ಹಣಕಾಸು ಸಚಿವಾಲಯ

​​​​​​​'ಗರೀಬ್' (ಬಡವರು), 'ಮಹಿಲೇನ್' (ಮಹಿಳೆಯರು), 'ಯುವ' (ಯುವಜನರು) ಮತ್ತು 'ಅನ್ನದಾತ' (ರೈತ) ಇವು ಸರ್ಕಾರ ಗಮನ ಹರಿಸುವ ನಾಲ್ಕು ಪ್ರಮುಖ ಜಾತಿಗಳು: ಕೇಂದ್ರ ಹಣಕಾಸು ಸಚಿವರು


"ಸಾಮಾಜಿಕ ನ್ಯಾಯ ಎಂಬುದು  ಪರಿಣಾಮಕಾರಿ ಮತ್ತು ಅಗತ್ಯ ಆಡಳಿತ ಮಾದರಿಯಾಗಿದೆ"

'ವಿಕಸಿತ ಭಾರತ್' ಎಂಬುದು ಜನರ ಸಾಮರ್ಥ್ಯ ಮತ್ತು ಸಬಲೀಕರಣವನ್ನು ಸುಧಾರಿಸುವ ಕುರಿತಾದುದು; ಕೇಂದ್ರ ಹಣಕಾಸು ಸಚಿವರು

Posted On: 01 FEB 2024 12:39PM by PIB Bengaluru

ಗೌರವಾನ್ವಿತ ಪ್ರಧಾನಿಯವರ ನೇತೃತ್ವದ ಸರ್ಕಾರವು ನಾಲ್ಕು ಪ್ರಮುಖ ಜಾತಿಗಳ ಮೇಲೆ ಕೇಂದ್ರೀಕರಿಸುವುದನ್ನು ದೃಢವಾಗಿ ಪಾಲಿಸುತ್ತದೆ, ,  ಅವುಗಳೆಂದರೆ 'ಗರೀಬ್' (ಬಡವರು), 'ಮಹಿಲಾಯೆನ್' (ಮಹಿಳೆಯರು), 'ಯುವ' (ಯುವಜನರು) ಮತ್ತು 'ಅನ್ನದಾತ' (ರೈತ)ರು .  ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2024-25ರ ಮಧ್ಯಂತರ ಬಜೆಟ್ ಮಂಡಿಸುವಾಗ ಈ ವಿಷಯ ತಿಳಿಸಿದರು.  "ಅವರ ಅಗತ್ಯಗಳು, ಅವರ ಆಕಾಂಕ್ಷೆಗಳು ಮತ್ತು ಅವರ ಕಲ್ಯಾಣವು ನಮ್ಮ ಪರಮಾಧ್ಯತೆಯಾಗಿದೆ. ಅವರು ಪ್ರಗತಿ ಸಾಧಿಸಿದಾಗ ದೇಶ ಪ್ರಗತಿ ಹೊಂದುತ್ತದೆ. ಈ ನಾಲ್ವರಿಗೂ ತಮ್ಮ ಜೀವನವನ್ನು ಸುಧಾರಿಸುವ ದಾರಿಯ ಅನ್ವೇಷಣೆಯಲ್ಲಿ ಸರ್ಕಾರದ ಬೆಂಬಲ ಬೇಕಾಗಿದೆ ಮತ್ತು ಅವರದನ್ನು ಪಡೆಯುತ್ತಾರೆ. ಅವರ ಸಬಲೀಕರಣ ಮತ್ತು ಯೋಗಕ್ಷೇಮವು ದೇಶವನ್ನು ಮುಂದೆ ಕೊಂಡೊಯ್ಯುತ್ತದೆ " ಎಂದೂ ಅವರು ಹೇಳಿದರು.

ಸಾಮಾಜಿಕ ನ್ಯಾಯವು ಪರಿಣಾಮಕಾರಿ ಮತ್ತು ಅಗತ್ಯ ಆಡಳಿತ ಮಾದರಿಯಾಗಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.  ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಒತ್ತು ನೀಡಿರುವುದು ಪಾರದರ್ಶಕತೆ ತಂದಿದೆ ಮತ್ತು ಎಲ್ಲಾ ಅರ್ಹ ಜನರಿಗೆ ಪ್ರಯೋಜನಗಳನ್ನು ತಲುಪಿಸುವುದಕ್ಕೆ ಇದರಿಂದ ಸಾಧ್ಯವಾಗಿದೆ ಎಂದು ಅವರು ಹೇಳಿದರು.  'ನೇರ ಲಾಭ ವರ್ಗಾವಣೆ' (ನೇರ ನಗದು ವರ್ಗಾವಣೆ) ಮೇಲಿನದನ್ನು ಹೇಗೆ ಸಾಧಿಸಿತು ಎಂಬುದನ್ನು ಅವರು ಒತ್ತಿ ಹೇಳಿದರು.  ಸರ್ಕಾರದ ಗಮನವು ಫಲಿತಾಂಶಗಳ ಮೇಲೆ ಇದೆಯೇ ಹೊರತು ವೆಚ್ಚಗಳ,  ಗಾತ್ರಗಳ  ಮೇಲೆ ಅಲ್ಲ ಎಂದು ಅವರು ಹೇಳಿದರು.

ಸರ್ಕಾರದ ಸರ್ವತೋಮುಖ, ಸರ್ವವ್ಯಾಪಿ ಮತ್ತು ಸರ್ವಾಂಗೀಣ ಅಭಿವೃದ್ಧಿಯ ವಿಧಾನವು 2047 ರ ವೇಳೆಗೆ ಭಾರತವನ್ನು 'ವಿಕಸಿತ ಭಾರತ್' ಮಾಡುವುದಕ್ಕೆ  ಅನುಗುಣವಾಗಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.  ಈ ಗುರಿಯನ್ನು ಸಾಧಿಸಲು, ನಾವು ಜನರ ಸಾಮರ್ಥ್ಯವನ್ನು ಸುಧಾರಿಸಬೇಕಾಗಿದೆ ಮತ್ತು ಅವರನ್ನು ಸಬಲೀಕರಣಗೊಳಿಸಬೇಕಾಗಿದೆ ಎಂದು ಅವರು ನುಡಿದರು.

****
 



(Release ID: 2001439) Visitor Counter : 55