ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಅಯೋಧ್ಯೆಯು ರೂಪಾಂತರಗೊಂಡಿದೆ: ಆಧ್ಯಾತ್ಮಿಕ ನಗರದ ಪಯಣಕ್ಕೆ ಮುಕ್ತವಾದ ಆಧುನಿಕ ವಾಯುಮಾರ್ಗ ಸಂಪರ್ಕ
Posted On:
19 JAN 2024 2:20PM by PIB Bengaluru
ಅಯೋಧ್ಯೆಯ ಹೃದಯ ಭಾಗ ಆಧ್ಯಾತ್ಮದೊಂದಿಗೆ ಇತಿಹಾಸವು ಸಹ ಅಪರಿಮಿತವಾಗಿ ಬೆಸೆದುಕೊಂಡಿದೆ. ಇಲ್ಲಿ ಸ್ಮಾರಕದ ಪರಿವರ್ತನೆಯಾಗುತ್ತಿದ್ದು, ರಾಮಮಂದಿರದ ಪವಿತ್ರ ಮೈದಾನವನ್ನು ಮೀರಿ ಇದು ವಿಸ್ತರಿಸಿದೆ. ಭವ್ಯವಾದ ದೇವಾಲಯ ರೂಪುಗೊಂಡಂತೆ ಭಾರತ ಸರ್ಕಾರ ದೂರದೃಷ್ಟಿಯಿಂದ ದಾಪುಗಾಲಿಟ್ಟಿದ್ದು, ಅಯೋಧ್ಯೆಯನ್ನು ತಲುಪುವ ಕುರಿತಂತೆ ಸಮಗ್ರವಾಗಿ ಪರಿಶೀಲನೆ ನಡೆಸಿತು. ತರುವಾಯ ಪ್ರಾಚೀನ ನಗರವನ್ನು ಸಂಪರ್ಕಿಸುವ ಹೊಸ ಯುಗಕ್ಕೆ ಕೊಂಡೊಯ್ಯಿತು.
ಅಯೋಧ್ಯೆಯಲ್ಲಿ ಅಮೃತ್ ಭಾರತ್ ರೈಲು ಮತ್ತು ವಂದೇ ಭಾರತ್ ರೈಲುಗಳಿಗೆ ಪ್ರಧಾನಮಂತ್ರಿಯವರಿಂದ ಹಸಿರು ನಿಶಾನೆ
ಈ ವಿಕಸನದ ಮಂಚೂಣಿಯಲ್ಲಿ ಅಯೋಧ್ಯೆಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಮತ್ತು ಮರು ಅಭಿವೃದ್ಧಿಪಡಿಸಿದ ರೈಲು ನಿಲ್ದಾಣವನ್ನು ಈಗ ‘ಅಯೋಧ್ಯಾ ಧಾಮ್ ರೈಲು ನಿಲ್ದಾಣ’ ಎಂದು ಮರು ನಾಮಕರಣ ಮಾಡಲಾಗಿದೆ. ಇದನ್ನು 240 ಕೋಟಿ ರೂಪಾಯಿಗೂ ಮೀರಿದ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು, ಆಧುನಿಕ ಸಂಪರ್ಕ ಕುರಿತ ಸರ್ಕಾರದ ಬದ್ಧತೆಯ ಪ್ರತೀಕ ಇದಾಗಿದೆ. ಮೂರು ಅಂತಸ್ತಿನ ಈ ನಿಲ್ದಾಣ ಅತ್ಯಾಧುನಿಕ ಲಿಪ್ಟ್ ಗಳು, ಎಸ್ಕಲೇಟರ್ ಗಳು, ಆಹಾರ ಮಳಿಗೆಗಳು ಮತ್ತು ಪೂಜಾ ಅಗತ್ಯತೆಗಳನ್ನು ಪೂರೈಸುವ ಅಂಗಡಿಗಳನ್ನು ಹೊಂದಿದ್ದು, ಆಧುನಿಕ ಅನುಕೂಲದೊಂದಿಗೆ ಇದು ಆಧ್ಯಾತ್ಮಿಕತೆಯನ್ನು ಸಂಯೋಜಿಸುತ್ತಿದೆ. ಇಲ್ಲಿ ವಿಶ್ರಾಂತಿ ಕೊಠಡಿಗಳು, ಮಕ್ಕಳ ಆರೈಕೆ ಕೋಣೆಗಳು, ನಿರೀಕ್ಷಣಾ ಸಭಾಂಗಣಗಳಂತಹ ಸೌಲಭ್ಯಗಳ ಒಳಗೊಳ್ಳುವಿಕೆಗೆ ಆದ್ಯತೆ ದೊರೆತಿದೆ. ‘ಎಲ್ಲರಿಗೂ ಪ್ರವೇಶವಿದೆ ಮತ್ತು ‘ಐಜಿಬಿಸಿ ಪ್ರಾಮಾಣಿಕೃತ ಹಸಿರು ನಿಲ್ದಾಣದ ಕಟ್ಟಡ” ಎಂಬ ಗುರುತುಪಟ್ಟಿಯನ್ನು ಹಾಕಲಾಗಿದೆ. ಇಂತಹ ರೂಪಾಂತರದ ಮಹತ್ವದ ಕುರಿತು ಸ್ವತಃ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತಿ ಹೇಳಿದ್ದಾರೆ. ಅಮೃತ್ ಭಾರತ್ ಎಕ್ಸ್ ಪ್ರೆಸ್, ದೇಶದ ಸೂಪರ್ ಫಾಸ್ಟ್ ಪ್ರಯಾಣಿಕ ರೈಲುಗಳ ಹೊಸ ವರ್ಗದ ಸಂಚಾರಕ್ಕೆ ಅಯೋಧ್ಯೆಯಲ್ಲಿ ಅವರು ಹಸಿರು ನಿಶಾನೆ ತೋರಿದರು. ಇದರ ಜೊತೆಗೆ ಪ್ರಧಾನಮಂತ್ರಿಯವರು ಅಯೋಧ್ಯೆ – ಆನಂದ ವಿಹಾರ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಲೋಕಾರ್ಪಣೆ ಮಾಡಿದರು.
ಅಯೋಧ್ಯೆಯ ಪರಿವರ್ತನೆ ರೈಲ್ವೆಯನ್ನು ಮೀರಿ ವಿಸ್ತರಣೆಯಾಗಿದ್ದು, 2023 ರ ಡಿಸೆಂಬರ್ ನಲ್ಲಿ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. ಈ ವಿಮಾನ ನಿಲ್ದಾಣವನ್ನು 1450 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಅಭಿವೃದ್ಧಿಪಡಿಸಿದ್ದು, ಮೊದಲ ಹಂತದಲ್ಲಿ 6500 ಚದರ ಮೀಟರ್ ವ್ಯಾಪ್ತಿಯ ಅತ್ಯಾಧುನಿಕ ಟರ್ಮಿನಲ್ ನಿರ್ಮಿಸಲಾಗಿದೆ. ಇಲ್ಲಿಂದ ವಾರ್ಷಿಕ 10 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಈ ಟರ್ಮಿನಲ್ ಶ್ರೀ ರಾಮಮಂದಿರವನ್ನು ಪ್ರತಿಫಲಿಸುತ್ತದೆ. ನಿಲ್ದಾಣದ ಮುಂಭಾಗ ದೇವಾಲಯ ಪ್ರೇರಿತ ವಾಸ್ತುಶಿಲ್ಪ ಹೊಂದಿದ್ದು, ಅದರ ಒಳಾಂಗಣ ಸ್ಥಳೀಯ ಕಲೆ ಮತ್ತು ನಗರದ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಎರಡನೇ ಹಂತದಲ್ಲಿ ವಾರ್ಷಿಕ 60 ಲಕ್ಷ ಪ್ರಯಾಣಿಕರು ಪ್ರಯಾಣಿಸುವ ಗುರಿ ಹೊಂದಿದ್ದು, ತ್ವರಿತ ಸಂಪರ್ಕದಿಂದ ಪ್ರವಾಸೋದ್ಯಮಕ್ಕೆ ಪುಷ್ಟಿ ದೊರೆಯಲಿದೆ. ವ್ಯಾಪಾರ ಚಟುವಟಿಕೆಗೆ ಉತ್ತೇಜನದ ಜೊತೆಗೆ ಈ ವಲಯದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಅಯೋಧ್ಯೆಯಲ್ಲಿ ಪ್ರಧಾನಮಂತ್ರಿಯವರು ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.
ಅಯೋಧ್ಯೆ ಮೂಲಸೌಕರ್ಯ ವಲಯದಲ್ಲಿ ಪರಿವರ್ತನೆಗೆ ಮಾತ್ರ ಸೀಮಿತವಾಗಿಲ್ಲ, ಒಟ್ಟಾರೆ ಅಭಿವೃದ್ಧಿ ವಿಸ್ತರಣೆಯನ್ನು ಇದು ಒಳಗೊಂಡಿದೆ. ಇತ್ತೀಚೆಗೆ ಪ್ರಧಾನಮಂತ್ರಿಯವರು ಭೇಟಿ ನೀಡಿದ್ದಾಗ ಮರು ಅಭಿವೃದ್ಧಿಪಡಿಸಿದ, ವಿಸ್ತಾರವಾದ ಮತ್ತು ಸುಂದರ ರಸ್ತೆಗಳಾದ ರಾಮಪಥ್, ಭಕ್ತಿಪಥ್, ಧರ್ಮಪಥ್ ಮತ್ತು ಶ್ರೀ ರಾಮ್ ಜನ್ಮಭೂಮಿ ಪಥ್ ರಸ್ತೆಗಳನ್ನು ಲೋಕಾರ್ಪಣೆ ಮಾಡಿದರು. ಇದರಿಂದ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಸೌಲಭ್ಯಗಳನ್ನು ಹೆಚ್ಚಿಸಿದಂತಾಗಿದೆ.
ಅಯೋಧ್ಯೆಯ ಮರು ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ವಲಯದಲ್ಲಿನ ಹೂಡಿಕೆ ನಗರದ ಸಮಗ್ರ ಅಭಿವೃದ್ಧಿಯನ್ನೊಳಗೊಂಡ ಪರಿವರ್ತನೆಗೆ ಕಾರಣವಾಗಿದೆ. ಸಂಪರ್ಕ ಸುಧಾರಣೆಯಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಒತ್ತು ನೀಡಿದಂತಾಗಿದೆ. ಅಯೋಧ್ಯೆಯು ತೀರ್ಥಯಾತ್ರೆ, ಪ್ರವಾಸೋದ್ಯಮ ಮತ್ತು ಆರ್ಥಿಕ ಸಮೃದ್ಧಿಯ ಅಭಿವೃದ್ಧಿಶೀಲ ಕೇಂದ್ರವಾಗಲು ಸನ್ನದ್ಧವಾಗಿದೆ.
ಉಲ್ಲೇಖಗಳು;
***
(Release ID: 1997820)
Visitor Counter : 73