷಿಸಲು ಮತ್ತು ಉಳಿಸಿಕೊಳ್ಳಲು ಸಮಾನ ಮನಸ್ಕ ರಾಷ್ಟ್ರಗಳನ್ನು ತೊಡಗಿಸಿಕೊಳ್ಳಲು ಭಾರತ ಬದ್ಧವಾಗಿದೆ ಎಂದು ಅವರು ಹೇಳಿದರು.

ಇಂದು ದೆಹಲಿಯ ಉಪ-ರಾಷ್ಟ್ರಪತಿಗಳ ನಿವಾಸದಲ್ಲಿ ನೆರವೇರಿದ ಅಂತಾರಾಷ್ಟ್ರೀಯ ಕಾರ್ಯತಂತ್ರದ ನಿಗದಿತ ಕಾರ್ಯಕ್ರಮದ (IN-STEP)ಲ್ಲಿ ಪಾಲ್ಗೊಂಡವರ ಜೊತೆ ನಡೆಸಿದ ಸಂವಾದದ ವೇಳೆ ಉಪ ರಾಷ್ಟ್ರಪತಿಗಳು ಈ ಮಾತುಗಳನ್ನು ಹೇಳಿದರು. ಈ ಎರಡು ವಾರಗಳ ಕಾರ್ಯಕ್ರಮವನ್ನು ರಾಷ್ಟ್ರೀಯ ರಕ್ಷಣಾ ಕಾಲೇಜು ಆಯೋಜಿಸಿದ್ದು, 21 ದೇಶಗಳ ಅಂತಾರಾಷ್ಟ್ರೀಯ ಪ್ರತಿನಿಧಿಗಳು ಮತ್ತು 8 ಭಾರತೀಯ ಅಧಿಕಾರಿಗಳನ್ನು ಒಳಗೊಂಡಿದೆ. 


ಭಾರತವು ಶಕ್ತಿಶಾಲಿ ರಾಷ್ಟ್ರವಾಗಿದ್ದು, ಅದರ ಸಾಮರ್ಥ್ಯವನ್ನು ಇನ್ನೂ ಇದುವರೆಗೆ ಯಾರೂ ಗುರುತಿಸಿಲ್ಲ ಎಂದು ಕೆಲವರು ಹೇಳುವಂತೆ ಇನ್ನು ಮುಂದೆ ಭಾರತದ ಸ್ಥಿತಿಯಲ್ಲ. ಭಾರತದ ಹಾದಿ ಪ್ರಗತಿಯಲ್ಲಿದ್ದು, ಅದರ ಏಳಿಗೆಯನ್ನು ಇನ್ನು ಯಾರೂ ತಡೆಯಲು ಸಾಧ್ಯವಿಲ್ಲ. "ಭಾರತದ ಅಸಾಧಾರಣ ಬೆಳವಣಿಗೆಯ ಕಥೆಯು ಸಂದೇಹವಾದಿಗಳನ್ನು ಮೀರಿದೆ. ದೂರದೃಷ್ಟಿಯ ನಾಯಕತ್ವ, ಅಂತರ್ಗತ ಅಭಿವೃದ್ಧಿ ಮತ್ತು ಅಚಲವಾದ ಪರಿಶ್ರಮವನ್ನು ಉದಾಹರಿಸುತ್ತದೆ" ಎಂದು ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್ ಕರ್ ತಮ್ಮ ಭಾಷಣದಲ್ಲಿ ಹೇಳಿದರು.

ಇಂದಿನ ಕ್ರಿಯಾತ್ಮಕ ಭೌಗೋಳಿಕ ರಾಜಕೀಯದ ನಡುವೆ ಭಾರತದ ಅಭೂತಪೂರ್ವ ಪ್ರಗತಿ ಎದ್ದುಕಾಣುತ್ತಿದೆ. ಭಾರತದ ವಿಸ್ತರಿಸುತ್ತಿರುವ ಆರ್ಥಿಕತೆ, ಪರಿಣಾಮಕಾರಿ ರಾಜತಾಂತ್ರಿಕತೆ ಮತ್ತು ಹೆಚ್ಚುತ್ತಿರುವ ಸಹಕಾರದಿಂದ ಶಾಂತಿಗೆ ದೃಢವಾದ ಪರಿಸರ ವ್ಯವಸ್ಥೆಯ ವೇಗವರ್ಧನೆ ಮಾಡಲು ಜಗತ್ತು ಭಾರತದತ್ತ ನೋಡುತ್ತಿದೆ ಎಂದು ಹೇಳಿದರು. ಅಂತಾರಾಷ್ಟ್ರೀಯ ಕಾರ್ಯತಂತ್ರದ ನಿಗದಿತ ಕಾರ್ಯಕ್ರಮದ (IN-STEP) ಈ ದಿಸೆಯಲ್ಲಿ ಮಹತ್ವದ ಉಪಕ್ರಮ ಎಂದು ಉಪ ರಾಷ್ಟ್ರಪತಿಗಳು ಬಣ್ಣಿಸಿದರು.


ಜಾಗತಿಕ ಶಾಂತಿ ಮತ್ತು ಭದ್ರತೆಯು ಬೆಳವಣಿಗೆಗೆ ಮೂಲಭೂತವಾಗಿದೆ ಎಂದು ವಿವರಿಸಿದ ಉಪ ರಾಷ್ಟ್ರಪತಿಗಳು, ಶಕ್ತಿಯ ಸ್ಥಾನದಿಂದ ನೋಡಿದರೆ ಶಾಂತಿಯು ಉತ್ತಮವಾಗಿದೆ. ಯುದ್ಧಕ್ಕೆ ಸದಾ ಸನ್ನದ್ಧತೆ ಶಾಂತಿಯುತ ವಾತಾವರಣಕ್ಕೆ ಸುರಕ್ಷಿತ ಮಾರ್ಗವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಪ್ರಪಂಚದ ಯಾವುದೇ ಭಾಗದಲ್ಲಿ ಘರ್ಷಣೆಗಳು ನಡೆದರೆ ಅದು ಆ ರಾಷ್ಟ್ರಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ಮತ್ತು ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುತ್ತವೆ. ಅಂತಹ ಘರ್ಷಣೆಗಳಿಗೆ ರಾಜತಾಂತ್ರಿಕತೆ ಮತ್ತು ಮಾತುಕತೆ ಪರಿಹಾರವಿದೆ ಎಂದು ಒತ್ತಿ ಹೇಳಿದರು. "ಪ್ರತ್ಯೇಕತೆಯ ವಿಧಾನವು ಈಗ ಭೂತಕಾಲದ ವಿಷಯ" ಎಂದು ಒತ್ತಿಹೇಳಿದ ಉಪ ರಾಷ್ಟ್ರಪತಿಗಳು, ಈ ಪ್ರಕ್ಷುಬ್ಧ ಸಮಯದಲ್ಲಿ ರಾಷ್ಟ್ರಗಳು ಅರ್ಥಪೂರ್ಣವಾದ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವನ್ನು ಉಪ ರಾಷ್ಟ್ರಪತಿಗಳು ವ್ಯಕ್ತಪಡಿಸಿದರು.

ಪರಸ್ಪರ ಮಾತುಕತೆಗೆ ನಮ್ಮ ಹಂಚಿಕೆಯ ಬದ್ಧತೆಯನ್ನು ಅಂತಾರಾಷ್ಟ್ರೀಯ ಕಾರ್ಯತಂತ್ರದ ನಿಗದಿತ ಕಾರ್ಯಕ್ರಮ ಒತ್ತಿಹೇಳುತ್ತದೆ ಮತ್ತು ಪರಿಣಾಮಕಾರಿ ನೀತಿ ನಿರೂಪಣೆ ಮತ್ತು ಸಂಘರ್ಷ ಪರಿಹಾರದ ತಳಹದಿಯಾಗಿ ಒಟ್ಟಾಗಿ ಕೆಲಸ ಮಾಡುತ್ತದೆ. ಈ ಕಾರ್ಯಕ್ರಮವು ಭಾರತೀಯ ಸಶಸ್ತ್ರ ಪಡೆಗಳು, ಅರೆಸೇನಾಪಡೆ, ವಿದೇಶಾಂಗ ಸೇವೆಗಳು ಮತ್ತು 21 ವಿದೇಶಗಳ ಪ್ರತಿನಿಧಿಗಳಿಂದ ಶ್ರೀಮಂತ ದೃಷ್ಟಿಕೋನಗಳ ಒಮ್ಮುಖವನ್ನು ತರುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು.

ರಾಜ್ಯಸಭೆಯ ಕಾರ್ಯದರ್ಶಿ ಶ್ರೀ ರಜಿತ್ ಪುನ್ಹಾನಿ, ಎನ್‌ಡಿಸಿಯ ಕಮಾಂಡೆಂಟ್ ಲೆಫ್ಟಿನೆಂಟ್ ಜನರಲ್ ಎಸ್‌ಎಸ್ ದಹಿಯಾ ಮತ್ತು ಅಂತಾರಾಷ್ಟ್ರೀಯ ಕಾರ್ಯತಂತ್ರದ ನಿಗದಿತ ಕಾರ್ಯಕ್ರಮ (IN-STEP) ಕಾರ್ಯಕ್ರಮದ ಭಾಗಿದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಇಂಟರ್ನ್ಯಾಷನಲ್ ಸ್ಟ್ರಾಟೆಜಿಕ್ ಎಂಗೇಜ್‌ಮೆಂಟ್ ಪ್ರೋಗ್ರಾಂ (ಇನ್-ಸ್ಟೆಪ್) ನಲ್ಲಿ ಭಾಗವಹಿಸುವವರಿಗೆ ಉಪಾಧ್ಯಕ್ಷರ ವಿಳಾಸದ ಪಠ್ಯ.

*****



(Release ID: 2015988) Visitor Counter : 66