ಪ್ರಧಾನ ಮಂತ್ರಿಯವರ ಕಛೇರಿ

ಮಾರಿಷಸ್ ನ ಜನರು ಹಾಡಿದ ಶ್ರೀರಾಮ ಭಕ್ತಿಯ ಭಜನೆ ಮತ್ತು ಕಥಾ ಪ್ರಸಂಗಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 20 JAN 2024 9:27AM by PIB Bengaluru

ಮಾರಿಷಸ್ ನ ಜನರು ಹಾಡಿದ ಶ್ರೀರಾಮ ಭಕ್ತಿಯ ಭಜನೆ ಮತ್ತು ಕಥಾ ಪ್ರಸಂಗಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶವನ್ನು ಹಂಚಿಕೊಂಡಿದ್ದಾರೆ;

“ಮಾರಿಷಸ್ ನ ಜನರು ತಮ್ಮ ಸಂಪ್ರದಾಯಗಳನ್ನು ಅತ್ಯತ್ತಮವಾಗಿ ಸಂರಕ್ಷಿಸಿದ್ದಾರೆ. ಇದು ಕಥಾ ಪ್ರಸಂಗಗಳು ಮತ್ತು ಭಜನೆಗಳ ಮೂಲಕ ರಾಮ ಭಕ್ತಿಯ ಸಾರವನ್ನು ಒಳಗೊಂಡಿದೆ. ಅಂತಹ ಆಳವಾದ ಸಾಂಸ್ಕೃತಿಕ ಬೇರುಗಳು ಮತ್ತು ಭಕ್ತಿಯು ಹಲವು ವರ್ಷಗಳಿಂದ ಉಳಿದು ಸದಾ ಬೆಳವಣಿಗೆ ಹೊಂದುತ್ತಿರುವುದು ಬಹಳ ವಿಶೇಷವಾಗಿದೆ. #ಶ್ರೀರಾಮಭಜನೆ ( #ShriRamBhajan  ) 
 

  



(Release ID: 1998120) Visitor Counter : 51