ರಾಷ್ಟ್ರಪತಿಗಳ ಕಾರ್ಯಾಲಯ

​​​​​​​ಅರುಣ್ ಜೇಟ್ಲಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಫೈನಾನ್ಷಿಯಲ್ ಮ್ಯಾನೇಜ್ ಮೆಂಟ್ ನ ಪ್ರೊಬೇಷನರ್ಸ್ ತರಬೇತಿ ಕೋರ್ಸ್ ನ 31ನೇ ಬ್ಯಾಚ್ ನ ತರಬೇತಿ ಪಡೆಯುತ್ತಿರುವ ಅಧಿಕಾರಿಗಳಿಂದ  ರಾಷ್ಟ್ರಪತಿಯವರ  ಭೇಟಿ

Posted On: 05 FEB 2024 12:46PM by PIB Bengaluru

ಅರುಣ್ ಜೇಟ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟಿನ ಪ್ರೊಬೇಷನರ್ಸ್ ತರಬೇತಿ ಕೋರ್ಸಿನ (ಹಣಕಾಸು ಆಡಳಿತ ಪ್ರೊಬೆಷನರ್ಸ್) 31 ನೇ ಬ್ಯಾಚಿನ ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಇಂದು (ಫೆಬ್ರವರಿ 5, 2024) ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು. ಈ ಅಧಿಕಾರಿಗಳು ಇಂಡಿಯನ್ ಸಿವಿಲ್ ಅಕೌಂಟ್ಸ್ ಸರ್ವಿಸ್, ಇಂಡಿಯನ್ ಡಿಫೆನ್ಸ್ ಅಕೌಂಟ್ಸ್ ಸರ್ವಿಸ್ ಮತ್ತು ಇಂಡಿಯನ್ ಪಿ &ಟಿ (ಫೈನಾನ್ಸ್ ಅಂಡ್ ಅಕೌಂಟ್ಸ್) ಸೇವೆಗೆ ಸೇರಿದವರಾಗಿದ್ದಾರೆ.

ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಉತ್ತಮ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯು ಉತ್ತಮ ಆಡಳಿತದ ಆಧಾರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ನೀವು  ಪ್ರತಿನಿಧಿಸುವ ಸಂಘಟಿತ ಹಣಕಾಸು ಸೇವೆಗಳು ಸರ್ಕಾರದ ದಕ್ಷ ಕಾರ್ಯನಿರ್ವಹಣೆಯನ್ನು ನಿಭಾಯಿಸಲು ಸಹಾಯ ಮಾಡುವ ಹಣಕಾಸು ನಿರ್ವಹಣಾ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿವೆ. ಆದ್ದರಿಂದ, ಆಡಳಿತದಲ್ಲಿ ಈ ಸೇವೆಯವರ  ಪಾತ್ರವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ ಏಕೆಂದರೆ ಅವರು ಆಡಳಿತದಲ್ಲಿ ಔಚಿತ್ಯ ಮತ್ತು ವಿವೇಚನೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದರು. ಈ ಸೇವೆಯವರು ಸಾಮರ್ಥ್ಯಗಳನ್ನು ಗಳಿಸಿಕೊಳ್ಳುವ ಮತ್ತು ಬಳಸಿಕೊಳ್ಳುವ ಮೂಲಕ ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುವಂತೆಯೂ  ಅವರು ಆಗ್ರಹಿಸಿದರು.

ದೇಶವು ಡಿಜಿಟಲ್ ರೂಪಾಂತರ/ಪರಿವರ್ತನೆಗೆ  ಒಳಪಡುತ್ತಿರುವ  ಸಮಯದಲ್ಲಿ ಅವರು ಸೇವೆಗೆ ಸೇರಿದ್ದಾರೆ ಎಂದು ರಾಷ್ಟ್ರಪತಿ ಹೇಳಿದರು. ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಜೊತೆಗೆ  ಸೇವಾ ವಿತರಣೆಯಲ್ಲಿ ಹೆಚ್ಚಿನ ದಕ್ಷತೆಯ ನಿರೀಕ್ಷೆ ಸಾರ್ವಜನಿಕರಲ್ಲಿದೆ. ಈ ಕಾಳಜಿಗಳನ್ನು ಪರಿಹರಿಸಲು, ಸರ್ಕಾರಿ ಇಲಾಖೆಗಳು ತಂತ್ರಜ್ಞಾನವನ್ನು ಉತ್ತಮವಾಗಿ ಬಳಸಿಕೊಳ್ಳುವುದು ಮತ್ತು ಆಡಳಿತ ವ್ಯವಸ್ಥೆಯನ್ನು ನಾಗರಿಕ ಕೇಂದ್ರಿತ, ದಕ್ಷ ಮತ್ತು ಪಾರದರ್ಶಕವಾಗಿಸುವುದು ಕಡ್ಡಾಯವಾಗಿದೆ. ಅವರ ಕೆಲಸವು ಹಣಕಾಸು ಸಂಪನ್ಮೂಲಗಳ ಉಪಯುಕ್ತತೆಯನ್ನು ಗರಿಷ್ಠಗೊಳಿಸುವುದಕ್ಕೆ ಸೀಮಿತವಾಗಿಲ್ಲ ಅದು ನೀತಿ ಬದಲಾವಣೆಗಳ ಪರಿಣಾಮವನ್ನು ವಿಶ್ಲೇಷಿಸುವುದು ಮತ್ತು ಹಣಕಾಸು ನಿರ್ವಹಣಾ ವ್ಯವಸ್ಥೆಗಳು ಸೇರಿದಂತೆ ಆಡಳಿತದ ವಿವಿಧ ವ್ಯವಸ್ಥೆಗಳನ್ನು ಸುಧಾರಿಸಲು ಸುಧಾರಣೆಗಳನ್ನು ಪ್ರಸ್ತಾಪಿಸುವುದು ಸಹ ಒಳಗೊಂಡಿದೆ ಎಂದೂ  ರಾಷ್ಟ್ರಪತಿ  ಹೇಳಿದರು. ಈ ಕಾರ್ಯಗಳನ್ನು ಕೈಗೊಳ್ಳಲು ನಿರಂತರವಾಗಿ ಬದಲಾಗುತ್ತಿರುವ ಮತ್ತು ಮುಂದುವರಿದ ತಂತ್ರಜ್ಞಾನದ ಜಗತ್ತಿನ ಜೊತೆ ಹೆಜ್ಜೆ ಹಾಕುವಂತೆ  ಅವರು ಸಲಹೆ ನೀಡಿದರು. ಇತ್ತೀಚಿನ ತಂತ್ರಜ್ಞಾನವನ್ನು ಬಳಸಲು ಮತ್ತು ನಮ್ಮ ಲೆಕ್ಕಪತ್ರ ಹಾಗು ಲೆಕ್ಕಪರಿಶೋಧನಾ ವ್ಯವಸ್ಥೆಗಳನ್ನು ಅಡೆ-ತಡೆರಹಿತವಾಗಿಸಲು ಕಾರ್ಯವಿಧಾನಗಳನ್ನು ರೂಪಿಸುವ ನಿಟ್ಟಿನಲ್ಲಿಯೂ  ಅವರ ಪ್ರಯತ್ನಗಳು ಸಾಗಬೇಕು  ಎಂದೂ ಅವರು ಹೇಳಿದರು.

Please click here to see the President's Speech -

***



(Release ID: 2002632) Visitor Counter : 50