ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಸಮರ್ಪಿತವಾದ ಆರು ಸ್ಮರಣಾರ್ಥ ಅಂಚೆ ಚೀಟಿಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


"ಈ ಅಂಚೆಚೀಟಿಗಳ ಮೇಲೆ ಕಲಾತ್ಮಕ ಅಭಿವ್ಯಕ್ತಿಯ ಮೂಲಕ ಭಗವಾನ್ ರಾಮನ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸಲಾಗಿದೆ"

"ಭಗವಾನ್ ರಾಮ, ಸೀತೆ ಮಾತೆ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಬೋಧನೆ, ಆಶಯಗಳು ಸಮಯ, ಸಮಾಜ ಮತ್ತು ಜಾತಿಗಳ ಗಡಿಮೇರೆಗಳನ್ನು ಮೀರಿವೆ ಮತ್ತು ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಸ್ವಾನುಭವದ ಸಂಪರ್ಕ ಹೊಂದಿವೆ"

"ಆಸ್ಟ್ರೇಲಿಯಾ, ಕಾಂಬೋಡಿಯಾ, ಅಮೇರಿಕಾ, ನ್ಯೂಜಿಲೆಂಡ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಭಗವಾನ್ ರಾಮನ ಜೀವನದ ಘಟನೆಗಳ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ"

"ಭೂಮಿಯಲ್ಲಿ ಪರ್ವತಗಳು ಮತ್ತು ನದಿಗಳು ಇರುವವರೆಗೂ ರಾಮಾಯಣದ ಕಥೆ ಜನರಲ್ಲಿ ಪ್ರಚಲಿತದಲ್ಲಿರುತ್ತದೆ"

Posted On: 18 JAN 2024 3:49PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ರಾಮ ಜನ್ಮಭೂಮಿ ದೇವಸ್ಥಾನಕ್ಕೆ ಸಮರ್ಪಿತವಾದ ಆರು ವಿಶೇಷ ಸ್ಮರಣಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು ಮತ್ತು ವಿಶ್ವದ ವಿವಿಧ ದೇಶಗಳಲ್ಲಿ ಬಿಡುಗಡೆ ಮಾಡಲಾದ ಭಗವಾನ್ ರಾಮನಿಗೆ ಸಂಬಂಧಿಸಿದ ಇದೇ ರೀತಿಯ ಅಂಚೆಚೀಟಿಗಳನ್ನು ಹೊಂದಿರುವ ಆಲ್ಬಂ ಅನ್ನು ಸಹ ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಭಾರತ ಮತ್ತು ವಿದೇಶದಲ್ಲಿರುವ ಶ್ರೀರಾಮನ ಎಲ್ಲಾ ಭಕ್ತರನ್ನು ಅವರು ಅಭಿನಂದಿಸಿದರು.

ಪತ್ರಗಳು ಅಥವಾ ಪ್ರಮುಖ ದಾಖಲೆಗಳನ್ನು ಕಳುಹಿಸಲು ಲಕೋಟೆಗಳ ಮೇಲೆ ಈ ಅಂಚೆಚೀಟಿಗಳನ್ನು ಅಂಟಿಸಿರುವುದು ನಮಗೆಲ್ಲರಿಗೂ ತಿಳಿದಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಆದರೆ ಅವುಗಳು ಮತ್ತೊಂದು ಉದ್ದೇಶವನ್ನು ಪೂರೈಸುತ್ತವೆ. ಮುಂದಿನ ಪೀಳಿಗೆಗೆ ಐತಿಹಾಸಿಕ ಘಟನೆಗಳನ್ನು ನೆನಪಿಸಲು ಅಂಚೆ ಚೀಟಿಗಳು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ನೀವು ಅಂಚೆ ಚೀಟಿಯನ್ನು ಹೊಂದಿರುವ ಯಾರಿಗಾದರೂ ಪತ್ರ ಅಥವಾ ವಸ್ತುವನ್ನು ಕಳುಹಿಸಿದಾಗ, ನೀವು ಅವರಿಗೆ ಇತಿಹಾಸದ ತುಣುಕನ್ನು ಸಹ ಕಳುಹಿಸುತ್ತೀರಿ. ಈ ಅಂಚೆ ಚೀಟಿಗಳು ಕೇವಲ ಕಾಗದದ ತುಂಡು ಅಲ್ಲ, ಆದರೆ ಇತಿಹಾಸ ಪುಸ್ತಕಗಳು, ಕಲಾಕೃತಿಗಳು ಮತ್ತು ಐತಿಹಾಸಿಕ ತಾಣಗಳ ಅತ್ಯಂತ ಚಿಕ್ಕ ರೂಪವಾಗಿದೆ, ಗತವೈಭವದ ಸಂಕೇತವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಈ ಸ್ಮರಣಾರ್ಥ ಅಂಚೆಚೀಟಿಗಳು ನಮ್ಮ ಯುವ ಪೀಳಿಗೆಗೆ ಭಗವಾನ್ ರಾಮ ಮತ್ತು ಅವರ ಜೀವನದ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತವೆ ಎಂದು ಪ್ರಧಾನಮಂತ್ರಿಯವರು  ಹೇಳಿದರು. ಈ ಅಂಚೆಚೀಟಿಗಳ ಮೇಲೆ ಕಲಾತ್ಮಕ ಅಭಿವ್ಯಕ್ತಿಯ ಮೂಲಕ ಭಗವಾನ್ ರಾಮನ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸಲಾಗಿದೆ ಮತ್ತು ಜನಪ್ರಿಯ ಚತುರ್ಭುಜದ ಉಲ್ಲೇಖದೊಂದಿಗೆ: 'ಮಂಗಳ ಭವನ ಅಮಂಗಲ ಹಾರಿ ( 'मंगल भवन अमंगल हारी' ) ', ರಾಷ್ಟ್ರದ ಅಭಿವೃದ್ಧಿಯ ಆಶಯವನ್ನು ಮಾಡಲಾಗಿದೆ . ಈ ಅಂಚೆಚೀಟಿಗಳಲ್ಲಿ ಸೂರ್ಯ, 'ಸೂರ್ಯವಂಶಿ' ರಾಮನ ಸಂಕೇತ, 'ಸರಯು' ನದಿ ಮತ್ತು ದೇವಾಲಯದ ಆಂತರಿಕ ವಾಸ್ತುಶಿಲ್ಪವನ್ನು ಸಹ ಚಿತ್ರಿಸಲಾಗಿದೆ. ಸೂರ್ಯನು ದೇಶದಲ್ಲಿ ಹೊಸ ಬೆಳಕಿನ ಸಂದೇಶವನ್ನು ನೀಡಿದರೆ, ಸರಯುವಿನ ಚಿತ್ರವು ರಾಮನ ಆಶೀರ್ವಾದದಿಂದ ದೇಶವು ಯಾವಾಗಲೂ ಕ್ರಿಯಾತ್ಮಕವಾಗಿರುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಸ್ಮರಣಾರ್ಥ ಅಂಚೆಚೀಟಿಗಳನ್ನು ಪ್ರಕಟಿಸಿ ಹೊರತರುವಲ್ಲಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜೊತೆಗೆ ಅಂಚೆ ಇಲಾಖೆಗೆ ಮಾರ್ಗದರ್ಶನ ನೀಡಿದ ಸಂತರನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ಭಗವಾನ್ ರಾಮ, ಮಾ ಸೀತೆ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಬೋಧನೆಗಳು ಸಮಯ, ಸಮಾಜ ಮತ್ತು ಜಾತಿಯ ಗಡಿಗಳನ್ನು ಮೀರಿವೆ ಮತ್ತು ಅಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಪ್ರೇಮ, ತ್ಯಾಗ, ಏಕತೆ ಮತ್ತು ಧೈರ್ಯವನ್ನು ಅತ್ಯಂತ ಕಷ್ಟದ ಸಮಯದಲ್ಲಿಯೂ ಕಲಿಸುವ ರಾಮಾಯಣ ಇಡೀ ಮನುಕುಲವನ್ನು ಬೆಸೆಯುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಕಾರಣದಿಂದಲೇ ರಾಮಾಯಣ ಜಗತ್ತಿನ ಗಮನಸೆಳೆದಿದೆ. ಇಂದು ಬಿಡುಗಡೆಯಾದ ಪುಸ್ತಕಗಳು ಪ್ರಪಂಚದಾದ್ಯಂತ ಭಗವಾನ್ ರಾಮ, ಸೀತೆ ಮಾತೆ ಮತ್ತು ರಾಮಾಯಣವನ್ನು ಎಷ್ಟು ಹೆಮ್ಮೆಯಿಂದ ನೋಡಲಾಗುತ್ತದೆ ಎಂಬುದರ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಅಮೆರಿಕ, ಆಸ್ಟ್ರೇಲಿಯಾ, ಕಾಂಬೋಡಿಯಾ, ಕೆನಡಾ, ಜೆಕ್ ರಿಪಬ್ಲಿಕ್, ಫಿಜಿ ,ಇಂಡೋನೇಷ್ಯಾ, ಶ್ರೀಲಂಕಾ, ನ್ಯೂಜಿಲೆಂಡ್, ಥೈಲ್ಯಾಂಡ್, ಗಯಾನಾ, ಸಿಂಗಾಪುರ್ ಮುಂತಾದ ದೇಶಗಳು ಸೇರಿದಂತೆ ಅನೇಕ ರಾಷ್ಟ್ರಗಳು ಭಗವಾನ್ ರಾಮನ ಜೀವನದ ಘಟನೆಗಳ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಭಗವಾನ್ ಶ್ರೀರಾಮನ ಬಗ್ಗೆ ಮತ್ತು ತಾಯಿ ಜಾನಕಿಯ ಕಥೆಗಳೊಂದಿಗೆ ಹೊಸದಾಗಿ ಬಿಡುಗಡೆಯಾದ ಆಲ್ಬಂ ಅವರ ಅಂದಿನ ಕಾಲದ ಜೀವನದ ಒಳನೋಟವನ್ನು ನಮಗೆ ನೀಡುತ್ತದೆ . ಭಗವಾನ್ ರಾಮನು ಭಾರತದ ಹೊರಗೆ ಎಷ್ಟು ಶ್ರೇಷ್ಠ ಮಾದರಿ ಪುರುಷ ಆಗಿದ್ದಾನೆ ಮತ್ತು ಆಧುನಿಕ ಕಾಲದ ರಾಷ್ಟ್ರಗಳಲ್ಲಿ ಅವನ ಪಾತ್ರವನ್ನು ಹೇಗೆ ಪ್ರಶಂಸಿಸಲಾಗುತ್ತದೆ ಎಂಬುದನ್ನು ಸಹ ಇದು ನಮಗೆ ತಿಳಿಸುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.

ಮಹರ್ಷಿ ವಾಲ್ಮೀಕಿಯವರ ಆಶಯವು ಇಂದಿಗೂ ಅಮರವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು, ಅದರಲ್ಲಿ ಅವರು ಹೀಗೆ ಹೇಳಿದ್ದರು: ಯಾವತ್ ಸ್ಥಾಸ್ಯಂತಿ ಗಿರಯಃ, ಸರಿತಶ್ಚ ಮಹೀತಲೇ. ತಾವತ್ ರಾಮಾಯಣಕಥಾ, ಲೋಕೇಷು ಪ್ರಚಾರತಿ॥ (यावत् स्थास्यंति गिरयः, सरितश्च महीतले। तावत् रामायणकथा, लोकेषु प्रचरिष्यति॥) , ಅಂದರೆ, ಭೂಮಿಯ ಮೇಲೆ ಪರ್ವತಗಳು ಮತ್ತು ನದಿಗಳು ಇರುವವರೆಗೂ ರಾಮಾಯಣದ ಕಥೆಯು ಜನರಲ್ಲಿ ಪ್ರಚಲಿತತೆಯಲ್ಲಿರುತ್ತದೆ ಎಂದರ್ಥ. ಆದ್ದರಿಂದ, ಶ್ರೀರಾಮನ ವ್ಯಕ್ತಿತ್ವ ಹೀಗೆ ಕಾಲಾತೀತವಾಗಿ, ಗೌರವಯುತವಾಗಿ ಇರುತ್ತದೆ.

***


(Release ID: 1997448) Visitor Counter : 122