ಕಲ್ಲಿದ್ದಲು ಸಚಿವಾಲಯ
azadi ka amrit mahotsav

​​​​​​​ಕಲ್ಲಿದ್ದಲು ಸಾಗಣೆ ಯೋಜನೆ ಮತ್ತು ನೀತಿಗೆ ನಾಳೆ ಚಾಲನೆ ನೀಡಲಿರುವ ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ

Posted On: 28 FEB 2024 3:31PM by PIB Bengaluru

ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ವಿಶ್ವ ಗಣಿಗಾರಿಕೆ ಕಾಂಗ್ರೆಸ್ ನ ಭಾರತೀಯ ರಾಷ್ಟ್ರೀಯ ಸಮಿತಿ ನಾಳೆ ಅಂದರೆ 29 ಫೆಬ್ರವರಿ 2024 ರಂದು ದೆಹಲಿಯ ವಿಜ್ಞಾನ ಭವನದಲ್ಲಿ “ಕಲ್ಲಿದ್ದಲು ಸಾಗಣೆ ಯೋಜನೆ ಮತ್ತು ನೀತಿ” ಪ್ರಾರಂಭಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ "ಕಲ್ಲಿದ್ದಲು ಸಾಗಣೆ ಯೋಜನೆ ಮತ್ತು ನೀತಿ" ಯನ್ನು ಅನಾವರಣಗೊಳಿಸಲಿದ್ದಾರೆ. ನೀತಿ ಆಯೋಗದ ಹಿರಿಯ ಅಧಿಕಾರಿಗಳು ಮತ್ತು ಕಲ್ಲಿದ್ದಲು, ರೈಲ್ವೆ, ಇಂಧನ, ಉಕ್ಕು, ಗಣಿ, ಹಡಗು ಬಂದರು ಮತ್ತು ಜಲಮಾರ್ಗಗಳು ಸೇರಿದಂತೆ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಮತ್ತು ಕಲ್ಲಿದ್ದಲು, ಉಕ್ಕು, ಇಂಧನ ಮತ್ತು ಇತರ ವಲಯಗಳ ಉದ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

2030ರ ಆರ್ಥಿಕ ವರ್ಷದ ವೇಳೆಗೆ 1.5 ಬಿಲಿಯನ್ ಟನ್ ಕಲ್ಲಿದ್ದಲನ್ನು ಉತ್ಪಾದಿಸುವ ಗುರಿಯೊಂದಿಗೆ ಕಲ್ಲಿದ್ದಲು ಸಚಿವಾಲಯವು ಭಾರತದ ಇಂಧನ ಭದ್ರತೆಗಾಗಿ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ. ತಾಂತ್ರಿಕವಾಗಿ ಮುಂದುವರಿದ, ಸಂಯೋಜಿತ, ವೆಚ್ಚ ಕಡಿತ, ಅಭಿವೃದ್ಧಿಗೊಳಿಸಲು ದೂರದೃಷ್ಟಿಯ ವಿಧಾನದೊಂದಿಗೆ ಸಮಗ್ರ ಕಲ್ಲಿದ್ದಲು ಸಾಗಣೆ ಯೋಜನೆ ಮತ್ತು ನೀತಿಯನ್ನು ರೂಪಿಸಲಾಗಿದೆ. ಕಲ್ಲಿದ್ದಲು ಸ್ಥಳಾಂತರಿಸುವಿಕೆಗಾಗಿ ಸಮರ್ಥ ಮತ್ತು ವಿಶ್ವಾಸಾರ್ಹ ಸಾಗಣೆ ಪರಿಸರ ವ್ಯವಸ್ಥೆಯನ್ನು ತರಲು ಸಚಿವಾಲಯ ಕ್ರಮ ಕೈಗೊಳ್ಳುತ್ತಿದೆ. ಆಮದು ಮಾಡಿಕೊಳ್ಳುವ ಕಲ್ಲಿದ್ದಲಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಆತ್ಮನಿರ್ಭರ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿ 2030 ರ ಅರ್ಥಿಕ ವರ್ಷದೊಳಗೆ ಕಲ್ಲಿದ್ದಲು ವಲಯದಲ್ಲಿ ಬೇಡಿಕೆ ಮತ್ತು ಪೂರೈಕೆಯನ್ನು ವೇಗವರ್ಧಿಸುವ ಗುರಿಯನ್ನು ಈ ಕಾರ್ಯತಂತ್ರದ ಚೌಕಟ್ಟು ಹೊಂದಿದೆ.

2030 ರ ವೇಳೆಗೆ ಕಲ್ಲಿದ್ದಲು ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿಯೊಂದಿಗೆ ಕಲ್ಲಿದ್ದಲು ಸಚಿವಾಲಯವು ದೇಶಾದ್ಯಂತ ಕಲ್ಲಿದ್ದಲು ಸಾಗಣೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಸಮಗ್ರ ಕ್ರಿಯಾ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಪ್ರಮುಖ ಯೋಜನೆಗಳಲ್ಲಿ ಸಂಪರ್ಕ ಸಾರಿಗೆ ಮೊದಲ ಹಂತ, ಜಲಮಾರ್ಗಗಳ ಮೂಲಕ ಕಲ್ಲಿದ್ದಲು ಸಾಗಣೆ, ರೈಲುಗಳ ಮೂಲಕ ಸ್ಥಳಾಂತರಿಸುವ ಸಾಮರ್ಥ್ಯಗಳ ಹೆಚ್ಚಳ ಮತ್ತು ಕಲ್ಲಿದ್ದಲನ್ನು ಕರಾವಳಿ ತೀರ ಮೂಲಕ ಬಂದರಿನಲ್ಲಿ ಸಾಗಿಸುವ ಪ್ರಕ್ರಿಯೆಗಳು ಸೇರಿವೆ.

ಕಲ್ಲಿದ್ದಲು ಸ್ಥಳಾಂತರಿಸುವ ಪ್ರಕ್ರಿಯೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಪ್ರಕ್ರಿಯೆ ಮೇಲೆ ಕೇಂದ್ರೀಕರಿಸಿ, ರಾಷ್ಟ್ರವ್ಯಾಪಿ ಮೂಲಸೌಕರ್ಯದ ಸಮಗ್ರ ಅಭಿವೃದ್ಧಿಗಾಗಿ ವಿವರವಾದ ಚರ್ಚೆಗಳು ಮತ್ತು ಸಲಹೆಗಳನ್ನು ಪಡೆಯಲು ಈ ಕಾರ್ಯಕ್ರಮದಿಂದ ನಿರೀಕ್ಷಿಸಲಾಗುತ್ತಿದೆ.

*****


(Release ID: 2009816) Visitor Counter : 90