ಸಂಪುಟ
ಬೆರಿಲಿಯಮ್, ಕ್ಯಾಡ್ಮಿಯಮ್, ಕೋಬಾಲ್ಟ್, ಗ್ಯಾಲಿಯಂ, ಇಂಡಿಯಮ್, ರೀನಿಯಮ್, ಸೆಲೆನಿಯಮ್, ಟ್ಯಾಂಟಲಮ್, ಟೆಲ್ಲುರಿಯಮ್, ಟೈಟಾನಿಯಂ, ಟಂಗ್ಸ್ಟನ್ ಮತ್ತು ವನಾಡಿಯಮ್ – ಎಂಬ 12 ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳ ಗಣಿಗಾರಿಕೆಗೆ ನೂತನ ರಾಯಧನ (ರಾಯಲ್ಟಿ ) ದರಗಳನ್ನು ಕ್ಯಾಬಿನೆಟ್ ಅನುಮೋದಿಸಿದೆ.
Posted On:
29 FEB 2024 3:35PM by PIB Bengaluru
ಬೆರಿಲಿಯಮ್, ಕ್ಯಾಡ್ಮಿಯಮ್, ಕೋಬಾಲ್ಟ್, ಗ್ಯಾಲಿಯಂ, ಇಂಡಿಯಮ್, ರೀನಿಯಮ್, ಸೆಲೆನಿಯಮ್, ಟ್ಯಾಂಟಲಮ್, ಟೆಲ್ಲುರಿಯಮ್, ಟೈಟಾನಿಯಂ, ಟಂಗ್ಸ್ಟನ್ ಮತ್ತು ವನಾಡಿಯಮ್ ಮುಂತಾದ 12 ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಿಗೆ ಸಂಬಂಧಿಸಿದಂತೆ ರಾಯಧನ (ರಾಯಲ್ಟಿ ) ದರವನ್ನು ನಿರ್ದಿಷ್ಟಪಡಿಸುವುದಕ್ಕಾಗಿ ಕೇಂದ್ರ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1957 ('ಎಂಎಂಡಿಆರ್ ಕಾಯಿದೆ') ಗೆ ಎರಡನೇ ಪರಿಚ್ಛೇದ ತಿದ್ದುಪಡಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಅನುಮೋದಿಸಿದೆ.
ಎಲ್ಲಾ 24 ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಿಗೆ ರಾಯಧನ (ರಾಯಲ್ಟಿ ) ದರಗಳ ತರ್ಕಬದ್ಧತೆಯ ವ್ಯವಹಾರಿಕ ಚೌಕಟ್ಟನ್ನು 2022 ರ ಮಾರ್ಚ್ 15 ರಂದು ಪೂರ್ಣಗೊಳಿಸಿದೆ. ಗ್ಲಾಕೊನೈಟ್, ಪೊಟ್ಯಾಶ್, ಮಾಲಿಬ್ಡಿನಮ್ ಮತ್ತು ಪ್ಲಾಟಿನಂ ಗ್ರೂಪ್ ಆಫ್ ಮಿನರಲ್ಸ್ ಮತ್ತು 3 ನಿರ್ಣಾಯಕ ಖನಿಜಗಳಾದ ಲಿಥಿಯಂ, ನಿಯೋಬಿಯಂ ಮತ್ತು ಅಪರೂಪದ ಭೂಖನಿಜಗಳಿಗೆ 4 ನಿರ್ಣಾಯಕ ಖನಿಜಗಳ ರಾಯಧನ (ರಾಯಲ್ಟಿ ) ದರವನ್ನು 12ನೇ ಅಕ್ಟೋಬರ್, 2023 ರಂದು ಸರ್ಕಾರವು ಸೂಚಿಸಿದೆ ಎಂಬುದನ್ನು ಇಲ್ಲಿ ಗಮನಿಸಬಹುದು
ಇತ್ತೀಚೆಗೆ, ಕೇಂದ್ರ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಕಾಯಿದೆ, 2023, ಆಗಸ್ಟ್ 17, 2023 ರಿಂದ ಜಾರಿಗೆ ಬಂದಿದೆ, 'ಎಂಎಂಡಿಆರ್ ಕಾಯಿದೆಯ ಮೊದಲ ಪರಿಚ್ಛೇದ ಭಾಗ ಡಿ ಯಲ್ಲಿ 24 ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳನ್ನು ಪಟ್ಟಿ ಮಾಡಿದೆ. ಈ 24 ಖನಿಜಗಳ ಗಣಿಗಾರಿಕೆ ಗುತ್ತಿಗೆ ಮತ್ತು ಸಂಯೋಜಿತ ಪರವಾನಗಿಯನ್ನು ಕೇಂದ್ರ ಸರ್ಕಾರವು ಹರಾಜು ಮಾಡಬೇಕೆಂದು ತಿದ್ದುಪಡಿ ಪರಿಗಣಿಸಿದೆ.
ಕೇಂದ್ರ ಸಚಿವ ಸಂಪುಟದ ಇಂದಿನ ಅನುಮೋದನೆಯು ರಾಯಧನ (ರಾಯಲ್ಟಿ ) ದರವನ್ನು ನಿರ್ದಿಷ್ಟವಾಗಿ ಖಚಿತಪಡಿಸುವ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಈ 12 ಖನಿಜಗಳ ಬ್ಲಾಕ್ ಗಳನ್ನು ಹರಾಜು ಮಾಡಲು ಕೇಂದ್ರ ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ. ಖನಿಜಗಳ ಮೇಲಿನ ರಾಯಧನ (ರಾಯಲ್ಟಿ ) ದರವು ಬ್ಲಾಕ್‌ಗಳ ಹರಾಜಿನಲ್ಲಿ ಬಿಡ್‌ದಾರರಿಗೆ ಪ್ರಮುಖ ಹಣಕಾಸಿನ ಪರಿಗಣನೆ ನೀಡಲಾಗಿದೆ. ಇದಲ್ಲದೆ, ಈ ಖನಿಜಗಳ ಸರಾಸರಿ ಮಾರಾಟ ಬೆಲೆಯನ್ನು (ಎಎಸ್‌ಪಿ) ಲೆಕ್ಕಾಚಾರ ಮಾಡುವ ವಿಧಾನವನ್ನು ಕೂಡಾ ಕೇಂದ್ರ ಗಣಿ ಸಚಿವಾಲಯವು ಸಿದ್ಧಪಡಿಸಿದೆ, ಇದು ಬಿಡ್ ನಿಯತಾಂಕಗಳನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ.
'ಎಂಎಂಡಿಆರ್ ಕಾಯಿದೆಯ ಎರಡನೇ ಪರಿಚ್ಛೇದದಲ್ಲಿ ವಿವಿಧ ಖನಿಜಗಳಿಗೆ ರಾಯಧನ (ರಾಯಲ್ಟಿ ) ದರಗಳನ್ನು ಒದಗಿಸುತ್ತದೆ. ಎರಡನೇ ರಿಚ್ಛೇದದ ಕ್ರಮ ಸಂಖ್ಯೆ. 55 ರಾಯಧನ (ರಾಯಲ್ಟಿ ) ದರವನ್ನು ನಿರ್ದಿಷ್ಟವಾಗಿ ಒದಗಿಸದ ಖನಿಜಗಳ ರಾಯಧನ (ರಾಯಲ್ಟಿ ) ದರವು ಸರಾಸರಿ ಮಾರಾಟ ಬೆಲೆಯ (ಎಎಸ್‌ಪಿ) 12% ಆಗಿರುತ್ತದೆ ಎಂದು ಸೂಚಿಸುತ್ತದೆ. ಹೀಗಾಗಿ, ಇವುಗಳಿಗೆ ರಾಯಧನ (ರಾಯಲ್ಟಿ ) ದರವನ್ನು ನಿರ್ದಿಷ್ಟವಾಗಿ ಸೂಚಿಸದಿದ್ದರೆ, ಅವುಗಳ ಸಾಮಾನ್ಯ (ಡೀಫಾಲ್ಟ್) ರಾಯಧನ (ರಾಯಲ್ಟಿ ) ದರವು ಎಎಸ್‌ಪಿ ಯ 12% ಆಗಿರುತ್ತದೆ, ಇದು ಇತರ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಿಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಾಗಿದೆ. ಅಲ್ಲದೆ, ಈ ರಾಯಧನ (ರಾಯಲ್ಟಿ ) ದರ 12% ಇತರ ಖನಿಜ ಉತ್ಪಾದಿಸುವ ದೇಶಗಳೊಂದಿಗೆ ಹೋಲಿಸಲಾಗುವುದಿಲ್ಲ. ಹೀಗಾಗಿ, ಸಮಂಜಸವಾದ ರಾಯಧನ (ರಾಯಲ್ಟಿ ) ದರವನ್ನು ಈ ಕೆಳಗಿನಂತೆ ನಿರ್ದಿಷ್ಟಪಡಿಸಲು ನಿರ್ಧರಿಸಲಾಗಿದೆ:
ಬೆರಿಲಿಯಮ್, ಇಂಡಿಯಮ್, ರೀನಿಯಮ್, ಟೆಲ್ಲುರಿಯಮ್:
|
ಉತ್ಪಾದಿಸಲಾದ ಖನಿಜ ಅದಿರಿನಲ್ಲಿ ಒಳಗೊಂಡಿರುವ ಸಂಬಂಧಿತ ಲೋಹದ ಮೇಲೆ ವಿಧಿಸಬಹುದಾದ ಸಂಬಂಧಿತ ಲೋಹದ ಎಎಸ್‌ಪಿ ಯ 2% ರಷ್ಟು.
|
ಕ್ಯಾಡ್ಮಿಯಮ್, ಕೋಬಾಲ್ಟ್, ಗ್ಯಾಲಿಯಂ, ಸೆಲೆನಿಯಮ್, ಟ್ಯಾಂಟಲಮ್ (ಕೊಲಂಬಿಟ್-ಟಾಂಟಲೈಟ್ ಹೊರತುಪಡಿಸಿ ಇತರ ಅದಿರುಗಳಿಂದ ಉತ್ಪತ್ತಿಯಾಗುತ್ತದೆ), ಟೈಟಾನಿಯಂ (ಬೀಚ್ ಸ್ಯಾಂಡ್ ಮಿನರಲ್‌ಗಳಲ್ಲಿ ಕಂಡುಬರುವ ಇತರ ಅದಿರುಗಳಿಂದ ಉತ್ಪತ್ತಿಯಾಗುತ್ತದೆ):
(i) ಪ್ರಾಥಮಿಕ / ಮೂಲ ಉತ್ಪನ್ನ
(ii) ಉಪ ಉತ್ಪನ್ನ
|
(i) ಉತ್ಪಾದಿಸಿದ ಅದಿರಿನಲ್ಲಿ ಒಳಗೊಂಡಿರುವ ಸಂಬಂಧಿತ ಲೋಹದ ಮೇಲೆ ವಿಧಿಸಬಹುದಾದ ಸಂಬಂಧಿತ ಲೋಹದ ಎಎಸ್‌ಪಿ ಯ 4%ರಷ್ಟು.
(ii) ಉತ್ಪಾದಿಸಿದ ಅದಿರಿನಲ್ಲಿ ಒಳಗೊಂಡಿರುವ ಸಂಬಂಧಿತ ಉಪ-ಉತ್ಪನ್ನ ಲೋಹದ ಮೇಲೆ ವಿಧಿಸಬಹುದಾದ ಸಂಬಂಧಿತ ಲೋಹದ ಎಎಸ್‌ಪಿಯ 2% ರಷ್ಟು.
|
ಟಂಗ್‌ಸ್ಟನ್:
|
ಟಂಗ್‌ಸ್ಟನ್ ಟ್ರೈಆಕ್ಸೈಡ್ (ಡಬ್ಲ್ಯೂ3) ನ ಎಎಸ್‌ಪಿ ಯ 3% ರಷ್ಟು ಅನುಪಾತದ ಆಧಾರದ ಮೇಲೆ ಪ್ರತಿ ಟನ್ ಅದಿರಿನಲ್ಲಿ ಡಬ್ಲ್ಯೂ 3 ಅನ್ನು ಹೊಂದಿರುತ್ತದೆ.
|
ವನಾಡಿಯಮ್:
(i) ಪ್ರಾಥಮಿಕ
(ii) ಉಪ ಉತ್ಪನ್ನ
|
(i) ವನಾಡಿಯಮ್ ಪೆಂಟಾಕ್ಸೈಡ್‌ನ ಎಎಸ್‌ಪಿ ಯ 4% ರಷ್ಟು ಅನುಪಾತದ ಆಧಾರದ ಮೇಲೆ ಪ್ರತಿ ಟನ್ ಅದಿರಿಗೆ ವಿ2ಒ5 ಅನ್ನು ಹೊಂದಿರುತ್ತದೆ.
(ii) ವನಾಡಿಯಮ್ ಪೆಂಟಾಕ್ಸೈಡ್‌ನ ಎಎಸ್‌ಪಿ ಯ 2% ರಷ್ಟು ಅನುಪಾತದ ಆಧಾರದ ಮೇಲೆ ಪ್ರತಿ ಟನ್ ಅದಿರಿನಲ್ಲಿ ವಿ2ಒ5 ಅನ್ನು ಹೊಂದಿರುತ್ತದೆ.
|
ದೇಶದ ಆರ್ಥಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕ ಖನಿಜಗಳು ಅತ್ಯಗತ್ಯವಾಗಿವೆ. ನಿರ್ಣಾಯಕ ಖನಿಜಗಳಾದ ಕ್ಯಾಡ್ಮಿಯಮ್, ಕೋಬಾಲ್ಟ್, ಗ್ಯಾಲಿಯಂ, ಇಂಡಿಯಮ್, ಸೆಲೆನಿಯಮ್ ಮತ್ತು ವನಾಡಿಯಮ್ ಮತ್ತು ಬ್ಯಾಟರಿಗಳು, ಸೆಮಿಕಂಡಕ್ಟರ್‌ಗಳು, ಸೌರ ಫಲಕಗಳು ಇತ್ಯಾದಿಗಳಲ್ಲಿ ಬಳಕೆಯನ್ನು ಹೊಂದಿವೆ. ಈ ಖನಿಜಗಳು ಶಕ್ತಿ ಪರಿವರ್ತನೆಯ ಕಡೆಗೆ ಭಾರತದ ಬದ್ಧತೆಯ ದೃಷ್ಟಿಯಿಂದ ಮತ್ತು 2070 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ದೃಷ್ಟಿಯಿಂದ ಮಹತ್ವವನ್ನು ಪಡೆದಿವೆ. ಬೆರಿಲಿಯಮ್, ಟೈಟಾನಿಯಂ, ಟಂಗ್‌ಸ್ಟನ್, ಟ್ಯಾಂಟಲಮ್ ಮುಂತಾದ ಖನಿಜಗಳು ಹೊಸ ತಂತ್ರಜ್ಞಾನಗಳು, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ಸಾಧನಗಳಲ್ಲಿ ಬಳಕೆಯನ್ನು ಹೊಂದಿವೆ. ಸ್ಥಳೀಯ ಗಣಿಗಾರಿಕೆಗೆ ಉತ್ತೇಜನ ನೀಡುವುದರಿಂದ ಆಮದುಗಳಲ್ಲಿ ಕಡಿತ ಮತ್ತು ಸಂಬಂಧಿತ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಯೋಜನೆಗಳ ಸ್ಥಾಪನೆಗೆ ಕಾರಣವಾಗುತ್ತದೆ. ಪ್ರಸ್ತಾವನೆಯು ಗಣಿಗಾರಿಕೆ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿ.ಎಸ್.ಐ) ಮತ್ತು ಮಿನರಲ್ ಎಕ್ಸ್‌ಪ್ಲೋರೇಶನ್ & ಕನ್ಸಲ್ಟೆನ್ಸಿ ಲಿಮಿಟೆಡ್ (ಎಂ.ಇ.ಸಿ.ಎಲ್) ಇತ್ತೀಚೆಗೆ ಕೋಬಾಲ್ಟ್, ಟೈಟಾನಿಯಂ, ಗ್ಯಾಲಿಯಂ, ವನಾಡಿಯಮ್ ಮತ್ತು ಟಂಗ್‌ಸ್ಟನ್‌ನಂತಹ ಒಂದು ಅಥವಾ ಹೆಚ್ಚಿನ ನಿರ್ಣಾಯಕ ಖನಿಜಗಳನ್ನು ಹೊಂದಿರುವ 13 ಬ್ಲಾಕ್‌ಗಳ ಪರಿಶೋಧನಾ ವರದಿಯನ್ನು ಹಸ್ತಾಂತರಿಸಿದೆ. ಇದಲ್ಲದೆ, ಈ ಏಜೆನ್ಸಿಗಳು ದೇಶದಲ್ಲಿ ಈ ನಿರ್ಣಾಯಕ ಮತ್ತು ಕಾರ್ಯತಂತ್ರದ ಖನಿಜಗಳಿಗಾಗಿ ಪರಿಶೋಧನೆ ನಡೆಸುತ್ತಿವೆ.
ಖನಿಜಗಳಾದ ಲಿಥಿಯಂ, ಆರ್‌ಇಇ, ನಿಕಲ್, ಪ್ಲಾಟಿನಂ ಗ್ರೂಪ್ ಆಫ್ ಎಲಿಮೆಂಟ್ಸ್, ಪೊಟ್ಯಾಷ್, ಗ್ಲಾಕೊನೈಟ್, ಫಾಸ್ಫೊರೈಟ್, ಗ್ರ್ಯಾಫೈಟ್, ಮಾಲಿಬ್ಡಿನಮ್ ಇತ್ಯಾದಿ ಖನಿಜಗಳಿಗೆ 2023ರ ನವೆಂಬರ್ ನಲ್ಲಿ ನಿರ್ಣಾಯಕ ಮತ್ತು ಆಯಕಟ್ಟಿನ ಖನಿಜ ಬ್ಲಾಕ್‌ಗಳ ಹರಾಜಿನ ಮೊದಲ ಕಂತನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಉದ್ಯಮದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗುತ್ತಿದೆ. ಮೊದಲ ಕಂತಿನಲ್ಲಿ ಒಟ್ಟು 20 ಮಿನರಲ್ ಬ್ಲಾಕ್‌ಗಳನ್ನು ಹರಾಜು ಮಾಡಲಾಗುತ್ತಿದೆ. ಮೊದಲ ಹಂತದ ಹರಾಜಿಗೆ ಬಿಡ್‌ಗಳನ್ನು ಸಲ್ಲಿಸುವ ಕೊನೆಯ ದಿನಾಂಕ (ಬಿಡ್ ಡ್ಯೂ ಡೇಟ್) ಫೆಬ್ರವರಿ 26, 2024 ಆಗಿರುತ್ತದೆ.
********
(Release ID: 2010220)
Visitor Counter : 134
Read this release in:
Odia
,
Punjabi
,
Telugu
,
English
,
Urdu
,
Hindi
,
Marathi
,
Assamese
,
Gujarati
,
Tamil
,
Malayalam