ಸಂಪುಟ

ಫಾಸ್ಫೇಟಿಕ್ ಮತ್ತು ಪೊಟ್ಯಾಸಿಯಮ್ (ಪಿ & ಕೆ) ರಸಗೊಬ್ಬರಗಳ ಮೇಲೆ ಖಾರಿಫ್ ಋತುವಿನಲ್ಲಿ, 2024 ಕ್ಕೆ (01.04.2024 ರಿಂದ 30.09.2024 ರವರೆಗೆ) ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ದರಗಳಿಗೆ ಸಂಪುಟದ ಅನುಮೋದನೆ ಮತ್ತು ಎನ್ಬಿಎಸ್ ಯೋಜನೆಯಡಿ 3 ಹೊಸ ರಸಗೊಬ್ಬರ ಶ್ರೇಣಿಗಳನ್ನು ಸೇರ್ಪಡೆಗೆ ಒಪ್ಪಿಗೆ

Posted On: 29 FEB 2024 3:36PM by PIB Bengaluru

ದೆಹಲಿಯಲ್ಲಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಬರಲಿರುವ ಮುಂಗಾರು ಋತುವಿಗೆ ಸೀಮಿತವಾಗಿ (01.04.2024 ರಿಂದ 30.09.2024 ರವರೆಗೆ) ಫಾಸ್ಫಟಿಕ್ ಮತ್ತು ಪೊಟ್ಯಾಸಿಯ ಗೊಬ್ಬರಗಳ ಮೇಲೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (NBS) ದರ ನಿಗದಿಪಡಿಸಲು ರಸಗೊಬ್ಬರ ಇಲಾಖೆಯ ಪ್ರಸ್ತಾವನೆಯನ್ನು ಅನುಮೋದಿಸಿತು. ಇದರ ಜೊತೆಗೆ NBS ಯೋಜನೆಯಡಿಯಲ್ಲಿ ಮೂರು ಹೊಸ ರಸಗೊಬ್ಬರ ಶ್ರೇಣಿಗಳನ್ನು  ಸೇರ್ಪಡೆ ಮಾಡಲು ಒಪ್ಪಿಗೆ ನೀಡಿತು. 

2024 ರ ಮುಂಗಾರು ಋತುವಿನ ಸುಮಾರು ರೂ.24,420 ಕೋಟಿಗಳ   ಬಜೆಟ್ ಅವಶ್ಯಕತೆ ಇದೆ ಎಂದು ಅಂದಾಜಿಸಲಾಗಿದೆ. 

ಪ್ರಯೋಜನಗಳು:

1) ಸಬ್ಸಿಡಿಯುಕ್ತ, ಕೈಗೆಟುಕುವ ಮತ್ತು ಸಮಂಜಸವಾದ ಬೆಲೆಯಲ್ಲಿ ರೈತರಿಗೆ ರಸಗೊಬ್ಬರಗಳ ಲಭ್ಯತೆಯನ್ನು ಖಾತ್ರಿಪಡಿಸಲಾಗುತ್ತದೆ. 

2) ರಸಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆ ಮತ್ತು ಕೃಷಿಯ ವೆಚ್ಚಕ್ಕೆ ಸಂಬಂಧಿಸಿದ ಇತ್ತಿಚೀನ ಟ್ರೆಂಡ್ಗಳ ಆಧಾರದ ಮೇಲೆ P&K ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ತರ್ಕಬದ್ಧಗೊಳಿಸುವುದು. 

3) NBS ಯೋಜನೆಯಡಿಯಲ್ಲಿ ಮೂರು ಹೊಸ ರಸಗೊಬ್ಬರ ಶ್ರೇಣಿಗಳನ್ನು  ಸೇರ್ಪಡೆ ಮಾಡುವುದರಿಂದ ಮಣ್ಣಿನ ಗುಣಮಟ್ಟ ಕಾಪಾಡಲು ಮತ್ತು ಮಣ್ಣಿನ ಅವಶ್ಯಕತೆಗೆ ಅನುಗುಣವಾಗಿ ಸೂಕ್ಷ್ಮ ಪೋಷಕಾಂಶಗಳಿಂದ ಬಲವರ್ಧಿತವಾದ ರಸಗೊಬ್ಬರಗಳ ಆಯ್ಕೆಯನ್ನು  ಮಾಡಲು ರೈತರಿಗೆ  ಪರ್ಯಾಯಗಳನ್ನು ನೀಡಲು ಸಹಾಯವಾಗುತ್ತದೆ. 

ಅನುಷ್ಠಾನ ತಂತ್ರ ಮತ್ತು ಗುರಿಗಳು:

ರಸಗೊಬ್ಬರಗಳು ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ಸುಗಮವಾಗಿ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು P&K ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 2024 ಮುಂಗಾರು ಋತುವಿಗೆ ಅನುಮೋದಿತ ದರಗಳ ಆಧಾರದ ಮೇಲೆ ಒದಗಿಸಲಾಗುತ್ತದೆ (01.04.2024 ರಿಂದ 30.09.2024 ರವರೆಗೆ ಅನ್ವಯಿಸುತ್ತದೆ) 

ಹಿನ್ನೆಲೆ:

ರಸಗೊಬ್ಬರ ತಯಾರಕರು/ಆಮದುದಾರರ ಮೂಲಕ ಸರ್ಕಾರವು 25 ದರ್ಜೆಯ P & K ರಸಗೊಬ್ಬರಗಳನ್ನು ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. P&K ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 01.04.2010 ರಿಂದ ಅನ್ವಯವಾಗುವಂತೆ  NBS ಸ್ಕೀಮ್ ನ ಆಧಾರದ ಮೇಲೆ ನೀಡಲಾಗುತ್ತಿದೆ. ಈ ಸ್ಕೀಮ್ ನ ರೈತ ಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಕೈಗೆಟುಕುವ ಬೆಲೆಯಲ್ಲಿ ರೈತರಿಗೆ P & K ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ. ರಸಗೊಬ್ಬರಗಳ ಅಂತಾರಾಷ್ಟ್ರೀಯ ಬೆಲೆ ಮತ್ತು ಕೃಷಿಯ ವೆಚ್ಚ (ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್)   ಕ್ಕೆ ಸಂಬಂಧಿಸಿದಂತೆ  ಇತ್ತಿಚೀನ ಟ್ರೆಂಡ್ ಆಧಾರದ ಮೇಲೆ ಕೇಂದ್ರ ಸರ್ಕಾರವು  ಮುಂಗಾರು ಋತುವಿಗೆ ಸೀಮಿತವಾಗಿ (01.04.2024 ರಿಂದ 30.09.2024 ರವರೆಗೆ) ಫಾಸ್ಫಟಿಕ್ ಮತ್ತು ಪೊಟ್ಯಾಸಿಯ ಗೊಬ್ಬರಗಳ ಮೇಲೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ (NBS) ದರ ನಿಗದಿಪಡಿಸಲು ಅನುಮೋದನೆ ನೀಡಿದೆ.   ಖಾರಿಫ್ 2024 ರ ಎನ್‌ಬಿಎಸ್ ದರಗಳನ್ನು ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ (ಪಿ & ಕೆ) ರಸಗೊಬ್ಬರಗಳ ಮೇಲೆ 01.04.24 ರಿಂದ 30.09.24 ರವರೆಗೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. NBS ಯೋಜನೆಯಡಿಯಲ್ಲಿ 3 ಹೊಸ ರಸಗೊಬ್ಬರ ಶ್ರೇಣಿಗಳನ್ನು ಸೇರಿಸಲೂ ಸರ್ಕಾರ ನಿರ್ಧರಿಸಿದೆ. ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿಯನ್ನು ಒದಗಿಸಲಾಗುವುದು. ಆ ಮೂಲಕ ರಸಗೊಬ್ಬರಗಳು ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ಲಭ್ಯವಾಗುವಂತೆ ಮಾಡಲಾಗುವುದು. 

****



(Release ID: 2010228) Visitor Counter : 83