ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

​​​​​​​'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದವು ಪರೀಕ್ಷೆಯ ಸಮಯದಲ್ಲಿ ನಮ್ಮ ಯುವ ಪೀಳಿಗೆ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು  ಒಳನೋಟ ನೀಡುವ ಪಾಠವಾಗಿದೆ ಎಂದಿದ್ದಾರೆ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಮೋದಿ ಜೀ  ಮಾತುಗಳು ಅವರ ಹಾದಿಯಲ್ಲಿ ಪ್ರಗತಿ ಸಾಧಿಸಲು ಪ್ರೇರೇಪಿಸುವುದಲ್ಲದೆ ಒತ್ತಡವನ್ನು ನಿರ್ವಹಿಸಲು ಕೂಡಾ  ಸಹಾಯಕವಾಗಿವೆ

ನಮ್ಮ ಭವಿಷ್ಯದ ಪೀಳಿಗೆಗೆ ಉತ್ತಮವಾಗಿ ಕಲಿಸಲು ಮತ್ತು ಅದನ್ನು  ಬೆಳೆಸಲು ಇದು ಶಿಕ್ಷಕರು ಮತ್ತು ಪೋಷಕರಿಗೆ ಮಾರ್ಗದರ್ಶಿಯಾಗಬಹುದು

Posted On: 29 JAN 2024 7:43PM by PIB Bengaluru

'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದವು ಪರೀಕ್ಷೆಯ ಸಮಯದಲ್ಲಿ ನಮ್ಮ ಯುವ ಪೀಳಿಗೆ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸುವ ಒಳನೋಟದ ಪಾಠವಾಗಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು, ಹೇಳಿದ್ದಾರೆ.

ಎಕ್ಸ್ ಪ್ಲಾಟ್ ಫಾರ್ಮ್ ನ ಪೋಸ್ಟ್ ನಲ್ಲಿ ಶ್ರೀ ಅಮಿತ್ ಶಾ, "ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ  ಅವರು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದವು ಪರೀಕ್ಷೆಗಳ ಸಮಯದಲ್ಲಿ ನಮ್ಮ ಯುವ ಪೀಳಿಗೆ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವ ಒಳನೋಟದ ಪಾಠವಾಗಿದೆ. ಮೋದಿ ಜೀ ಅವರ ಮಾತುಗಳು ವಿದ್ಯಾರ್ಥಿಗಳಿಗೆ ಅವರ ಹಾದಿಯಲ್ಲಿ ಪ್ರಗತಿ ಸಾಧಿಸಲು ಪ್ರೇರೇಪಿಸುವುದಲ್ಲದೆ ಒತ್ತಡವನ್ನು ನಿರ್ವಹಿಸಲು ಕೂಡಾ  ಸಹಾಯಕವಾಗಿವೆ. ನಮ್ಮ ಭವಿಷ್ಯದ ಪೀಳಿಗೆಗೆ ಉತ್ತಮವಾಗಿ ಕಲಿಸಲು ಮತ್ತು ಅವರನ್ನು ಬೆಳೆಸಲು ಶಿಕ್ಷಕರು ಮತ್ತು ಪೋಷಕರಿಗೆ ಇದು ಮಾರ್ಗದರ್ಶಿಯಾಗಬಹುದು” ಎಂದು ಹೇಳಿದ್ದಾರೆ. 

*****

 


(Release ID: 2000608) Visitor Counter : 80