ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ
azadi ka amrit mahotsav

​​​​​​​2023ನೇ ವರ್ಷಾಂತ್ಯದ ಪರಾಮರ್ಶೆ: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ


ಕುಶಲಕರ್ಮಿಗಳನ್ನು ಬೆಂಬಲಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 13,000 ಕೋಟಿ ರೂ.ಗಳ 'ಪಿಎಂ ವಿಶ್ವಕರ್ಮ ಯೋಜನೆ'ಗೆ ಚಾಲನೆ ನೀಡಿದರು.

ಕೌಶಲ್ಯಗಳು ಮತ್ತು ಉದ್ಯೋಗಕ್ಕಾಗಿ ಸ್ಕಿಲ್ ಇಂಡಿಯಾ ಡಿಜಿಟಲ್ ವೇದಿಕೆಯನ್ನು ಪ್ರಾರಂಭಿಸಲಾಯಿತು

ಐಐಟಿ ಕಾನ್ಪುರ, ಎಚ್ಎಎಲ್ ಮತ್ತು ಡಿಎಎಸ್ಐಗಳನ್ನೊಳಗೊಂಡ  ಮೂರು ಪ್ರಮುಖ ಸಹಭಾಗಿತ್ವದೊಂದಿಗೆ  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಭಾರತೀಯ ಕೌಶಲ್ಯ ಸಂಸ್ಥೆ) ರೂಪಿಸಲಾಗಿದೆ

2015 ರಿಂದ ಸುಮಾರು 1.40 ಕೋಟಿ ಅಭ್ಯರ್ಥಿಗಳು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) ಅಡಿಯಲ್ಲಿ ತರಬೇತಿ ಪಡೆದಿದ್ದಾರೆ.

ಇಂಡಸ್ಟ್ರಿ 4.0 ಅನ್ವಯ 16 ಹೊಸ ಯುಗದ ವ್ಯಾಪಾರೋದ್ಯಮಗಳನ್ನು (ಕಲಿಕಾ ಟ್ರೇಡ್ ಗಳನ್ನು ) ಅದರಲ್ಲಿ ಸೇರಿಸಲಾಗಿದೆ

2 ನೇ ಕೌಶಲ್ ದೀಕ್ಷಾಂತ್ ಸಮರೋಹವನ್ನು 14000 ಕ್ಕೂ ಹೆಚ್ಚು ಐಟಿಐಗಳ 8.5 ಲಕ್ಷಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳಿಗಾಗಿ ರಾಷ್ಟ್ರೀಯ, ರಾಜ್ಯ ಮತ್ತು ಐಟಿಐ ಮಟ್ಟದಲ್ಲಿ 2023 ರ ಅಕ್ಟೋಬರ್ 12 ರಂದು ಆಯೋಜಿಸಲಾಗಿತ್ತು

33 ಎನ್ಎಸ್ಟಿಐಗಳು (19 ವಿಶೇಷವಾಗಿ ಮಹಿಳೆಯರಿಗಾಗಿ ಮಾತ್ರ) ಮತ್ತು 3 ವಿಸ್ತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ

ತರಬೇತಿ ಮಾನದಂಡಗಳನ್ನು ಜಾಗತಿಕ ಮಾನದಂಡಗಳೊಂದಿಗೆ ಹೊಂದಿಸಲು ಇಂಡಿಯಾ ಸ್ಕಿಲ್ಸ್ 2023-24 ಸ್ಪರ್ಧೆ

Posted On: 26 DEC 2023 5:45PM by PIB Bengaluru

ತರಬೇತಿ ಮಹಾನಿರ್ದೇಶನಾಲಯ

ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಪುನರುಜ್ಜೀವನಗೊಳಿಸುವುದು ಮತ್ತು ಮರು ಕಲ್ಪಿಸಿಕೊಳ್ಳುವುದು: ಸ್ವಾತಂತ್ರ್ಯ ಪೂರ್ವ ಯುಗದಿಂದಲೂ ಇದು ಕೌಶಲ್ಯ ತರಬೇತಿಯಲ್ಲಿ ಬಲವಾದ ಸಮಾನತೆಯನ್ನು ಪ್ರತಿಪಾದಿಸಿದೆ.

● 2014 ರಲ್ಲಿ, 10119 ಸಂಸ್ಥೆಗಳನ್ನು ಸ್ಥಾಪಿಸಲಾಯಿತು ಮತ್ತು ಅಂದಿನಿಂದ 4621 ಸಂಸ್ಥೆಗಳನ್ನು ಸೇರಿಸಲಾಗಿದೆ, 2022 ರಲ್ಲಿ ಒಟ್ಟು ಸಂಖ್ಯೆ 14953 ಕ್ಕೆ ತಲುಪಿದೆ. ಅಂದರೆ 47.77% ಹೆಚ್ಚಳವಾಗಿದೆ.

● 2021-2023ರ ಶೈಕ್ಷಣಿಕ ಅಧಿವೇಶನದಲ್ಲಿ  25 ಲಕ್ಷಕ್ಕೂ ಹೆಚ್ಚು ಸೀಟುಗಳು ಲಭ್ಯವಾಗಿವೆ. 2014 ರಿಂದ 5 ಲಕ್ಷಕ್ಕೂ ಹೆಚ್ಚು ಸೀಟುಗಳು ಸೇರ್ಪಡೆಯಾಗಿವೆ. ಒಟ್ಟು ಸೀಟುಗಳ  ಸಾಮರ್ಥ್ಯ ಶೇ.25ರಷ್ಟು ಏರಿಕೆಯಾಗಿದೆ.

● ಇಲ್ಲಿಯವರೆಗೆ 17175 ತರಬೇತುದಾರರ ಸೀಟು ಸಾಮರ್ಥ್ಯವನ್ನು ನಿರ್ಮಾಣ ಮಾಡಲಾಗಿದೆ. 2014 ರಿಂದ 5710 ಸೀಟುಗಳು ಸೇರ್ಪಡೆಯಾಗಿವೆ. ಒಟ್ಟು ಸಾಮರ್ಥ್ಯವು 49.8% ರಷ್ಟು ಹೆಚ್ಚಾಗಿದೆ.

● ಇಲ್ಲಿಯವರೆಗೆ 223 ಕೋರ್ಸ್ ಗಳನ್ನು ಆರಂಭಿಸಲಾಗಿದೆ (150-ಸಿಟಿಎಸ್, 55-ಸಿಐಟಿಎಸ್, 14-ಎಸ್ ಟಿಟಿ ಮತ್ತು 04 ಅಡ್ವಾನ್ಸ್ಡ್ ಡಿಪ್ಲೊಮಾ). 2014 ರಿಂದ 61 ಕೋರ್ಸ್ ಗಳನ್ನು ಸೇರಿಸಲಾಗಿದೆ.

● ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳನ್ನು (ಎನ್ಎಸ್ಟಿಐ) 2015 ರಲ್ಲಿ 3 ವಿಸ್ತರಣಾ ಕೇಂದ್ರಗಳೊಂದಿಗೆ ತೆರೆಯಲಾಯಿತು. ಪ್ರಸ್ತುತ 33 ಎನ್ಎಸ್ಟಿಐಗಳಿವೆ (ಅವುಗಳಲ್ಲಿ 19 ವಿಶೇಷವಾಗಿ ಮಹಿಳೆಯರಿಗಾಗಿಯೇ ಇವೆ) ಮತ್ತು 3 ವಿಸ್ತರಣಾ ಕೇಂದ್ರಗಳು ಈಗ ಕಾರ್ಯನಿರ್ವಹಿಸುತ್ತಿವೆ.

● 2019ರ ಮಾರ್ಚ್ ನಲ್ಲಿ ಬಿಡುಗಡೆಯಾದ ಪರಿಷ್ಕೃತ ಯೋಜನೆಯ ಮಾರ್ಗಸೂಚಿಗಳ ಅಡಿಯಲ್ಲಿ ಫ್ಲೆಕ್ಸಿ ಎಂಒಯು ಯೋಜನೆಯಡಿ ತಿಳಿವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ. 2022 ರ ನವೆಂಬರ್ 30 ರವರೆಗೆ, ಫ್ಲೆಕ್ಸಿ ಎಂಒಯು ಯೋಜನೆಯಡಿ 13 ತಿಳಿವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಲಾಗಿದೆ.

● ಅಗ್ನಿವೀರ್ ತರಬೇತಿ ಮತ್ತು ಸೇವೆಯ ಸಮಯದಲ್ಲಿ ಗಳಿಸಿದ ಕೌಶಲ್ಯವನ್ನು ಗುರುತಿಸುವ ಮೂಲಕ ಅಗ್ನಿವೀರ್ ಗಳ  ಕೌಶಲ್ಯ ಪ್ರಮಾಣೀಕರಣಕ್ಕಾಗಿ ಡಿಜಿಟಿಯ ಫ್ಲೆಕ್ಸಿ-ಎಂಒಯು ಯೋಜನೆಯಡಿ ಡಿಜಿಟಿ 2022 ರ ಡಿಸೆಂಬರ್ 26 ರಂದು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯೊಂದಿಗೆ ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಿತು. ಅಗ್ನಿವೀರ್ ಗಳು , ಸಶಸ್ತ್ರ ಪಡೆಗಳಿಂದ ನಿರ್ಗಮಿಸಿದ ನಂತರ, ಅವರ ಸೇವೆಯ ಸಮಯದಲ್ಲಿ ಅವರ ಅರ್ಹತೆ ಮತ್ತು ಅನುಭವದ ಕಲಿಕೆಯ ಆಧಾರದ ಮೇಲೆ ಕೌಶಲ್ಯ ಪ್ರಮಾಣಪತ್ರಗಳನ್ನು ನೀಡಲಾಗುವುದು; ಇದರಿಂದ ಅಗ್ನಿವೀರ್ ಗಳು 4 ವರ್ಷಗಳ ಸೇವೆಯ ನಂತರ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳನ್ನು ಹೊಂದುವುದನ್ನು  ಖಚಿತಪಡಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಅಗ್ನಿವೀರ್ ಸೇವೆಯು ಕೆಳಗಿನ (ಮಾದರಿಗಳನ್ನು) ಮಾಡ್ಯೂಲ್ ಗಳನ್ನು ಒಳಗೊಂಡಿರುತ್ತದೆ:

  1. ಮೂಲಭೂತ ಮಿಲಿಟರಿ ತರಬೇತಿ
  2. ಉದ್ಯಮ  ತರಬೇತಿ
  3. ಭದ್ರತಾ ತರಬೇತಿ
  • IV. ಸೇವೆ/ ಕೆಲಸದ ವೇಳೆಯಲ್ಲಿ ತರಬೇತಿ (OJT)

• ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (ಎನ್ಐಒಎಸ್) ಮತ್ತು ಕೌಶಲ್ಯ ಅಭಿವೃದ್ಧಿ ಹಾಗು ಉದ್ಯಮಶೀಲತೆ ಸಚಿವಾಲಯದ (ಎಂಎಸ್ಡಿಇ) ಅಡಿಯಲ್ಲಿನ ತರಬೇತಿ ನಿರ್ದೇಶನಾಲಯ (ಡಿಜಿಟಿ) ನಡುವೆ ಶಾಲಾ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ / ಕೌಶಲ್ಯದ ನಡುವಿನ ಸಂಪರ್ಕವನ್ನು ಅಭಿವೃದ್ಧಿಪಡಿಸುವ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ ತಿಳಿವಳಿಕಾ ಒಡಂಬಡಿಕೆಯು ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (ಎನ್ ಟಿಸಿ) ಹೊಂದಿರುವವರಿಗೆ ಅಥವಾ ಕುಶಲಕರ್ಮಿಗಳ ತರಬೇತಿ ಯೋಜನೆ (ಸಿಟಿಎಸ್) ಅಡಿಯಲ್ಲಿ ಒಂದು ವರ್ಷ ಅಥವಾ ಎರಡು ವರ್ಷಗಳ ಅವಧಿಯ ಎನ್ ಎಸ್ ಕ್ಯೂಎಫ್-ಅನುಸರಣಾ ವ್ಯಾಪಾರ (ಟ್ರೇಡ್ )ಗಳಲ್ಲಿ ತರಬೇತಿ ಪಡೆಯುತ್ತಿರುವವರಿಗೆ ಎನ್ ಐಒಎಸ್ ನಿಂದ ಕ್ರಮವಾಗಿ 8 ಮತ್ತು 10 ನೇ ತರಗತಿ ತೇರ್ಗಡೆಗೆ ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಪ್ರಮಾಣಪತ್ರಗಳನ್ನು ಪಡೆಯಲು ಹಾದಿಯನ್ನು  ತೆರೆಯುತ್ತದೆ. ಇದಲ್ಲದೆ, ಒಂದು ವರ್ಷದ ಟ್ರೇಡ್ನಲ್ಲಿ ಐಟಿಐ ಉತ್ತೀರ್ಣರಾದವರಿಗೆ ಮತ್ತು ಅಪ್ರೆಂಟಿಸ್ಶಿಪ್ ತರಬೇತಿ ಯೋಜನೆ (ಎಟಿಎಸ್) ಅಡಿಯಲ್ಲಿ ಒಂದು ವರ್ಷದ ಟ್ರೇಡ್ನಲ್ಲಿ ತರಬೇತಿ ಪಡೆಯಲು, ಅಥವಾ ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಪ್ರಮಾಣಪತ್ರ (ಎನ್ಎಸಿ) ಹೊಂದಿರುವವರಿಗೆ ಎನ್ಐಒಎಸ್ನಿಂದ ಕ್ರಮವಾಗಿ 8 ಮತ್ತು 10 ನೇ ತೇರ್ಗಡೆಗೆ ಮಾಧ್ಯಮಿಕ / ಹಿರಿಯ ಮಾಧ್ಯಮಿಕ ಪ್ರಮಾಣಪತ್ರವನ್ನು ಪಡೆಯಲು ಅದೇ ಅವಧಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

• ಐಟಿಐ (ಸರ್ಕಾರಿ ಮತ್ತು ಖಾಸಗಿ) ಬೋಧಕರಿಗೆ ಡಿಜಿಟಿ ಆಯೋಜಿಸಿರುವ "ಐಟಿಐ (ಸರ್ಕಾರಿ ಮತ್ತು ಖಾಸಗಿ) ಬೋಧಕರಿಗೆ ಉದ್ಯೋಗಾರ್ಹತೆ, ಉದ್ಯಮಶೀಲತೆ ಮತ್ತು ಜೀವನ ಕೌಶಲ್ಯಗಳು" ಕುರಿತ 5 ದಿನಗಳ ಆನ್ಲೈನ್ ತರಬೇತಿ ಕಾರ್ಯಕ್ರಮಕ್ಕಾಗಿ ಡಿಜಿಟಿ ಮತ್ತು ಎನ್ಐಇಎಸ್ಬಿಯುಡಿ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ ತರಬೇತಿಯನ್ನು ಸುಸ್ಥಿರ ಉದ್ಯಮಶೀಲತೆ ಕೌಶಲ್ಯ ಅಭಿವೃದ್ಧಿ ಮತ್ತು ಶಿಕ್ಷಣದ ಅಭಿವೃದ್ಧಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದು ಐಟಿಐಗಳ ತರಬೇತಿ ಪಡೆದವರಿಗೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಹೊಸ ಯುಗದ ಕೋರ್ಸ್ ಗಳು: ಪ್ರಸ್ತುತ, ಕೈಗಾರಿಕೆಗಳಿಗೆ ನುರಿತ ಕೌಶಲ್ಯಯುಕ್ತ ಕಾರ್ಯಪಡೆಯನ್ನು ಒದಗಿಸುವ ಉದ್ದೇಶದಿಂದ ಕುಶಲಕರ್ಮಿಗಳ ತರಬೇತಿ ಯೋಜನೆಯಡಿ 152 ಎನ್ ಎಸ್ ಕ್ಯೂಎಫ್-ಅನುಸರಣಾ  ಟ್ರೇಡ್ ಗಳಲ್ಲಿ ವೃತ್ತಿಪರ ತರಬೇತಿ ನೀಡಲಾಗುತ್ತಿದೆ.

● 21 ಎನ್ಎಸ್ಟಿಐಗಳನ್ನು ಉದ್ಯಮಶೀಲತೆ ಕೋರ್ಸ್ ಗಳಿಗಾಗಿ ಎನ್ಐಇಎಸ್ಬಿಯುಡಿ ಕೇಂದ್ರಗಳಾಗಿ ಮತ್ತು 33 ಎನ್ಎಸ್ಟಿಐಗಳನ್ನು (ಮತ್ತು 2 ವಿಸ್ತರಣಾ ಕೇಂದ್ರಗಳು) ಉನ್ನತ ಶಿಕ್ಷಣ ಮತ್ತು ಪದವಿ ಪ್ರಮಾಣೀಕರಣ ಕೋರ್ಸ್ಗಳಲ್ಲಿ ಪ್ರಮಾಣೀಕರಣಕ್ಕಾಗಿ ಎನ್ಐಒಎಸ್ ಮತ್ತು ಇಗ್ನೋ ಕೇಂದ್ರಗಳಾಗಿ ನೋಂದಾಯಿಸಲಾಗಿದೆ.

● ವೃತ್ತಿಪರ ಕೌಶಲ್ಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು, ಸಿಐಟಿಎಸ್ / ಸಿಟಿಎಸ್ ಅಡಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಬೋಧನೆ ಮತ್ತು ಪರೀಕ್ಷೆಗಳಿಗೆ ಶುಲ್ಕ ವಿನಾಯಿತಿಯನ್ನು 2023-24 ರಿಂದ ಅನುಮೋದಿಸಲಾಗಿದೆ.

● ಪಿಎಂಕೆವಿವೈ ಸ್ಕಿಲ್ ಹಬ್ ಉಪಕ್ರಮದ ಅಡಿಯಲ್ಲಿ ಎಸ್ ಟಿಟಿ: ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) ಮತ್ತು ಸ್ಕಿಲ್ ಹಬ್ ಇನಿಶಿಯೇಟಿವ್ (ಎಸ್ ಎಚ್ ಐ) ಅಡಿಯಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (ಎನ್ ಎಸ್ ಕ್ಯೂಎಫ್) ಹಂತ 5, 6 ಮತ್ತು 7 ಕೋರ್ಸ್ ಗಳನ್ನು ನಡೆಸಲು ಎಲ್ಲಾ 33 ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳು (ಎನ್ ಎಸ್ ಟಿಐ) ಮತ್ತು 2 ವಿಸ್ತರಣಾ ಕೇಂದ್ರಗಳಿಗೆ ತರಬೇತಿ ಕೇಂದ್ರ ಮತ್ತು ತರಬೇತಿ ಒದಗಿಸುವ ಐಡಿಗಳನ್ನು ರಚಿಸಲಾಗಿದೆ. ಸುಮಾರು 700 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು 78 ಪ್ರಶಿಕ್ಷಣಾರ್ಥಿಗಳು ತರಬೇತಿಯಲ್ಲಿದ್ದಾರೆ.

● ಶೈಕ್ಷಣಿಕ ಅಧಿವೇಶನ  2022ರಲ್ಲಿ 116 ಐಟಿಐಗಳು ಮತ್ತು 2023ರ ಶೈಕ್ಷಣಿಕ ಅಧಿವೇಶನದಲ್ಲಿ  32 ಐಟಿಐಗಳಿಗೆ ಡ್ರೋನ್ ಸಂಬಂಧಿತ ಕೋರ್ಸ್ಗಳನ್ನು ನಡೆಸಲು ಡಿಜಿಟಿ ಅನುಮತಿ ನೀಡಿದೆ.

● ಡಿಜಿಟಿಯು 2023 ರ ಅಕ್ಟೋಬರ್ 12 ರಂದು ರಾಷ್ಟ್ರೀಯ, ರಾಜ್ಯ ಮತ್ತು ಐಟಿಐ ಮಟ್ಟದಲ್ಲಿ 14000 ಕ್ಕೂ ಹೆಚ್ಚು ಐಟಿಐಗಳಿಗೆ 2 ನೇ ಕೌಶಲ್ ದೀಕ್ಷಾಂತ್ ಸಮಾರೋಹ (ಕೌಶಲ್ಯ ಘಟಿಕೋತ್ಸವ ಸಮಾರಂಭ) ವನ್ನು 8.5 ಲಕ್ಷಕ್ಕೂ ಹೆಚ್ಚು ಪ್ರಶಿಕ್ಷಣ ಪಡೆದವರಿಗಾಗಿ  ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.  ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರು  ಅಧ್ಯಕ್ಷತೆ ವಹಿಸಿದ್ದರು.  

● ಕ್ಲೌಡ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮುಂತಾದ ಹೊಸ ತಂತ್ರಜ್ಞಾನಗಳಲ್ಲಿ ತರಬೇತಿಗಾಗಿ ಕೆಳಗಿನ ಐಟಿ ಕೈಗಾರಿಕೆಗಳೊಂದಿಗೆ ಡಿಜಿಟಿ ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಿದೆ

  •   ಮೈಕ್ರೋ ಸಾಫ್ಟ್ ಇಂಡಿಯಾ
  •   ವಾಧ್ವಾನಿ ಫೌಂಡೇಶನ್
  •  ಅಮೆಜಾನ್ ವೆಬ್ ಸೇವೆಗಳು (AWS)
  •   ಇಟಿಎಸ್ ಇಂಡಿಯಾ

● 2014 ರಲ್ಲಿ, 10119 ಸಂಸ್ಥೆಗಳನ್ನು ಸ್ಥಾಪಿಸಲಾಯಿತು ಮತ್ತು ಅಂದಿನಿಂದ 4897 ಸಂಸ್ಥೆಗಳನ್ನು ಸೇರಿಸಲಾಗಿದೆ, 2023 ರಲ್ಲಿ ಒಟ್ಟು ಸಂಖ್ಯೆ 15016 ಕ್ಕೆ ತಲುಪಿದೆ. ಇದು 48.39% ಹೆಚ್ಚಳ

● 2021-2023ರ ಅವಧಿಗೆ 25+ ಲಕ್ಷ ಸೀಟುಗಳನ್ನು ಸೇರಿಸಲಾಗಿದೆ. 2014 ರಿಂದ 5+ ಲಕ್ಷ ಸೀಟುಗಳು ಸೇರ್ಪಡೆಯಾಗಿವೆ. ಒಟ್ಟು ಸೀಟು  ಸಾಮರ್ಥ್ಯ ಶೇ.25ರಷ್ಟು ಏರಿಕೆಯಾಗಿದೆ.

● ಇಲ್ಲಿಯವರೆಗೆ 17175 ತರಬೇತುದಾರರ ಸೀಟು  ಸಾಮರ್ಥ್ಯವನ್ನು ಒದಗಿಸಲಾಗಿದೆ. 2014 ರಿಂದ 5710 ಸೀಟುಗಳು ಸೇರ್ಪಡೆಯಾಗಿವೆ. ಒಟ್ಟು ಸಾಮರ್ಥ್ಯವು 49.8% ರಷ್ಟು ಹೆಚ್ಚಾಗಿದೆ.

   ● ಇಲ್ಲಿಯವರೆಗೆ 226 ಕೋರ್ಸ್ ಗಳನ್ನು ಸೇರಿಸಲಾಗಿದೆ (153-ಸಿಟಿಎಸ್, 55-ಸಿಐಟಿಎಸ್, 14- ಎಸ್ ಟಿಟಿ ಮತ್ತು 4 ಅಡ್ವಾನ್ಸ್ಡ್ ಡಿಪ್ಲೊಮಾ). 2014 ರಿಂದ 61 ಕೋರ್ಸ್ ಗಳನ್ನು ಸೇರಿಸಲಾಗಿದೆ.

ಅಲ್ಪಾವಧಿಯ ತರಬೇತಿ

● ಸ್ಕಿಲ್ ಇಂಡಿಯಾ ಮಿಷನ್ ಅಡಿಯಲ್ಲಿ, ಎಂಎಸ್ಡಿಇ ತನ್ನ ಪ್ರಮುಖ ಯೋಜನೆಯಾದ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ) ಯನ್ನು 2015ರ ಜುಲೈ 15ರಂದು ಪ್ರಾರಂಭಿಸಿತು.

● ಪಿಎಂಕೆವಿವೈ ಭಾರತೀಯ ಯುವಜನರಿಗೆ ಅಲ್ಪಾವಧಿಯ ಕೌಶಲ್ಯ ಅವಕಾಶಗಳನ್ನು ಪ್ರವೇಶಿಸಲು ಮಾರ್ಗಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಉದ್ಯೋಗದಲ್ಲಿರುವ / ಕೆಲಸ ಮಾಡುತ್ತಿರುವ ಮತ್ತು ಅಭ್ಯರ್ಥಿಯು ಗಳಿಸಿದ ಕೌಶಲ್ಯಗಳನ್ನು ಪ್ರಮಾಣೀಕರಿಸುವುದಕ್ಕೆ   ಪೂರ್ವ ಕಲಿಕೆಯ ಗುರುತಿಸುವಿಕೆ (ಆರ್ಪಿಎಲ್) ಯನ್ನು ಪರಿಚಯಿಸಲಾಯಿತು. ಸಂಬಂಧಿತ ಕ್ಷೇತ್ರಗಳಲ್ಲಿನ ಕೈಗಾರಿಕೆಗಳಿಂದ ಬೇಡಿಕೆಯ ಆಧಾರದ ಮೇಲೆ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು (ಎನ್ಎಸ್ಕ್ಯೂಎಫ್) –ಸಂಲಗ್ನ ಅಥವಾ ಅದರೊಂದಿಗೆ ಸರಿಹೊಂದುವ ಉದ್ಯೋಗಗಳಲ್ಲಿ ಗುಣಮಟ್ಟದ ತರಬೇತಿ ನೀಡುವ ಮೂಲಕ ದೇಶಾದ್ಯಂತ ಅಭ್ಯರ್ಥಿಗಳ ಉದ್ಯೋಗಾರ್ಹತೆಯನ್ನು ಸುಧಾರಿಸುವುದು ಯೋಜನೆಯ ಗಮನವಾಗಿದೆ.

2015 ರಿಂದ, 2023 ರ ಡಿಸೆಂಬರ್ 13 ರವರೆಗೆ ಸ್ಕಿಲ್ ಇಂಡಿಯಾ ಡಿಜಿಟಲ್ ಪ್ರಕಾರ ಪಿಎಂಕೆವಿವೈ ಅಡಿಯಲ್ಲಿ ಸುಮಾರು 1.40 ಕೋಟಿ ಅಭ್ಯರ್ಥಿಗಳಿಗೆ ತರಬೇತಿ / ಉದ್ಯೋಗ ಆಧಾರಿತ ಪುನರ್ಮನನ ತರಬೇತಿ ನೀಡಲಾಗಿದೆ.

  • ಅಲ್ಪಾವಧಿಯ ತರಬೇತಿಯ ಅಡಿಯಲ್ಲಿ, ಉದ್ಯೋಗವನ್ನು ಪ್ರೋತ್ಸಾಹಿಸಲಾಯಿತು, 42% ಅಭ್ಯರ್ಥಿಗಳನ್ನು ದೇಶಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸೇರಿಸಲಾಯಿತು. (ಅಂದರೆ, ಎಸ್ ಟಿಟಿಯಲ್ಲಿ ಪ್ರಮಾಣೀಕರಿಸಿದ 57.42 ಲಕ್ಷ ಅಭ್ಯರ್ಥಿಗಳಲ್ಲಿ 24.39 ಲಕ್ಷ ಅಭ್ಯರ್ಥಿಗಳನ್ನು ಕೆಲಸಕ್ಕೆ ಸೇರಿಸಲಾಗಿದೆ).
  • ಪಿಎಂಕೆವಿವೈ 3.0 ಅಡಿಯಲ್ಲಿ ಕೋವಿಡ್ ಯೋಧರಿಗೆ ಕಸ್ಟಮೈಸ್ ಮಾಡಿದ ಕ್ರ್ಯಾಶ್ ಕೋರ್ಸ್ ಕಾರ್ಯಕ್ರಮದ ಮೂಲಕ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಕ್ಷೇತ್ರಕ್ಕೆ ತಕ್ಷಣದ ಬೆಂಬಲ ನೀಡುವುದಕ್ಕೆ 1.20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಯಿತು, ಅದರಲ್ಲಿ 83,000+ ಅಭ್ಯರ್ಥಿಗಳು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ದಾದಿಯರ ಹೊರೆಯನ್ನು ತಗ್ಗಿಸಲು  ಮತ್ತು ಅವರ ಕೆಲಸ ಸರಾಗಗೊಳಿಸಲು ಅನುವಾಗುವಂತೆ ಸಂಬಂಧಿತ ಆರೋಗ್ಯ ಕ್ಷೇತ್ರದ ಉದ್ಯೋಗಗಳ  ಅಡಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿದ್ದಾರೆ.
  •  ಪಿಎಂಕೆವಿವೈ 4.0 (ಹಣಕಾಸು ವರ್ಷ 2023-26) ಅನ್ನು ಕಳೆದ 2023-24ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಯಿತು. ಲಕ್ಷಾಂತರ ಯುವಜನರನ್ನು ಕೌಶಲ್ಯಯುಕ್ತರನ್ನಾಗಿಸುವ  ಹಾಗು ಇಂಡಸ್ಟ್ರಿ 4.0ಕ್ಕೆ ಸಂಬಂಧಿಸಿ  ಕೃತಕ ಬುದ್ಧಿಮತ್ತೆ, (ಎಐ), ರೊಬೊಟಿಕ್ಸ್, ಮೆಕಾಟ್ರಾನಿಕ್ಸ್, ಐಒಟಿ ಮತ್ತು ಡ್ರೋನ್ಗಳ ಕೋರ್ಸ್ಗಳಲ್ಲಿ ತರಬೇತಿ ನೀಡುವ ಗುರಿಯನ್ನು ಇದು ಹೊಂದಿದೆ. ಪಿಎಂಕೆವಿವೈ 4.0 ಇಎಫ್ಸಿಯ ಅನುಮೋದನೆಯನ್ನು ಪಡೆದಿದೆ ಮತ್ತು ಅದನ್ನು ಕ್ಯಾಬಿನೆಟ್ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಆದಾಗ್ಯೂ, ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ವೆಚ್ಚ ಹಣಕಾಸು ಸಮಿತಿ (ಇಎಫ್ಸಿ) ಜ್ಞಾಪಕ ಪತ್ರದ ಆಧಾರದ ಮೇಲೆ ಪಿಎಂಕೆವಿವೈ 4.0 ಅಡಿಯಲ್ಲಿ ಹಣವನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಹಾಗು ಯೋಜನೆಗೆ ಬೇಗ ಸಂಪುಟದ ಅನುಮೋದನೆ ಪಡೆಯುವ ಶರತ್ತನ್ನು ಹಾಕಿದೆ.
  •  2023 ರ ಡಿಸೆಂಬರ್ 13,ರವರೆಗೆ, ಒಟ್ಟು 6,62,750 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ, ಅದರಲ್ಲಿ 3,42,500 ಅಭ್ಯರ್ಥಿಗಳು ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
  •  ಪಿಎಂಕೆವಿವೈ 4.0 ರ ವಿಸ್ತಾರ ವಿನ್ಯಾಸ ತತ್ವಗಳು ಹೀಗಿವೆ:

i. ಗರಿಷ್ಠ  ಉದ್ಯೋಗ ಸಾಧ್ಯತೆಯ ಮತ್ತು 210 ಗಂಟೆಗಳವರೆಗೆ ಅವಧಿಯನ್ನು ಹೊಂದಿರುವ ಕಸ್ಟಮೈಸ್ ಮಾಡಿದ ಕೋರ್ಸ್ ಗಳು.

ii. ವೃತ್ತಿಶಿಕ್ಷಣ ಮತ್ತು ಶಿಕ್ಷಣದ ಧಾರೆಗಳನ್ನು ಸಂಯೋಜಿಸಿ ಮತ್ತು ಗುಣಮಟ್ಟದ ತರಬೇತಿ ಪೂರೈಕೆದಾರರ ಜಾಲವನ್ನು ಹೆಚ್ಚಿಸಲು ಶಿಕ್ಷಣ ಸಂಸ್ಥೆಗಳ ನಡುವಣ ಸಹಭಾಗಿತ್ವವನ್ನು ಹೆಚ್ಚಿಸಿ ಕೌಶಲ್ಯ ತಾಣಗಳು/ಕೇಂದ್ರಗಳೆಂಬ ವ್ಯವಸ್ಥೆಯನ್ನು ರೂಪಿಸುವ ಗುರಿಯನ್ನು  ಯೋಜನೆಯು ಹೊಂದಿದೆ.

iii. ಪಿಎಂಕೆವಿವೈ ಅಡಿಯಲ್ಲಿ ಅಲ್ಪಾವಧಿಯ ತರಬೇತಿ ನೀಡಲು ಅಗತ್ಯ ಮೂಲಸೌಕರ್ಯಗಳೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಶಾಲೆಗಳು, ಉನ್ನತ ಶಿಕ್ಷಣ ಸಂಸ್ಥೆಗಳು (ಎಚ್ಇಐ), ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ (ಕೌಶಲ್ಯ ವಿಶ್ವವಿದ್ಯಾಲಯಗಳು ಸೇರಿದಂತೆ) ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸಬಹುದು.

iv. ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ಪಿಎಂಕೆಕೆಗಳು, ಐಟಿಐಗಳು, ಜೆಎಸ್ಎಸ್ ಗಳು, ಐಐಟಿಗಳು, ಐಐಎಂಗಳು ಮತ್ತು ಇತರ ಸಂಸ್ಥೆಗಳಲ್ಲಿಯ ಸ್ಕಿಲ್ ಇಂಡಿಯಾ ಕೇಂದ್ರಗಳ ಮೂಲಕ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.

v. ಇಂಡಸ್ಟ್ರಿ 4.0, ವೆಬ್ 3.0, ಕೃತಕ ಬುದ್ಧಿಮತ್ತೆ/ ಯಂತ್ರ ಕಲಿಕೆ (ಎಐ/ಎಂಎಲ್ ),  ಎಆರ್/ವಿಆರ್, ಡ್ರೋನ್ ಟೆಕ್ನಾಲಜಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ  ಭವಿಷ್ಯದ/ಹೊಸ ಯುಗದ ಉದ್ಯೋಗ ಪಾತ್ರಗಳಲ್ಲಿ ಕೌಶಲ್ಯಕ್ಕೆ ಒತ್ತು ನೀಡಲಾಗಿದೆ.

vi. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ ಹೆಚ್ಚಾಗಿ ನಕ್ಷೀಕರಿಸಲಾದ (ಮ್ಯಾಪ್ ಮಾಡಲಾದ)  ಉದ್ಯಮದ ಬೇಡಿಕೆಗೆ ಅನುಗುಣವಾಗಿ ಕೌಶಲ್ಯ ಕೋರ್ಸ್ ಗಳನ್ನು ಆಯ್ಕೆ ಮಾಡಲಾಗುವುದು.

vii. ಕೃಷಿ, ಕರಕುಶಲ ಮತ್ತು ಉನ್ನತ ಮಟ್ಟದ ಕೌಶಲ್ಯ ಬೇಡುವ ಕೋರ್ಸ್ ಗಳಲ್ಲಿ ಗುರುತಿಸಲಾದ ಪ್ರದೇಶಗಳು ಮತ್ತು ಗುಂಪುಗಳಿಗೆ ವಿಶೇಷ ಯೋಜನೆಗಳು.

viii. ಸ್ಕಿಲ್ ಇಂಡಿಯಾ ಡಿಜಿಟಲ್ ದಾಖಲಾತಿಗೆ ಸಂಬಂಧಿಸಿ ಏಕ-ಬಿಂದು/ಏಕ ಗವಾಕ್ಷಿ ವ್ಯವಸ್ಥೆಯಾಗಿದ್ದು,  ಅಭ್ಯರ್ಥಿಯ ತರಬೇತಿ ಜೀವಾವಧಿಗೆ ಸಂಬಂಧಿಸಿ ವೇದಿಕೆಯನ್ನು ಒದಗಿಸುವಂತಿರುತ್ತದೆ.

ಪಿಎಂ ವಿಶ್ವಕರ್ಮ ಯೋಜನೆ

ದೇಶದ ಕುಶಲಕರ್ಮಿಗಳನ್ನು ಅವರ ಈಗಿನ ಸ್ಥಿತಿಯಿಂದ ಮೇಲೆತ್ತುವುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆದ್ಯತೆಯಾಗಿದೆ. ವಿಶ್ವಕರ್ಮರ ನಿರ್ಣಾಯಕ ಪಾತ್ರವನ್ನು ಗುರುತಿಸಿದ ಅವರು, ಅವರ ಕೆಲಸದ ಗುಣಮಟ್ಟ ಮತ್ತು ಲಭ್ಯತೆಯನ್ನು ಹೆಚ್ಚಿಸಲು 13,000 ಕೋಟಿ ರೂ.ಗಳ 'ಪಿಎಂ ವಿಶ್ವಕರ್ಮ ಯೋಜನೆ'ಯನ್ನು ಪ್ರಾರಂಭಿಸಿದರು. ಈ ಉಪಕ್ರಮವು ಕುಶಲಕರ್ಮಿಗಳನ್ನು ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸುತ್ತದೆ, ಆಧುನಿಕ ಮಾರುಕಟ್ಟೆಯಲ್ಲಿ ಕೌಶಲ್ಯ ವರ್ಧನೆಗೆ ಸಮಗ್ರ ಬೆಂಬಲವನ್ನು ಒದಗಿಸುತ್ತ ಅವರನ್ನು ದೇಶೀಯ ಮತ್ತು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಬೆಸೆಯುವ/ ಸಂಯೋಜಿಸುವ ಗುರಿಯನ್ನು ಹೊಂದಿದೆ.

ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ, ಔಪಚಾರಿಕ ತರಬೇತಿ, ಸಾಂಪ್ರದಾಯಿಕ ಕೌಶಲ್ಯಗಳ  ಆಧುನೀಕರಣ, ಆರ್ಥಿಕ ನೆರವು ನೀಡಿಕೆ ಮತ್ತು ಮಾರುಕಟ್ಟೆ ಸಂಪರ್ಕಕ್ಕೆ ಅವಕಾಶಗಳನ್ನು ಒದಗಿಸಿಕೊಡಲು ಸರ್ಕಾರ ಉದ್ದೇಶಿಸಿದೆ, ವೇಗವಾಗಿ ಬದಲಾಗುತ್ತಿರುವ ಆರ್ಥಿಕ ಭೂದೃಶ್ಯದಲ್ಲಿ ಅಭಿವೃದ್ಧಿ ಹೊಂದಲು ಕರಕುಶಲಕರ್ಮಿಗಳಿಗೆ ಇದು ಅನುವು ಮಾಡಿಕೊಡುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ತಮ್ಮ ಅಮೂಲ್ಯ ಕರಕುಶಲತೆಯನ್ನು ಸಂರಕ್ಷಿಸುತ್ತದೆ. ಅಂತಿಮವಾಗಿ, ಈ ಯೋಜನೆಯು ಕುಶಲಕರ್ಮಿಗಳ ಸ್ಥಾನಮಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ, ಅವರಿಗೆ ಸುಸ್ಥಿರ ಜೀವನೋಪಾಯ ಮತ್ತು ಬೆಳವಣಿಗೆಗೆ ಅಗತ್ಯವಾದ ಸಾಧನಗಳು ಮತ್ತು ಅವಕಾಶಗಳನ್ನು ಒದಗಿಸುತ್ತದೆ.

ಪ್ರಸ್ತುತ, ಈ ಕೆಳಗಿನ 18 ಕರಕುಶಲಕಲೆಗಳು/ಕರಕುಶಲಕರ್ಮಿಗಳು ಈ ಯೋಜನೆಯ ಭಾಗವಾಗಿದ್ದಾರೆ:

    1. ಬಡಗಿ (ಸುತಾರ್); (ii) ದೋಣಿ ತಯಾರಕ; (iii) ಶಸ್ತ್ರ ತಯಾರಕ; (iv) ಕಮ್ಮಾರ (ಲೋಹರ್); (v) ಸುತ್ತಿಗೆ ಮತ್ತು ಟೂಲ್ ಕಿಟ್ ತಯಾರಕ; (vi) ಲಾಕ್ ಸ್ಮಿತ್; (ಬೀಗ ತಯಾರಕರು)  (vii) ಚಿನಿವಾರರು/ಚಿನ್ನದ ಕೆಲಸ ಮಾಡುವವರು/ಗೋಲ್ಡ್ ಸ್ಮಿತ್ (ಸೋನಾರ್); (viii) ಕುಂಬಾರ (ಕುಮ್ಹಾರ್); (ix) ಶಿಲ್ಪಿ (ಮೂರ್ತಿಕರ್, ಕಲ್ಲಿನ ಕೆತ್ತನೆಗಾರ), ಕಲ್ಲು ಒಡೆಯುವವರು; (x) ಚಮ್ಮಾರ (ಚಾರ್ಮ್ಕರ್)/ ಶೂಗಳನ್ನು / ಪಾದರಕ್ಷೆಗಳನ್ನು ತಯಾರಿಸುವ  ಕುಶಲಕರ್ಮಿ; (xi) ಮೇಸ್ತ್ರಿ/ಮೇಸನ್ (ರಾಜ್ಮಿಸ್ತ್ರಿ); (xii) ಬುಟ್ಟಿ / ಚಾಪೆ / ಪೊರಕೆ ತಯಾರಕ / ನಾರು ನೇಕಾರ; (xiii) ಗೊಂಬೆ ಮತ್ತು ಆಟಿಕೆ ತಯಾರಕ (ಸಾಂಪ್ರದಾಯಿಕ); (xiv) ಕ್ಷೌರಿಕ (ನಾಯ್); (xv) ಹಾರ ತಯಾರಕರು/ ಗಾರ್ಲ್ಯಾಂಡ್ ಮೇಕರ್ (ಮಲಕಾರ್); (xvi) ಧೋಬಿ (ಧೋಬಿ); (xvii) ಟೈಲರ್ (ದರ್ಜಿ); ಮತ್ತು (xviii) ಮೀನು ಬಲೆ ತಯಾರಕರು (ಫಿಶಿಂಗ್ ನೆಟ್ ಮೇಕರ್.)
  • ಪಿಎಂ ವಿಶ್ವಕರ್ಮ ಯೋಜನೆಯಡಿ, ವಿಶ್ವಕರ್ಮರಿಗೆ ಕೆಳಗಿನ ಸೌಲಭ್ಯಗಳನ್ನು/ಪ್ರಯೋಜನಗಳನ್ನು ನೀಡಲಾಗುವುದು:

• ಮಾನ್ಯತೆ: ಕುಶಲಕರ್ಮಿಗಳು ಕರಕುಶಲತೆಯಲ್ಲಿ ಹೊಂದಿರುವ ಪರಿಣತಿಯನ್ನು ಗುಮನಿಸಿ ಅವರಿಗೆ ಪಿಎಂ ವಿಶ್ವಕರ್ಮ ಪ್ರಮಾಣಪತ್ರ ಮತ್ತು ಗುರುತಿನ ಚೀಟಿ ಲಭಿಸುತ್ತದೆ.

• ಕೆಲಸ ಮಾಡುವ ಸಾಧನೋಪಕರಣಗಳ ಕಿಟ್ ಗೆ ಪ್ರೋತ್ಸಾಧನ (ಟೂಲ್ಕಿಟ್ ಪ್ರೋತ್ಸಾಹಕ): ಕೌಶಲ್ಯ ಮೌಲ್ಯಮಾಪನದ ನಂತರ, ಫಲಾನುಭವಿಗಳು ತಮ್ಮ ವ್ಯಾಪಾರಕ್ಕೆ ನಿರ್ದಿಷ್ಟವಾದ ಆಧುನೀಕರಿಸಿದ ಉಪಕರಣಗಳೊಂದಿಗೆ ವಿನ್ಯಾಸಗೊಳಿಸಲಾದ ಸಾಧನೋಪಕರಣಗಳಿಗಾಗಿ 15,000 ರೂ.ಗಳ ಟೂಲ್ಕಿಟ್ ಪ್ರೋತ್ಸಾಹವನ್ನು ಪಡೆಯುತ್ತಾರೆ.

• ಕೌಶಲ್ಯ ವರ್ಧನೆ:

ಮೂಲ ತರಬೇತಿ: ವಿಶ್ವಕರ್ಮರು ದಿನಕ್ಕೆ ರೂ. 500 ಸ್ಟೈಫಂಡ್ ನೊಂದಿಗೆ 5-7 ದಿನಗಳ ಮೂಲ ಕೌಶಲ್ಯ ತರಬೇತಿಯನ್ನು ಪಡೆಯುತ್ತಾರೆ. ಈ ಸಮಗ್ರ ತರಬೇತಿಯು ಆಧುನಿಕ ಸಾಧನಗಳು, ಡಿಜಿಟಲ್ ಮತ್ತು ಹಣಕಾಸು ಕೌಶಲ್ಯಗಳು, ಉದ್ಯಮಶೀಲತೆ, ಸಾಲ ಬೆಂಬಲ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ತಂತ್ರಗಳಿಗೆ ಒಡ್ಡಿಕೊಳ್ಳುವುದನ್ನು ಒಳಗೊಂಡಿದೆ.

 ಸುಧಾರಿತ ಆಧುನಿಕ ತರಬೇತಿ: ಮೂಲ ತರಬೇತಿಯ ನಂತರ, ಫಲಾನುಭವಿಗಳು ದಿನಕ್ಕೆ ರೂ.  500 ಸ್ಟೈಫಂಡ್ ನೊಂದಿಗೆ 15 ದಿನಗಳವರೆಗೆ ಸುಧಾರಿತ ಕೌಶಲ್ಯ ತರಬೇತಿಯನ್ನು ಮುಂದುವರಿಸಬಹುದು. ಈ ಸುಧಾರಿತ ತರಬೇತಿಯು ಇತ್ತೀಚಿನ ತಂತ್ರಜ್ಞಾನಗಳು, ವಿನ್ಯಾಸ ಅಂಶಗಳನ್ನು ಆಳವಾಗಿ ತಿಳಿಸಿಕೊಡುತ್ತದೆ ಮತ್ತು ಉದ್ಯಮ ಪಾಲುದಾರರೊಂದಿಗೆ ಸಂಪರ್ಕವನ್ನು ಬೆಳೆಸುತ್ತದೆ, ಸ್ವಯಂ ಉದ್ಯೋಗದಿಂದ ಉದ್ಯಮಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ  ಪರಿವರ್ತನೆಯನ್ನು ಶಕ್ತಗೊಳಿಸುತ್ತದೆ.

ಸಾಲ ಬೆಂಬಲ:

 ಮೂಲ ಕೌಶಲ್ಯ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಕುಶಲಕರ್ಮಿಗಳು 18 ತಿಂಗಳ ಮರುಪಾವತಿ ಅವಧಿಯೊಂದಿಗೆ 1 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ (ಆಧಾರರಹಿತ ) ಸಾಲಕ್ಕೆ ಅರ್ಹರಾಗುತ್ತಾರೆ.

 ಸ್ಟ್ಯಾಂಡರ್ಡ್ ಲೋನ್ ಖಾತೆಯನ್ನು ನಿರ್ವಹಿಸುವ, ಡಿಜಿಟಲ್ ವಹಿವಾಟುಗಳಲ್ಲಿ ತೊಡಗಿರುವ ಅಥವಾ ಸುಧಾರಿತ ಕೌಶಲ್ಯ ತರಬೇತಿ ಪಡೆದ ನುರಿತ ಫಲಾನುಭವಿಗಳು ಎರಡನೇ ಕಂತಿನ ಸಾಲವನ್ನು 2 ಲಕ್ಷ ರೂ.ಗಳವರೆಗೆ ಪಡೆಯಬಹುದು. ಆದರೆ, ಈ  2 ಲಕ್ಷ ರೂ.ಗಳನ್ನು ಪಡೆಯುವ ಮೊದಲು ಅವರು ಆರಂಭಿಕ 1 ಲಕ್ಷ ರೂ.ಗಳ ಸಾಲವನ್ನು ಮರುಪಾವತಿಸಿರಬೇಕು.

 ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ: ಫಲಾನುಭವಿಗಳು ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹಧನ ಪಡೆಯಲಿದ್ದು, ಪ್ರತಿ ವಹಿವಾಟಿಗೆ 1 ರೂ.ನಂತೆ ಮಾಸಿಕ 100 ವಹಿವಾಟುಗಳವರೆಗೆ  ಪ್ರೋತ್ಸಾಹಧನ ಪಡೆಯಬಹುದು.

 ಮಾರುಕಟ್ಟೆ ಸಹಾಯ:  ಕುಶಲಕರ್ಮಿಗಳು ಮಾರುಕಟ್ಟೆಗೆ  ತಲುಪಲು ಅನುಕೂಲವಾಗುವಂತೆ ಗುಣಮಟ್ಟದ ಪ್ರಮಾಣೀಕರಣ, ಬ್ರ್ಯಾಂಡಿಂಗ್, ಇ-ಕಾಮರ್ಸ್ ಮತ್ತು ಜಿಇಎಂ ಪ್ಲಾಟ್ಫಾರ್ಮ್ ಪ್ರವೇಶ (ಆನ್ಬೋರ್ಡಿಂಗ್), ಜಾಹೀರಾತು ಮತ್ತು ಪ್ರಚಾರಕ್ಕೆ  ಬೆಂಬಲವನ್ನು ವಿಸ್ತರಿಸಲಾಗುವುದು.

ಸ್ಕಿಲ್ ಇಂಡಿಯಾ ಡಿಜಿಟಲ್ ಆರಂಭ

ಸ್ಕಿಲ್ ಇಂಡಿಯಾ ಡಿಜಿಟಲ್ (ಎಸ್ಐಡಿ) ಎಂಬುದು ಕೌಶಲ್ಯ ಮತ್ತು ಉದ್ಯೋಗಗಳನ್ನು ಕೇಂದ್ರೀಕರಿಸಿದ ನವೀನ ಡಿಜಿಟಲ್ ವೇದಿಕೆಯಾಗಿದ್ದು, ಇಂಡಿಯಾ ಸ್ಟ್ಯಾಕ್ ಗ್ಲೋಬಲ್ ನ ದೃಢವಾದ ಚೌಕಟ್ಟನ್ನು ಬಳಸಿಕೊಳ್ಳುತ್ತದೆ, ಉನ್ನತ ದರ್ಜೆಯ ಭದ್ರತೆ ಮತ್ತು ವ್ಯಾಪ್ತಿಯಾದ ಸ್ಕೇಲೆಬಿಲಿಟಿಯನ್ನು ಖಚಿತಪಡಿಸುತ್ತದೆ. ಈ ಸಮಗ್ರ ವೇದಿಕೆಯು ವಿವಿಧ ಪ್ರಮುಖ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಮೊದಲನೆಯದಾಗಿ, ಇದು ಸುಧಾರಿತ ಎಐ / ಎಂಎಲ್ ತಂತ್ರಜ್ಞಾನದ ಮೂಲಕ ಅನ್ವೇಷಣೆ ಮತ್ತು ಶಿಫಾರಸುಗಳನ್ನು ಸುಗಮಗೊಳಿಸುತ್ತದೆ, ಸೂಕ್ತ ಕೌಶಲ್ಯಗಳ ಸೆಟ್ ಗಳನ್ನು (ಕೌಶಲ್ಯಗಳ ಗುಂಪನ್ನು) ಗುರುತಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಎರಡನೆಯದಾಗಿ, ಇದು ಡಿಜಿಟಲ್ ಉದ್ಯೋಗ ವಿನಿಮಯವನ್ನು ಆಯೋಜಿಸುತ್ತದೆ, ಉದ್ಯೋಗಾಕಾಂಕ್ಷಿಗಳನ್ನು ಸಂಬಂಧಿತ ಅವಕಾಶಗಳೊಂದಿಗೆ ಅಡೆ ತಡೆರಹಿತವಾಗಿ ಜೋಡಿಸುತ್ತದೆ/ ಸಂಪರ್ಕಿಸುತ್ತದೆ.

ಮತ್ತೊಂದು ಪ್ರಮುಖ ಅಂಶವೆಂದರೆ ಡಿಜಿಟಲ್ ವ್ಯವಸ್ಥೆಯಡಿ ಪರಿಶೀಲಿಸಬಹುದಾದ ರುಜುವಾತುಗಳನ್ನು ಒದಗಿಸುವುದು, ಕೌಶಲ್ಯ ಪ್ರಮಾಣೀಕರಣಗಳ ಸತ್ಯಾಸತ್ಯತೆಯನ್ನು ಖಚಿತಪಡಿಸುವುದು ಇದರಲ್ಲಿ ಸೇರಿದೆ. ಇದಲ್ಲದೆ, ಸ್ಕಿಲ್ ಇಂಡಿಯಾ ಡಿಜಿಟಲ್ ಕೌಶಲ್ಯ ಯೋಜನೆಗಳು, ಇ-ಶ್ರಮ್ / ಇಪಿಎಫ್ಒ / ಎನ್ಸಿಎಸ್, ಶಿಕ್ಷಣ, ಉದ್ಯಮ್, ಆಧಾರ್, ಡಿಜಿಲಾಕರ್, ಗತಿ-ಶಕ್ತಿ, ಉಮಾಂಗ್, ಅಗ್ರಿಸ್ಟಾಕ್, ಪಿಎಲ್ಐ ಯೋಜನೆಗಳು, ಒಡಿಒಪಿ ಮತ್ತು ಆರ್ಥಿಕ ಸೂಚ್ಯಂಕಗಳಾದ ಜಿಎಸ್ಟಿಎನ್, ಇಪಿಎಫ್ಒ ಪ್ರವೃತ್ತಿಗಳು, ಆಮದು / ರಫ್ತು ಪ್ರವೃತ್ತಿಗಳು ಸೇರಿದಂತೆ ವಿವಿಧ ಸರ್ಕಾರಿ ಉಪಕ್ರಮಗಳನ್ನು ಸಂಯೋಜಿಸುವ ಮೂಲಕ ಅದು ಒಗ್ಗೂಡುವಿಕೆಯನ್ನು/ಏಕೀಭವನವನ್ನು  ಉತ್ತೇಜಿಸುತ್ತದೆ. ಈ ಸಂಯೋಜನೆಯು ಕೌಶಲ್ಯ, ಸಾಲ ಮತ್ತು ಮಾರುಕಟ್ಟೆಗಳಿಗೆ ಪ್ರವೇಶವನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಸುಗಮಗೊಳಿಸುತ್ತದೆ.

ವೇದಿಕೆಯು ವ್ಯಕ್ತಿಗಳಿಗೆ ಡಿಜಿಟಲ್ ಸ್ಕಿಲ್ ಕಾರ್ಡ್ ಸಹ ಒದಗಿಸುತ್ತದೆ, ಯಾವುದೇ ಸಮಯದಲ್ಲಿ, ಎಲ್ಲಿ ಬೇಕಾದರೂ ಲಭ್ಯವಾಗುವಂತಹ  ಜೀವನಪರ್ಯಂತ ಕಲಿಕೆಯ ಅವಕಾಶಗಳನ್ನು ಉತ್ತೇಜಿಸುತ್ತದೆ. ನಮ್ಯತೆಗೆ ಒತ್ತು ನೀಡಿ, ಇದು ಆನ್ಲೈನ್ / ಬ್ಲೆಂಡೆಡ್ ಸ್ಕಿಲಿಂಗ್, ಎಆರ್ / ವಿಆರ್ / ಎಕ್ಸ್ಆರ್ ತಂತ್ರಜ್ಞಾನಗಳು, ಮಲ್ಟಿಮೀಡಿಯಾ ಕಲಿಕೆ ಮತ್ತು ಆನ್ಲೈನ್ ಮೌಲ್ಯಮಾಪನಗಳನ್ನು ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ, ಇದು ಸಂವಾದಾತ್ಮಕ ನಕ್ಷೆ ಇಂಟರ್ಫೇಸ್ ಮೂಲಕ ಕೋರ್ಸ್ಗಳು ಮತ್ತು ಕೇಂದ್ರಗಳ (ಕೌಶಲ್ಯ ಕೇಂದ್ರಗಳು / ಐಟಿಐಗಳು / ಪಿಎಂಕೆಕೆಗಳು ಇತ್ಯಾದಿ) ಡಿಜಿಟಲ್ ಅನ್ವೇಷಣೆಯನ್ನು ಸುಗಮಗೊಳಿಸುತ್ತದೆ, ಕಲಿಕೆಯ ಸಂಪನ್ಮೂಲಗಳಿಗೆ ಅನುಕೂಲಕರ, ಸುಲಲಿತ  ಪ್ರವೇಶವನ್ನು ಖಚಿತಪಡಿಸುತ್ತದೆ.

1. ಎಐ / ಎಂಎಲ್ ಅನ್ವೇಷಣೆ ಮತ್ತು ಶಿಫಾರಸುಗಳು: (ಉದ್ಯೋಗಗಳು, ಅಪ್ರೆಂಟಿಸ್ಶಿಪ್, ಕೌಶಲ್ಯ ಕೋರ್ಸ್ಗಳು, ಕೌಶಲ್ಯ ಕೇಂದ್ರಗಳು): ವೃತ್ತಿ ಮತ್ತು ಕಲಿಕೆಯ ಮಾರ್ಗಗಳು, ಕೋರ್ಸ್ಗಳು / ಕೇಂದ್ರಗಳು / ತರಬೇತುದಾರರ ರೇಟಿಂಗ್

2. ಡಿಜಿಟಲ್ ಉದ್ಯೋಗ ವಿನಿಮಯ (ಉದ್ಯೋಗಗಳೊಂದಿಗೆ ಕೌಶಲ್ಯಗಳ ಮ್ಯಾಪಿಂಗ್: ಅಂತರರಾಷ್ಟ್ರೀಯ ಮತ್ತು ದೇಶೀಯ ಉದ್ಯೋಗ ಕ್ರೋಢೀಕರಣ

3. ಡಿಜಿಟಲ್ ಆಗಿ ಪರಿಶೀಲಿಸಬಹುದಾದ ರುಜುವಾತುಗಳು (ಗುರುತು, ಕೌಶಲ್ಯಗಳು, ಶಿಕ್ಷಣ, ಕೆಲಸದ ಅನುಭವ): ಆಧಾರ್ ಸಕ್ರಿಯಗೊಳಿಸಿದ ಮುಖ / ಬಯೋಮೆಟ್ರಿಕ್ ನೋಂದಣಿ / ಹಾಜರಾತಿ / ಮೌಲ್ಯಮಾಪನ / ಪ್ರಮಾಣೀಕರಣ / ದೃಢೀಕರಣ

4. ಡಿಜಿಟಲ್ ಸ್ಕಿಲ್ ಕಾರ್ಡ್ (ಡೈನಾಮಿಕ್ ಮತ್ತು ವಿಶ್ವಾಸಾರ್ಹ ಕ್ಯೂಆರ್ ಕೋಡ್): ಎಸ್ಐಡಿ ಅಪ್ಲಿಕೇಶನ್, ಎಸ್ಐಡಿ ಚಾಟ್ಬಾಟ್, ಇಮೇಲ್, ಎಸ್ಎಂಎಸ್, ಡಿಜಿಲಾಕರ್ಗೆ ಪೋರ್ಟಬಲ್ ಮಾಡಬಹುದು, 01.25 ಸಿಆರ್ ಕಾರ್ಡ್ಗಗಳು  ಡಿಜಿಟಲ್ ವಿತರಣೆಗೆ  ಸಿದ್ಧವಾಗಿವೆ

5. ಕನ್ವರ್ಜೆನ್ಸ್ (ಸಂಪೂರ್ಣ ಸರ್ಕಾರ): ಎಲ್ಲಾ ಕೌಶಲ್ಯ ಯೋಜನೆಗಳು, ಇಶ್ರಮ್ / ಇಪಿಎಫ್ಒ / ಎನ್ಸಿಎಸ್, ಶಿಕ್ಷಣ, ಉದ್ಯೋಗ್, ಆಧಾರ್, ಡಿಜಿಲಾಕರ್, ಉಮಾಂಗ್, ಅಗ್ರಿಸ್ಟಾಕ್, ಪಿಎಲ್ಐ ಯೋಜನೆಗಳು, ಒಡಿಒಪಿ, ಗತಿಶಕ್ತಿ, ಉನ್ನತ ಆರ್ಥಿಕ ಸೂಚಕಗಳಾದ  ಜಿಎಸ್ಟಿಎನ್, ಇಪಿಎಫ್ಒ ಪ್ರವೃತ್ತಿಗಳು, ಆಮದು / ರಫ್ತು ಪ್ರವೃತ್ತಿಗಳು  -ಇವೆಲ್ಲವೂ ಏಕೀಕೃತಗೊಂಡಿವೆ.

6. ಉದ್ಯಮಶೀಲತೆ (ಏಕವ್ಯಕ್ತಿ, ನ್ಯಾನೊ-ಮೈಕ್ರೋ): ಕೌಶಲ್ಯದ ಲಭ್ಯತೆ, ಸಾಲದ ಲಭ್ಯತೆ, ಮಾರುಕಟ್ಟೆ ಲಭ್ಯತೆ.

 7. ಆಜೀವ ಕಲಿಕೆ (ಶಿಕ್ಷಣ / ಕೌಶಲ್ಯ / ಕೌಶಲ್ಯವನ್ನು ಮೇಲ್ದರ್ಜೆಗೇರಿಸುವಿಕೆ / ಮರು-ಕೌಶಲ್ಯೀಕರಣ): ಸಾಮಾನ್ಯ ಶಿಕ್ಷಣ / ಕೌಶಲ್ಯ ನೋಂದಣಿ, ರಾಷ್ಟ್ರೀಯ ಚೌಕಟ್ಟು, ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್, ಅಪ್ರೆಂಟಿಸ್ಶಿಪ್, ಸರ್ಕಾರಿ / ಖಾಸಗಿ ಅನುದಾನಿತ ಕೌಶಲ್ಯ ಕೋರ್ಸ್ಗಳು, ಸಾಮಾಜಿಕ ಸ್ಟಾಕ್ ಎಕ್ಸ್ಚೇಂಜ್ ಪ್ರೋಗ್ರಾಂ, ಕ್ರೆಡಿಟ್ಸ್ ಮತ್ತು ಬ್ಯಾಡ್ಜ್ಗಳು.

8. ಡಿಜಿಟಲ್ ಸ್ಕಿಲಿಂಗ್ (ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಕಲಿಕೆ): ಆನ್ಲೈನ್ / ಬ್ಲೆಂಡೆಡ್ ಸ್ಕಿಲಿಂಗ್, ಎಆರ್ / ವಿಆರ್ / ಎಕ್ಸ್ಆರ್, ಮಲ್ಟಿಮೀಡಿಯಾ ಕಲಿಕೆ, ಆನ್ಲೈನ್ ಮೌಲ್ಯಮಾಪನಗಳು, ನಕ್ಷೆ (ಮ್ಯಾಪ್ ) ಮೂಲಕ  ಕೋರ್ಸ್ಗಳು ಮತ್ತು ಕೇಂದ್ರಗಳ ಡಿಜಿಟಲ್ ಅನ್ವೇಷಣೆ (ಕೌಶಲ್ಯ ಕೇಂದ್ರಗಳು / ಐಟಿಐ)

9. ಕೌನ್ಸೆಲಿಂಗ್ ಮತ್ತು ಮೆಂಟರ್ಶಿಪ್: ವೃತ್ತಿಜೀವನ - ಉದ್ಯೋಗಗಳು ಮತ್ತು ಕೌಶಲ್ಯಗಳು, ಉದ್ಯಮಶೀಲತೆ – ವ್ಯಾಪಾರೋದ್ಯಮ  ಮಾದರಿಗಳು, ಹಣಕಾಸು ನಿರ್ವಹಣೆ, ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್

10. ಕೌಶಲ್ಯ ಮಾರುಕಟ್ಟೆ ಸ್ಥಳ: ಕೌಶಲ್ಯ ಸೇವೆಗಳ ವಿನಿಮಯಕ್ಕೆ ವೇದಿಕೆ

11. ಬೇಡಿಕೆ ಕ್ರೋಢೀಕರಣ: ಅಭ್ಯರ್ಥಿ ಮತ್ತು ಉದ್ಯಮಕ್ಕೆ ಬೇಡಿಕೆಯನ್ನು ವ್ಯಕ್ತಪಡಿಸಲು ಅವಕಾಶ

ಉದ್ಯಮ 4.0 ಗೆ ಹೊಂದಿಕೆಯಾಗುವಂತೆ  ಮಾರುಕಟ್ಟೆ-ಕೇಂದ್ರಿತ ಬೇಡಿಕೆ-ಚಾಲಿತ ಕೌಶಲ್ಯೀಕರಣ:

• ಭವಿಷ್ಯದ ಕೌಶಲ್ಯಗಳು ಗುಂಪಿನ ಗಣನೀಯ ಭಾಗವಾಗಿವೆ ಮತ್ತು ಸ್ಕಿಲ್ ಇಂಡಿಯಾ ಮಿಷನ್ ನಲ್ಲಿ ಅಳವಡಿಸಿಕೊಳ್ಳಲು ಕೇಂದ್ರೀಕೃತ ಮತ್ತು ಮಾಪನಾಂಕಿತ ವಿಧಾನದ ಅಗತ್ಯವಿದೆ. ಡ್ರೋನ್, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ರೊಬೊಟಿಕ್ಸ್, ಎಲೆಕ್ಟ್ರಿಕ್ ವೆಹಿಕಲ್ (ಇವಿ), ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (ಎಐ ಮತ್ತು ಎಂಎಲ್), 5 ಜಿ ತಂತ್ರಜ್ಞಾನಗಳು, ಮೆಕಾಟ್ರಾನಿಕ್ಸ್, ಕ್ಲೌಡ್ ಕಂಪ್ಯೂಟಿಂಗ್, ಬ್ಲಾಕ್ ಚೈನ್, ವರ್ಧಿತ ಮತ್ತು ವರ್ಚುವಲ್ ರಿಯಾಲಿಟಿ ಸೇರಿದಂತೆ ವಿಸ್ತೃತ ರಿಯಾಲಿಟಿ (ಎಕ್ಸ್ಆರ್), ಸೈಬರ್ ಭದ್ರತೆ, 3 ಡಿ ಪ್ರಿಂಟಿಂಗ್, ವಿಎಲ್ಎಸ್ಐ ವಿನ್ಯಾಸ ಮುಂತಾದ ಕ್ಷೇತ್ರಗಳಲ್ಲಿ ಭವಿಷ್ಯದ ಕೌಶಲ್ಯಗಳ ಅಭಿವೃದ್ಧಿಗೆ ಸರ್ಕಾರ ಬಲವಾದ ಗಮನ ಹರಿಸಿದೆ.ಇವು ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳ ಚಾಲಕ ಶಕ್ತಿಯಾಗಿ ಆರ್ಥಿಕತೆಯನ್ನು ಮುನ್ನಡೆಸಬಲ್ಲವು. 

  • ಇಲ್ಲಿಯವರೆಗೆ, ಈ ವಿಭಾಗಗಳಲ್ಲಿ ರಾಷ್ಟ್ರದ ಯುವಜನರಿಗೆ ಕೋರ್ಸ್ ಗಳನ್ನು ನೀಡಲು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಈಗಾಗಲೇ 146 ಭವಿಷ್ಯದ ಕೌಶಲ್ಯ ಅರ್ಹತೆಗಳನ್ನು ಅನುಮೋದಿಸಿದೆ. ಉದ್ಯಮ 4.0 ಕ್ಷೇತ್ರಗಳಲ್ಲಿ ನಿಖರ ಕೃಷಿ, ಮುನ್ಸೂಚನೆ ನಿರ್ವಹಣೆ, ಸಿಮ್ಯುಲೇಶನ್ ತಂತ್ರಜ್ಞಾನಗಳು, ದತ್ತಾಂಶ ವಿಶ್ಲೇಷಣೆ, ಟೆಲಿಮೆಡಿಸಿನ್ ಹಾಗು  ಮೇಲಿನ ಮತ್ತು ಇತರ ಅನೇಕ ಕ್ಷೇತ್ರಗಳಲ್ಲಿ ಅರ್ಹತೆಗಳ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸುತ್ತಿದೆ. .
  • ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ಶುಲ್ಕ ಆಧಾರಿತ ತರಬೇತಿ (40 ಕ್ಷೇತ್ರಗಳಲ್ಲಿ ಕೌಶಲ್ಯಯುಕ್ತ ತರಬೇತಿಯನ್ನು ಒದಗಿಸಲು ಲಾಭ ಸಹಿತ ತರಬೇತಿ ಪಾಲುದಾರರ ಗುಂಪನ್ನು ರಚಿಸುವುದು).
  • 2014 ರಿಂದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ) ಅಡಿಯಲ್ಲಿ 32700+ ಕೇಂದ್ರಗಳನ್ನು ತೆರೆಯಲಾಗಿದೆ.
  • ಇಲ್ಲಿಯವರೆಗೆ ಒಟ್ಟು 2.14 ಕೋಟಿ+ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. 2014 ರಿಂದ ನವೆಂಬರ್ 2023 ರ ನಡುವೆ 1.96 ಕೋಟಿ+ ಜನರಿಗೆ ತರಬೇತಿ ನೀಡಲಾಗಿದೆ.
  • ಕೌಶಲ್ಯ ಮತ್ತು ತರಬೇತಿ ಮೂಲಸೌಕರ್ಯ ಮತ್ತು ಕಾರ್ಯಾಚರಣಾ ಬಂಡವಾಳದ ಅಗತ್ಯಗಳಿಗಾಗಿ  ಸಾಲಗಳು, ಈಕ್ವಿಟಿ ಮತ್ತು ಅನುದಾನಗಳ ಮೂಲಕ 350+ ಪಾಲುದಾರರಿಗೆ ರಿಯಾಯಿತಿ ಬಡ್ಡಿದರದಲ್ಲಿ ರೂ 1873 ಕೋಟಿ+ ಆರ್ಥಿಕ ಬೆಂಬಲವನ್ನು ಒದಗಿಸಲಾಗಿದೆ. ಜೂನ್ 2014 ರಿಂದ ನವೆಂಬರ್ 23 ರ ನಡುವೆ ರೂ 1209 ಕೋಟಿ+ ವಿತರಿಸಲಾಗಿದೆ.
  •  ಕೌಶಲ್ಯ ವಲಯದಲ್ಲಿ ಸಾಲ ಪೂರೈಕೆಯನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ 2022 ರಲ್ಲಿ ಕೌಶಲ್ಯ ಸಾಲ ಉಪಕ್ರಮವನ್ನು ಪ್ರಾರಂಭಿಸಲಾಯಿತು. ಈ ಉಪಕ್ರಮದ ಅಡಿಯಲ್ಲಿ, ಎನ್ಎಸ್ಡಿಸಿ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳು (ಎಫ್ಐಗಳು) / ಎನ್ಬಿಎಫ್ಸಿಗಳಿಗೆ ಲೈನ್ ಆಫ್ ಕ್ರೆಡಿಟ್ ಸೌಲಭ್ಯವನ್ನು ಒದಗಿಸುತ್ತದೆ, ಇದು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಮತ್ತು ವರ್ಧನೆ ಉದ್ದೇಶಗಳಿಗಾಗಿ ಆಕರ್ಷಕ ಬಡ್ಡಿದರಗಳಲ್ಲಿ ಕೌಶಲ್ಯ ಸಾಲಗಳನ್ನು ಒದಗಿಸುತ್ತದೆ. ನವೆಂಬರ್ 23 ರವರೆಗೆ 4500+ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ 5 ಎನ್ಬಿಎಫ್ಸಿಗಳಿಗೆ 30 ಕೋಟಿ ರೂ.ಗಳನ್ನು ವಿತರಿಸಲಾಗಿದೆ.
  • . 500 ಕ್ಕೂ ಹೆಚ್ಚು ಐಟಿಐಗಳಲ್ಲಿ ಡ್ರೋನ್ ಕೋರ್ಸುಗಳನ್ನು ತ್ವರಿತವಾಗಿ ಪ್ರಾರಂಭಿಸಲು ಅನುಕೂಲವಾಗುವಂತೆ ಸಚಿವಾಲಯವು ರಾಷ್ಟ್ರೀಯ ವ್ಯಾಪಾರೋದ್ಯಮ ಪ್ರಮಾಣಪತ್ರ (ಎನ್ಟಿಸಿ) ಪ್ರಮಾಣಪತ್ರದೊಂದಿಗೆ II ಅಥವಾ ಅದಕ್ಕಿಂತ ಹೆಚ್ಚಿನ ಗ್ರೇಡ್/ಶ್ರೇಣಿಯೊಂದಿಗೆ ಎನ್ಎಸ್ಕ್ಯೂಎಫ್-ಅನುಸರಿತ  ಡ್ರೋನ್ ಕೋರ್ಸುಳನ್ನು ಪ್ರಾರಂಭಿಸಲು ಐಟಿಐಗಳಿಗೆ ತಾತ್ವಿಕವಾಗಿ ಅನುಮೋದನೆ ನೀಡಿದೆ (ಉದಾ: ಸಿಟಿಎಸ್ – ರಿಮೋಟ್ ಮೂಲಕ ಚಾಲನೆ ಮಾಡಬಹುದಾದ ವಿಮಾನ -ರಿಮೋಟ್ಲಿ ಪೈಲಟ್ಡ್ ಏರ್ಕ್ರಾಫ್ಟ್ (ಆರ್ಪಿಎ) / ಡ್ರೋನ್ ಪೈಲಟ್,  ಡ್ರೋನ್ ತಂತ್ರಜ್ಞ). ಅಲ್ಪಾವಧಿಯ ಡ್ರೋನ್ ಕೋರ್ಸುಳನ್ನು ಪ್ರಾರಂಭಿಸಲು 39 ಐಟಿಐಗಳಿಗೆ ಮತ್ತು ಅಲ್ಪಾವಧಿಯ ಡ್ರೋನ್ ಕೋರ್ಸುಗಳನ್ನು ಪ್ರಾರಂಭಿಸಲು 100 ಐಟಿಐಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.

ಅಪ್ರೆಂಟಿಸ್ಶಿಪ್ ತರಬೇತಿ (ಪ್ರಶಿಕ್ಷಣ  ತರಬೇತಿ)

ಅಪ್ರೆಂಟಿಸ್ಶಿಪ್ ತರಬೇತಿಯನ್ನು ಉತ್ತೇಜಿಸುವುದು: ಕೌಶಲ್ಯ ಅಭಿವೃದ್ಧಿಯ ಅತ್ಯಂತ ಸುಸ್ಥಿರ ಮಾದರಿ/ಸ್ವರೂಪಗಳಲ್ಲಿ ಒಂದಾಗಿದೆ

● ಪ್ರಸ್ತುತ, ದೇಶಾದ್ಯಂತ ವಿವಿಧ ಸಂಸ್ಥೆಗಳಲ್ಲಿ ಸುಮಾರು 7.09 ಲಕ್ಷ ಅಪ್ರೆಂಟಿಸ್ ಗಳು ತೊಡಗಿಸಿಕೊಂಡಿದ್ದಾರೆ.

● 2023 ರ ನವೆಂಬರ್ 29 ರವರೆಗೆ 24,74,714 ಅಪ್ರೆಂಟಿಸ್ ಗಳು ನೋಂದಾಯಿಸಿಕೊಂಡಿದ್ದಾರೆ.

● 1,82,057 ಸಂಸ್ಥೆಗಳು ಅಪ್ರೆಂಟಿಸ್ಶಿಪ್ ಪೋರ್ಟಲ್ನಲ್ಲಿ (www.apprenticeshipindia.gov.in) ನೋಂದಾಯಿಸಲ್ಪಟ್ಟಿವೆ.

● ಪ್ರಸಕ್ತ ಹಣಕಾಸು ವರ್ಷದಲ್ಲಿ, ಅಪ್ರೆಂಟಿಸ್ಶಿಪ್ ತರಬೇತಿ ಕಾರ್ಯಕ್ರಮದಡಿ ಸಂಸ್ಥೆಗಳಿಂದ 15 ಲಕ್ಷ ಅಪ್ರೆಂಟಿಸ್ಗಳನ್ನು ನೇಮಿಸಿಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

● ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ 6-12 ತಿಂಗಳ ಉದ್ಯೋಗ ತರಬೇತಿಯನ್ನು ಒದಗಿಸಲಾಗಿದೆ.

● ಬಿಟಿಪಿ, ಎನ್ಎಪಿಎಸ್ ಮಾರ್ಗಸೂಚಿಗಳು, ಐಚ್ಛಿಕ ವ್ಯಾಪಾರೋದ್ಯಮ ಕೋರ್ಸ್  ಸಕಾಲಿಕಗೊಳಿಸುವಿಕೆ/ತರ್ಕಬದ್ಧಗೊಳಿಸುವಿಕೆ, ಪರೀಕ್ಷೆ ಮತ್ತು ಪೋರ್ಟಲ್ ಕಾರ್ಯವಿಧಾನಗಳಲ್ಲಿ ಪ್ರಮುಖ ಅಪ್ರೆಂಟಿಸ್ಶಿಪ್ ಸುಧಾರಣೆಗಳನ್ನು ಮಾಡಲಾಯಿತು. ಈ ಬಗ್ಗೆ ಹನ್ನೊಂದು ಕಚೇರಿ ಜ್ಞಾಪಕ ಪತ್ರಗಳನ್ನು ಹೊರಡಿಸಲಾಗಿದೆ. .

● ಇಲ್ಲಿಯವರೆಗೆ 9,25,260 ಲಕ್ಷ ಅಪ್ರೆಂಟಿಸ್ ಗಳ ತರಬೇತಿ ಪೂರ್ಣಗೊಂಡಿದೆ.

● 2022ರ ಜುಲೈ ಯಿಂದ ಪ್ರಾಯೋಗಿಕ ಡಿಬಿಟಿ ನಡೆಯುತ್ತಿದೆ. ಇಲ್ಲಿಯವರೆಗೆ 35.02 ಕೋಟಿ ರೂ. ಮೌಲ್ಯದ 2.41 ಲಕ್ಷಕ್ಕೂ ಹೆಚ್ಚು ಡಿಬಿಟಿ ವರ್ಗಾವಣೆಗಳು/ವಹಿವಾಟುಗಳು ನಡೆದಿವೆ.

● ಪ್ಯಾನ್ ಇಂಡಿಯಾ ಡಿಬಿಟಿಯನ್ನು 2023ರ ಆಗಸ್ಟ್ 11 ರಂದು ಆರಂಭಿಸಲಾಯಿತು. ಡಿಬಿಟಿ ಮೂಲಕ 117.59 ಕೋಟಿ  ರೂ. ವಿತರಿಸಲಾಗಿದೆ.

ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಉತ್ತೇಜನ ಯೋಜನೆ (ಎನ್ಎಪಿಎಸ್) ಅಡಿಯಲ್ಲಿ ಪ್ರಾರಂಭಿಸಲಾದ ನೇರ ನಗದು/ಲಾಭ ವರ್ಗಾವಣೆ (ಡಿಬಿಟಿ) ಅಪ್ರೆಂಟಿಸ್ಶಿಪ್ ಭೂದೃಶ್ಯದಲ್ಲಿ ಕ್ರಾಂತಿಯನ್ನುಂಟು ಮಾಡಿದೆ, ಸ್ಟೈಫಂಡ್ ಹಣ  ನೇರವಾಗಿ ಅಪ್ರೆಂಟಿಸ್ಗಳ ಬ್ಯಾಂಕ್ ಖಾತೆಗಳಿಗೆ ತಲುಪುವುದನ್ನು ಖಚಿತಪಡಿಸಿದೆ. ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಉತ್ತೇಜನ ಯೋಜನೆಯಲ್ಲಿ ಡಿಬಿಟಿಯನ್ನು ಪ್ರಾರಂಭಿಸಿರುವುದು ಅಪ್ರೆಂಟಿಶಿಪ್ ಆಶಯದ ವ್ಯಕ್ತಿಗಳನ್ನು ಕೌಶಲ್ಯಯುಕ್ತಗೊಳಿಸುವ ಮತ್ತು ಎನ್.ಇ.ಪಿ.ಯಲ್ಲಿ ಹೇಳಿದಂತೆ ಕಲಿಕೆಯ ಜೊತೆ ಗಳಿಕೆಯನ್ನು ಮಾಡುವ ಅವಕಾಶ ಒದಗಿಸುವ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಚಿಂತನೆಯನ್ನು ಈಡೇರಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ.

ಉದ್ಯಮಶೀಲತೆಯನ್ನು ಉತ್ತೇಜಿಸುವುದು

● ದೇಶಾದ್ಯಂತ ತನ್ನ ಹೆಜ್ಜೆಗುರುತನ್ನು ಹೆಚ್ಚಿಸಲು ಎನ್ಐಇಎಸ್ಬಿಡಿಯು  ಎನ್ಎಸ್ಟಿಐಗಳಲ್ಲಿ 21 ವಿಸ್ತರಣಾ ಕೇಂದ್ರಗಳನ್ನು ಸ್ಥಾಪಿಸಿದೆ.

● "ಶಿಕ್ಷಣದಿಂದ ಉದ್ಯಮಶೀಲತೆ: ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳ ಪೀಳಿಗೆಯ ಸಬಲೀಕರಣ" ನಿಟ್ಟಿನಲ್ಲಿ ಶಿಕ್ಷಣ ಸಚಿವಾಲಯ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ಮೆಟಾ ನಡುವೆ 3 ವರ್ಷಗಳ ಪಾಲುದಾರಿಕೆಯನ್ನು ಮಾಡಿಕೊಳ್ಳಲಾಗಿದೆ ಈ ಕುರಿತ . ಉದ್ದೇಶದ ಪತ್ರವನ್ನು (ಎಲ್ಒಐ) ಎನ್ಐಇಎಸ್ಬಿಯುಡಿಯೊಂದಿಗೆ ಹಂಚಿಕೊಳ್ಳಲಾಗಿದೆ. ನಿಸ್ಬಡ್  (ಎನ್.ಐ.ಇ.ಎಸ್.ಬಿ.ಯು.ಡಿ.) ಸಹಭಾಗಿತ್ವದ ಅಡಿಯಲ್ಲಿ, ಮುಂದಿನ 3 ವರ್ಷಗಳಲ್ಲಿ 5 ಲಕ್ಷ ಉದ್ಯಮಿಗಳು ಮೆಟಾದಿಂದ ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳಿಗೆ ಪ್ರವೇಶವನ್ನು ಪಡೆಯುತ್ತಾರೆ. ಉದಯೋನ್ಮುಖ ಮತ್ತು ಅಸ್ತಿತ್ವದಲ್ಲಿರುವ ಉದ್ಯಮಿಗಳಿಗೆ ಆರಂಭದಲ್ಲಿ 7 ಪ್ರಾದೇಶಿಕ ಭಾಷೆಗಳಲ್ಲಿ ಮೆಟಾ ವೇದಿಕೆಗಳನ್ನು (ಪ್ಲಾಟ್ಫಾರ್ಮ್ಗಳನ್ನು)  ಬಳಸಿಕೊಂಡು ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುವುದು. ಪಾಲುದಾರಿಕೆಯ ಮಹತ್ವದ ವಿವರಗಳನ್ನು ವಿವರಿಸುವ  ಮೂರು ಕಿರುಚಿತ್ರಗಳನ್ನು ಸಹ ಪ್ರದರ್ಶಿಸಲಾಗಿದೆ.

● ಇತ್ತೀಚೆಗೆ, ಒಡಿಶಾದ ಯುವ ತಂಡದ ಸಾಮರ್ಥ್ಯವನ್ನು ಹೆಚ್ಚಿಸಲು ಭುವನೇಶ್ವರದಲ್ಲಿ ಎನ್ಎಸ್ಟಿಐ ಪ್ಲಸ್ ಗೆ  ಶಿಲಾನ್ಯಾಸ ಸಮಾರಂಭವನ್ನು ಆಯೋಜಿಸಲಾಗಿತ್ತು. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂಎಸ್ಡಿಇ) ಅತ್ಯುನ್ನತ ಸಂಸ್ಥೆಯಾದ ತರಬೇತಿ ನಿರ್ದೇಶನಾಲಯದ (ಡಿಜಿಟಿ) ಅಡಿಯಲ್ಲಿ ಎನ್ಎಸ್ಟಿಐ ಪ್ಲಸ್, ಕುಶಲಕರ್ಮಿ ಬೋಧಕ ತರಬೇತಿ ಯೋಜನೆ (ಸಿಐಟಿಎಸ್) ಅಡಿಯಲ್ಲಿ ಹಂತ -1 ರಲ್ಲಿ 500 ಬೋಧಕರಿಗೆ ತರಬೇತಿ ನೀಡಲಿದೆ ಹಾಗು  ಕೌಶಲ್ಯ ಮೇಲ್ದರ್ಜೆಗೆ ಏರಿಸುವುದಕ್ಕೆ ಮತ್ತು ಮರು ಕೌಶಲ್ಯಕ್ಕಾಗಿ ಇನ್ನೂ 500 ಬೋಧಕರನ್ನು ಸೇರಿಸಿಕೊಳ್ಳಲಿದೆ.

● ಎನ್ ಎಸ್ ಟಿಐ ಪ್ಲಸ್ ಉದಯೋನ್ಮುಖ ನವೋದ್ಯಮಗಳಿಗೆ (ಸ್ಟಾರ್ಟ್ ಅಪ್ ಗಳಿಗೆ)  ಕೇಂದ್ರಬಿಂದುವಾಗಿ, ಇನ್ಕ್ಯುಬೇಷನ್ ಸೆಂಟರ್ ಆಗಿ ಮತ್ತು ವಿವಿಧ ಕೌಶಲ್ಯಗಳನ್ನು ಬೆಳೆಸುವ ಬಹುಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಇತರ ರಾಜ್ಯಗಳಿಗೆ ತರಬೇತಿ ಸೌಲಭ್ಯಕ್ಕೆ ಸಂಬಂಧಿಸಿ ಮೂಲ ಮಾದರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಯುವಜನರ  ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಣ ತಜ್ಞರು ಬಹಳ ದೊಡ್ಡ  ಪಾತ್ರವನ್ನು  ವಹಿಸುತ್ತಾರೆ ಮತ್ತು ಎನ್ಎಸ್ಟಿಐ ಪ್ಲಸ್ನಂತಹ ಸಂಸ್ಥೆಗಳು ಮೃದು ಕೌಶಲ್ಯಗಳನ್ನು ಬೆಳೆಸಲು, ಹೊಸ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಲು ಮತ್ತು ಪರಿಣಾಮಕಾರಿ ಕಲಿಕೆಯ ವಾತಾವರಣವನ್ನು ಬೆಳೆಸಲು ಅವಕಾಶಗಳ ದಿಗಂತವನ್ನು ತೆರೆಯುವ ಸಾಮರ್ಥ್ಯವನ್ನು ಹೊಂದಿವೆ.

ಮಹತ್ವಾಕಾಂಕ್ಷೆಯ  ಆಶೋತ್ತರಗಳನ್ನು ಹೊಂದಿರುವ ಮತ್ತು ಅಸ್ತಿತ್ವದಲ್ಲಿರುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲು ಮತ್ತು ಆನ್ ಲೈನ್ ಮಾರ್ಗದರ್ಶನ ಸೇವೆಗಳನ್ನು ಸುಲಭಗೊಳಿಸಲು ಆನ್ ಲೈನ್ ಇ-ಮೆಂಟರಿಂಗ್ ಪ್ಲಾಟ್ ಫಾರ್ಮ್ "ಉದ್ಯೋಗ್ ದಿಶಾ" ವನ್ನು ಅಭಿವೃದ್ಧಿಪಡಿಸಲಾಗಿದೆ.

 

ಜೀವನೋಪಾಯ ಉತ್ತೇಜನಕ್ಕಾಗಿ ಕೌಶಲ್ಯ ಸಂಪಾದನೆ ಮತ್ತು ಜ್ಞಾನ ಜಾಗೃತಿ (ಸಂಕಲ್ಪ)

● ರಚನಾತ್ಮಕ ಸುಧಾರಣೆಯನ್ನು ಬೆಂಬಲಿಸಲು ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ನಿಯಂತ್ರಿಸುವ, ನಿರ್ವಹಿಸುವ ಮತ್ತು ಮೇಲ್ವಿಚಾರಣೆ ಮಾಡುವ ಒಟ್ಟಾರೆ ವ್ಯವಸ್ಥೆಗಳನ್ನು ಬಲಪಡಿಸಲು ಒತ್ತು ನೀಡುವುದಕ್ಕಾಗಿ  2018 ರ ಜನವರಿಯಲ್ಲಿ ಜೀವನೋಪಾಯ ಉತ್ತೇಜನಕ್ಕಾಗಿ ಕೌಶಲ್ಯ ಗಳಿಕೆ/ಸಂಪಾದನೆ  ಮತ್ತು ಜ್ಞಾನ ಜಾಗೃತಿ (ಸಂಕಲ್ಪ) ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಅಲ್ಪಾವಧಿಯ ತರಬೇತಿಯ ಲಭ್ಯತೆ/ ವಿತರಣೆಯನ್ನು ಹೆಚ್ಚಿಸಲು ಅಸ್ತಿತ್ವದಲ್ಲಿರುವ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸಲು ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮದ ಅಡಿಯಲ್ಲಿ ಮೂರು ಪ್ರಮುಖ ಫಲಿತಾಂಶ ಕ್ಷೇತ್ರಗಳನ್ನು (ಆರ್.  ಎ.) ಈ ಕೆಳಗಿನಂತೆ ಪರಿಕಲ್ಪನೆ ಮಾಡಲಾಗಿದೆ:

1. ಫಲಿತಾಂಶ ಕ್ಷೇತ 1 - ಉತ್ತಮ ಗುಣಮಟ್ಟದ ಮಾರುಕಟ್ಟೆ ಸಂಬಂಧಿತ ತರಬೇತಿಯನ್ನು ಯೋಜಿಸಲು, ನೀಡಲು ಮತ್ತು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸಾಂಸ್ಥಿಕ ಬಲವರ್ಧನೆ.

2. ಫಲಿತಾಂಶ ಕ್ಷೇತ 2 - ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಗುಣಮಟ್ಟ ಸುಧಾರಣೆ ಮತ್ತು ಮಾರುಕಟ್ಟೆ ಪ್ರಸ್ತುತತೆ

3. ಫಲಿತಾಂಶ ಕ್ಷೇತ್ರ 3 - ಮಹಿಳಾ ಪ್ರಶಿಕ್ಷಣಾರ್ಥಿಗಳು ಮತ್ತು ಇತರ ಅನನುಕೂಲಕರ/ ಅವಕಾಶವಂಚಿತ ಗುಂಪುಗಳಿಗೆ ಕೌಶಲ್ಯ ತರಬೇತಿಗೆ ಸುಧಾರಿತ ಪ್ರವೇಶ ಲಭ್ಯತೆ ಮತ್ತು ಪೂರ್ಣಗೊಳಿಸುವಿಕೆ

ಸಂಕಲ್ಪ ಕಾರ್ಯಕ್ರಮದ ಆಯಾ ಫಲಿತಾಂಶ ಕ್ಷೇತ್ರಗಳ ಅಡಿಯಲ್ಲಿ ಮಾಡಲಾದ ಪ್ರಮುಖ ಸಾಧನೆಗಳ ಪಟ್ಟಿ ಕೆಳಗಿನಂತಿದೆ:

    1. ಕೌಶಲ್ಯ ಅಭಿವೃದ್ಧಿ ಚಟುವಟಿಕೆಗಳ ಯೋಜನೆ ಮತ್ತು ಅನುಷ್ಠಾನದ ವಿಕೇಂದ್ರೀಕರಣ: ದೇಶದಲ್ಲಿನ ಕೌಶಲ್ಯ ಅಭಿವೃದ್ಧಿ ಪ್ರಯತ್ನಗಳು ಆಯಾ ಜಿಲ್ಲೆಗಳ ಜನಸಂಖ್ಯೆಗೆ ಪ್ರಸ್ತುತವಾಗಿರಬೇಕು ಮತ್ತು ಅಂತಹ ಅಗತ್ಯ ಉಪಕ್ರಮಗಳನ್ನು ಗುರುತಿಸುವುದನ್ನು ಜಿಲ್ಲಾ ಮಟ್ಟದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ದಕ್ಷತೆಯಿಂದ ಮಾಡಬಹುದು. ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ರಾಜ್ಯ ಮಟ್ಟದಲ್ಲಿ ಔಪಚಾರಿಕಗೊಳಿಸಿ/ ಒಂದು ಚೌಕಟ್ಟಿಗೆ ಅಳವಡಿಸಿ ಯಾವ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಸರಿಹೊಂದಿಸಲಾಗಿದೆ ಎಂಬುದನ್ನು ಅನುಸರಿಸಿ ಜಾರಿಗೆ ತರಲಾಗುತ್ತಿದೆ. . ಇದು ಕೌಶಲ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಡಿಎಸ್ ಡಿಪಿಗಳು ತಳಮಟ್ಟಕ್ಕೆ ತಲುಪುವ ವಿಧಾನದ ಮೂಲಕ ಜಿಲ್ಲಾ ಅಧಿಕಾರಿಗಳನ್ನು ಸಬಲೀಕರಣಗೊಳಿಸುತ್ತಿವೆ, ಇದು ಕೌಶಲ್ಯ ಅಭಿವೃದ್ಧಿ ಉಪಕ್ರಮಗಳು ಹೆಚ್ಚಿನ ಸ್ವೀಕಾರಾರ್ಹತೆ ಗಳಿಸಲು ನೆರವಾಗುತ್ತದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಗಳ ಪ್ರಯತ್ನಗಳು ಮತ್ತು ಬದ್ಧತೆಯನ್ನು ಗುರುತಿಸಲು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿ (ಡಿಎಸ್ಡಿಪಿ ಪ್ರಶಸ್ತಿಗಳು) 'ಶ್ರೇಷ್ಠತೆಗಾಗಿ ಪ್ರಶಸ್ತಿಗಳನ್ನು' ಸ್ಥಾಪಿಸಿದೆ. ಪ್ರಶಸ್ತಿಗಳ ಕಳೆದ ಆವೃತ್ತಿಯಲ್ಲಿ, 476 ಜಿಲ್ಲೆಗಳ ಡಿಎಸ್ಡಿಪಿಗಳನ್ನು ಮೌಲ್ಯಮಾಪನ ಮಾಡಲಾಯಿತು, 30 ಜಿಲ್ಲೆಗಳನ್ನು ಶಾರ್ಟ್ಲಿಸ್ಟ್ ಮಾಡಲಾಯಿತು, ಅದರಲ್ಲಿ 8 ಜಿಲ್ಲೆಗಳಿಗೆ 'ಶ್ರೇಷ್ಠತೆಯ ಪ್ರಶಸ್ತಿ', 13 ಜಿಲ್ಲೆಗಳಿಗೆ 'ಶ್ರೇಷ್ಠತೆಯ ಪ್ರಮಾಣಪತ್ರ' ಮತ್ತು 9 ಜಿಲ್ಲೆಗಳಿಗೆ 'ಮೆಚ್ಚುಗೆ ಪತ್ರ' ನೀಡಿ ಗೌರವಿಸಲಾಯಿತು. 2023 ರ ಅಕ್ಟೋಬರ್ 31ರ ಹೊತ್ತಿಗೆ, ಒಟ್ಟು 748 ಡಿಎಸ್ಸಿಗಳನ್ನು ಸಾಂಸ್ಥಿಕರಣಗೊಳಿಸಲಾಗಿದೆ ಮತ್ತು 711 ಜಿಲ್ಲೆಗಳನ್ನು ಡಿಸ್ಪಾಕ್ ಪೋರ್ಟಲ್ನಲ್ಲಿ ಸೇರ್ಪಡೆ ಮಾಡಲಾಗಿದೆ. 2022-23ನೇ ಸಾಲಿನ ಹಣಕಾಸು ವರ್ಷದಲ್ಲಿ ಸಂಕಲ್ಪ ಪೋರ್ಟಲ್ನಲ್ಲಿ ಒಟ್ಟು 691 ಡಿಎಸ್ಡಿಪಿಗಳನ್ನು ಜಿಲ್ಲೆಗಳು ಸಲ್ಲಿಸಿವೆ.
  1. ಮಹಾತ್ಮ ಗಾಂಧಿ ರಾಷ್ಟ್ರೀಯ ಫೆಲೋಶಿಪ್ (ಎಂಜಿಎನ್ಎಫ್): ಕೌಶಲ್ಯ ಅಭಿವೃದ್ಧಿ ಯೋಜನೆ ಮತ್ತು ಅನುಷ್ಠಾನವನ್ನು ತಳಮಟ್ಟದಲ್ಲಿ ಸಾಂಸ್ಥಿಕರಣಗೊಳಿಸಲು ಎಂಜಿಎನ್ಎಫ್ ಫೆಲೋಗಳು ಎಂದು ಕರೆಯಲ್ಪಡುವ ವೃತ್ತಿಪರರನ್ನು ನಿಯೋಜಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಫೆಲೋಶಿಪ್ ಎಂಬ  ಪರಿಕಲ್ಪನೆಯನ್ನು ಮಾಡಲಾಗಿದೆ. ದೇಶದ ಪ್ರಮುಖ ಸಂಸ್ಥೆಗಳಾದ 9 ಐಐಎಂಗಳ ಸಹಭಾಗಿತ್ವದಲ್ಲಿ ನೀಡಲಾಗುವ ಎರಡು ವರ್ಷಗಳ ಫೆಲೋಶಿಪ್ ಅವಧಿಯಲ್ಲಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಲ್ಲಿ ಫೆಲೋಗಳು ಜಿಲ್ಲಾ ಕೌಶಲ್ಯ ಸಮಿತಿಗಳಿಗೆ ಬೆಂಬಲ ನೀಡುತ್ತಾರೆ. 2021ರ ಅಕ್ಟೋಬರ್ 25  ರಂದು ಪ್ರಾರಂಭಿಸಲಾದ ಫೆಲೋಶಿಪ್ ನ ಎರಡನೇ ಹಂತದಲ್ಲಿ, 657 ಜಿಲ್ಲೆಗಳಲ್ಲಿ 657 ಎಂಜಿಎನ್ಎಫ್ ಫೆಲೋಗಳನ್ನು ನಿಯೋಜಿಸಲಾಗಿದೆ.  ಇದಲ್ಲದೆ, ಎರಡನೇ ಹಂತವು ಸ್ಥಳೀಯ ಆರ್ಥಿಕತೆಯ ನಿರ್ದಿಷ್ಟ ನುರಿತ ಮಾನವಶಕ್ತಿಯ ಅಗತ್ಯಗಳನ್ನು ಪೂರೈಸುವ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಗಳನ್ನು (ಡಿಎಸ್ಡಿಪಿ) ರೂಪಿಸುವಲ್ಲಿ ಮತ್ತು ಅನುಷ್ಠಾನದಲ್ಲಿ ಜಿಲ್ಲಾ ಕೌಶಲ್ಯ ಸಮಿತಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಡಿಎಸ್ ಡಿಪಿಗಳ ಅನುಷ್ಠಾನದ ಯಶಸ್ಸಿನಲ್ಲಿ, ಸಾಮಾಜಿಕ ಪರಿವರ್ತನೆಗೆ  ವೇಗವರ್ಧಕದಂತೆ ಕಾರ್ಯನಿರ್ವಹಿಸುವ ಎಂಜಿಎನ್ ಎಫ್ ಫೆಲೋಗಳ ಪ್ರಯತ್ನಗಳನ್ನೂ  ಪರಿಗಣನೆ  ಮಾಡಲಾಗುತ್ತದೆ. ಎರಡನೇ ಹಂತವು ಪೂರ್ಣಗೊಂಡಿದೆ ಮತ್ತು 31.10.2023 ರಂದು 581 ಫೆಲೋಗಳಿಗೆ ಘಟಿಕೋತ್ಸವ ಸಮಾರಂಭವನ್ನು ನಡೆಸಲಾಗಿದೆ.
  2.  ವಿಕಲಚೇತನ ಅಭ್ಯರ್ಥಿಗಳಿಗೆ/ ಭಿನ್ನ ಸಾಮರ್ಥ್ಯದ ಅಭ್ಯರ್ಥಿಗಳಿಗೆ  ನೀಡಲಾಗುವ ತರಬೇತಿಯ ಗುಣಮಟ್ಟವನ್ನು ಸುಧಾರಿಸಲು ಅಂಗವಿಕಲರನ್ನು ತರಬೇತುದಾರರಾಗಿ ತರಬೇತಿ ನೀಡುವ ಉಪಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯವು ಮುಖ್ಯವಾಹಿನಿಯ ಪಿಡಬ್ಲ್ಯೂಡಿ ವೃತ್ತಿಪರರನ್ನು ತರಬೇತುದಾರರನ್ನಾಗಿ ಮಾಡಲು ಮತ್ತು ದೈಹಿಕ ಅಂಗವಿಕಲ (ಪಿಡಬ್ಲ್ಯೂಡಿ) ತರಬೇತಿಯ ಗುಣಮಟ್ಟ ಮತ್ತು ವ್ಯಾಪ್ತಿಯನ್ನು ಸುಧಾರಿಸಲು ಉದ್ದೇಶಿಸಿದೆ. ಇಲ್ಲಿಯವರೆಗೆ, ಎರಡು ತಂಡಗಳಲ್ಲಿ ಒಟ್ಟು 25 ರಲ್ಲಿ ಒಟ್ಟು 10 ಮಾಸ್ಟರ್ ತರಬೇತುದಾರರಿಗೆ ತರಬೇತಿ ನೀಡಲಾಗಿದೆ. 2023ರ ಅಕ್ಟೋಬರ್ 31ರವರೆಗೆ, ಒಟ್ಟು 62 ಪಿಡಬ್ಲ್ಯೂಡಿ ತರಬೇತುದಾರರಿಗೆ ತರಬೇತಿ ನೀಡಲಾಗಿದೆ ಮತ್ತು ಪ್ರಮಾಣೀಕರಿಸಲಾಗಿದೆ.
  3.  ಎವಿಎಸ್ಎಆರ್  (ಅವಸರ್)  ಯೋಜನೆ: ಉಡುಪು ಕ್ಷೇತ್ರದಲ್ಲಿ ಮಹಿಳೆಯರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸಲು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ) ಅಮೃತ ವಿಶ್ವ ವಿದ್ಯಾಪೀಠಂನೊಂದಿಗೆ ಪಾಲುದಾರಿಕೆ ಹೊಂದಿದ್ದು, ಪ್ರಗತಿಪರ ಭಾರತದ 75 ವರ್ಷಗಳು ಮತ್ತು ಅದರ ಜನರ ಭವ್ಯ ಇತಿಹಾಸವನ್ನು ಆಚರಿಸುವ 'ಆಜಾದಿ ಕಾ ಅಮೃತ್ ಮಹೋತ್ಸವ್' ನ ಭಾಗವಾಗಿ "ಎವಿಎಸ್ಎಆರ್" ಯೋಜನೆಯನ್ನು ಪ್ರಾರಂಭಿಸಿದೆ.  ಈ ಉಪಕ್ರಮದ ಅಂಗವಾಗಿ  “ಸಂಕಲ್ಪ”  ಕಾರ್ಯಕ್ರಮದ ಅಡಿಯಲ್ಲಿ ಸ್ವಸಹಾಯ ಗುಂಪುಗಳ (ಎಸ್ಎಚ್ ಜಿ) 4500 ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ವೃತ್ತಿಪರ ಕೋರ್ಸ್ ಗಳನ್ನು ಪ್ರಮಾಣೀಕರಿಸುತ್ತದೆ.  ಇಲ್ಲಿಯವರೆಗೆ, 2842 ಮಹಿಳೆಯರನ್ನು ನೋಂದಾಯಿಸಲಾಗಿದೆ ಮತ್ತು 31 ಮಹಿಳೆಯರಿಗೆ ಯೋಜನೆಯಡಿ ತರಬೇತಿ ನೀಡಲಾಗಿದೆ. 2023 ರ ಅಕ್ಟೋಬರ್ 31 ರವರೆಗೆ, ಒಟ್ಟು 4,468 ಮಹಿಳೆಯರಿಗೆ ತರಬೇತಿ ನೀಡಲಾಗಿದೆ ಮತ್ತು 2738 ಮಹಿಳೆಯರು ಯೋಜನೆಯ ಅಡಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿದ್ದಾರೆ.

ವಿಶೇಷ ಯೋಜನೆಗಳು:

  •  ಭಾರತೀಯ ಸೇನೆಯ ನಿವೃತ್ತರನ್ನು ತರಬೇತುದಾರರು ಮತ್ತು ಮೌಲ್ಯಮಾಪಕರಾಗಿ ಕೌಶಲ್ಯ ಪ್ರಮಾಣೀಕರಣ ಮಾಡುವುದು ಒಂದು ವಿಶೇಷ ಯೋಜನೆಯಾಗಿದೆ. 17 ವರ್ಷಗಳಿಗಿಂತ ಹೆಚ್ಚು ಸೇವೆಯಲ್ಲಿದ್ದು ನಿವೃತ್ತರಾಗುತ್ತಿರುವ  ಭಾರತೀಯ ಸೇನೆಯ ಸೈನಿಕರು ಗಳಿಸಿದ ಕೌಶಲ್ಯಗಳನ್ನು ಗುರುತಿಸಲು ಮತ್ತು ಪ್ರಮಾಣೀಕರಿಸಲು ಈ ಯೋಜನೆಯಡಿ ಸಾಧ್ಯವಾಗುತ್ತದೆ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯಲ್ಲಿ ತರಬೇತಿ ಮತ್ತು ಮೌಲ್ಯಮಾಪನಗಳನ್ನು ಹೆಚ್ಚಿಸಲು ಅವರ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ತರಬೇತುದಾರರ ತರಬೇತಿ (ಟಿ.ಒ.ಟಿ.) ಹಾಗು  ಮೌಲ್ಯಮಾಪಕರ ತರಬೇತಿ (ಟಿಒಎ) ಕಾರ್ಯಕ್ರಮವನ್ನು ಕೈಗೊಳ್ಳುವ ವಿಶೇಷ ಯೋಜನೆಯೂ ಇದಾಗಿದೆ. ಗುರುತಿಸಲಾದ 26 ಸೇನಾ ತರಬೇತಿ ಕೇಂದ್ರಗಳಲ್ಲಿ 5000 ಅಭ್ಯರ್ಥಿಗಳಿಗೆ 12 ವಲಯಗಳಲ್ಲಿ 28 ಉದ್ಯೋಗ ಪಾತ್ರಗಳಲ್ಲಿ 6 ತಿಂಗಳ ಅವಧಿಗೆ ತರಬೇತಿ ನೀಡುವ ಗುರಿಯನ್ನು ಯೋಜನೆ ಹೊಂದಿದೆ.

• ತಳಮಟ್ಟದಲ್ಲಿ ಇದರ ಭೌತಿಕ  ಅನುಷ್ಠಾನವನ್ನು ಭಾರತೀಯ ಸೇನೆಯ ಹಿರಿಯರ ನಿರ್ದೇಶನಾಲಯ (ಡಿಐಎವಿ) ಮಾಡುತ್ತಿದೆ. ಈ ಯೋಜನೆಯು ಅಭ್ಯರ್ಥಿಗಳಿಗೆ ತಲಾ ಆರು ದಿನಗಳ ಡೊಮೇನ್ ಮತ್ತು ಪ್ಲಾಟ್ಫಾರ್ಮ್ ತರಬೇತಿಯನ್ನು ಒಳಗೊಂಡಿದೆ, ನಂತರ ಆಯಾ ಎಸ್ಎಸ್ಸಿಗಳಿಂದ ಮೌಲ್ಯಮಾಪನಗಳನ್ನು ಮಾಡಲಾಗುತ್ತದೆ.. 06.10.2023 ರ ಹೊತ್ತಿಗೆ, 5,129 ಅಭ್ಯರ್ಥಿಗಳು (ಡೊಮೇನ್) ನೋಂದಾಯಿಸಿಕೊಂಡಿದ್ದಾರೆ, 5,129 ಅಭ್ಯರ್ಥಿಗಳು ತರಬೇತಿ (ಡೊಮೇನ್) ಪಡೆದಿದ್ದಾರೆ ಮತ್ತು 4,941 ಅಭ್ಯರ್ಥಿಗಳು ಪ್ರಮಾಣೀಕೃತ (ಡೊಮೇನ್) ಆಗಿದ್ದಾರೆ. ಇದಲ್ಲದೆ, 2,613 ಅಭ್ಯರ್ಥಿಗಳು ಪ್ಲಾಟ್ ಫಾರ್ಮ್ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ (ಅಂದರೆ, ಟಿಒಟಿ / ಟಿಒಎ ಪ್ರಮಾಣೀಕೃತ).

• ಈಶಾನ್ಯ ಭಾಗದಲ್ಲಿ  (ಎನ್ಇಆರ್) ದೃಢವಾದ ಕೌಶಲ್ಯ ಕೇಂದ್ರಿತ ಮತ್ತು ಉದ್ಯಮ-ಸಿದ್ಧ ಪರಿಸರ ವ್ಯವಸ್ಥೆಯನ್ನು ರೂಪಿಸಲು, 'ಜೀವನವನ್ನು ಪರಿವರ್ತಿಸುವುದು, ಭವಿಷ್ಯವನ್ನು ನಿರ್ಮಿಸುವುದು: ಈಶಾನ್ಯದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ' ಎಂಬ ವಿಶೇಷ ಉಪಕ್ರಮವನ್ನು ಪ್ರಾರಂಭಿಸಲಾಯಿತು. ಈ ಉಪಕ್ರಮದ ಭಾಗವಾಗಿ, ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ), ರಾಷ್ಟ್ರೀಯ ಅಪ್ರೆಂಟಿಸ್ಶಿಪ್ ಉತ್ತೇಜನ ಯೋಜನೆ (ಎನ್ಎಪಿಎಸ್) ಮತ್ತು ಜನ ಶಿಕ್ಷಣ ಸಂಸ್ಥೆ (ಜೆಎಸ್ಎಸ್) ಸೇರಿದಂತೆ ವ್ಯಾಪಕ ಶ್ರೇಣಿಯ ಯೋಜನೆಗಳು ಮತ್ತು ಉಪಕ್ರಮಗಳ ಮೂಲಕ ಈಶಾನ್ಯ ಭಾಗದ (ಎನ್ಇಆರ್) 2.5 ಲಕ್ಷ ಪ್ರತಿಭಾವಂತ ಯುವಕರಿಗೆ ಉದ್ಯಮ ಸಂಬಂಧಿತ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಒದಗಿಸಲಾಗುವುದು.

• ಅಂತರ್ಗತ ಎಲ್ಲರನ್ನೂ ಒಳಗೊಳ್ಳುವ  ಅಭಿವೃದ್ಧಿಗೆ, ಉದ್ಯಮಶೀಲ ಪ್ರತಿಭೆಗಳನ್ನು ಪೋಷಿಸಲು ಮತ್ತು ಪ್ರದೇಶದ ಸಾಮಾಜಿಕ-ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸರ್ಕಾರವು 360 ಕೋಟಿ ರೂ.ಗಳ ಗಣನೀಯ ನಿಧಿಯನ್ನು ಮೀಸಲಿಟ್ಟಿದೆ. ಮತ್ತಷ್ಟು ಬೆಳವಣಿಗೆಯನ್ನು ಉತ್ತೇಜಿಸಲು, ಕೃಷಿ, ಪ್ರವಾಸೋದ್ಯಮ, ಕರಕುಶಲ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನುರಿತ ವೃತ್ತಿಪರರ ಬೇಡಿಕೆಯನ್ನು ಪೂರೈಸಲು ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒದಗಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ ಕಾನ್ಪುರ್: (ಕಾನ್ಪುರದ ಭಾರತೀಯ ಕೌಶಲ್ಯಗಳ ಸಂಸ್ಥೆ) :

ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ಸ್ (ಐಐಎಸ್) ಎಂಎಸ್ಡಿಇ ಉದ್ದೇಶದೊಂದಿಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, (ಐಐಟಿ) ಕಾನ್ಪುರ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಹಾಗು ಡಸಾಲ್ಟ್ ಏರ್ಕ್ರಾಫ್ಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಡಿಎಎಸ್ಐ) ನೊಂದಿಗೆ ಮೂರು ಪ್ರಮುಖ ಪಾಲುದಾರಿಕೆಗಳನ್ನು ಘೋಷಿಸಿದೆ. ಇವು ಬಾಹ್ಯಾಕಾಶ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿ ಅದರಲ್ಲೂ ನಿರ್ದಿಷ್ಟವಾಗಿ ಉತ್ತರ ಪ್ರದೇಶದ ರಕ್ಷಣಾ ಕೈಗಾರಿಕಾ ಕಾರಿಡಾರ್ ಬೆಂಬಲಿಸುವ ರೀತಿಯಲ್ಲಿ ಸ್ಥಳೀಯ ಯುವಜನರನ್ನು ರೂಪಿಸಲಿವೆ ಮತ್ತು ಅವರನ್ನು ಈ ನಿಟ್ಟಿನಲ್ಲಿ ಸಶಕ್ತೀಕರಣಗೊಳಿಸಲಿವೆ.

ಇಂಡಿಯಾ ಸ್ಕಿಲ್ಸ್ 2023-24

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ (ಎಂಎಸ್ಡಿಇ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (ಎನ್ಎಸ್ಡಿಸಿ)ಯು  ಇಂಡಿಯಾ ಸ್ಕಿಲ್ಸ್ 2023-24 ಎಂಬ ಮೆಗಾ ಸ್ಪರ್ಧೆಯನ್ನು ಆಯೋಜಿಸಲು ಸಜ್ಜಾಗಿದೆ. ಅಖಿಲ ಭಾರತ ವ್ಯಾಪ್ತಿಯಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಲಕ್ಷಾಂತರ ಆಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ.   ಪ್ರತಿಷ್ಠಿತ ಕಾರ್ಯಕ್ರಮವು ಅಸಂಖ್ಯಾತ ಕೌಶಲ್ಯಗಳನ್ನು ಆಚರಿಸಲು/ ಸಂಭ್ರಮಿಸಲು  ಪ್ರಯತ್ನಿಸುತ್ತದೆ, ಅವಕಾಶಗಳಿಂದ ತುಂಬಿದ ಭವಿಷ್ಯವನ್ನು ಕಲ್ಪಿಸಿಕೊಳ್ಳಲು ವ್ಯಕ್ತಿಗಳನ್ನು ಸಶಕ್ತಗೊಳಿಸುತ್ತದೆ.

ತರಬೇತಿ ಮಾನದಂಡಗಳನ್ನು ಜಾಗತಿಕ ಮಾನದಂಡಗಳೊಂದಿಗೆ ಹೊಂದಿಸಲು, ವಿವಿಧ ಕೈಗಾರಿಕೆಗಳೊಂದಿಗೆ ಸಮನ್ವಯವನ್ನು ಬೆಳೆಸಲು ಅನುವಾಗುವಂತೆ ಇಂಡಿಯಾ ಸ್ಕಿಲ್ಸ್ ಸ್ಪರ್ಧೆಯನ್ನು ವಿನ್ಯಾಸಗೊಳಿಸಲಾಗಿದೆ. ಭಾಗವಹಿಸುವವರು ಜಿಲ್ಲೆ, ರಾಜ್ಯ, ವಲಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಆಯ್ಕೆ ಪ್ರಕ್ರಿಯೆಯನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಪರಮೋಚ್ಛ ಬಹುಮಾನವೆಂದರೆ  2024 ರಲ್ಲಿ ಫ್ರಾನ್ಸ್ ನ ಲಿಯಾನ್ ನಲ್ಲಿ ನಡೆಯಲಿರುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವಾಗಿರುತ್ತದೆ.

*****


(Release ID: 1990959) Visitor Counter : 251