ಪರಿಸರ ಮತ್ತು ಅರಣ್ಯ ಸಚಿವಾಲಯ
ಮಾನವ ಜೀವ ರಕ್ಷಣೆಗಾಗಿ ನಾವು ಸಾಧ್ಯವಿರುವ ಎಲ್ಲಾ ವಿಧದ ವ್ಯವಸ್ಥೆಗಳನ್ನೂ ಮಾಡುತ್ತೇವೆ ಎಂದು ಶ್ರೀ ಭೂಪೇಂದ್ರ ಯಾದವ್ ಅವರು ಹೇಳಿದರು
Posted On:
22 FEB 2024 9:05AM by PIB Bengaluru
ವಯನಾಡಿನಲ್ಲಿ ಹುಲಿ ಮತ್ತು ಆನೆ ದಾಳಿಯಲ್ಲಿ ಮೃತಪಟ್ಟವರ ಮನೆಗಳಿಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರು ಭೇಟಿ ನೀಡಿದರು.
ಎರಡು ದಿನಗಳ ವಯನಾಡು ಭೇಟಿ ನೀಡುವ ಸಲುವಾಗಿ ಬೆಂಗಳೂರಿಗೆ ಬಂದಿರುವ ಕೇಂದ್ರ ಸಚಿವರು, ಕಾಡುಪ್ರಾಣಿಗಳ ದಾಳಿಗೆ ಬಲಿಯಾದವರ ಮನೆಗಳಿಗೆ ನೇರವಾಗಿ ಭೇಟಿ ನೀಡಿದರು.
ಹುಲಿ ದಾಳಿಗೆ ಬಲಿಯಾದ ಪ್ರಜೀಶ್ ಮತ್ತು ಆನೆಗಳ ದಾಳಿಯಲ್ಲಿ ಮೃತಪಟ್ಟ ಪಾಲ್ ಮತ್ತು ಅಜೀಶ್ ಅವರ ಮನೆಗಳಿಗೆ ಶ್ರೀ ಯಾದವ್ ಭೇಟಿ ನೀಡಿದರು.
ಕೇಂದ್ರ ಸಚಿವರು ಸಂತ್ರಸ್ತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು ಮತ್ತು ಸ್ಥಳೀಯ ನಿವಾಸಿಗಳ ಮಾತುಗಳನ್ನು ಆಲಿಸಿದರು.
ಈ ಭಾಗದಲ್ಲಿ ಮಾನವ-ಪ್ರಾಣಿ ಸಂಘರ್ಷ ದೊಡ್ಡ ಸಮಸ್ಯೆಯಾಗಿದೆ. ಅಂತಹ ಸಮಸ್ಯೆಗಳನ್ನು ಪರಿಹರಿಸಲು ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ವಿಜ್ಞಾನಿಗಳಿಗೆ ಸರ್ಕಾರವು ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಎಲ್ಲಾ ಬೆಂಬಲವನ್ನು ನೀಡುತ್ತದೆ. ಈ ಸಮಸ್ಯೆಗೆ ತುರ್ತಾಗಿ ಪರಿಹಾರ ಕಂಡುಕೊಳ್ಳಬೇಕು. ಇದರಲ್ಲಿ ಕರ್ನಾಟಕ ಮತ್ತು ಕೇರಳ ಎರಡು ರಾಜ್ಯಗಳು ಭಾಗಿಯಾಗಿರುವುದರಿಂದ, ಎರಡೂ ರಾಜ್ಯಗಳ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರು ಹೇಳಿದರು.
ಫೆ.22 ರಂದು ಸ್ಥಳೀಯ ಆಡಳಿತ ಮತ್ತು ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್ಜಿಒ ಅಧಿಕಾರಿಗಳನ್ನು ಭೇಟಿ ಮಾಡುವುದಾಗಿ ಶ್ರೀ ಯಾದವ್ ತಿಳಿಸಿದ್ದಾರೆ. ಆ ಸಭೆಯ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. " ನಾವು ಪರಿಸರ ಮತ್ತು ಮಾನವ ಜೀವವು ಸಮಾನವಾಗಿ ಮಹತ್ವದ್ದಾಗಿದೆ ಮತ್ತು ಅವುಗಳನ್ನು ರಕ್ಷಿಸಬೇಕು ಎಂಬ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದೇವೆ. ಪ್ರಾಣಿಗಳ ಬಗ್ಗೆ ಕರುಣೆ, ಕಾಳಜಿ ಹೊಂದಿರಬೇಕು, ಹಾಗೂ ಹೊಸ ತಂತ್ರಜ್ಞಾನದ ಸಹಾಯದಿಂದ ಮಾನವ ಜೀವಗಳನ್ನು ನಾವು ಉಳಿಸಿ ರಕ್ಷಿಸಬೇಕು” ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದ್ರ ಯಾದವ್ ಅವರು ಹೇಳಿದರು.
*****
(Release ID: 2007978)
Visitor Counter : 88