ಉಪರಾಷ್ಟ್ರಪತಿಗಳ ಕಾರ್ಯಾಲಯ
ಉಪರಾಷ್ಟ್ರಪತಿಗಳು ಮಾರ್ಚ್ 1 ರಂದು ಕರ್ನಾಟಕದ ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ
ಐಐಟಿ ಧಾರವಾಡ ಕ್ಯಾಂಪಸ್‌ನಲ್ಲಿ ಪ್ರಮುಖ ಸೌಲಭ್ಯಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ - ಆಯ್ ಸಿರಿ- ಉದ್ಘಾಟನೆ
प्रविष्टि तिथि:
29 FEB 2024 1:13PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ಮಾರ್ಚ್ 1 ರಂದು ಕರ್ನಾಟಕದ ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ.
ತಮ್ಮ ಒಂದು ದಿನದ ಪ್ರವಾಸದಲ್ಲಿ, ಶ್ರೀ ಧನಕರ್ ಅವರು ಧಾರವಾಡದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ ಶಾಶ್ವತ ಕ್ಯಾಂಪಸ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಮುಖ್ಯ ದ್ವಾರದ ಸಂಕೀರ್ಣ, ನಾಲೆಡ್ಜ್ ರಿಸೋರ್ಸಸ್ ಮತ್ತು ಡೇಟಾ ಕೇಂದ್ರ (ಕೆಆರ್‌ಡಿಸಿ) ಮತ್ತು ಸೆಂಟ್ರಲ್ ಲರ್ನಿಂಗ್ ಥಿಯೇಟರ್ (ಸಿಎಲ್‌ಟಿ) ಗಳನ್ನು ಉದ್ಘಾಟಿಸಲಿದ್ದಾರೆ. ಅನಂತರ ಅವರು ಐಐಟಿ ಕಟ್ಟಡದ ಮೇಲ್ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಎಂ.ಎಂ. ಜೋಶಿ ನೇತ್ರ ಸಂಸ್ಥೆಯ ಹೊಸ ಸೂಪರ್-ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ 'ಆಯ್ ಸಿರಿ'ಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
****
(रिलीज़ आईडी: 2010105)
आगंतुक पटल : 128