ಪ್ರಧಾನ ಮಂತ್ರಿಯವರ ಕಛೇರಿ

​​​​​​​ತಿರುವಳ್ಳೂರಿನ ವಿದ್ಯಾವಂತ ರೈತ ಆಧುನಿಕ ಬೇಸಾಯದಿಂದ ಪ್ರಧಾನಿ ಮೆಚ್ಚುಗೆ ಗಳಿಸಿದರು.

Posted On: 27 DEC 2023 2:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಸಾವಿರಾರು ಫಲಾನುಭವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತಿರುವಳ್ಳೂರಿನ ರೈತ ಶ್ರೀ ಹರಿಕೃಷ್ಣರಿಗೆ ಪ್ರಧಾನಮಂತ್ರಿಯವರು ‘ವಣಕ್ಕಂ’ ಎಂದು ಅಭಿನಂದಿಸಿದರು. ಶ್ರೀ ಹರಿಕೃಷ್ಣನ್ ಅವರು ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ತರಬೇತಿ ಪಡೆದಿದ್ದಾರೆ.

ಉತ್ತಮ ಶಿಕ್ಷಣದ ನಂತರ ಕೃಷಿಯತ್ತ ಮುಖ ಮಾಡಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದರು. ಅವರು ಬಹುತೇಕ ರೈತ ಕಲ್ಯಾಣ ಸಂಬಂಧಿತ ಸರ್ಕಾರಿ ಯೋಜನೆಗಳು ಮತ್ತು ಆಯುಷ್ಮಾನ್ ಭಾರತ್ ಯೋಜನೆಗಳ ಫಲಾನುಭವಿಯಾಗಿದ್ದಾರೆ. ನ್ಯಾನೋ ಯೂರಿಯಾದಂತಹ ವಿನೂತನ ಯೋಜನೆಗಳಿಗಾಗಿ ಪ್ರಧಾನಿಯನ್ನು ಶ್ಲಾಘಿಸಿದರು. ಡ್ರೋನ್ ಮತ್ತು ಇತರ ಆಧುನಿಕ ಸಾಧನಗಳನ್ನು ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಲಾಯಿತು.

ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ರೈತನನ್ನು ಶ್ಲಾಘಿಸಿದ ಪ್ರಧಾನಿ, "ಸರ್ಕಾರ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ" ಎಂದು ಭರವಸೆ ನೀಡಿದರು.

****



(Release ID: 1990918) Visitor Counter : 41