ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

​​​​​​​ ವಿಕಸಿತ ಭಾರತ ಸಂಕಲ್ಪ ಯಾತ್ರೆ


1 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆರೋಗ್ಯ ಶಿಬಿರಗಳಲ್ಲಿ 2 ಕೋಟಿ ಮಂದಿ ತಪಾಸಣೆ

8.5 ಲಕ್ಷಕ್ಕೂ ಹೆಚ್ಚು ಜನರನ್ನು ಕುಡಗೋಲು ಕಣ ಕಾಯಿಲೆಗಾಗಿ ಪರೀಕ್ಷಿಸಲಾಯಿತು ಮತ್ತು 27,630 ಕ್ಕೂ ಹೆಚ್ಚು ಜನರು ಹೆಚ್ಚಿನ ಚಿಕಿತ್ಸೆಗೆ ಸಾರ್ವಜನಿಕ ಆರೋಗ್ಯ ಸೌಲಭ್ಯ ಪಡೆಯಲು ಸೂಚಿಸಲಾಯಿತು.

Posted On: 29 DEC 2023 11:22AM by PIB Bengaluru

ಎಲ್ಲರಿಗೂ ಆರೋಗ್ಯ ಸೇವೆಗಳನ್ನು ಒದಗಿಸುವ ಮಹತ್ವದ ಮೈಲಿಗಲ್ಲು, ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಮಯದಲ್ಲಿ ಆಯೋಜಿಸಲಾಗುತ್ತಿರುವ ಆರೋಗ್ಯ ಶಿಬಿರಗಳಲ್ಲಿ 2 ಕೋಟಿಗೂ ಹೆಚ್ಚು ಜನ ತಪಾಸಣೆಗೊಳಪಟ್ಟಿದ್ದಾರೆ. 

ವಿಕಸಿತ ಭಾರತ್ ಸಂಕಲ್ಪ ಯಾತ್ರೆಯ ಅಡಿಯಲ್ಲಿ, ಇಲ್ಲಿಯವರೆಗೆ 1,08,500 ಗ್ರಾಮ ಪಂಚಾಯತ್‌ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ  2,10,24,874 ಜನ ಭಾಗವಹಿಸಿದ್ದಾರೆ.

ಆರೋಗ್ಯ ಶಿಬಿರಗಳಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ನಡೆಸಲಾಗಿದೆ. 

ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY): ವಿಕಸಿತ ಭಾರತ ಸಂಕಲ್ಪ ಯಾತ್ರೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಪ್ರಮುಖ ಯೋಜನೆಯಡಿ, ಆಯುಷ್ಮಾನ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಆಯುಷ್ಮಾನ್ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ನಲವತ್ತನಾಲ್ಕನೇ ದಿನದ ಅಂತ್ಯದ ವೇಳೆಗೆ, 32,54,611 ಕ್ಕೂ ಹೆಚ್ಚು ಭೌತಿಕ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಎನ್‌ಎಚ್‌ಎಯಿಂದ ಪಡೆದ ಮಾಹಿತಿಯ ಪ್ರಕಾರ ಜಿಲ್ಲೆಗಳಲ್ಲಿ ಇಲ್ಲಿಯವರೆಗೆ 1,44,80,498 ಕಾರ್ಡ್‌ಗಳನ್ನು ನೀಡಲಾಗಿದೆ.

ಕ್ಷಯರೋಗ (TB): ಕ್ಷಯರೋಗಳಿಗಾಗಿ ರೋಗಿಗಳ ಸ್ಕ್ರೀನಿಂಗ್ ಅನ್ನು ರೋಗಲಕ್ಷಣಗಳ ತಪಾಸಣೆ, ಕಫ ಪರೀಕ್ಷೆ ಮತ್ತು ಲಭ್ಯವಿರುವಲ್ಲಿ NAAT ಯಂತ್ರಗಳನ್ನು ಬಳಸುವ ಮೂಲಕ ನಡೆಸಲಾಗುತ್ತದೆ. ಟಿಬಿ ಇರುವ ಶಂಕಿತ  ಪ್ರಕರಣಗಳನ್ನು ಉನ್ನತ ಸೌಲಭ್ಯಗಳಿಗೆ ಕಳಿಸಲಾಗುತ್ತಿದೆ. ನಲವತ್ತನಾಲ್ಕನೆಯ ದಿನದ ಅಂತ್ಯದ ವೇಳೆಗೆ, 80,01,825 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಗಿದೆ ಅದರಲ್ಲಿ 4,86,043 ಕ್ಕೂ ಹೆಚ್ಚು ಜನರನ್ನು ಹೆಚ್ಚಿನ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.

 ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ (ಪಿಎಂಟಿಬಿಎಂಎ) ಅಡಿಯಲ್ಲಿ, ಟಿಬಿಯಿಂದ ಬಳಲುತ್ತಿರುವ ರೋಗಿಗಳಿಗೆ ನಿಕ್ಷಯ್ ಮಿತ್ರಸ್‌ನಿಂದ ನೆರವು ಪಡೆಯಲು ಒಪ್ಪಿಗೆಯನ್ನು ತೆಗೆದುಕೊಳ್ಳಲಾಗುತ್ತಿದೆ. ನಿಕ್ಷಯ್ ಮಿತ್ರರಾಗಲು ಸಿದ್ಧರಿರುವ, ಪಾಲ್ಗೊಳ್ಳುವವರಿಗೆ ಸ್ಥಳದಲ್ಲೇ ನೋಂದಣಿಯನ್ನು ಮಾಡಲಾಗಿದೆ. ನಲವತ್ತನಾಲ್ಕನೆಯ ದಿನದ ಅಂತ್ಯದ ವೇಳೆಗೆ, PMTBMA ಅಡಿಯಲ್ಲಿ 1,40,852 ಕ್ಕೂ ಹೆಚ್ಚು ರೋಗಿಗಳು ತಮ್ಮ ಒಪ್ಪಿಗೆಯನ್ನು ನೀಡಿದರು ಮತ್ತು 50,799 ಕ್ಕೂ ಹೆಚ್ಚು ಹೊಸ ನಿಕ್ಷಯ್ ಮಿತ್ರಗಳನ್ನು ನೋಂದಾಯಿಸಲಾಗಿದೆ.

ನಿಕ್ಷಯ್ ಪೋಶನ್ ಯೋಜನೆ (NPY) ಅಡಿಯಲ್ಲಿ, ನೇರ ಲಾಭ ವರ್ಗಾವಣೆಯ ಮೂಲಕ TB ರೋಗಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಈ ಉದ್ದೇಶಕ್ಕಾಗಿ, ಬಾಕಿ ಇರುವ ಫಲಾನುಭವಿಗಳ ಬ್ಯಾಂಕ್ ಖಾತೆಯ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಖಾತೆಗಳಿಗೆ ಆಧಾರ್ ಸೀಡ್ ಮಾಡಲಾಗುತ್ತಿದೆ. ನಲವತ್ತನಾಲ್ಕು ದಿನದ ಅಂತ್ಯದ ವೇಳೆಗೆ, ಅಂತಹ 36,763 ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲಾಗಿದೆ.

ಕುಡಗೋಲು ಕಣ ರೋಗ: ಪ್ರಧಾನ ಬುಡಕಟ್ಟು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ, SCD ಗಾಗಿ ಪಾಯಿಂಟ್ ಆಫ್ ಕೇರ್ (PoC) ಪರೀಕ್ಷೆಗಳ ಮೂಲಕ ಅಥವಾ ಸೊಲ್ಯುಬಿಲಿಟಿ ಟೆಸ್ಟ್ ಮೂಲಕ ಸಿಕಲ್ ಸೆಲ್ ಡಿಸೀಸ್ (SCD) ಪತ್ತೆಗಾಗಿ ಅರ್ಹ ಜನಸಂಖ್ಯೆಯ (40 ವರ್ಷ ವಯಸ್ಸಿನವರೆಗೆ) ಸ್ಕ್ರೀನಿಂಗ್ ಮಾಡಲಾಗುತ್ತಿದೆ. . ಪರೀಕ್ಷೆಯ ಪ್ರಕರಣಗಳ ನಿರ್ವಹಣೆಗಾಗಿ ಉನ್ನತ ಕೇಂದ್ರಗಳಿಗೆ ಉಲ್ಲೇಖಿಸಲಾಗುತ್ತಿದೆ. ನಲವತ್ತನಾಲ್ಕನೆಯ ದಿನದ ಅಂತ್ಯದ ವೇಳೆಗೆ, 8,51,194 ಕ್ಕೂ ಹೆಚ್ಚು ಜನರನ್ನು ಪರೀಕ್ಷಿಸಲಾಯಿತು, ಅದರಲ್ಲಿ 27,630 ಜನರು ಹೆಚ್ಚಿನ ಚಿಕಿತ್ಸೆ ಪಡೆಯಲು ಸೂಚಿಸಲಾಗಿದೆ.

ನಾನ್-ಕಮ್ಯುನಿಕಬಲ್ ಡಿಸೀಸ್ (NCD)ಗಳು: ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕಾಗಿ ಅರ್ಹರನ್ನು (30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ) ಸ್ಕ್ರೀನಿಂಗ್ ಮಾಡಲಾಗುತ್ತಿದೆ ಮತ್ತು ಶಂಕಿತ ಪ್ರಕರಣಗಳನ್ನು ಉನ್ನತ ಕೇಂದ್ರಗಳಿಗೆ ಶಿಫರಸ್ಸು ಮಾಡಲಾಗುತಿದೆ. ನಲವತ್ತನಾಲ್ಕನೆಯ ದಿನದ ಅಂತ್ಯದ ವೇಳೆಗೆ, ಸುಮಾರು 15,694,596 ಜನರನ್ನು ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕಾಗಿ ಪರೀಕ್ಷಿಸಲಾಯಿತು. 7,32,057 ಕ್ಕೂ ಹೆಚ್ಚು ಜನರು ಅಧಿಕ ರಕ್ತದೊತ್ತಡ ಮತ್ತು 5,28,563 ಕ್ಕೂ ಹೆಚ್ಚು ಜನರಲ್ಲಿ ಮಧುಮೇಹಕ್ಕೆ ಧನಾತ್ಮಕ ಎಂದು ಶಂಕಿಸಲಾಗಿದೆ ಮತ್ತು 11,56,927 ಕ್ಕೂ ಹೆಚ್ಚು ಜನರಿಗೆ ಹೆಚ್ಚಿನ ಚಿಕಿತ್ಸೆ ಪಡೆಯಲು ತಿಳಿಸಲಾಗಿದೆ.

 

ಅಲ್ಲೂರಿ ಸೀತಾರಾಮ ರಾಜು, ಆಂಧ್ರಪ್ರದೇಶ

ಲಖಿಂಪುರ್, ಅಸ್ಸಾಂ

ಖಗರಿಯಾ, ಬಿಹಾರ

ಸುಕ್ಮಾ, ಛತ್ತೀಸ್ ಗಢ

ವಡೋದರಾ, ಗುಜರಾತ್


ಹಿನ್ನೆಲೆ: 
ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಗೌರವಾನ್ವಿತ ಪ್ರಧಾನಮಂತ್ರಿಯವರು ನವೆಂಬರ್ 15 ರಂದು ಜಾರ್ಖಂಡ್‌ನ ಖುಂಟಿಯಿಂದ ರಾಷ್ಟ್ರದಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳ ಬಗ್ಗೆ ತಿಳಿಸಲು ಹಸಿರು ನಿಶಾನೆ ನೀಡಿದರು. ವಿಕಸತ ಭಾರತ ಸಂಕಲ್ಪ ಯಾತ್ರೆಯಡಿಯಲ್ಲಿ ಆನ್-ಸ್ಪಾಟ್ ಸೇವೆಗಳ ಭಾಗವಾಗಿ, ಗ್ರಾಮ ಪಂಚಾಯತ್‌ಗಳಲ್ಲಿ ಐಇಸಿ ವ್ಯಾನ್ ನಿಲುಗಡೆಯ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

*****



(Release ID: 1991515) Visitor Counter : 175