ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಕಕಾಲದಲ್ಲಿ 108 ಸ್ಥಳಗಳಲ್ಲಿ ಅತಿ ಹೆಚ್ಚು ಜನರು ಸೂರ್ಯ ನಮಸ್ಕಾರ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಕ್ಕಾಗಿ ಗುಜರಾತ್ ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 01 JAN 2024 2:01PM by PIB Bengaluru

ಏಕಕಾಲದಲ್ಲಿ 108 ಸ್ಥಳಗಳಲ್ಲಿ ಅತಿ ಹೆಚ್ಚು ಜನರು ಸೂರ್ಯ ನಮಸ್ಕಾರ ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್ ಅನ್ನು
ಅಭಿನಂದಿಸಿದರು.

ಅಪಾರ ಪ್ರಯೋಜನವಿರುವ ಕಾರಣ ಸೂರ್ಯ ನಮಸ್ಕಾರವನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ದಿನಚರಿಯ ಭಾಗವಾಗಿ ಮಾಡಿಕೊಳ್ಳುವಂತೆ ಪ್ರಧಾನಮಂತ್ರಿಯವರು ಒತ್ತಾಯಿಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

"ನೂತನವರ್ಷ 2024 ಅನ್ನು ಗಮನಾರ್ಹ ಸಾಧನೆಯೊಂದಿಗೆ ಗುಜರಾತ್ ಸ್ವಾಗತಿಸಿತು - ಏಕಕಾಲದಲ್ಲಿ 108 ಸ್ಥಳಗಳಲ್ಲಿ ಅತಿ ಹೆಚ್ಚು ಜನರು ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು! ನಮಗೆಲ್ಲರಿಗೂ ತಿಳಿದಿರುವಂತೆ, 108 ಸಂಖ್ಯೆಯು ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಸ್ಥಳಗಳಲ್ಲಿ ಐತಿಹಾಸಿಕ ಮೊಧೇರಾ ಸೂರ್ಯ ದೇವಾಲಯ ಕೂಡ ಸೇರಿದೆ, ಹಾಗೂ ಅಲ್ಲಿ ಹಲವಾರು ಜನರು ಸೇರಿ ಸಾಧನೆ ಮಾಡಿದ್ದಾರೆ. ಇದು ಯೋಗಕ್ಕೆ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಗೆ ನಮ್ಮ ಬದ್ಧತೆಯ ನಿಜವಾದ ಸಾಕ್ಷಿಯಾಗಿದೆ.

ಸೂರ್ಯ ನಮಸ್ಕಾರವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಇದರ ಪ್ರಯೋಜನಗಳು ಅಪಾರವಾಗಿವೆ. ”


(Release ID: 1992167) Visitor Counter : 125