ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಗೀತಾಬೆನ್‌ ರಬಾರಿ ಅವರು ಹಾಡಿರುವ "ಶ್ರೀ ರಾಮ್‌ ಘರ್‌ ಆಯೆ" ಭಕ್ತಿ ಗೀತೆಯನ್ನು ಹಂಚಿಕೊಂಡ ಪ್ರಧಾನ ಮಂತ್ರಿಗಳು

Posted On: 07 JAN 2024 9:25AM by PIB Bengaluru

ಮೌಲಿಕ್‌ ಮೆಹ್ತಾ ಅವರ ಸಂಗೀತ, ಸುನೀತಾ ಜೋಶಿ (ಪಾಂಡ್ಯಾ) ಅವರ ಸಾಹಿತ್ಯ ಹಾಗೂ ಸಂಯೋಜನೆಯಲ್ಲಿ ಗೀತಾಬೆನ್ ರಬಾರಿ ಅವರು ಹಾಡಿರುವ "ಶ್ರೀ ರಾಮ್ ಘರ್ ಆಯೆ" ಎಂಬ ಭಕ್ತಿ ಭಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ.

ಈ ಬಗ್ಗೆ "ಎಕ್ಸ್‌" ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಪ್ರಧಾನಮಂತ್ರಿಗಳು, "ಅಯೋಧ್ಯೆಯ ಭಗವಾನ್ ಶ್ರೀರಾಮನ ದಿವ್ಯ- ಭವ್ಯವಾದ ದೇವಾಲಯದಲ್ಲಿ ರಾಮ್ ಲಲ್ಲಾನ ಆಗಮನಕ್ಕಾಗಿದ್ದ ಕಾಯುವಿಕೆ ಕೊನೆಗೊಳ್ಳುತ್ತಿದೆ. ಪ್ರಾಣ ಪ್ರತಿಷ್ಠಾಪನೆಗಾಗಿ ನನ್ನ ದೇಶಬಂಧುಗಳು ಕಾತರದಿಂದ ಕಾಯುತ್ತಿದ್ದಾರೆ. ಅವರನ್ನು ಸ್ವಾಗತಿಸಲು ಗೀತಾಬೆನ್ ರಬಾರಿ ಅವರ ಈ ಭಜನೆ ತುಂಬಾ ಭಾವನಾತ್ಮಕ ಭಕ್ತಿದಾಯಕವಾಗಿದೆ #ಶ್ರೀರಾಮಭಜನೆ",ʼʼ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

***


(Release ID: 1993993) Visitor Counter : 90