ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಚುನಾವಣೆಗಳಲ್ಲಿ ಯುವಜನರ ಸಂಪೂರ್ಣ ಪ್ರಬುದ್ಧ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವಾಲಯವು ದೇಶದಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ “ನನ್ನ ಮೊದಲ ಮತ ದೇಶಕ್ಕಾಗಿ”ಅಭಿಯಾನವನ್ನು ಆಯೋಜಿಸುತ್ತದೆ

Posted On: 27 FEB 2024 5:21PM by PIB Bengaluru

ಚುನಾವಣೆಗಳಲ್ಲಿ ಯುವಜನರ ಸಂಪೂರ್ಣ ಪ್ರಬುದ್ಧ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಸಚಿವಾಲಯವು 2024 ರ ಫೆಬ್ರವರಿ 28 ರಿಂದ ಮಾರ್ಚ್ 6 ರವರೆಗೆ “ನನ್ನ ಮೊದಲ ಮತ ದೇಶಕ್ಕಾಗಿ” ಅಭಿಯಾನವನ್ನು ಆಯೋಜಿಸುತ್ತಿದೆ.

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ರಾಷ್ಟ್ರದ ಯುವಜನರು ತಮ್ಮ ಧ್ವನಿಯನ್ನು ಎತ್ತುವಂತೆ ಒತ್ತಾಯಿಸಿದರು. ನಮ್ಮ ಯುವಜನರು ಮತ್ತು ಮೊದಲ ಬಾರಿಯ ಮತದಾರರು ತಮ್ಮ ಮತದಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಲಾಯಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸ್ಪಷ್ಟ ಕರೆಯನ್ನು ಅವರು ಉಲ್ಲೇಖಿಸಿದರು.

ಹೆಚ್ಚು ಪ್ರಾತಿನಿಧಿಕ ಪ್ರಜಾಪ್ರಭುತ್ವಕ್ಕಾಗಿ ನಮ್ಮ ಯುವಶಕ್ತಿಯನ್ನು ಉತ್ತೇಜಿಸಲು, ಮತದಾನದ ಮೌಲ್ಯವನ್ನು ಒತ್ತಿಹೇಳಲು, ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡಲು ಮತ್ತು ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಲು, ಫೆಬ್ರವರಿ 28 ರಿಂದ ಮಾರ್ಚ್ 6 ರವರೆಗೆ ತಮ್ಮ ಕ್ಯಾಂಪಸ್‌ ಗಳಲ್ಲಿ ಸಮಗ್ರ ಮತದಾರರ ಜಾಗೃತಿ ಚಟುವಟಿಕೆಗಳನ್ನು ನಡೆಸುವಂತೆ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿರುವುದಾಗಿ ಅವರು ತಿಳಿಸಿದರು.

ಈ ಉಪಕ್ರಮದ ಮುಖ್ಯ ಉದ್ದೇಶವೆಂದರೆ ಯುವ ಮತದಾರರನ್ನು ತೊಡಗಿಸಿಕೊಳ್ಳುವುದು ಮತ್ತು ಪ್ರೋತ್ಸಾಹಿಸುವುದು ಮತ್ತು ಮತದಾನ ಮಾಡಲು ಮತ್ತು ರಾಷ್ಟ್ರದ ಒಳಿತಿಗಾಗಿ ಮತದಾನದ ಮಹತ್ವವನ್ನು ತಿಳಿಸುವುದು. ಈ ಉಪಕ್ರಮವು ಚುನಾವಣೆಗಳ ಪ್ರಾಮುಖ್ಯತೆಯನ್ನು ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಮತದಾನದ ಹೆಮ್ಮೆಯನ್ನು ಸಂಕೇತಿಸುತ್ತದೆ.

ದೇಶಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳು ಉಪಕ್ರಮದಲ್ಲಿ ಪಾಲ್ಗೊಳ್ಳುತ್ತವೆ. ವಿಶ್ವವಿದ್ಯಾನಿಲಯಗಳು / ಕಾಲೇಜುಗಳು / ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಗೊತ್ತುಪಡಿಸಿದ ಸ್ಥಳಗಳನ್ನು ಗುರುತಿಸಲಾಗುವುದು, ಅಲ್ಲಿ ಆಯಾ ಸಂಸ್ಥೆಗಳು ಮತದಾರರ ಜಾಗೃತಿ ಸಂಬಂಧ ಚಟುವಟಿಕೆಗಳನ್ನು ಕೈಗೊಳ್ಳುತ್ತವೆ. ಈ ಉಪಕ್ರಮವು MyGov ಪ್ಲಾಟ್‌ಫಾರ್ಮ್‌ ನಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ ಗಳಲ್ಲಿ ಸ್ಪರ್ಧೆಗಳಿಗೆ ಸಾಕ್ಷಿಯಾಗಲಿದೆ.

ಕಂಟೆಂಟ್ ರಚನೆಯಲ್ಲಿ ತಮ್ಮ ಸೃಜನಶೀಲತೆಯನ್ನು ತೋರಿಸಲು ಬ್ಲಾಗ್ ಬರವಣಿಗೆ, ಪಾಡ್‌‌ ಕಾಸ್ಟ್‌, ಚರ್ಚೆ, ಪ್ರಬಂಧ ಬರವಣಿಗೆ, ರಸಪ್ರಶ್ನೆಗಳು, ಆಶುಭಾಷಣ, ಬ್ಯಾಟಲ್ ಆಫ್ ಬ್ಯಾಂಡ್‌ ಇತ್ಯಾದಿ ಸ್ಪರ್ಧೆಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತದೆ.

ಮತದಾನದ ಮೌಲ್ಯವನ್ನು ಒತ್ತಿಹೇಳುವ, ಚುನಾವಣಾ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವ ಕುರಿತಂತೆ ಸಂವಾದಾತ್ಮಕ ಕಾರ್ಯಾಗಾರಗಳು ಮತ್ತು ಸೆಮಿನಾರ್‌ ಗಳನ್ನು ಸಂಸ್ಥೆಗಳಲ್ಲಿ ಆಯೋಜಿಸಲಾಗುತ್ತದೆ. ಹೆಚ್ಚುವರಿಯಾಗಿ, ಚುನಾವಣಾ ಪ್ರಕ್ರಿಯೆಯಲ್ಲಿ ತಮ್ಮ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅಧಿಕೃತ ವೆಬ್‌ಸೈಟ್ https://ecisveep.nic.in/pledge/ ನಲ್ಲಿ ಮತದಾರರ ಪ್ರತಿಜ್ಞೆಯನ್ನು ತೆಗೆದುಕೊಳ್ಳಲು ಅಭಿಯಾನವು ಯುವಕರನ್ನು ಉತ್ತೇಜಿಸುತ್ತದೆ. ಮತದಾರರ ಸಹಾಯವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಅವರನ್ನು ಪ್ರೋತ್ಸಾಹಿಸಲಾಗುವುದು.

ಎನ್‌ ಎಸ್‌ ಎಸ್ ಮತ್ತು ಅದರ ಸ್ವಯಂಸೇವಕರು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯಕ್ರಮವನ್ನು ಮುನ್ನಡೆಸುತ್ತಾರೆ, ವ್ಯಾಪಕ ಪ್ರಸಾರಕ್ಕಾಗಿ ಚಟುವಟಿಕೆಗಳನ್ನು 'MyGov' ಪೋರ್ಟಲ್‌ ನಲ್ಲಿ ದಾಖಲಿಸಲಾಗಿದೆ. ಶಿಕ್ಷಣ ಸಂಸ್ಥೆಗಳ ಕ್ಲಬ್‌ ಗಳೂ ಅಭಿಯಾನದಲ್ಲಿ ಪಾಲ್ಗೊಳ್ಳಲಿವೆ.

****

 

 



(Release ID: 2010047) Visitor Counter : 197