ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

​​​​​​​ವರ್ಷಾಂತ್ಯದ ಅವಲೋಕನ-2023- ಅಹಾರ ಮತ್ತು ಸಾರ್ವಜನಿಕ ಪಡಿತರ ಪೂರೈಕೆ ಇಲಾಖೆ


ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ 2024ರ ಜನವರಿ 1ರಿಂದ ಅನ್ವಯವಾಗುವಂತೆ ಐದು ವರ್ಷಗಳ ಕಾಲ 81.35 ಕೋಟಿ ಎನ್ ಎಫ್ ಎಸ್ ಎ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯ ವಿತರಣೆ

ಪ್ರತಿ ಕೆ.ಜಿ.ಗೆ 27.50 ರೂ. ಎಂಆರ್ ಪಿ ದರದಲ್ಲಿ ಭಾರತ್ ಹಿಟ್ಟು ಮಾರಾಟ ಆರಂಭ 

ಐಸಿಡಿಎಸ್, ಪಿಎಂ-ಪೋಷಣ್ ಮತ್ತು ಮೂರನೇ ಹಂತದ ಟಿಪಿಡಿಎಚ್ ಅಡಿಯಲ್ಲಿ 207.31 ಲಕ್ಷ ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿ ಎತ್ತುವಳಿ ಮಾಡಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಅಹಾರ ಧಾನ್ಯಗಳ ವಿತರಣೆಯನ್ನು ಖಾತ್ರಿಪಡಿಸಲು ಮತ್ತು ಪಾರದರ್ಶಕತೆ ತರಲು ಶೇ.99.8 ರಷ್ಟು ನ್ಯಾಯಬೆಲೆ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಒಪಿಒಎಸ್) ಬಳಕೆ

2023ರ ನವೆಂಬರ್ ವರೆಗೆ 28 ಕೋಟಿ ಪೋರ್ಟಬಲಿಟಿ ವಹಿವಾಟಿನ ಮೂಲಕ 80 ಎಲ್ ಎಂಟಿಗೂ ಅಧಿಕ ಆಹಾರ ಧಾನ್ಯಗಳ ವಿತರಣೆ

Posted On: 27 DEC 2023 12:56PM by PIB Bengaluru

2023ನೇ ವರ್ಷದಲ್ಲಿ ಅಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಚಟುವಟಿಕೆಗಳ ಪ್ರಮುಖ ಮುಖ್ಯಾಂಶಗಳು ಈ ಕೆಳಗಿನಂತಿವೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ   (ಪಿಎಂಜಿಕೆಎವೈ):

ದೇಶದಲ್ಲಿ ಕೋವಿಡ್-19 ಕಾಣಿಸಿಕೊಂಡ ನಂತರ ಬಡವರು ಮತ್ತು ನಿರ್ಗತಿಕರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ನಿವಾರಿಸುವ ನಿರ್ದಿಷ್ಟ ಉದ್ದೇಶದಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಆರಂಭಿಸಲಾಗಿದೆ. ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪಿಎಂಜಿಕೆಎವೈ ಅಡಿಯಲ್ಲಿ ಮಾಮೂಲಿ ಉಚಿತ ಆಹಾರ ಧಾನ್ಯಗಳ ಹಂಚಿಕೆಯ ಜತೆಗೆ ಹೆಚ್ಚುವರಿ ಧಾನ್ಯಗಳನ್ನು ನಿಯಮಿತವಾಗಿ ಹಂಚಿಕೆಗೆ ಮಾಡಲಾಗುತ್ತಿದೆ. ಒಟ್ಟು ಪ್ರಮಾಣ ಸುಮಾರು. 1118 ಎಲ್ ಎಂಟಿ ಆಹಾರಧಾನ್ಯಗಳನ್ನು  ಪಿಎಂಜಿಕೆಎವೈ (ಒಂದರಿಂದ ಏಳನೇ ಹಂತಗಳ) ಅಡಿಯಲ್ಲಿ 28 ತಿಂಗಳ ಅವಧಿಗೆ ಒಟ್ಟು ಸುಮಾರು 3.91 ಲಕ್ಷ ಕೋಟಿ ರೂ. ಯೋಜಿತ ಹಣಕಾಸಿನ ವೆಚ್ಚ ಮಾಡಲಾಗಿದೆ.

ಬಡ ಫಲಾನುಭವಿಗಳ ಆರ್ಥಿಕ ಹೊರೆಯನ್ನು ನಿವಾರಿಸಲು ಮತ್ತು ರಾಷ್ಟ್ರವ್ಯಾಪಿ ಏಕರೂಪತೆ ಮತ್ತು ಕಾಯಿದೆಯ ಪರಿಣಾಮಕಾರಿ ಅನುಷ್ಠಾನವನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಎನ್ ಎಫ್ ಎಸ್ ಎ ಫಲಾನುಭವಿಗಳಿಗೆ ಅಂದರೆ ಎಎವೈ ಕುಟುಂಬಗಳು ಮತ್ತು ಪಿಎಚ್ ಎಚ್ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಆರಂಭದಲ್ಲಿ 2023ರ ಜನವರಿ 1  ರಿಂದ ಆರಂಭವಾಗಿ ಒಂದು ವರ್ಷದ ಅವಧಿಗೆ. ಅದಕ್ಕೂ ಮುನ್ನ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ಪ್ರತಿ ಕೆಜಿ ಅಕ್ಕಿಗೆ 3 ರೂ., ಪ್ರತಿ ಕೆಜಿ ಗೋಧಿಗೆ 2 ರೂ. ಮತ್ತು ಒರಟಾದ ಧಾನ್ಯಗಳಿಗೆ ಪ್ರತಿ ಕೆಜಿಗೆ 1 ರೂ.ನಂತೆ ವಿತರಿಸಲಾಯಿತು.

ಕೇಂದ್ರ ಸರ್ಕಾರದ ನಿರ್ಧಾರದ ಪ್ರಕಾರ, ಎರಡು ಆಹಾರ ಸಬ್ಸಿಡಿ ಯೋಜನೆಗಳನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ಫಲಾನುಭವಿಗಳ ಕಲ್ಯಾಣವನ್ನು ಗಮನದಲ್ಲಿರಿಸಿಕೊಂಡು ಮತ್ತು 2013ರ ಎನ್ ಎಫ್ ಎಸ್ ಎ ನಿಬಂಧನೆಗಳನ್ನು ಬಲಪಡಿಸುವ ಉದ್ದೇಶದಿಂದ ಬಡವರಿಗೆ ಸುಲಭವಾಗಿ, ಕೈಗೆಟುಕುವ ದರದಲ್ಲಿ ಮತ್ತು ಆಹಾರ ಧಾನ್ಯಗಳ ಲಭ್ಯತೆ ಮತ್ತು ರಾಜ್ಯಗಳಾದ್ಯಂತ ಏಕರೂಪತೆಯನ್ನು ಕಾಯ್ದುಕೊಳ್ಳಲು, ಒದಗಿಸುವುದನ್ನು ಮುಂದುವರಿಸಲು ಕೇಂದ್ರ ಸರ್ಕಾರ ಸುಮಾರು 81.35 ಕೋಟಿ ಎನ್ ಎಫ್ ಎಸ್ ಎ ಫಲಾನುಭವಿಗಳಿಗೆ (ಅಂದರೆ ಅಂತ್ಯೋದಯ ಅನ್ನ ಯೋಜನೆ (ಎಎವೈ) ಕುಟುಂಬಗಳು ಮತ್ತು ಆದ್ಯತಾ ಕುಟುಂಬಗಳು (ಪಿಎಚ್ ಎಚ್) ಫಲಾನುಭವಿಗಳಿಗೆ ಪಿಎಂಜಿಕೆಎವೈ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ಅಂದರೆ 2024ರ ಜನವರಿ 1 ರಿಂದ ಜಾರಿಗೆ ಬರುವಂತೆ ಎನ್ ಎಫ್‌ ಎಸ್ ಎ  ಅಡಿಯಲ್ಲಿ ಅರ್ಹತೆಯಂತೆ  ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ನಿರ್ಧರಿಸಿದೆ.

ಪಿಎಂಜಿಕೆಎವೈ ಯೋಜನೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ ಎಫ್ ಎಸ್ ಎ) ಪರಿಣಾಮಕಾರಿ ಮತ್ತು ಏಕರೂಪದ ಅನುಷ್ಠಾನವನ್ನು ಖಾತ್ರಿಪಡಿಸುತ್ತದೆ.  ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಯೋಜನೆ(ಒಎನ್ ಎಆರ್ ಸಿ) ಅಡಿ ಪಡಿತರ ಕಾರ್ಡ್ ಗಳ ಯಶಸ್ವಿ ಪೊರ್ಟಬಲಿಟಿಗೆ ಅವಕಾಶವಿದ್ದು, ಯಾವುದೇ ಫಲಾನುಭವಿ ದೇಶದ ಯಾವುದೇ ಮೂಲೆಯ ನ್ಯಾಯಬೆಲೆ ಅಂಗಡಿಗಳಲ್ಲಿ ಬೇಕಾದರೂ ಎನ್ ಎಫ್ ಎಸ್ ಎ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಪಡೆಯಬಹುದಾಗಿದೆ. ಉಚಿತ ಆಹಾರ ಧಾನ್ಯಗಳು ಏಕಕಾಲದಲ್ಲಿ ದೇಶಾದ್ಯಂತ ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ (ಒಎನ್ ಒಆರ್ ಸಿ) ಅಡಿಯಲ್ಲಿ ಪೋರ್ಟಬಿಲಿಟಿಯ ಏಕರೂಪದ ಅನುಷ್ಠಾನವನ್ನು ಖಾತ್ರಿಪಡಿಸುತ್ತದೆ ಮತ್ತು ಆಯ್ಕೆ ಆಧಾರಿತ ವೇದಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.

 

ಪಿಎಂಜಿಕೆಎವೈ ಅಡಿಯಲ್ಲಿ 2023ರ ಜನವರಿಯಿಂದ ನವೆಂಬರ್ ವರೆಗೆ ವಿತರಣೆ ಪ್ರಮಾಣ

 

ತಿಂಗಳು

ವಿತರಣಾ ಪ್ರಮಾಣ (ಮೆಟ್ರಿಕ್ ಟನ್ ಗಳಲ್ಲಿ)

ಜನವರಿ 23

40,72,922

ಫೆಬ್ರವರಿ23

40,93,818

ಮಾರ್ಚ್ 23

41,19,561

ಏಪ್ರಿಲ್ 23

40,64,491

ಮೇ, 23

40,84,928

ಜೂನ್ 23

40,91,201

ಜುಲೈ 23

41,24,719

ಆಗಸ್ಟ್ 23

41,20,305

ಸೆಪ್ಟಂಬರ್ 23

40,65,725

ಅಕ್ಟೋಬರ್ 23

41,02,089

ನವೆಂಬರ್ ,23*

38,42,479

* ಪಿಎಂಜಿಕೆಎವೈ ಅಡಿಯಲ್ಲಿ 2023ರ ನವೆಂಬರ್ ನಲ್ಲಿ ವಿತರಿಸಲಾದ ಧಾನ್ಯಗಳ ಅಂತಿಮ ಅಂಕಿ ಅಂಶಗಳ ಲೆಕ್ಕಚಾರಾ ನಡೆಯುತ್ತಿದೆ.

 

ಭಾರತ್‌ ಹಿಟ್ಟು ಮಾರಾಟ

 

ಗೋಧಿ ಮತ್ತು ಅದರ ಹಿಟ್ಟಿನ ದರಗಳಲ್ಲಿ ಸಮಾನತೆ ಕಾಯ್ದುಕೊಳ್ಳಲು ಮತ್ತು ಸಾಮಾನ್ಯ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಹಿಟ್ಟು ಲಭ್ಯವಾಗುವಂತೆ ಮಾಡಲು ಕೇಂದ್ರೀಯ ಭಂಡಾರ, ಭಾರತೀಯ ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ ನಿಯಮಿತ (ಎನ್ ಸಿಸಿಎಫ್) ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್ ) ಮತ್ತಿತರ ಸಹಕಾರಿ ಸಂಸ್ಥೆಗಳು ಮತ್ತು ಅರೆ ಸರಕಾರಿ ಸಂಸ್ಥೆಗಳಿಗೆ ಕೆಜಿಗೆ 21.50 ರೂ. ನಂತೆ 2.5 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಒಎಂಎಸ್ ಎಸ್ ಅಡಿ ಹಂಚಿಕೆ ಮಾಡಲಾಗಿದ್ದು, ಅದನ್ನು ಹಿಟ್ಟು ಮಾಡಿ ‘ಭಾರತ್ ಅಟ್ಟಾ’ ಬ್ರಾಂಡ್ ನಡಿ ಗರಿಷ್ಟ ಚಿಲ್ಲರೆ ಮಾರಾಟ (ಎಂಆರ್ ಪಿ) ಪ್ರತಿ ಕೆಜಿಗೆ 27.50 ರೂ. ಗಿಂತ ಹೆಚ್ಚಾಗದಂತೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ.  ಯೋಜನೆಯಡಿ ಹಂಚಿಕೆ ಮಾಡಲಾಗಿದ್ದ ಗೋಧಿಯ ಪ್ರಮಾಣವನ್ನು ಮತ್ತೆ 4 ಎಲ್ ಎಂಟಿಗೆ ಹೆಚ್ಚಳ ಮಾಡಲಾಗಿದೆ.

ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) (ಒಎಂಎಸ್ ಎಸ್ (ಡಿ)):

• 2023ನೇ ವರ್ಷದಲ್ಲಿ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) (ಒಎಂಎಂಎಸ್ (ಡಿ)) ಮೂಲಕ ಒಟ್ಟು 82.89 ಲಕ್ಷ ಎಂಟಿ ಗೋಧಿ ಮತ್ತು 3.04 ಲಕ್ಷ ಎಂಟಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಈವರೆಗೆ ಎಫ್‌ಸಿಐ ಇ-ಹರಾಜು ಮೂಲಕ ಮಾರಾಟ ಮಾಡಲಾಗಿದೆ.

• ಕೋವಿಡ್-19 ಪರಿಸ್ಥಿತಿ ಈಗ ಚಾಲ್ತಿಯಲ್ಲಿಲ್ಲದ ಕಾರಣ ಲಾಕ್‌ಡೌನ್ ಪರಿಸ್ಥಿತಿಗಳಿಂದಾಗಿ ವಲಸೆ ಕಾರ್ಮಿಕರು/ದುರ್ಬಲ ಗುಂಪುಗಳಿಗೆ ಪರಿಹಾರ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿರುವುದು/ಪರಿಹಾರ ಶಿಬಿರಗಳನ್ನು ನಡೆಸುವ  ಎಲ್ಲಾ ದತ್ತಿ/ಸರ್ಕಾರೇತರ ಸಂಸ್ಥೆಗಳಿಗೆ ಇತ್ಯಾದಿಗಳಿಗೆ ಒಎಂಎಸ್ ಎಸ್ (ಡಿ) ಅಡಿಯಲ್ಲಿ ಆಹಾರಧಾನ್ಯಗಳ ಮಾರಾಟ ನಿಲ್ಲಿಸಲಾಗಿದೆ ಆದರೂ 2024ರ ಮಾರ್ಚ್ ವರೆಗೆ ಆಹಾರ ಧಾನ್ಯಗಳನ್ನು ಸಮುದಾಯ ಅಡುಗೆಮನೆಗಳಿಗೆ ಪ್ರತಿ ಕೆಜಿಗೆ 21.50 ರೂ. ಗೋಧಿಗೆ ಮತ್ತು 24.00 ರೂ./ಕೆಜಿ ಅಕ್ಕಿಗೆ ಮಾರಾಟ ಮಾಡಲು ಉಪ-ಯೋಜನೆಯನ್ನು ಮುಂದುವರಿಸಲಾಗುತ್ತಿದೆ.

ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಯೋಜನೆಯ ಪ್ರಗತಿ ;

ಅಂತರ ರಾಜ್ಯ ಪೋರ್ಟಬಲಿಟಿಯನ್ನು 2019ರ ಆಗಸ್ಟ್ ನಲ್ಲಿ ಕೇವಲ 4 ರಾಜ್ಯಗಳಲ್ಲಿ ಆರಂಭಿಸಲಾಗಿತ್ತು, ಇದೀಗ ಒಎನ್ ಒಆರ್ ಸಿ ಯೋಜನೆಯನ್ನು ಎಲ್ಲಾ 36 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು (ದೇಶಾದ್ಯಂತ) ವಿಸ್ತರಿಸಲಾಗಿದ್ದು, ಸುಮಾರು 80 ಕೋಟಿ ಎನ್ ಎಫ್ ಎಸ್ ಎ ಫಲಾನುಭವಿಗಳು ಅಂದರೆ ಬಹುತೇಕ ದೇಶದ ಎನ್ ಎಫ್ ಎಸ್ ಎ ಶೇ.100ರಷ್ಟು ಜನಸಂಖ್ಯೆ ತಲುಪುತ್ತಿದೆ. ಛತ್ತೀಸ್ ಗಢ ಮತ್ತು ಅಸ್ಸಾಂ ರಾಜ್ಯಗಳು ಒಎನ್ ಎಆರ್ ಸಿ ವೇದಿಕೆಯನ್ನು ಕ್ರಮವಾಗಿ 2022ರ ಫೆಬ್ರವರಿ ಮತ್ತು 2022ರ ಜೂನ್ ತಿಂಗಳಲ್ಲಿ ಕ್ರಮವಾಗಿ ಸೇರ್ಪಡೆಯಾದವು.

2019ರ ಆಗಸ್ಟ್ ನಲ್ಲಿ ಒಎನ್ ಒಆರ್ ಸಿ ಯೋಜನೆ ಆರಂಭವಾದಾಗಿನಿಂದ, ದೇಶದಲ್ಲಿ ಒಎನ್ ಎಆರ್ ಸಿ ಯೋಜನೆಯಡಿಯಲ್ಲಿ 125 ಕೋಟಿಗೂ ಅಧಿಕ ಪೋರ್ಟಬಲಿಟಿ ವಹಿವಾಟುಗಳನ್ನು ದಾಖಲಿಸಲಾಗಿದ್ದು, ಇದು 241 ಎಲ್ ಎಂಟಿ ಗಿಂತ ಹೆಚ್ಚಿನ ಆಹಾರ ಧಾನ್ಯಗಳನ್ನು ತಲುಪಿಸುತ್ತದೆ, ಇದರಲ್ಲಿ ಅಂತರ-ರಾಜ್ಯ ಮತ್ತು ರಾಜ್ಯದೊಳಗಿನ ವಹಿವಾಟುಗಳು ಒಳಗೊಂಡಿವೆ.

2023ರ ಅವಧಿಯಲ್ಲಿ, 11 ತಿಂಗಳುಗಳಲ್ಲಿ ಸುಮಾರು 28 ಕೋಟಿ ಪೋರ್ಟಬಲಿಟಿ ವಹಿವಾಟುಗಳನ್ನು ನಡೆಸಲಾಗಿದ್ದು, ಅದರಲ್ಲಿ ಎನ್ ಎಫ್ ಎಸ್ ಎ ಮತ್ತು ಪಿಎಂಜಿಕೆಎವೈ ಅಂತಾರಾಜ್ಯ ಮತ್ತು ರಾಜ್ಯದೊಳಗಿನ ಪೋರ್ಟಬಲಿಟಿ ವಹಿವಾಟುಗಳನ್ನು ಒಳಗೊಂಡಂತೆ 80 ಲಕ್ಷ ಮೆಟ್ರಿಕ್ ಟನ್ ಗಿಂತ ಅಧಿಕ ಆಹಾರ ಧಾನ್ಯಗಳನ್ನು ತಲುಪಿಸುತ್ತದೆ. ಪ್ರಸ್ತುತ, ಪಿಎಂಜಿಕೆಎವೈ ಆಹಾರಧಾನ್ಯ ವಿತರಣೆಯ ಅಡಿಯಲ್ಲಿ ಪ್ರತಿ ತಿಂಗಳು 2.5 ಕೋಟಿಗೂ ಅಧಿಕ ಪೋರ್ಟಬಲಿಟಿ ವಹಿವಾಟುಗಳನ್ನು ದಾಖಲಿಸಲಾಗುತ್ತಿದೆ.

ಟಿಪಿಡಿಎಸ್, ಒಡಬ್ಲೂಎಸ್ ಮತ್ತು ಹೆಚ್ಚುವರಿ ಹಂಚಿಕೆ (ಪ್ರವಾಹ, ಹಬ್ಬಗಳು ಇತ್ಯಾದಿ)ಗಳಡಿ 2023-24ರಲ್ಲಿ ಆಹಾರ ಧಾನ್ಯಗಳ ಹಂಚಿಕೆ:

ಆಹಾರ ಮತ್ತು ಸಾರ್ವಜನಿಕ ಪಡಿತರ ಪೂರೈಕೆ ಇಲಾಖೆ, ಆಹಾರ ಧಾನ್ಯಗಳು ಎನ್ ಎಫ್ ಎಸ್ ಎ, ಅಂತ್ಯೋದಯ ಅನ್ನ ಯೋಜನೆ (ಎಎವೈ), ಆದ್ಯತಾ ಕುಟುಂಬ (ಪಿಎಚ್ ಎಚ್), ಟೈಡ್ ಓವರ್, ಪಿಎಂ ಪೋಷಣ್ ಯೋಜನೆ, ಗೋಧಿ ಆಧರಿತ ಪೌಷ್ಟಿಕಾಂಶ ಯೋಜನೆ (ಐಸಿಡಿಎಸ್ ಒನ ಅಡಿಯ ಯೋಜನೆ) ಮತ್ತು ಇತರೆ ಕಲ್ಯಾಣ ಕಾರ್ಯಕ್ರಮಗಳಾದ ವಯಸ್ಕ ಬಾಲಕಿಯರಿಗೆ ಯೋಜನೆ, ಅನ್ನ ಪೂರ್ಣ ಯೋಜನೆ ಮತ್ತು ಕಲ್ಯಾಣ ಸಂಸ್ಥೆಗಳು ಮತ್ತು ಹಾಸ್ಟೆಲ್ ಯೋಜನೆ (ಡಬ್ಲೂ ಐಎಚ್) ಗಳಿಗೆ ಹಂಚಿಕೆ ಮಾಡಲಾಗುತ್ತಿದೆ. 2023-24ನೇ ವರ್ಷದಲ್ಲಿ ಯೋಜನೆವಾರು ಹಂಚಿಕೆ ವಿವರ ಇಲ್ಲಿ ಕೋಷ್ಠಕದಲ್ಲಿ ನೀಡಲಾಗಿದೆ.

 

 

2023-24 ರಲ್ಲಿ ವಾರ್ಷಿಕ ಆಹಾರ ಧಾನ್ಯಗಳ ಹಂಚಿಕೆ

ಲಕ್ಷ ಟನ್ ಗಳಲ್ಲಿ

 

ಯೋಜನೆಯ ಹೆಸರು

ಅಕ್ಕಿ

ಗೋಧಿ

ಪೌಷ್ಟಿಕ ಧಾನ್ಯಗಳು

 ಒಟ್ಟು

ಟಿಪಿಡಿಎಸ್ (ಎನ್ ಎಫ್ ಎಸ್ ಎ-ಹಂಚಿಕೆ)

 

ಅಂತ್ಯೋದಯ ಅನ್ನ ಯೋಜನೆ (ಎಎವೈ)

73.01

26.58

0.00

99.59

 

ಆದ್ಯತಾ ಕುಟುಂಬಗಳು (ಪಿಎಚ್ ಎಚ್ )

280.96

137.45

9.53

427.94

 

ಟಿಪಿಡಿಎಸ್(ಟೈಡ್ ಓವರ್ )

21.25

5.03

0.00

26.29

 

ಪಿಎಂ ಪೋ‍ಷಣ್‌ (ಎಂಡಿಎ )

19.36

4.26

0.00

23.61

 

ಡಬ್ಲೂಬಿಎನ್ ಪಿ (ಐಸಿಡಿಎಸ್ )

12.83

11.28

0.00

24.11

 

ಒಟ್ಟು

407.40

184.60

9.53

601.53

 

 

 

 

 

 

ಬಿ

ಇತರೆ ಕಲ್ಯಾಣ ಯೋಜನೆಗಳು

 

ಹಾಸ್ಟೆಲ್ ಮತ್ತು ಕಲ್ಯಾಣ ಕೇಂದ್ರಗಳು

2.90

0.78

0.00

3.67

 

ವಯಸ್ಕ ಬಾಲಕಿಯರಿಗಾಗಿ ಯೋಜನೆ (ಎಸ್ ಎಜಿ)

0.225

0.225

0.00

0.45

 

ಅನ್ನಪೂರ್ಣ

0.00

0.00

0.00

0.00

 

ಒಟ್ಟು

3.12

1.00

0.00

4.12

 

 

 

 

 

 

C

ಹೆಚ್ಚುವರಿ ಹಂಚಿಕೆ (ಹಬ್ಬಳು, ಪ್ರಕೋಪ, ಹೆಚ್ಚುವರಿ ಟಿಪಿಡಿಎಸ್ ಇತ್ಯಾದಿ )

 

ನೈಸರ್ಗಿಕ ಪ್ರಕೋಪ ಇತ್ಯಾದಿ
(ಎಂಎಸ್ ಪಿ ದರಗಳು)

0.30

0.00

0.00

0.30

 

ಹಬ್ಬಗಳು/ ಇತರೆ ಹೆಚ್ಚುವರಿ ಅಗತ್ಯತೆಗಳು (ಆರ್ಥಿಕ ವೆಚ್ಚ)

0.93

0.60

0.00

1.53

 

ಒಟ್ಟು

1.23

0.60

0.00

1.83

 

 

 

 

 

 

+ಬಿ+ಸಿ

ಒಟ್ಟಾರೆ 

411.75

186.20

9.53

607.49

 

ಅಕ್ಕಿ ಸಾರವರ್ಧನೆ ಮತ್ತು  ಅದನ್ನು ಹೆಚ್ಚಳ ಮಾಡುವ  ಕುರಿತು ಪ್ರಧಾನ ಮಂತ್ರಿಯವರ ಘೋಷಣೆ:

 

ಭಾರತದ ಪ್ರಧಾನಮಂತ್ರಿ ಅವರು 75 ನೇ ಸ್ವಾತಂತ್ರ್ಯ ದಿನದಂದು (15 ಆಗಸ್ಟ್, 2021) ತಮ್ಮ ಭಾಷಣದಲ್ಲಿ ಸರ್ಕಾರದ ಯೋಜನೆಗಳಡಿಯಲ್ಲಿಯೂ ಸಾರವರ್ಧಿತ ಅಕ್ಕಿಯನ್ನು ಪೂರೈಸುವ ಮೂಲಕ ಪೌಷ್ಟಿಕಾಂಶವನ್ನು ಒದಗಿಸುವ ಘೋಷಣೆ ಮಾಡಿದರು. ಆ ಘೋಷಣೆಯ ಅನುಸಾರ, ಭಾರತ ಸರ್ಕಾರವು ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (ಟಿಪಿಡಿಎಸ್ ) ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿಗಳು) ಐಸಿಡಿಎಸ್  ಮತ್ತು ಪಿಎಂ-ಪೋಷಣ್ ಸೇರಿದಂತೆ ಭಾರತ ಸರ್ಕಾರದ ಇತರ ಕಲ್ಯಾಣ ಯೋಜನೆಗಳಲ್ಲಿ ಸಾರವರ್ಧಿತ ಅಕ್ಕಿಯ ಪೂರೈಕೆಯನ್ನು ಹಂತ ಹಂತವಾಗಿ ಅನುಮೋದಿಸಿದೆ.

  • ಒಂದನೇ ಹಂತ (2021-22): ಒಂದನೇ ಹಂತದಲ್ಲಿ ಐಸಿಡಿಎಸ್ ಮತ್ತು ಪಿಎಂ-ಪೋಷಣ್‌ ವ್ಯಾಪ್ತಿಯಲ್ಲಿ ಜಾರಿಗೊಳಿಸಲಾಯಿತು. ಐಸಿಡಿಎಸ್ ಮತ್ತು ಪಿಎಂ-ಪೋಷಣ್‌ ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸುಮಾರು 17.51 ಲಕ್ಷ ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿಯನ್ನು ಎತ್ತುವಳಿ ಮಾಡಿವೆ.
  • ಎರಡನೇ ಹಂತ (2022-23): ಎರಡನೇ ಹಂತದ ಅನುಷ್ಠಾನವನ್ನು  ಎಲ್ಲಾ ಐಸಿಡಿಎಸ್, ಪಿಎಂ-ಪೋಷಣ್‌ ಕೇಂದ್ರಗಳು, ಟಿಪಿಡಿಎಸ್ ಮತ್ತು ಒಡಬ್ಲೂಎಸ್ ನಡಿ 291 ಅಶೋತ್ತರ ಮತ್ತು ಅಧಿಕ ಹೊರೆಯ ಜಿಲ್ಲೆಗಳಲ್ಲಿ 2022ರ ಏಪ್ರಿಲ್ ನಲ್ಲಿ ಆರಂಭಿಸಲಾಯಿತು. ಎರಡನೇ ಹಂತದ ಯೋಜನೆ 31.03.2023ಕ್ಕೆ ಪೂರ್ಣಗೊಂಡಿದೆ. ಎಲ್ಲಾ ಐಸಿಡಿಎಸ್, ಪಿಎಂ-ಪೋಷಣ್‌ ಕೇಂದ್ರಗಳು, ಟಿಪಿಡಿಎಸ್ ಮತ್ತು ಒಡಬ್ಲೂಎಸ್ ನಡಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸುಮಾರು 136 ಲಕ್ಷ ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿಯನ್ನು ಎತ್ತುವಳಿ ಮಾಡಿವೆ.
  • ಮೂರನೇ ಹಂತ (2023-24): ಮೂರನೇ ಹಂತದ ಯೋಜನೆ 2023ರ ಏಪ್ರಿಲ್ ನಿಂದ ಆರಂಭವಾಗಿದ್ದು, ಅದು 31.03.2024 ರವರೆಗೆ ಚಾಲ್ತಿಯಲ್ಲಿರುತ್ತದೆ. 01.12.2023ರವರೆಗೆ ಐಸಿಡಿಎಸ್, ಪಿಎಂ-ಪೋಷಣ್‌ ಕೇಂದ್ರಗಳು, ಟಿಪಿಡಿಎಸ್ ನಡಿ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸುಮಾರು 207.31 ಲಕ್ಷ ಮೆಟ್ರಿಕ್ ಟನ್ ಸಾರವರ್ಧಿತ ಅಕ್ಕಿಯನ್ನು ಎತ್ತುವಳಿ ಮಾಡಿವೆ.

ನಿರ್ದಿಷ್ಟ ಸಾರ್ವಜನಿಕ ಪಡಿತರ ವ್ಯವಸ್ಥೆ(ಟಿಪಿಡಿಎಸ್)ಯ ಸುಧಾರಣೆಗಳು;

  • ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಎನ್ ಎಫ್ ಎಸ್ ಎ ಅಡಿಯಲ್ಲಿ ಶೇ.100 ರಷ್ಟು ಪಡಿತರ ಕಾರ್ಡ್/ ಫಲಾನುಭವಿಗಳ ದತ್ತಾಂಶ ಡಿಜಿಟಲೀಕರಣ ಮಾಡಲಾಗಿದೆ. ಸುಮಾರು 80 ಕೋಟಿ ಫಲಾನುಭವಿಗಳನ್ನು ಒಳಗೊಂಡಿರುವ ಸುಮಾರು 20.06 ಕೋಟಿ ಪಡಿತರ ಕಾರ್ಡ್‌ಗಳ ವಿವರಗಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪಾರದರ್ಶಕತೆ ಪೋರ್ಟಲ್‌ಗಳಲ್ಲಿ ಲಭ್ಯವಿವೆ.
  • ಪಡಿತರ ಚೀಟಿಗಳ ಶೇ.99.8 ಕ್ಕಿಂತ ಅಧಿಕ ಆಧಾರ್ ಜೋಡಣೆ (ಕನಿಷ್ಠ ಒಬ್ಬ ಸದಸ್ಯ).
  • ದೇಶದಲ್ಲಿ ಸುಮಾರು ಶೇ.99.8ರಷ್ಟು (ಒಟ್ಟು 5.44 ಲಕ್ಷದಲ್ಲಿ 5.41 ಲಕ್ಷ) ನ್ಯಾಯಬೆಲೆ ಅಂಗಡಿಗಳು (ಎಫ್ ಪಿಎಸ್) ಪಾರದರ್ಶಕ ಮತ್ತು ಫಲಾನುಭವಿಗಳಿಗೆ ಸಬ್ಸಿಡಿ ಆಹಾರಧಾನ್ಯಗಳ ವಿತರಣೆಯನ್ನು ಖಾತ್ರಿಪಡಿಸಿಕೊಳ್ಳಲು ಸ್ವಯಂಚಾಲಿತ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇ-ಪಿಒಎಸ್) ಸಾಧನಗಳನ್ನು ಬಳಸಿಕೊಳ್ಳುತ್ತಿವೆ.
  • ಆಹಾರಧಾನ್ಯಗಳ ವಿತರಣೆಯ ಅಡಿಯಲ್ಲಿ, ಶೇ. 97 ಕ್ಕಿಂತ ಹೆಚ್ಚಿನ ವಹಿವಾಟುಗಳನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಬಯೋಮೆಟ್ರಿಕ್/ ಆಧಾರ್ ಮೂಲಕ ದೃಢೀಕರಿಸಿವೆ.

ಖರೀದಿ ಪ್ರಕ್ರಿಯೆಯಲ್ಲಿ ಇ-ಆಡಳಿತ:

ಭಾರತ ಸರ್ಕಾರವು ಅಪ್ಲಿಕೇಷನ್ ಪೂರಕ ವ್ಯವಸ್ಥೆಯ ಅಭಿವೃದ್ಧಿಗೆ ಎಂಟಿಪಿ (ಕನಿಷ್ಠ ಮಿತಿ ನಿಯತಾಂಕಗಳು) ಅನ್ನು ಪರಿಚಯಿಸಿದೆ, ಇದರಲ್ಲಿ ಒಂದೇ ಮೂಲದಲ್ಲಿ ಎಲ್ಲಾ ರಾಜ್ಯ ಸಂಗ್ರಹಣೆ ಪೋರ್ಟಲ್‌ಗಳ ಮೇಲ್ವಿಚಾರಣೆ ಮತ್ತು ಏಕರೂಪತೆ ಮತ್ತು ಪಾರದರ್ಶಕತೆ ಖಾತ್ರಿ ಖಚಿತಪಡಿಸಿಕೊಳ್ಳಲು ಹಾಗೂ  ಕಾರ್ಯತಂತ್ರದ ನಿರ್ಧಾರ ಕೈಗೊಳ್ಳಲು ಕನಿಷ್ಠ ಮಿತಿ ನಿಯತಾಂಕಗಳೊಂದಿಗೆ ಸಂಯೋಜಿಸುವ ಮೂಲಕ ಖರೀದಿಗೆ ಸಂಬಂಧ ಅಗತ್ಯ ಮಾಹಿತಿಯು ಲಭ್ಯವಿದೆ. ಎಂಟಿಪಿಯು ಆಧಾರ್ ಜೋಡಣೆ ಮಾಡಿರುವ ರೈತರ ಆನ್‌ಲೈನ್ ನೋಂದಣಿ, ಭೂ ದಾಖಲೆಯ ಏಕೀಕರಣ, ಡಿಜಿಟಲೀಕರಣಗೊಂಡ ಮಂಡಿಗಳ ಕಾರ್ಯಾಚರಣೆಗಳು, ರೈತರಿಗೆ ಎಂಎಸ್ ಪಿ ವರ್ಗಾವಣೆ, ಅಕ್ಕಿ/ಗೋಧಿ ವಿತರಣಾ ನಿರ್ವಹಣೆ, ಬಿಲ್‌ಗಳ ಸ್ವಯಂ ಉತ್ಪಾದನೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆನ್‌ಲೈನ್ ಖರೀದಿ ವ್ಯವಸ್ಥೆಯು ಬಹುತೇಕ ಮಧ್ಯವರ್ತಿಗಳಿಂದ ಖರೀದಿಯಿಂದ ಹೊರಹಾಕಿದೆ ಮತ್ತು ನಿರ್ದಿಷ್ಟ ರೈತರಿಗೆ ಎಂಎಸ್ ಪಿ ಉತ್ತಮ ರೀತಿಯಲ್ಲಿ ದೊರಕುತ್ತಿದೆ.

ಆಹಾರ ಧಾನ್ಯಗಳ ಖರೀದಿ;

ಸದ್ಯ ನಡೆಯುತ್ತಿರುವ 2023-24ರ ಮುಂಗಾರು ಮಾರುಕಟ್ಟೆ ಹಂಗಾಮು(ಕೆಎಂಎಸ್) ನಡಿ 17.12.2023 ರಂತೆ, 365.48 ಎಲ್ ಎಂಟಿ ಪ್ರಮಾಣದ ಭತ್ತ (244.99 ಎಲ್ ಎಂಟಿ ಅಕ್ಕಿ ರೂಪದಲ್ಲಿ) ಖರೀದಿಸಲಾಗಿದ್ದು, ಅದರಿಂದ 30,90,303  ರೈತರಿಗೆ 80,515.26 ಕೋಟಿ ರೂ. ಮೌಲ್ಯದ ಎಂಎಸ್ ಪಿ ಲಭ್ಯವಾಗಿದೆ.

2023-24ರ ಹಿಂಗಾರು ಮಾರುಕಟ್ಟೆ ಹಂಗಾಮಿನಲ್ಲಿ (ಆರ್ ಎಂಎಸ್) 262.02 ಎಲ್ ಎಂಟಿ ಗೋಧಿಯನ್ನು 21,28,985 ರೈತರಿಂದ ಖರೀದಿಸಲಾಗಿದ್ದು, ಇದರಿಂದ ಅವರಿಗೆ 55,679.73 ಕೋಟಿ ರೂ. ಎಂಎಸ್‌ ಪಿ ಪ್ರಯೋಜನವಾಗಿದೆ.

ಒರಟು ಧಾನ್ಯಗಳು / ರಾಗಿ ಸಂಗ್ರಹಣೆ:

ಕಳೆದ ಎರಡು ವರ್ಷಗಳಲ್ಲಿ ಒರಟಾದ ಧಾನ್ಯಗಳು/ರಾಗಿಗಳ ಸಂಗ್ರಹಣೆ ಮತ್ತು ಪ್ರಸಕ್ತ ವರ್ಷದ ಅಂದಾಜು ಸಂಗ್ರಹಣೆ ಕೆಳಗಿನಂತಿದೆ:

 

 

 

 

 

ಅಂಕಿ ಅಂಶ ಮೆಟ್ರಿಕ್ ಟನ್ ಗಳಲ್ಲಿ

ಕೆಎಂಎಸ್

ಸರಕು

ಒಟ್ಟು

2021-22

ಜೋಳ

156575

ಬಾಜ್ರ

13251

ಮೆಕ್ಕೆಜೋಳ

22767

ರಾಗಿ

437339

ಒಟ್ಟು

629931

2022-23

ಜೋಳ

85197

ಬಾಜ್ರ

182005

ಮೆಕ್ಕೆಜೋಳ

13122

ರಾಗಿ

456745

ಒಟ್ಟು

737069

2023-24*

ಜೋಳ

162548

ಬಾಜ್ರ

743000

ಮೆಕ್ಕೆಜೋಳ

168778

ರಾಗಿ

455185

ಉಪ ಸಿರಿಧಾನ್ಯಗಳು

11470

ಒಟ್ಟು

1540981

 

 

 

*ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸ್ವೀಕರಿಸಿದ ಮನವಿಯಂತೆ ಅಂದಾಜು ಖರೀದಿ ಪ್ರಮಾಣ.

 

ಗೋಧಿ ದಾಸ್ತಾನು ಮಿತಿ ಹೇರಿಕೆ:

  1. ಒಟ್ಟಾರೆ ಆಹಾರ ಭದ್ರತೆ ನಿರ್ವಹಿಸಲು ಮತ್ತು ಅಕ್ರಮ ದಾಸ್ತಾನು ನಿಯಂತ್ರಿಸಲು ಮತ್ತು ಅನಗತ್ಯ ಊಹೆಗಳಿಗೆ ಅವಕಾಶ ನೀಡುವುದನ್ನು ತಡೆಯಲು ಭಾರತ ಸರ್ಕಾರ 2023ರ ಜೂನ್ 12ರಂದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2024ರ ಮಾರ್ಚ್ 31ರವರೆಗೆ ಎಲ್ಲಾ ವ್ಯಾಪಾರಿಗಳು/ಹೋಲ್ ಸೇಲ್ ಮಾರಾಟಗಾರರು, ರಿಟೇಲರುಗಳು, ದೊಡ್ಡ ಸರಣಿ ರಿಟೇಲರ್ಸ್ ಮತ್ತು ಸಂಸ್ಕರಣೆದಾರರಿಗೆ ಅನ್ವಯವಾಗುವಂತೆ ಗೋಧಿ ದಾಸ್ತಾನು ಮಿತಿಯನ್ನು  ಹೇರಿದೆ. ಆ ಆದೇಶ ಈ ಕೆಳಗಿನಂತೆ 2023ರ ಡಿ.8ರಂದು ಈ ಕೆಳಗಿನಂತೆ ಪರಿಷ್ಕೃತಗೊಂಡಿದೆ.

ಅರ್ಹತೆ

ಗೋಧಿ ದಾಸ್ತಾನು ಮಿತಿ

ವ್ಯಾಪಾರಿಗಳು/ಸಗಟು ಮಾರಾಟಗಾರರು

1000 ಎಂಟಿ

ಚಿಲ್ಲರೆ ಮಾರಾಟಗಾರರು

ಪ್ರತಿ ರಿಟೇಲ್ ಮಳಿಗೆಗೆ 5 ಎಂಟಿ.

ಬೃಹತ್ ಸರಣಿ ಚಿಲ್ಲರೆ ಮಾರಾಟಗಾರರು

ಪ್ರತಿ ಮಳಿಗೆಗೆ 5 ಎಂಟಿ and ಅವುಗಳ ಡಿಪೋಗಳಿಗೆ 1000 ಎಂಟಿ

ಸಂಸ್ಕರಣಾದಾರರು

2023-24ರ ಉಳಿದ ತಿಂಗಳುಗಳ ಅವಧಿಯನ್ನು ಶೇ.70ರಷ್ಟು ಸ್ಥಾಪಿತ ಸಾಮರ್ಥ್ಯದೊಂದಿಗೆ ಗುಣಿಸಿದಾಗ ಬರುವ ಸಾಮರ್ಥ್ಯದಷ್ಟು.

(ii) ಗೋಧಿ ದಾಸ್ತಾನು ಪೋರ್ಟಲ್‌ ನಲ್ಲಿ 20,456 ಸಂಸ್ಥೆಗಳು ಒಟ್ಟಾರೆ ನೋಂದಣಿಯಾಗಿವೆ ಮತ್ತು ಗೋಧಿ ದಾಸ್ತಾನು ಪೋರ್ಟಲ್ ನಲಲ್ಇ 65,43 ಎಲ್ ಎಂಟಿ ಗೋಧಿ ದಾಸ್ತಾನು (18.12.2023ರಂತೆ) ಘೋಷಿಸಲಾಗಿದೆ.

ದಾಸ್ತಾನು ವಲಯ

 

ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ಶೇಖರಣಾ ಸಾಮರ್ಥ್ಯದ ಹೆಚ್ಚಳ;

ಭಾರತೀಯ ಆಹಾರ ನಿಗಮ (ಎಫ್ ಸಿಐ) ನಿರಂತರವಾಗಿ ಸಂಗ್ರಹಣಾ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಸಂಗ್ರಹಣಾ ಅಂತರದ ಮೌಲ್ಯಮಾಪನದ ಆಧಾರದ ಮೇಲೆ, ಶೇಖರಣಾ ಸಾಮರ್ಥ್ಯಗಳನ್ನು ಸೃಷ್ಟಿಸಲಾಗುತ್ತದೆ/ನಿಯೋಜನೆಗೊಳಿಸಲಾಗುತ್ತದೆ. ಎಫ್‌ಸಿಐನಲ್ಲಿ ಸಂಗ್ರಹಣಾ ಸಾಮರ್ಥ್ಯದ ಅವಶ್ಯಕತೆಯು ಮುಖ್ಯವಾಗಿ ಅಕ್ಕಿ ಮತ್ತು ಗೋಧಿಗೆ ಸಂಗ್ರಹಣೆಯ ಮಟ್ಟ ಬಫರ್ ಮಾನದಂಡಗಳ ಅವಶ್ಯಕತೆ ಮತ್ತು ಪಿಡಿಎಸ್ ಕಾರ್ಯಾಚರಣೆಗಳ ಮೇಲೆ ಅವಲಂಬಿತವಾಗಿರುತ್ತದೆ. ದಾಸ್ತಾನು ಮಿತಿಯನ್ನು ಖರೀದಿ ರಾಜ್ಯಗಳ ಹಿಂದಿನ ಮೂರು ವರ್ಷಗಳ ಅಧಿಕ ದಾಸ್ತಾನು ಮಿತಿಯನ್ನು   ಮತ್ತು ಬಳಕೆ ಮಾಡುವ ರಾಜ್ಯಗಳ ನಾಲ್ಕು ತಿಂಗಳ ಅವಧಿ ಆಧರಿಸಿ (ಈಶಾನ್ಯ ರಾಜ್ಯಗಳಾದರೆ ಆರು ತಿಂಗಳು) ಆಧರಿಸಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ ಎಫ್ ಎಸ್ ಎ) ಹಾಗೂ ಇತರೆ ಕಲ್ಯಾಣ ಯೋಜನೆಗಳು (ಒಡಬ್ಲೂಎಸ್) ಹೊಸ ಗೋದಾಮುಗಳ ನಿರ್ಮಾಣ ಮತ್ತು ಸೃಷ್ಟಿ ಆದರಿಸಿ  ನಿಗದಿ ಮಾಡಲಾಗುತ್ತದೆ. 01.12.2023 ರಂತೆ, 363.69 ಎಲ್ ಎಂಟಿ ದಾಸ್ತಾನು ಸಾಮರ್ಥ್ಯವು ಭಾರತೀಯ ಆಹಾರ ನಿಗಮದಲ್ಲಿ ಲಭ್ಯವಿದೆ ಮತ್ತು 397.60 ಎಲ್ ಎಂಟಿ ಆಹಾರ ಧಾನ್ಯಗಳ ಕೇಂದ್ರ ದ ಭಾಗದ ದಸ್ತಾನಿಗಾಗಿ ರಾಜ್ಯ ಏಜೆನ್ಸಿಗಳಲ್ಲಿ ಸ್ಥಳ ಲಭ್ಯವಿದೆ. ಇದರ ಪರಿಣಾಮ, ಆಹಾರ ಧಾನ್ಯಗಳ ಕೇಂದ್ರದ ಭಾಗದ ದಾಸ್ತಾನಿಗಾಗಿ ಒಟ್ಟು 761.29 LMT ಸಾಮರ್ಥ್ಯವು ಲಭ್ಯವಿದೆ. (ಸಿಎಪಿ ಸಾಮರ್ಥ್ಯಗಳನ್ನು ಇನ್ನು ಮುಂದೆ ಬಳಸಲಾಗುವುದಿಲ್ಲ ಮತ್ತು ಹಂತಹಂತವಾಗಿ ತೆಗೆದುಹಾಕಲಾಗುತ್ತಿದೆ).

  • ಖಾಸಗಿ ಉದ್ಯಮಿಗಳ ಗ್ಯಾರಂಟಿ (ಪಿಇಜಿ) ಯೋಜನೆ  :

ದೇಶಾದ್ಯಂತ ದಾಸ್ತನು ಅಗತ್ಯತೆಗಳನ್ನು ಪೂರೈಸಲು ಮತ್ತು ಆಹಾರಧಾನ್ಯಗಳ ಸುರಕ್ಷಿತ ದಾಸ್ತಾನು ಖಾತ್ರಿಪಡಿಸಲು ಸರ್ಕಾರ ಖಾಸಗಿ ಉದ್ಯಮಿಗಳು, ಕೇಂದ್ರೀಯ ಉಗ್ರಾಣ ನಿಗಮ (ಸಿಡಬ್ಲೂಸಿ) ಮತ್ತು ರಾಜ್ಯ ಉಗ್ರಾಣ ನಿಗಮ (ಎಸ್ ಡಬ್ಲೂ ಸಿಗಳ) ಮೂಲಕ ದಾಸ್ತಾನು ಸಾಮರ್ಥ್ಯ ಸೃಷ್ಟಿಗೆ ಖಾಸಗಿ ಉದ್ಯಮಿಗಳ ಗ್ಯಾರಂಟಿ (ಪಿಇಜಿ) ಯೋಜನೆಯನ್ನು ಜಾರಿಗೊಳಿಸುತ್ತಿದೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಪಿಇಜಿ ಯೋಜನೆಯ ಜೊತೆಗೆ ಪ್ಲಾನ್ ಸ್ಕೀಮ್ ಮತ್ತು ಸೈಲೋಸ್ ಮೂಲಕ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಪಿಇಜಿ ಯೋಜನೆಯಡಿ 2008 ರಲ್ಲಿ ವಿಕೇಂದ್ರೀಕೃತವಲ್ಲದ ಸಂಗ್ರಹಣೆ ರಾಜ್ಯಗಳಿಗೆ (ಡಿಸಿಪಿ) ರೂಪಿಸಲಾದ ಮತ್ತು ನಂತರ 2009 ರಲ್ಲಿ ಡಿಸಿಪಿ ರಾಜ್ಯಗಳಿಗೆ ವಿಸ್ತರಿಸಲಾಯಿತು, ಖಾಸಗಿ ಹೂಡಿಕೆಯನ್ನು ಆಕರ್ಷಿಸುವ ಮೂಲಕ ಸಾಂಪ್ರದಾಯಿಕ ಗೋದಾಮುಗಳ ನಿರ್ಮಾಣವನ್ನು 22 ರಾಜ್ಯಗಳಲ್ಲಿ ಕೈಗೊಳ್ಳಲಾಗಿದೆ. ಎಫ್ ಸಿಐ ಖಾಸಗಿ ಹೂಡಿಕೆದಾರರಿಗೆ 10 ವರ್ಷಗಳ ಶೇಖರಣಾ ಸಾಮರ್ಥ್ಯದ ಬಳಕೆಯನ್ನು ಮತ್ತು ಸಿಡಬ್ಲೂಸಿ ಮತ್ತು ಎಸ್ ಡಬ್ಲೂಸಿ ಗಳಿಗೆ 9 ವರ್ಷಗಳನ್ನು ಖಾತರಿಪಡಿಸುತ್ತದೆ. 01.12.2023 ರಂತೆ ಗೋದಾಮುಗಳಿಗೆ ಮಂಜೂರಾದ ಒಟ್ಟು ಸಾಮರ್ಥ್ಯ 151.74 ಎಲ್ ಎಂಟಿ. ಆ ಪೈಕಿ 146.45 ಎಲ್‌ಎಂಟಿ ದಾಸ್ತಾನು ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ

  • ಭಾರತೀಯ ಗುಣಮಟ್ಟ ನಿಯಂತ್ರಣ ಮಂಡಳಿಯಿಂದ ಎಫ್ ಸಿಐ ಮಾಲೀಕತ್ವ ಮತ್ತು ಬಾಡಿಗೆ ಪಡೆದಿರುವ ಗೋದಾಮುಗಳ ಮೂರನೇ ವ್ಯಕ್ತಿಯ ಮೌಲ್ಯಮಾಪನ

 

ಎಫ್ ಸಿಐ ನಿರ್ವಹಿಸುವ ಎಲ್ಲಾ ಗೋದಾಮುಗಳ ಮೂರನೇ ವ್ಯಕ್ತಿಯ ಮೌಲ್ಯಮಾಪನವನ್ನು ಕ್ಯೂಸಿಐ ವಿಧಾನದ ಮೂಲಕ ಭೌತಿಕ ಮೂಲಸೌಕರ್ಯ, ಎಸ್ ಒಪಿಗಳ ಪಾಲನೆ, ಸುರಕ್ಷತಾ ಮಾನದಂಡಗಳು ಮತ್ತು ಉತ್ತಮ ಪದ್ದತಿಗಳೊಂದಿಗೆ ಬೆಂಚ್‌ಮಾರ್ಕಿಂಗ್‌ನ ಮೂಲಕ ಕೈಗೊಳ್ಳಲಾಗುತ್ತಿದೆ. ಅದರಂತೆ, ಎಲ್ಲಾ ಗೋದಾಮುಗಳ ಶ್ರೇಣೀಕರಣವನ್ನು "ಅತ್ಯುತ್ತಮ, 5 ಸ್ಟಾರ್, 4 ಸ್ಟಾರ್, 3 ಸ್ಟಾರ್, 2 ಸ್ಟಾರ್ ಮತ್ತು 1 ಸ್ಟಾರ್" ಎಂಬ ಆರು ವಿಭಾಗಗಳಲ್ಲಿ ಮಾಡಲಾಗಿದೆ.

 

ಎಫ್ ಸಿಐ ಒಡೆತನದ 556  ಡಿಪೋಗಳಿಗೆ  ಮತ್ತು ಎಫ್ ಸಿಐ ಬಾಡಿಗೆ ಪಡೆದಿರುವ 1591  ಡಿಪೋಗಳಿಗೆ ಕ್ಯೂಸಿಐ ವರದಿಗಳನ್ನು ಸಲ್ಲಿಸಿದೆ. ಮತ್ತು ಅದರಂತೆ ಸುಧಾರಣೆಗಾಗಿ ಕೊರತೆಗಳನ್ನು ನೀಗಿಸುವುದು ಮತ್ತು ಯಾವ ವಿಭಾಗಗಳಲ್ಲಿ ಸುಧಾರಣೆಗಳನ್ನು ಮಾಡಬಹುದೆಂದು ಗುರುತಿಸಲಾಗಿದೆ. ಕ್ಯೂಸಿಐ ಪ್ರತಿಕ್ರಿಯೆಯ ಆಧಾರದ ಮೇಲೆ, ಎಫ್ ಸಿಐ ಮರು-ಪರಿಶೀಲನೆ/ ಮಾರ್ಪಡಿಸಿದ ಎಸ್ ಒಪಿ ಗಳನ್ನು ಮಾಡಿದೆ. ಪರಿಷ್ಕೃತ ಎಸ್‌ಒಪಿಗಳನ್ನು ಕ್ಷೇತ್ರ ಮಟ್ಟದ ಕಚೇರಿಗಳಿಗೆ ರವಾನಿಸಲಾಗಿದೆ. ಗೋದಾಮುಗಳ ಉನ್ನತೀಕರಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಅಂತೆಯೇ, ಎಫ್‌ಸಿಐ ಕ್ಯೂಸಿಐನಿಂದ ಸೂಚಿಸಲಾದ ನ್ಯೂನತೆಗಳನ್ನು ಸುಧಾರಿಸಿದೆ ಮತ್ತು ಎಫ್‌ಸಿಐ ಕಚೇರಿಗಳಿಂದ ಮರುಪರಿಶೀಲನೆ ಮಾಡಲಾಗಿದೆ.

ಅಲ್ಲದೆ, ಡಿಎಫ್ ಪಿಡಿ ನಿರ್ದೇಶನದಂತೆ, ಕ್ಯೂಸಿಐ 4-ಸ್ಟಾರ್, 5-ಸ್ಟಾರ್ ಮತ್ತು ಎಕ್ಸಲೆಂಟ್ ವರ್ಗಕ್ಕೆ ಪರಿವರ್ತನೆಗೊಂಡ ಎಫ್ ಸಿಐ ಮಾಲೀಕತ್ವದ ಡಿಪೋಗಳನ್ನು ಮರು-ಮೌಲ್ಯಮಾಪನ ಮಾಡಿದೆ. ಮೌಲ್ಯಮಾಪನವು ಪೂರ್ಣಗೊಂಡಿದೆ ಮತ್ತು ಉನ್ನತೀಕರಿಸಿದ ನಂತರ 479 ಎಫ್‌ಸಿಐ ಸ್ವಾಮ್ಯದ ಡಿಪೋಗಳು 5 ಸ್ಟಾರ್ ಮತ್ತು ಅದಕ್ಕಿಂತ ಮೇಲಿನ ವರ್ಗಕ್ಕೆ ಸೇರುತ್ತವೆ, ಕ್ಯೂಸಿಐ ಮಾಡಿದ ಮೊದಲ ಮೌಲ್ಯಮಾಪನದಲ್ಲಿ 102 ಗೋದಾಮುಗಳು ಮಾತ್ರ ಅಂತಹ ಸ್ಥಾನಮಾನಕ್ಕೆ ಅರ್ಹವಾಗಿದ್ದವು.

ಈ ವರ್ಷ ದಾಸ್ತಾನು ವಲಯದಲ್ಲಿ ಮಾಡಿರುವ ಕೆಲವು ಪ್ರಮುಖ ಸಾಧನೆಗಳು ಹೀಗಿವೆ;

 

  1. ಸಿಎಪಿಯನ್ನು ಕವರ್ಡ್ ಕ್ಯಾಪಿಸಿಸಿ ಸಾಮರ್ಥ್ಯಕ್ಕೆ ಪರಿವರ್ತನೆ: - ಸಾಂಪ್ರದಾಯಿಕವಾಗಿ, ಗೋಧಿಯನ್ನು ರಾಜ್ಯ ಏಜೆನ್ಸಿಗಳು/ಎಫ್‌ಸಿಐ ಮುಖ್ಯವಾಗಿ ಸಂಗ್ರಹಿಸುವ ಪ್ರದೇಶಗಳಲ್ಲಿ ಸಿಎಪಿ (ಕವರ್ ಮತ್ತು ಪ್ಲಿಂತ್) ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೂ ಸಿಎಪಿಯ ಸಾಮರ್ಥ್ಯವನ್ನು ಹಂತಹಂತವಾಗಿ ತೆಗದುಹಾಕುವ ನೀತಿ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಅಂದರೆ, 10.05.2022 ರಂದು ಭಾರತ ಸರ್ಕಾರದಿಂದ (ಡಿಎಫ್ ಇಡಿ) ಅನುಮೋದಿಸಿರುವಂತೆ ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿದ ನಂತರ ಎಫ್ ಸಿಐ ನಿಂದ ಸುಮಾರು 180 ಎಲ್ ಎಂಟಿಗೆ ವಿಸ್ತೃತ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಭವಿಷ್ಯದಲ್ಲಿ ಸಿಎಪಿಯನ್ನು ಬಳಸುವ ಅಗತ್ಯವಿರುವುದಿಲ್ಲ ಆದ್ದರಿಂದ ಕವರ್ಡ್ ಸಾಮರ್ಥ್ಯವನ್ನು ರಚಿಸಲು ಸಹ ನಿರ್ಧರಿಸಲಾಯಿತು. ಎಫ್ ಸಿಐ ಹೊಸ 5 ವರ್ಷಗಳ ಗ್ಯಾರಂಟಿ ಯೋಜನೆಯಡಿಯಲ್ಲಿ 117.75 ಎಲ್ ಎಂಟಿ ದಾಸ್ತಾನು ಸಾಮರ್ಥ್ಯ ಸೃಷ್ಟಿಸಲು ಪ್ರಸ್ತಾಪಿಸಿದೆ ಮತ್ತು ಅದನ್ನು ಡಿಎಫ್ ಇಡಿ ಅನುಮೋದಿಸಿದೆ. ಶೇಖರಣಾ ಚಿತ್ರಣದಲ್ಲಿನ ಬದಲಾವಣೆಯಿಂದಾಗಿ, ಹರಿಯಾಣದಲ್ಲಿ (4 ಎಲ್ ಎಂಟಿ) ಮತ್ತು ಪಂಜಾಬ್‌ನಲ್ಲಿ (9ಎಲ್ ಎಂಟಿ ) ಮೊದಲ ಹಂತದಲ್ಲಿ 13 ಎಲ್ ಎಂಟಿ ಅನ್ನು ಕಲ್ಪಿಸಲಾಗಿದೆ. ಇದಕ್ಕಾಗಿ ಈಗಾಗಲೇ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಟೆಂಡರ್‌ ಕರೆಯಲಾಗಿದೆ.
  1. ಸ್ವತ್ತು ನಗದೀಕರಣ -
  • ಕೇಂದ್ರದ ಪಾಲಿನ ದಾಸ್ತಾನು/ಸಿಎಪಿ ತೆಗೆದುಹಾಕಲು ರಾಜ್ಯಗಳ ಸ್ವತ್ತು ನಗದೀಕರಣ:

13 ಎಲ್  ಎಂಟಿಯನ್ನು ಒಂದನೇ ಹಂತದಲ್ಲಿ ಪಂಜಾಬ್ (9 ಎಲ್ ಎಂಟಿ) ಮತ್ತು ಹರಿಯಾಣದಲ್ಲಿ (4 ಎಲ್ ಎಂಟಿ) ನಿರ್ಮಿಸಲು ಯೋಜಿಸಲಾಗಿದೆ. ಪಂಜಾಬ್ (ಪುನ್ ಗ್ರೈನ್ ) ಮತ್ತು ಹರಿಯಾಣ ( ಹಾಫೆಡ್ ) ನಲ್ಲಿ ಸಂಬಂಧಿಸಿದ ನೋಡಲ್ ಏಜೆನ್ಸಿಗಳು ಟೆಂಡರ್‌ಗಳನ್ನು ಕರೆದಿವೆ.

  • ಕೆಪಿಎಂಜಿ ವರದಿ/ ಎಫ್ ಸಿಐನ ಖಾಲಿ ಜಾಗದಂತೆ ಎಫ್ ಸಿಐ ಸ್ವತ್ತಿನ ಆಧುನೀಕರಣ ಮತ್ತು ನಗದೀಕರಣ ;

ಎ ಕ್ಯಾಟಗರಿ : ಯಾವ ಪ್ರದೇಶದಲ್ಲಿ ಭೂಮಿ ಲಭ್ಯವಿರುತ್ತದೋ  ಮತ್ತು ದಾಸ್ತಾನು ಕೊರತೆ ಇರುವ ಸ್ವತ್ತುಗಳು, ಪಿಎಂಎಸ್ ಅಡಿಯಲ್ಲಿ 21 ಸ್ಥಳಗಳಲ್ಲಿ 4.32 ಎಲ್ ಎಂಟಿ ಮತ್ತು 48 ಸ್ಥಳಗಳಲ್ಲಿ ಪಿಎಂಎಸ್ ಯೇತರ ಅಡಿಯಲ್ಲಿ 2.80 ಎಲ್ ಎಂಟಿ ಗಾಗಿ ಶೇಖರಣಾ ಸಾಮರ್ಥ್ಯವನ್ನು ಸೃಷ್ಟಿಲಾಗುತ್ತದೆ.

  • ಬಿ ಕ್ಯಾಟಗರಿ : ಭೂಮಿ ಲಭ್ಯವಿರುವೆಡೆ ಸ್ವತ್ತುಗಳು, ಆದರೆ ಯಾವುದೇ ದಾಸ್ತಾನು ಕೊರತೆ ಇರುವುದಿಲ್ಲ
  • ಸಿ ಕ್ಯಾಟಗರಿ : ನಗರ ಪ್ರದೇಶಗಳಲ್ಲಿರುವ ಸ್ವತ್ತುಗಳು, ಅವುಗಳಿಗೆ ಅಧಿಕ ನಗದೀಕರಣ ಮೌಲ್ಯವಿರುತ್ತದೆ.
  • ಡಿ ಕ್ಯಾಟಗರಿ : ಹಾಲಿ ಇರುವ ಮೂಲಸೌಕರ್ಯದಲ್ಲಿನ ಸ್ವತ್ತುಗಳು
  •  
  • 29 ಸ್ಥಳಗಳನ್ನು ಸಿಡಬ್ಲೂ ಸಿಗೆ ನೀಡಲಾಗಿದೆ, ಅವುಗಳಿಗೆ ಈಗಾಗಲೇ ಸಿಡಬ್ಲೂಸಿ ಟೆಂಡರ್ ಗಳನ್ನು ಕರೆದಿದೆ.
  1. ಡಬ್ಲೂ ಆರ್ ಡಿಎ ಪ್ರಮಾಣೀಕರಣ - ಗೋದಾಮುಗಳನ್ನು ಗುಣಮಟ್ಟವನ್ನು ವೃದ್ಧಿಸುವ ಸಲುವಾಗಿ ಉಗ್ರಾಣ ಅಭಿವೃದ್ಧಿ ನಿಯಂತ್ರಣ ಪ್ರಾಧಿಕಾರದಿಂದ ಎಫ್ ಸಿಐ ಒಡೆತನದ ಎಲ್ಲಾ 557 ಗೋದಾಮುಗಳ ಪ್ರಮಾಣೀಕರಣವನ್ನು ಪಡೆಯಲು ನಿರ್ಧರಿಸಲಾಯಿತು. 552 ಎಫ್ ಸಿಐ ಡಿಪೋಗಳು ಡಬ್ಲೂಆರ್ ಡಿಎ ದಿಂದ ಪ್ರಮಾಣೀಕರಿಸಲ್ಪಟ್ಟಿವೆ. 2 ಪ್ರಕರಣಗಳಲ್ಲಿ, ಪ್ರಮುಖ ಎಂಜಿನಿಯರಿಂಗ್ ರಿಪೇರಿ ನಡೆಯುತ್ತಿದೆ. 03 ಗೋದಾಮುಗಳನ್ನು ತಿರಸ್ಕರಿಸಲಾಗಿದೆ, ಇವುಗಳನ್ನು ಆಸ್ತಿ ನಗದೀಕರಣದ ಅಡಿಯಲ್ಲಿ ತೆಗೆದುಕೊಳ್ಳಲಾಗುವುದು.
  2. ಜೆಇಎಂಗೆ ಪೂರಕವಾಗಿ ಮಾದರಿ ಟೆಂಡರ್ ನಮೂನೆ – ಎಲ್ಲಾ ಕ್ಷೇತ್ರ ಕಛೇರಿಗಳು ಜಿಇಎಂ ಪೋರ್ಟಲ್ 11.04.2023ರಿಂದ ಅನ್ವಯವಾಗುವಂತೆ ಸಂಬಂಧಿತ 'ನೋಂದಾಯಿತ ಸೇವಾ ವರ್ಗದ' ಮೂಲಕ ನಿರ್ವಹಣೆ ಮತ್ತು ಸಾರಿಗೆ ಒಪ್ಪಂದ ಮತ್ತು ರಸ್ತೆ ಸಾರಿಗೆ ಒಪ್ಪಂದದ ಟೆಂಡರ್‌ಗಳನ್ನು ಕರೆಯುತ್ತಿವೆ. ಸಂಬಂಧಿಸಿದ ಮಾದರಿಗಳ ಉತ್ತಮ ತಿಳುವಳಿಕೆಗಾಗಿ ಎಫ್‌ಸಿಐ ವಲಯ ಮತ್ತು ಪ್ರಾದೇಶಿಕ ಕಚೇರಿಗಳು ಹಾಗೂ ನಿರೀಕ್ಷಿತ ಬಿಡ್‌ದಾರರಿಗಾಗಿ ಜಿಇಎಂನ ಸಹಕಾರದೊಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈಗ ಎಫ್ ಸಿಐ ಟಿಸಿ/ಆರ್ ಟಿಸಿ/ಎಚ್ ಟಿಸಿ ಟೆಂಡರ್‌ಗಳು ಜಿಇಎಂಗೆ ಅನುಗುಣವಾಗಿವೆ.

ಹಗೇವು ನಿರ್ಮಾಣ: ವೈಜ್ಞಾನಿಕ ರೀತಿಯಲ್ಲಿ ಆಹಾರ ಧಾನ್ಯಗಳ ಸಂಗ್ರಹ

  1. ದಾಸ್ತಾನು ಸಾಮರ್ಥ್ಯದ ಉನ್ನತೀಕರಣ ಮೇಲ್ದರ್ಜೆಗೇರಿಸುವುದು ಮತ್ತು ಆಧುನೀಕರಣಕ್ಕಾಗಿ ಭಾರತ ಸರ್ಕಾರ, ಪಿಪಿಪಿ ಮಾದರಿಯಲ್ಲಿ ದೇಶಾದ್ಯಂತ ನೂರು ಎಲ್ಎಂಟಿ ಹಗೇವು ನಿರ್ಮಿಸಲು ಕ್ರಿಯಾ ಯೋಜನೆಯನ್ನು ಅನುಮೋದಿಸಿದೆ. ಈ ನೂರು ಎಲ್ಎಂಟಿಯಲ್ಲಿ  29 ಎಲ್ಎಂಟಿ ಸಾಮರ್ಥ್ಯದ ಹಗೇವನ್ನು ಎಫ್ ಸಿಐ, ಪಿಪಿಪಿ ಮಾದರಿಯಲ್ಲಿ ನಿರ್ಮಾಣ ಮಾಡಲಿದೆ. 2.5 ಎಲ್ಎಂಟಿ, ಸಿಡಬ್ಲ್ಯೂಸಿ ಮತ್ತು 68.5 ಎಲ್ಎಂಟಿ ಸಾಮರ್ಥ್ಯವನ್ನು ರಾಜ್ಯ ಸರ್ಕಾರಗಳು ನಿರ್ಮಿಸುತ್ತವೆ. ಆ ಪೈಕಿ 14.75 ಎಲ್ಎಂಟಿ ಸಾಮರ್ಥ್ಯದ ನಿರ್ಮಾಣ ಕಾರ್ಯ ಈಗಾಗಲೇ 29 ಕಡೆ ಪೂರ್ಣಗೊಂಡು, ಅದನ್ನು ಬಳಕೆ ಮಾಡಲಾಗುತ್ತಿದೆ. 9.00 ಎಲ್ಎಂಟಿ ಸಾಮರ್ಥ್ಯದ ನಿರ್ಮಾಣ ಕಾರ್ಯ 18 ಕಡೆ ಪ್ರಗತಿಯಲ್ಲಿದೆ.  ಇದಲ್ಲದೆ ಹೆಚ್ಚುವರಿಯಾಗಿ 7 ಕಡೆ 5.50 ಎಲ್ಎಂಟಿ ಸಾಮರ್ಥ್ಯದ ಹಗೇವು ನಿರ್ಮಾಣವನ್ನು 2007-09ರ ಸರ್ಕೀಟ್ ಮಾದರಿಯಲ್ಲಿ ಸೃಷ್ಟಿಸಲಾಗಿದ್ದು, ಅದನ್ನು ಬಳಕೆ ಮಾಡಲಾಗುತ್ತಿದೆ. ಒಟ್ಟಾರೆ 20.25 ಎಲ್ಎಂಟಿ  ಸಾಮರ್ಥ್ಯದ ನಿರ್ಮಾಣ ಕಾರ್ಯ ಪೂರ್ಣಗೊಂಡು ಬಳಕೆ ಮಾಡಲಾಗುತ್ತಿದೆ. ಬಹುತೇಕ ಈ ಹಗೇವುಗಳು ರೈಲ್ವೆ ಜಾಗದಲ್ಲಿವೆ.
  1. ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಹಗೇವು ನಿರ್ಮಾಣ: ಹಗೇವು ನಿರ್ಮಾಣವನ್ನು ಮತ್ತಷ್ಟು ವೃದ್ಧಿಗೊಳಿಸಲು ಎಫ್ ಸಿಐ ದೇಶಾದ್ಯಂತ 249 ಕಡೆ ಹಂತ ಹಂತವಾಗಿ 111.125 ಎಲ್ಎಂಟಿ  ಸಾಮರ್ಥ್ಯದ ಹಗೇವು ಅಭಿವೃದ್ಧಿಗಾಗಿ ನೀಲನಕ್ಷೆಯನ್ನು ರೂಪಿಸಿದೆ. ಇವುಗಳಲ್ಲಿ ಬಹುತೇಕ ರಸ್ತೆ ಬದಿ ಇದ್ದು, ಅವುಗಳು ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿವೆ. ಹಬ್ ಮತ್ತು ಸ್ಪೋಕ್ ಮಾದರಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದ್ದು, ಇದರಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ಸಂಕೀರ್ಣತೆಗಳು ಇರುವುದಿಲ್ಲ. ಮೊದಲ ಹಂತದ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ 80 ಕಡೆ 34.875 ಎಲ್ಎಂಟಿ ಸಾಮರ್ಥ್ಯದ ಹಗೇವು ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಅದರಲ್ಲಿ 14 ಕಡೆ ಡಿಬಿಎಫ್ಒಟಿ ಮಾದರಿ(ಎಫ್ ಸಿ ಐ ಒಡೆತನದ ಜಾಗ) ದಲ್ಲಿ 10.125 ಎಲ್ಎಂಟಿ  ಸಾಮರ್ಥ್ಯದ ನಿರ್ಮಾಣ ಕಾರ್ಯ ಮತ್ತು 66 ಕಡೆ ಡಿಬಿಎಫ್ ಓಓ ಮಾದರಿಯಲ್ಲಿ 66 ಕಡೆ 24.75 ಎಲ್ಎಂಟಿ ಸಾಮರ್ಥ್ಯದ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 66 ಕಡೆ 30.75 ಎಲ್ಎಂಟಿ ಸಾಮರ್ಥ್ಯದ ಹಗೇವು ನಿರ್ಮಾಣಕ್ಕೆ ಡಿಬಿಎಫ್ಓಓ ಮಾದರಿಯಲ್ಲಿ 05.05.2023ರಂದು 18 ಯೋಜನೆಗಳಲ್ಲಿ ಟೆಂಡರ್ ಗಳನ್ನು ಕರೆಯಲಾಗಿತ್ತು. ಮತ್ತು 21.09.2023ರಂದು ಅವುಗಳ ಟೆಂಡರ್ ಅನ್ನು ತೆರೆಯಲಾಗಿದ್ದು, ಸದ್ಯ ತಾಂತ್ರಿಕ ಮೌಲ್ಯಮಾಪನ ಹಂತದಲ್ಲಿದೆ.

ದಾಸ್ತಾನು ಗೋದಾಮುಗಳನ್ನು ನಿರ್ಮಿಸಲು ಕೇಂದ್ರೀಯ ವಲಯದ ಯೋಜನೆ

ಇಲಾಖೆ ಗೋದಾಮುಗಳನ್ನು ನಿರ್ಮಿಸಲು ವಿಶೇಷವಾಗಿ ಈಶಾನ್ಯ ಭಾಗದ ಜತೆಗೆ ಇತರೆ ಹಲವು ರಾಜ್ಯಗಳಿಗೆ ಒತ್ತು ನೀಡಿ, ಕೇಂದ್ರೀಯ ವಲಯ ಯೋಜನೆ(ಹಿಂದಿನ ಯೋಜನಾ ಕಾರ್ಯಕ್ರಮ) ಯನ್ನು ಇಲಾಖೆ ಅನುಷ್ಠಾನಗೊಳಿಸುತ್ತಿದೆ. ಈ ಯೋಜನೆಯಡಿ ಭೂಸ್ವಾಧೀನ, ಆಹಾರ ದಾಸ್ತಾನು ಗೋದಾಮುಗಳ ನಿರ್ಮಾಣ ರೈಲ್ವೆ ವಿದ್ಯುದೀಕರಣ, ತೂಕದ ಯಂತ್ರ ಅಳವಡಿಕೆ ಮತ್ತಿತರ ಕಾರ್ಯಗಳಿಗೆ ಸಮನಾಗಿ ಎಫ್ ಸಿಐ ನೇರವಾಗಿ ಹಣವನ್ನು ಬಿಡುಗಡೆ ಮಾಡುತ್ತದೆ ಮತ್ತು ಕೇಂದ್ರ ವಲಯ ಯೋಜನೆ (2017-20) ಅಡಿಯಲ್ಲಿ ಅದನ್ನು 31.03.2025ರ ವರೆಗೆ ವಿಸ್ತರಿಸಲಾಗಿದ್ದು, ಈಶಾನ್ಯ ರಾಜ್ಯಗಳಲ್ಲಿ ಒಟ್ಟು ಸಾಮರ್ಥ್ಯ 1,05,890 ಎಂಟಿ ಮತ್ತು ಇತರೆ ರಾಜ್ಯಗಳಲ್ಲಿ  56,690 ಎಂಟಿ ಸಾಮರ್ಥ್ಯಕ್ಕೆ ಅನುಮೋದನೆ ನೀಡಲಾಗಿದ್ದು, ಅದನ್ನು ಒಟ್ಟು ಹಣಕಾಸು ಮೊತ್ತ 419.99 ಕೋಟಿ ರೂ. (ಈಶಾನ್ಯ ರಾಜ್ಯಗಳಿಗೆ 315.41ಕೋಟಿ ರೂ. ಇತರೆ ರಾಜ್ಯಗಳಿಗೆ 104.58  ಕೋಟಿ ರೂ.) ಅಂದಾಜಿಸಲಾಗಿತ್ತು. ಇದು 484.08 ಕೋಟಿ ರೂ.ಗೆ (ಈಶಾನ್ಯ ರಾಜ್ಯಗಳಿಗೆ 379.50 ಕೋಟಿ ರೂ. ಮತ್ತು ಇತರೆ ರಾಜ್ಯಗಳಿಗೆ 104.58 ಕೋಟಿ ರೂ.)ಗೆ ಹೆಚ್ಚಳ ಮಾಡಲಾಗಿದೆ. ಸಿಎಸ್ಎಸ್ ಅಡಿಯಲ್ಲಿ  ಒಟ್ಟು ಸಾಮರ್ಥ್ಯ 77,650 ಎಂಟಿ (ಈಶಾನ್ಯ ರಾಜ್ಯಗಳಿಗೆ 56,430ಎಂಟಿ, ಇತರೆ ರಾಜ್ಯಗಳಿಗೆ  21,220ಎಂಟಿ) ಸಾಮರ್ಥ್ಯವನ್ನು ಎಫ್ ಸಿಐ 01.04.2017 ರಿಂದ 30.11.2023 ರೊಳಗೆ ಸೃಷ್ಟಿಸಿದೆ. ಇದಲ್ಲದೆ ಈಶಾನ್ಯ ರಾಜ್ಯಗಳಿಗೆ ಒಟ್ಟು 5 ಕಾಮಗಾರಿಗಳನ್ನು(49,460ಎಂಟಿ) ಸಾಮರ್ಥ್ಯದ ಕಾಮಗಾರಿ ಸದಸ್ಯ ಪ್ರಗತಿಯಲ್ಲಿದೆ. ಈಶಾನ್ಯ ರಾಜ್ಯ ಹೊರತುಪಡಿಸಿ, ಇತರೆ ರಾಜ್ಯಗಳಲ್ಲಿ ಒಟ್ಟು 4 ಕಾಮಗಾರಿಗಳು (33,540ಎಂಟಿ) ಕಾರ್ಯ ಪ್ರಗತಿಯಲ್ಲಿದೆ.

ಸಕ್ಕರೆ ವಲಯ

ಭಾರತದ ಸಕ್ಕರೆ ಉದ್ಯಮ ಅತ್ಯಂತ ಪ್ರಮುಖ ಕೃಷಿ ಆಧಾರಿತ ಉದ್ಯಮವಾಗಿದ್ದು, ಇದು ಸುಮಾರು 5 ಕೋಟಿ ಕಬ್ಬು ಬೆಳೆಯುವ ರೈತರು ಮತ್ತು ಅವರ ಕುಟುಂಬದವರು ಸೇರಿ, ಗ್ರಾಮೀಣ ಜೀವನೋಪಾಯದ ಮೇಲೆ ಭಾರೀ ಪರಿಣಾಮವನ್ನು ಉಂಟುಮಾಡುತ್ತದೆ ಮತ್ತು ಸುಮಾರು 5 ಲಕ್ಷ ಕಾರ್ಮಿಕರು ನೇರವಾಗಿ ಸಕ್ಕರೆ ಕಾರ್ಖಾನೆಗಳಿಂದ ಉದ್ಯೋಗ ಪಡೆದಿದ್ದಾರೆ. ಸಾರಿಗೆ, ಯಂತ್ರೋಪಕರಣಗಳ ಸರ್ವೀಸ್ ಮತ್ತು ಕೃಷಿ ಸಂಬಂಧಿ ಉಪಕರಣಗಳ ಪೂರೈಕೆ ಸೇರಿದಂತೆ ನಾನಾ ಚಟುವಟಿಕೆಗಳಲ್ಲಿ ಹಲವು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಭಾರತ, ವಿಶ್ವದಲ್ಲೇ ಅತಿದೊಡ್ಡ ಸಕ್ಕರೆ ಉತ್ಪಾದನೆ ಮತ್ತು ಬಳಕೆ ಮಾಡುತ್ತಿರುವ ರಾಷ್ಟ್ರವಾಗಿದೆ. ಇಂದು ಭಾರತದ ಸಕ್ಕರೆ ಉದ್ಯಮದ ವಾರ್ಷಿಕ ವಹಿವಾಟು ಸುಮಾರು 1,40,000 ರೂ. ಎಂದು ಅಂದಾಜಿಸಲಾಗಿದೆ.

2022-23ನೇ ಸಾಲಿನ ಸಕ್ಕರೆ ಹಂಗಾಮಿನಲ್ಲಿ ದೇಶಾದ್ಯಂತ 534 ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಿವೆ. ವಾರ್ಷಿಕ ಕಬ್ಬು ಉತ್ಪಾದನೆ ಇದೀಗ 5000 ಲಕ್ಷ ಮೆಟ್ರಿಕ್ ಟನ್(ಎಲ್ಎಂಟಿ)ಗೆ ಏರಿಕೆಯಾಗಿದೆ. ಅದರಲ್ಲಿ 330 ಎಲ್ಎಂಟಿ ಸಕ್ಕರೆ ಉತ್ಪಾದನೆಗೆ ಬಳಕೆಯಾದರೆ, 43 ಎಲ್ಎಂಟಿಯನ್ನು ಎಥೆನಾಲ್ ಉತ್ಪಾದನೆಗೆ ಬಳಕೆ ಮಾಡಲಾಗುತ್ತಿದೆ. 280 ಎಲ್ಎಂಟಿ ಸಕ್ಕರೆಯನ್ನು ದೇಶೀಯ ಬಳಕೆಗೆ ಪೂರೈಕೆ ಮಾಡಿದ ನಂತರ 2022-23ನೇ ಸಕ್ಕರೆ ಹಂಗಾಮಿನಲ್ಲಿ 63 ಎಲ್ಎಂಟಿ ಸಕ್ಕರೆಯನ್ನು ರಫ್ತು ಮಾಡಲಾಗಿದೆ.

ಸರ್ಕಾರ ಕೈಗೊಂಡ ರೈತಪರ ಕ್ರಮಗಳ ಪರಿಣಾಮ ಹಿಂದಿನ ಸಕ್ಕರೆ ಹಂಗಾಮಿನಲ್ಲಿ ರೈತರಿಗೆ ಕೊಡಬೇಕಾಗಿದ್ದ ಶೇ.99.9ರಷ್ಟು ಬಾಕಿಯನ್ನು ಪಾವತಿಸಲಾಗಿದೆ. 2022-23 ಸಕ್ಕರೆ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ 1,14,494 ಕೋಟಿ ರೂ. ಪಾವತಿಸಬೇಕಾಗಿತ್ತು. ಆ ಪೈಕಿ 1,12,829 ಕೋಟಿ ರೂ. ಪಾವತಿಸಲಾಗಿದೆ ಮತ್ತು 1,665 ಕೋಟಿ ರೂ. ಮಾತ್ರ ಬಾಕಿ  ಇದೆ. ಹಾಗಾಗಿ ಶೇ. 98ಕ್ಕೂ ಅಧಿಕ ಬಾಕಿಯನ್ನು ರೈತರಿಗೆ ಪಾವತಿ ಮಾಡಿರುವುದರಿಂದ ಅತಿ ಕಡಿಮೆ ಹಣವನ್ನು ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮ

ಎಥೆನಾಲ್ ಕೃಷಿ ಆಧಾರಿತ ಉತ್ಪನ್ನವಾಗಿದ್ದು, ಇದನ್ನು ಪೆಟ್ರೋಲ್ ಜತೆ ಇಂಧನವನ್ನು ಮಿಶ್ರಣ ಮಾಡಲು ಬಳಕೆ ಮಾಡಲಾಗುತ್ತಿದೆ. ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನೆ ಸೇರಿದಂತೆ ಹಲವು ಉದ್ಯಮಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದೆ. ಇದನ್ನು ಸಕ್ಕರೆ ಉದ್ಯಮದ ಉಪ ಉತ್ಪನ್ನವಾಗಿದ್ದು, ಇದನ್ನು ಮೊಲಾಸಿಸ್ ಅಥವಾ ಕಾಕಂಬಿ ಎಂದು ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ಕಬ್ಬು ಉತ್ಪಾದನೆಯಿಂದಾಗಿ ಬೆಲೆಗಳು ಕುಸಿದಿದ್ದಾಗ ಸಕ್ಕರೆ ಉದ್ಯಮ ಕಬ್ಬು ಪೂರೈಸುವ ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಲಾಗಲಿಲ್ಲ ಮತ್ತು ಅಧಿಕ ಸಕ್ಕರೆಯ ಉತ್ಪಾದನೆಯಿಂದ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಮತ್ತು ಸಕ್ಕರೆ ಕಾರ್ಖಾನೆಗಳ ನಗದು ಲಭ್ಯತೆ ಹೆಚ್ಚಿಸಲು ಕಾರ್ಖಾನೆಗಳಿಗೆ ಕಬ್ಬು ಬೆಳೆಗಾರರಿಗೆ ಪಾವತಿಸಬೇಕಾಗಿರುವ ಬಾಕಿ ಹಣ ಪಾವತಿಸಲು ಅನುಕೂಲವಾಗುವಂತೆ ಸರ್ಕಾರ ಹೆಚ್ಚುವರಿ ಕಬ್ಬನ್ನು ಎಥೆನಾಲ್ ಉತ್ಪಾದನೆಗೆ ಬಳಕೆ ಮಾಡುವಂತೆ ಉತ್ತೇಜಿಸುತ್ತಿದೆ. ಭಾರತ ಸರ್ಕಾರ ದೇಶಾದ್ಯಂತ ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, ತೈಲ ಮಾರುಕಟ್ಟೆ ಕಂಪನಿಗಳು(ಒಎಂಸಿ) ಮಿಶ್ರಿತ ಪೆಟ್ರೋಲ್ ಅನ್ನು ಮಾರಾಟ ಮಾಡುತ್ತಿದೆ. ಇಬಿಪಿ ಕಾರ್ಯಕ್ರಮದಡಿ ಸರ್ಕಾರ 2025ರ ವೇಳೆಗೆ ಪೆಟ್ರೋಲ್ ಜತೆ ಎಥೆನಾಲ್ ಮಿಶ್ರಣವನ್ನು ಶೇ.20ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.  

2014ರ ವೇಳೆಗೆ ಮೊಲಾಸಿಸ್ ಆಧರಿತ ಡಿಸ್ಟಿಲರಿಗಳಲ್ಲಿ ಎಥೆನಾಲ್ ಸಾಮರ್ಥ್ಯ 200 ಕೋಟಿ ಲೀಟರ್ ಗಿಂತ ಕಡಿಮೆ ಇತ್ತು. 2013-14ನೇ ಎಥೆನಾಲ್ ಪೂರೈಕೆ ವರ್ಷದಲ್ಲಿ ಶೇ. 1.53 ಎಥೆನಾಲ್ ಮಿಶ್ರಣದೊಂದಿಗೆ ತೈಲ ಮಾರುಕಟ್ಟೆಗಳಿಗೆ ಕೇವಲ 38 ಕೋಟಿ ಲೀಟರ್ ಎಥೆನಾಲ್ ಪೂರೈಕೆಯಾಗಿತ್ತು. ಆದರೆ ಸರ್ಕಾರ ಕೈಗೊಂಡ ನೀತಿ ಬದಲಾವಣೆಗಳ ಪರಿಣಾಮ ಮೊಲಾಸಿಸ್ ಆಧರಿತ ಡಿಸ್ಟಿಲರಿಗಳ ಸಾಮರ್ಥ್ಯ 875 ಕೋಟಿ ಲೀಟರ್ ಗಳಿಗೆ ಏರಿಕೆಯಾಗಿದೆ. ಧಾನ್ಯಗಳ ಆಧರಿತ ಡಿಸ್ಟಿಲರಿಗಳ ಸಾಮರ್ಥ್ಯ 505 ಕೋಟಿ ಲೀಟರ್ ಗೆ ಏರಿಕೆಯಾಗಿದೆ.

2022-23ನೇ ಎಥೆನಾಲ್ ಪೂರೈಕೆ ವರ್ಷ(ಡಿಸೆಂಬರ್-ಅಕ್ಟೋಬರ್) ಅವಧಿಯಲ್ಲಿ ಶೇ.12ರಷ್ಟು ಮಿಶ್ರಣ ಗುರಿಯನ್ನು ಯಶಸ್ವಿಯಾಗಿ ಸಾಧಿಸಲಾಗಿದ್ದು, ಅದರಲ್ಲಿ 505 ಕೋಟಿ ಎಥೆನಾಲ್ ಅನ್ನು ಪೆಟ್ರೋಲ್ ನೊಂದಿಗೆ ಮಿಶ್ರಣ ಮಾಡಿ, ಮಾರಾಟ ಮಾಡಲಾಗಿದೆ. ದೇಶಾದ್ಯಂತ ಹಾಲಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯ(30.11.2023ರಂತೆ) 1380 ಕೋಟಿ ಲೀಟರ್ ಗೆ ಏರಿಕೆಯಾಗಿದೆ.(505 ಕೋಟಿ ಲೀಟರ್ ಧಾನ್ಯಗಳ ಆಧಾರಿತ ಡಿಸ್ಟಿಲರಿಗಳಿಂದ ಮತ್ತು 875 ಕೋಟಿ ಲೀಟರ್ ಮೊಲಾಸಿಸ್ ಆಧಾರಿತ ಡಿಸ್ಟಿಲರಿಗಳಿಂದ) ಎಥೆನಾಲ್ ಮಿಶ್ರಿತ ಪೆಟ್ರೋಲ್ (ಇಬಿಪಿ) ಕಾರ್ಯಕ್ರಮದ ಯಶಸ್ವಿ ಅನುಷ್ಠಾನದಿಂದ ಹಲವು ಆಯಾಮಗಳಲ್ಲಿ ಹಲವು ಉಪಯೋಗಗಳಿಗೆ ಕಾರಣವಾಗಿದೆ.

  • ಎಥೆನಾಲ್ ಮಾರಾಟದ ಪರಿಣಾಮ ಸಕ್ಕರೆ ಕಾರ್ಖಾನೆಗಳಿಗೆ ನಗದು ಹರಿವು ಉತ್ತಮಗೊಂಡಿದ್ದು, ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುತ್ತಿವೆ. ಕಳೆದ 10 ವರ್ಷಗಳಲ್ಲಿ (2014-15 ರಿಂದ 2022-23), ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಮಾರಾಟದಿಂದ 90,000 ಕೋಟಿ ರೂ.ಗೂ ಅಧಿಕ ಆದಾಯವನ್ನು ಗಳಿಸಿವೆ. ಇದು ತಳಮಟ್ಟದಲ್ಲಿದ್ದ ಸಕ್ಕರೆ ಕಾರ್ಖಾನೆಗಳ ಅಭಿವೃದ್ಧಿಗೆ ನೆರವಾಗಿದೆ.
  • ಎಥೆನಾಲ್ ಉತ್ಪಾದನೆಯಿಂದಾಗಿ ಪೆಟ್ರೋಲ್ ಅಥವಾ ಕಚ್ಚಾ ತೈಲದ ಆಮದು ಬದಲಾವಣೆಯಾಗಿ, ಭಾರತಕ್ಕೆ ಭಾರೀ ಪ್ರಮಾಣದ ವಿದೇಶಿ ವಿನಿಮಯ ಉಳಿತಾಯವಾಗುತ್ತಿದೆ. 2022-23ರಲ್ಲಿ 502 ಕೋಟಿ ಲೀಟರ್ ಎಥೆನಾಲ್ ಉತ್ಪಾದನೆಯಿಂದ ಭಾರತ 24,300 ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ ಮತ್ತು ಭಾರತದ ಇಂಧನ ಭದ್ರತೆ ಸುಧಾರಿಸಿದೆ.
  • ಭಾರತ ಸರ್ಕಾರ ಹಸಿರುಮನೆಯ ಇಂಗಾಲದ ಹೊರಸೂಸುವಿಕೆಯನ್ನು(ಜಿಎಚ್ ಜಿಗಳು) ಹೊರಸೂಸುವಿಕೆಯನ್ನು ತಗ್ಗಿಸುವ ಗುರಿಗೆ ಬದ್ಧವಾಗಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ಕಾರ್ಬನ್ ಮೋನಾಕ್ಸೈಡ್ ಹೊರಸೂಸುವಿಕೆ ಶೇ. 30-50 ಮತ್ತು ಇತರೆ ಹೈಡ್ರೋಕಾರ್ಬನ್ ಗಳ ಹೊರಸೂಸುವಿಕೆ ಶೇ.ರಷ್ಟು ಇಳಿಕೆಯಾಗಿದೆ. ವಾಸ್ತವದಲ್ಲಿ ಸಾರಿಗೆಯಲ್ಲಿ ಹೆಚ್ಚಿನ ಪ್ರಮಾಣದ ಎಥೆನಾಲ್ ಬಳಕೆ ಮಾಡುತ್ತಿರುವುದರಿಂದ ಭಾರತದ ಸಾರಿಗೆ ವಲಯ ಹೆಚ್ಚು ಹಸಿರು ಮತ್ತು ಪರಿಸರಸ್ನೇಹಿಯಾಗುತ್ತಿದೆ.
  • ಪರಿಣಾಮಕಾರಿ ಸರ್ಕಾರದ ನೀತಿಯಿಂದಾಗಿ ಸುಮಾರು 40,000 ಕೋಟಿ ರೂ. ಮೌಲ್ಯದ ಹೂಡಿಕೆ ಅವಕಾಶಗಳು ವೃದ್ಧಿಯಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಡಿಸ್ಟಿಲರಿಗಳ ಸ್ಥಾಪನೆಗೆ ಕಾರಣವಾಗಿದೆ ಮತ್ತು ಆ ಪ್ರದೇಶಗಳಲ್ಲಿ ಸುಮಾರು 60,000ಕ್ಕೂ ಅಧಿಕ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. 2025-26ರ ವೇಳೆಗೆ ಒಂದು ಲಕ್ಷಕ್ಕೂ ಅಧಿಕ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ನಿರೀಕ್ಷಿಸಲಾಗುತ್ತಿದೆ.

ಸಕ್ಕರೆ ವಲಯದಲ್ಲಿ ಡಿಜಿಟಲೀಕರಣ

ಸುಲಭ ವ್ಯಾಪಾರ ಮಾಡುವುದನ್ನು ಉತ್ತೇಜಿಸಲು, ಪಾರದರ್ಶಕತೆಯನ್ನು ತರಲು ಮತ್ತು ಸಕ್ಕರೆ ಕಾರ್ಖಾನೆಗಳನ್ನು ಸುಗಮಗೊಳಿಸಲು, ಡಿಎಫ್ ಇಡಿ ಇನ್ವೆಸ್ಟ್ ಇಂಡಿಯಾದ ಸಹಯೋಗದೊಂದಿಗೆ ಡಿಎಸ್ ವಿಒದ ವಿವಿಧ ನಿಯಮಿತ ಚಟುವಟಿಕೆಗಳಿಗೆ ಚಾಲನೆ ನೀಡಿದೆ. ಇಡೀ ವ್ಯವಸ್ಥೆಯ ಸಂಪೂರ್ಣ ಮತ್ತು ಸಮಗ್ರ ಡಿಜಿಟಲೀಕರಣವನ್ನು ಹೊಂದಲು ಹಾಗೂ ಸಕ್ಕರೆ ಕಾರ್ಖಾನೆಗಳು ಮತ್ತು ಎಥೆನಾಲ್ ಉದ್ಯಮದ ಎಲ್ಲಾ ಸಂಬಂಧಿತ ದತ್ತಾಂಶವನ್ನು ಒಂದೇ ಸ್ಥಳದಲ್ಲಿ ಹೊಂದಲು, ಮೀಸಲಾದ ಪೋರ್ಟಲ್  ಎನ್ ಎಸ್ ಡಬ್ಲೂಎಸ್  ಪೋರ್ಟಲ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಎನ್ ಎಸ್ ಡಬ್ಲೂಎಸ್ ಪೋರ್ಟಲ್ ನಲ್ಲಿ ಈವರೆಗೆ ಪ್ರಗತಿ :

  • ಎಲ್ಲಾ ಸಕ್ಕರೆ ಕಾರ್ಖಾನೆಗಳು ಎನ್ ಎಸ್ ಡಬ್ಲೂಎಸ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿವೆ.
  • ಎನ್ ಎಸ್ ಡಬ್ಲೂಎಸ್ ಪೋರ್ಟಲ್ ನಲ್ಲಿ ಎಂಐಎಸ್ ಫಾರ್ಮೆಟ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ.
  • ಸಕ್ಕರೆ ಕಾರ್ಖಾನೆಗಳು ಎನ್ ಎಸ್ ಡಬ್ಲೂಎಸ್ ಪೋರ್ಟಲ್ ನಲ್ಲಿ ದತ್ತಾಂಶವನ್ನು ನಮೂದಿಸುತ್ತಿವೆ.
  • ಎಲ್ಲಾ ಸಕ್ಕರೆ ಕಾರ್ಖಾನೆಗಳು ಎನ್ ಎಸ್ ಡಬ್ಲೂಎಸ್ ಪೋರ್ಟಲ್ ನಿಂದ ಪ್ರತಿ ತಿಂಗಳು ಬಿಡುಗಡೆ ಮಾಡುವ ದತ್ತಾಂಶವನ್ನು ಪಡೆಯಲಾಗುತ್ತಿದೆ.
  • ಸಕ್ಕರೆ ಕಾರ್ಖಾನೆಗಳು ಭರ್ತಿ ಮಾಡಿರುವ ನಮೂನೆಗಳನ್ನು ಪಡೆಯಲು ಮತ್ತು ಎಂಐ ಎಸ್ ವರದಿಗಳನ್ನು ಸೃಷ್ಟಿಸಲು ರಾಜ್ಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ.

*****


 



(Release ID: 1991135) Visitor Counter : 102